ಹೊಸ ಗೆಳತಿ ಫೋಟೋ ಹಂಚಿಕೊಂಡ ಉಗ್ರಂ ಮಂಜು
ಉಗ್ರಂ ಮಂಜು ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಬಿಗ್‌ಬಾಸ್ ಮನೆಗೆ ಹೋದ ಬಳಿಕ ಸಾಕಷ್ಟು ಫೇಮಸ್ ಆದರು. ಹೀಗಾಗಿ ಉಗ್ರಂ ಮಂಜು ಅನ್ನೋದಕ್ಕಿಂತ ಬಿಗ್‌ಬಾಸ್ ಮಂಜು ಅನ್ನೋರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಬಿಟ್ಟರೆ ಗೌತಮಿ ಮಂಜು ಎಂದು ಕರೆಯುವುದುಂಟು. ಯಾಕೆಂದರೆ ಅವರಿಬ್ಬರ ನಡುವಿನ ಸ್ನೇಹ ಬಿಗ್‌ಬಾಸ್ ಮನೆಯಲ್ಲಿ ತುಂಬಾ ಚೆನ್ನಾಗಿತ್ತು. ಅಲ್ಲದೆ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕವೂ ಗೌತಮಿ ಹಾಗೂ ಉಗ್ರಂ ಮಂಜು ಇಬ್ಬರ ಸ್ನೇಹವನ್ನು ಉಳಿಸಿಕೊಂಡಿದ್ದಾರೆ. ಆದರೆ ಇದೀಗ ಉಗ್ರಂ ಮಂಜು ಅವರು ಹೊಸ ಫೋಟೋವನ್ನು ಹಾಕಿದ್ದಾರೆ.
ಹೌದು ಸಾಮಾಜಿಕ ಜಾಲತಾಣದಲ್ಲಿ ಉಗ್ರಂ ಮಂಜು ಅವರು ಒಂದು ಹುಡುಗಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇವರು ನನ್ನ ಜೀವನದ ಹೊಸ ಗೆಳತಿ ಎಂದು ಟ್ಯಾಗ್ ಲೈನ್ ಹಾಕಿದ್ದಾರೆ. ಉಗ್ರಂ ಮಂಜು ಅವರಿಗೆ ತುಂಬಾ ವಯಸ್ಸಾಗಿದ್ದರೂ ಕೂಡ ಇಲ್ಲಿವರೆಗೂ ಮದುವೆ ಆಗಿಲ್ಲ ಅನ್ನೋ ವಿಚಾರ ಹೆಚ್ಚಾಗಿ ಚರ್ಚೆಯಾಗುತ್ತಿತ್ತು. ಗೌತಮಿ ಅವರು ತಮ್ಮ ಗೆಳೆಯ ಉಗ್ರಂ ಮಂಜುಗೆ ಒಬ್ಬ ಹುಡುಗಿ ಹುಡುಕಬೇಕು, ಮದುವೆ ಮಾಡಿಸಬೇಕು ಎಂದು ಸಾಕಷ್ಟು ರೀತಿಯ ಪ್ರಯತ್ನ ಮಾಡುತ್ತಿದ್ದರು.

ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿ ಹರಕೆ ಕೂಡ ಹೊತ್ತುಕೊಂಡಿದ್ದರು. ತಾವು ನಂಬುವ ವನದುರ್ಗೆಗೂ ಕೂಡ ಬೇಡಿಕೊಂಡಿದ್ದರು. ಇದೆಲ್ಲದರ ಮಧ್ಯೆ ಉಗ್ರಂ ಮಂಜು ಅವರಿಗೆ ಒಬ್ಬ ಹೊಸ ಗೆಳತಿ ಸಿಕ್ಕಿದ್ದಾಳೆ ಅನ್ನೋದನ್ನು ಸ್ವತ: ಉಗ್ರಂ ಮಂಜು ಅವರೇ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಆ ಗೆಳತಿ ಯಾರು? ಉಗ್ರಂ ಮಂಜು ಹಂಚಿಕೊಂಡಿರುವ ಆ ಫೋಟೋ ಯಾರದ್ದು? ಇದೆಲ್ಲದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಉಗ್ರಂ ಮಂಜು ಅವರು ಬಿಗ್‌ಬಾಸ್ ಮನೆಗೆ ಹೋದ ಬಳಿಕ ಅವರ ಸಾಕಷ್ಟು ವೈಯಕ್ತಿಕ ವಿಚಾರಗಳು ಜನರಿಗೆ ಗೊತ್ತಾಗಿದೆ. ಅವರಿಗೆ ಅಕ್ಕ ತಂಗಿ ಇದ್ದು, ಅವರಿಗೆ ಮದುವೆ ಮಾಡುವುದರಲ್ಲಿ ಜೀವನ ಕಟ್ಟಿಕೊಳ್ಳುವುದರಲ್ಲಿ ಸಾಲ ತೀರಿಸುವುದರಲ್ಲಿ ಮಂಜು ಅವರ ವಯಸ್ಸು ಕಳಿತಾ ಬಂದಿದೆ. ಇದೀಗ ಅವರಿಗೆ 40+ ಆಗಿದ್ದರೂ ಕೂಡ ಅವರಿಗೆ ಮದುವೆ ಆಗಿಲ್ಲ. ಆದರೆ ಮದುವೆ ಆಗಬೇಕು ಅನ್ನೋ ಹಂಬಲ ಮಂಜು ಅವರಿಗೆ ಇದೆ. ಮಂಜು ಅವರಿಗೆ ಮದುವೆ ಮಾಡಬೇಕು ಅನ್ನೋ ಆಸೆ ತಂದೆ ತಾಯಿಗೂ ಇದೆ. ಆದರೆ ಆ ಕಾಲ ಇನ್ನೂ ಕೂಡ ಕೂಡಿ ಬಂದಿಲ್ಲ.

ಬಿಗ್‌ಬಾಸ್ ಮನೆಯಲ್ಲಿ ಗೌತಮಿ ಹಾಗೂ ಮಂಜು ನಡುವಿನ ಸ್ನೇಹ ಸಂಬಂಧ ತುಂಬಾ ಚೆನ್ನಾಗಿ ಇತ್ತು. ಆದರೆ ಎಲ್ಲರೂ ಅವರಿಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಲು ಶುರು ಮಾಡಿದ್ದರು. ಅಂಕಲ್ ಆಂಟಿ ಲವ್ ಸ್ಟೋರಿ ಅಂತ ಕಾಮೆಂಟ್ ಮಾಡಲು ಆರಂಭಿಸಿದ್ದರು. ಮದುವೆ ಆಗಿದ್ದರೂ ಕೂಡ ಗೌತಮಿ ಹಿಂದೆ ಬಿದ್ದಿದ್ದಾನೆ ಅಂತ ಜನ ಮಾತನಾಡಿಕೊಂಡಿದ್ದರು. ಹೀಗಾಗಿ ಬಿಗ್‌ಬಾಸ್ ಮುಗಿದ ಬಳಿಕ ಅವರಿಬ್ಬರ ನಡುವೆ ಏನೋ ಸಂಥಿಂಗ್ ಸಂಥಿಂಗ್ ಆಗುತ್ತೆ ಅಂತೆಲ್ಲಾ ಊಹಾಪೋಹ ಸೃಷ್ಟಿಸಿದ್ದರು. ಹೀಗಾಗಿ ಬಿಗ್‌ಬಾಸ್ ಮನೆಯಲ್ಲಿ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ ಗೌತಮಿ ಹಾಗೂ ಮಂಜು ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಅವರಿಬ್ಬರ ಸ್ನೇಹವನ್ನು ಮುಂದುವರೆಸಿದ್ದಾರೆ.
ಅಲ್ಲದೆ ಎಲ್ಲರಿಗೂ ಸೆಡ್ಡು ಹೊಡೆದಂತೆ ಗೌತಮಿ ತನ್ನ ಪತಿಯೊಂದಿಗೆ ಮಂಜು ಅವರನ್ನು ಭೇಟಿ ಮಾಡಿ ಡಿನ್ನರ್ ಪಾರ್ಟಿ ಮಾಡಿದ ಫೋಟೋ ಹಂಚಿಕೊಂಡಿದ್ದರು. ಜೊತೆಗೆ ಮಂಜು ಅವರ ಫ್ಯಾಮಿಲಿಯನ್ನು ಗೌತಮಿ ಗಂಡನೊಂದಿಗೆ ಭೇಟಿ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಇವರೆಲ್ಲರೂ ಕೂಡ ಒಟ್ಟಿಗೆ ದೇವಸ್ಥಾನ ಹಾಗೂ ಪ್ರವಾಸಕ್ಕೂ ಹೋಗಿ ಬಂದಿದ್ದಾರೆ. ಎರಡೂ ಫ್ಯಾಮಿಲಿ ಮಿಂಗಲ್ ಆಗಿದ್ದರು.

ಇದೆಲ್ಲದರ ನಡುವೆ ಉಗ್ರಂ ಮಂಜು ಅವರು ಒಂದು ಹುಡುಗಿಯ ಜೊತೆಗೆ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ನನ್ನ ಜೀವನದ ಹೊಸ ಗೆಳತಿ ಎಂದು ಬರೆದುಕೊಂಡಿದ್ದಾರೆ. ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋವನ್ನು ನೋಡಿ ಜನ ಮಂಜು ಅವರಿಗೆ ಒಂದು ಹುಡುಗಿ ಸಿಕ್ಕೇಬಿಟ್ಟಳು. ಅವರನ್ನು ಮದುವೆ ಆಗೋ ಹುಡುಗಿ ಯಾರು ಅಂತ ಪ್ರಶ್ನೆ ಮಾಡಲು ಜನ ಶುರು ಮಾಡಿದ್ದಾರೆ.
ಮ್ಯಾಂಗೋ ಪಚ್ಚ ಸಿನಿಮಾದಲ್ಲಿ ಕಾಂಜಲ್ ಕುಂದರ್ ಅವರು ನಟಿಸುತ್ತಿದ್ದಾರೆ. ನಟಿ ಕಾಂಜಲ್ ಕುಂದರ್ ಅವರೊಂದಿಗೆ ಮಂಜು ಅವರು ಒಂದೊಳ್ಳೆ ಸ್ನೇಹವನ್ನು ಬೆಳೆಸಿಕೊಂಡಿದ್ದಾರೆ. ಅವರೊಂದಿಗಿನ ಪೋಟೋಗಳನ್ನು ಮಂಜು ಶೇರ್ ಮಾಡಿದ್ದಾರೆ. ನನ್ನ ಜೀವನದ ಹೊಸ ಗೆಳತಿ ಎಂದು ಮಂಜು ಬರೆದುಕೊಂಡಿದ್ದಾರೆ. ಈ ಫೋಟೋಗೆ ನಾನಾ ರೀತಿಯ ಕಾಮೆಂಟ್‌ಗಳು ಬರುತ್ತಿವೆ.












Click it and Unblock the Notifications