ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ
ಬೆಂಗಳೂರು: ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಮತ್ತು ಅವರ ಸಹಚರರು ನಡೆಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಸ್ಮಗ್ಲಿಂಗ್ ದಂಧೆಯ ಹಿಂದೆ ಆಘಾತಕಾರಿ ಕಥೆಯೊಂದು ಅಡಗಿದೆ. ದುಬೈನಿಂದ ಚಿನ್ನ ಸಾಗಾಟ ಮಾಡುವ ಮೊದಲು ಈ ತಂಡ ಆಫ್ರಿಕಾದ ಉಗಾಂಡಾ ಮತ್ತು ಕೀನ್ಯಾದ ಏಜೆಂಟ್ಗಳಿಂದ ಬರೋಬ್ಬರಿ 2 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡು ವಂಚನೆಗೊಳಗಾಗಿತ್ತು ಎಂಬ ಅಂಶ ಈಗ ಜಾರಿ ನಿರ್ದೇಶನಾಲಯ (ED) ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
12.56 ಕೋಟಿ ಚಿನ್ನದೊಂದಿಗೆ ಬಂಧನ
ಮಾರ್ಚ್ 2025ರಲ್ಲಿ ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಬಂಧಿಸಿದ್ದರು. ಅಂದು ಅವರು ತಮ್ಮ ದೇಹದಲ್ಲಿ ಅಡಗಿಸಿಟ್ಟುಕೊಂಡು ಸಾಗಿಸುತ್ತಿದ್ದ 14 ಕೆಜಿ ಚಿನ್ನದ ಮೌಲ್ಯ ಬರೋಬ್ಬರಿ 12.56 ಕೋಟಿ ರೂಪಾಯಿ ಆಗಿತ್ತು. ತನಿಖೆ ಮುಂದುವರಿದಂತೆ 2024 ಮತ್ತು 2025ರ ನಡುವೆ ಈ ತಂಡ ಒಟ್ಟು 127.28 ಕೆಜಿ ಚಿನ್ನವನ್ನು (ಮೌಲ್ಯ 102.55 ಕೋಟಿ ರೂ.) ಅಕ್ರಮವಾಗಿ ಭಾರತಕ್ಕೆ ತಂದಿರುವುದು ಪತ್ತೆಯಾಗಿತ್ತು.

ಉಗಾಂಡಾ ಏಜೆಂಟ್ ವಂಚನೆಯ ಜಾಲ
ಅಧಿಕಾರಿಗಳ ಪ್ರಕಾರ, ರನ್ಯಾ ರಾವ್ ಮತ್ತು ಅವರ ಸಹಚರ ತರುಣ್ ಕೊಂಡೂರು ರಾಜು ಮೊದಲು ಆಫ್ರಿಕಾ ದೇಶಗಳಾದ ಉಗಾಂಡಾ, ಕೀನ್ಯಾ ಮತ್ತು ಟಾಂಜಾನಿಯಾದಿಂದ ನೇರವಾಗಿ ಚಿನ್ನವನ್ನು ಖರೀದಿಸಲು ಯೋಜಿಸಿದ್ದರು. ಇದಕ್ಕಾಗಿ ಅವರು 2023ರಲ್ಲಿ ದುಬೈನಲ್ಲಿ 'ವಿರಾ ಡೈಮಂಡ್ಸ್ ಟ್ರೇಡಿಂಗ್ LLC' ಎಂಬ ಕಂಪನಿಯನ್ನು ಕೂಡ ಆರಂಭಿಸಿದ್ದರು. ಉಗಾಂಡಾ ಮೂಲದ 'ಬೆನ್' ಎಂಬ ಏಜೆಂಟ್ನೊಂದಿಗೆ ಈ ತಂಡ ಸಂಪರ್ಕ ಬೆಳೆಸಿತ್ತು. ಮೊದಲು 5 ಕೆಜಿ ಚಿನ್ನವನ್ನು ಟ್ರಯಲ್ ಆಗಿ ಖರೀದಿಸಿ, ನಂತರ 50 ಕೆಜಿ ಚಿನ್ನದ ದೊಡ್ಡ ಕಾಂಟ್ರಾಕ್ಟ್ ಮಾಡಿಕೊಳ್ಳಲು ಒಪ್ಪಂದವಾಗಿತ್ತು.
ಆರಂಭದಲ್ಲಿ 23.5 ಲಕ್ಷ ಮುಂಗಡವಾಗಿ ನೀಡಲಾಗಿತ್ತು. ನಂತರ ತಲಾ 9.39 ಲಕ್ಷ ರೂ.ಗಳಂತೆ ಎರಡು ಬಾರಿ ಪಾವತಿ ಮಾಡಲಾಗಿತ್ತು. ಆದರೆ ಏಜೆಂಟ್ ಚಿನ್ನವನ್ನು ಮಾತ್ರ ನೀಡಲಿಲ್ಲ. 2024ರ ಜನವರಿ 1ರಂದು ತರುಣ್ ರಾಜು ಉಗಾಂಡಾದ ಕ್ಯಾಂಪಾಲಾ ನಗರಕ್ಕೆ ತೆರಳಿ ಏಜೆಂಟ್ ಬೆನ್ನನ್ನು ಭೇಟಿಯಾದರು. ಅಲ್ಲಿ ಚಿನ್ನವನ್ನು ತೋರಿಸಿದ ಏಜೆಂಟ್, ಅದನ್ನು ಬಿಡುಗಡೆ ಮಾಡಲು ಹೆಚ್ಚುವರಿ 1.7 ಕೋಟಿ ರೂಪಾಯಿ ಹಣ ಕೇಳಿದ್ದ. ದುಬೈನಲ್ಲಿದ್ದ ರನ್ಯಾ ರಾವ್ ಅಲ್ಲಿನ ಏಜೆಂಟರ ಮೂಲಕ ಈ ಹಣವನ್ನು ಹಸ್ತಾಂತರಿಸಿದ್ದರು. ಆದರೆ ಅಂತಿಮವಾಗಿ ಇದೆಲ್ಲವೂ ಒಂದು ಸ್ಕ್ಯಾಮ್ ಎಂಬುದು ಅವರಿಗೆ ತಿಳಿಯಿತು. ಒಟ್ಟಾರೆಯಾಗಿ 2 ಕೋಟಿ ರೂ.ಗಳಿಗೂ ಅಧಿಕ ಹಣ ನಷ್ಟವಾಗಿತ್ತು.
ಉಗಾಂಡಾದಲ್ಲಿ ಮೋಸ ಹೋದ ನಂತರ, ಈ ತಂಡ ಕೀನ್ಯಾದಲ್ಲಿ ಮತ್ತೊಮ್ಮೆ ಚಿನ್ನ ಖರೀದಿಸಲು ಪ್ರಯತ್ನಿಸಿತು. ಆದರೆ ಅಲ್ಲಿಯೂ ಇದೇ ರೀತಿಯ ವಂಚನೆ ಎದುರಾದ ಕಾರಣ ಆ ಪ್ರಯತ್ನವನ್ನು ಅರ್ಧಕ್ಕೆ ಬಿಟ್ಟರು. ಕೀನ್ಯಾ ಅಧಿಕಾರಿಗಳ ಮೊರೆ ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ಆಫ್ರಿಕಾದಿಂದ ನೇರವಾಗಿ ಚಿನ್ನ ತರುವುದು ಸಾಧ್ಯವಿಲ್ಲ ಎಂದು ಮನಗಂಡ ನಂತರ, ಅವರು ದುಬೈನ 'ದೀರಾ ಗೋಲ್ಡ್ ಮಾರುಕಟ್ಟೆ'ಯಿಂದ ಚಿನ್ನ ಖರೀದಿಸಿ ಸ್ಮಗ್ಲಿಂಗ್ ಮಾಡಲು ನಿರ್ಧರಿಸಿದರು.
ಹವಾಲಾ ಮತ್ತು ಅಕ್ರಮ ಹಣ ವರ್ಗಾವಣೆ
ಇಡಿ ತನಿಖೆಯ ಪ್ರಕಾರ ವಿದೇಶದಿಂದ ಅಕ್ರಮವಾಗಿ ಚಿನ್ನ ತರುವುದು, ಭಾರತದ ಮಾರುಕಟ್ಟೆಯಲ್ಲಿ ಅದನ್ನು ನಗದಿಗೆ ಮಾರಾಟ ಮಾಡುವುದು ಮತ್ತು ಆ ಹಣವನ್ನು ಹವಾಲಾ ದಂಧೆ ಅಥವಾ ಬ್ಯಾಂಕಿಂಗ್ ಚಾನೆಲ್ ಮೂಲಕ ಮತ್ತೆ ವಿದೇಶಕ್ಕೆ ರವಾನಿಸುವ ಅತ್ಯಂತ ಸಂಘಟಿತ ಜಾಲವನ್ನು ಈ ತಂಡ ಹೊಂದಿತ್ತು. ಅಧಿಕಾರಿಗಳು ಈ ಹಣ ವರ್ಗಾವಣೆಗೆ ಸಂಬಂಧಿಸಿದ ವಾಟ್ಸಾಪ್ ಚಾಟ್ಗಳನ್ನು ಪುರಾವೆಯಾಗಿ ಸಂಗ್ರಹಿಸಿದ್ದಾರೆ. ಸದ್ಯ ನಟಿ ರನ್ಯಾ ರಾವ್ ಮತ್ತು ಅವರ ಸಹಚರರು ನ್ಯಾಯಾಂಗ ಬಂಧನದಲ್ಲಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಈ ಚಿನ್ನದ ಕಳ್ಳಸಾಗಣೆ ದಂಧೆಯ ಹೆಚ್ಚಿನ ತನಿಖೆ ನಡೆಯುತ್ತಿದೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications