Trivikram: 'ಕೊಳಕು ಅಂಟದ ಬಿಳಿ ಹಾಳೆ ನೀನು': ತ್ರಿವಿಕ್ರಮ್‌ ಕೈಯಲ್ಲೇ ಪತ್ರ ಬರೆದಿದ್ದು ಯಾರಿಗೆ?

ಬಿಗ್ಬಾಸ್ ಸೀಸನ್ 11ರ ರನ್ನರ್ ಅಪ್ ಆಗಿದ್ದ ತ್ರಿವಿಕ್ರಮ್ ಪದ್ಮಾವತಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದ ತ್ರಿವಿಕ್ರಮ್‌ ಇದೀಗ ಮತ್ತೊಂದು ಹೊಸ ಧಾರಾವಾಹಿಯೊಂದಕ್ಕೆ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ತ್ರಿವಿಕ್ರಮ್‌ ನಟನೆಯ ಹೊಸ ಧಾರಾವಾಹಿ ಆರಂಭವಾಗಿದೆ. ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ರನ್ನರ್‌ ಅಪ್‌ ತ್ರಿವಿಕ್ರಮ್‌ ಬಿಗ್‌ ಬಾಸ್‌ ಜರ್ನಿ ಹಾಗೂ ಆತ್ಮೀಯರ ಹುಟ್ಟು ಹಬ್ಬಕ್ಕೆ ಕೈಯಲ್ಲೇ ಪತ್ರ ಬರೆದು ಶುಭಕೋರಿದ್ದಾರೆ.

ಹೌದು, ಬಿಗ್ಬಾಸ್ ಸೀಸನ್ 11ರಲ್ಲಿ ಧನರಾಜ್ ಆಚಾರ್ ಹಾಗೂ ತ್ರಿವಿಕ್ರಂ ಮಧ್ಯೆ ಒಳ್ಳೆ ಬಾಂಧವ್ಯ ಬೆಳೆಯೋಕೆ ಕಾರಣವಾಗಿದೆ. ಧನರಾಜ್ ಆಚಾರ್ ಹಾಗೂ ತ್ರಿವಿಕ್ರಂ ಮಧ್ಯ ಉತ್ತಮ ಸಂಬಂಧವಿದೆ. ಈ ಗೆಳತನ ಬಿಗ್ ಬಾಸ್ಗೆ ಮಾತ್ರ ಸೀಮಿತವಾಗಿಲ್ಲ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕವೂ ಇಬ್ಬರೂ ಒಳ್ಳೆಯ ಒಡನಾಟ ಮುಂದುವರಿಸಿದ್ದಾರೆ. ಬಿಗ್‌ ಬಾಸ್‌ ಬಳಿಕ ಧನರಾಜ್‌ ಆಚಾರ್‌ ಅವರು ಮನೆಗಳು ಭೇಟಿ ಕೊಟ್ಟ ತ್ರಿವಿಕ್ರಮ್‌ ಅವರು ಧನರಾಜ್‌ ಅವರ ಕುಟುಂಬದ ಜೊತೆಗೆ ಸಮಯ ಕಳೆದಿದ್ದರು. ಇದೀಗ ಧನರಾಜ್‌ ಆಚಾರ್‌ ಅವರ ಹುಟ್ಟು ಹಬ್ಬಕ್ಕೆ ಕೈಯಲ್ಲೇ ಪತ್ರಬರೆದು ಹುಟ್ಟುಹಬ್ಬಕ್ಕೆ ಶುಭಶಾಯಗಳನ್ನ ತಿಳಿಸಿದ್ದಾರೆ.

Trivikram sends special wishes to Dhanraj on his birthday

ಧನರಾಜ್ ಅವರ ಜನ್ಮದಿನದ ಪ್ರಯುಕ್ತ ತ್ರಿವಿಕ್ರಂ ಅವರು ಕೈಯಲ್ಲೇ ಪತ್ರ ಬರೆದು ವಿಶ್ ತಿಳಿಸಿದ್ದಾರೆ. ಪತ್ರದ ಜೊತೆಗೆ ಬಿಗ್‌ ಬಾಸ್‌ ಮನೆಯಲ್ಲಿ ಕಳೆದ ಕೆಲವು ಫೋಟೋಗಳನ್ನ ಸಹ ತ್ರಿವಿಕ್ರಮ್‌ ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ. ಧನರಾಜ್ ಅವರಿಗೆ ಏಪ್ರಿಲ್ 7 ಜನ್ಮದಿನ. ಧನರಾಜ್‌ ಅವರ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ತ್ರಿವಿಕ್ರಮ್‌ ವಿಶ್‌ ಮಾಡಿದ್ದಾರೆ. ಹೇ ಮಂಗಳೂರು ಹುಲಿ, ಧನು ಅಲಿಯಾಸ್ ಧನರಾಜ್. ಏನು ಹೇಳಲಿ ನಿನ್ನ ಬಗ್ಗೆ? ಬಿಗ್ ಬಾಸ್ ಮನೇನೇ ಟ್ರೋಲ್ ಮಾಡಿದವನು. ನಾನು ಅಂದುಕೊಂಡ ಗಾದೆ ಸುಳ್ಳು ಮಾಡಿದವನು. ಮೂರ್ತಿನೂ ದೊಡ್ಡದು, ಕೀರ್ತಿನೂ ದೊಡ್ಡದು. ಬಿಗ್ ಬಾಸ್ ಮನೆಯಲ್ಲಿ ನಿನ್ನನ್ನು ನೋಡಿ ಯಾರಲೇ ಇವನು (ನಿರ್ಲಕ್ಷ್ಯದಿಂದ) ಎನ್ನುತ್ತಿದ್ದವರೆಲ್ಲ, ಯಾರಲೇ ಇವನು (ಅಚ್ಚರಿಯಿಂದ) ಎಂದು ಹೇಳುವಂತೆ ಮಾಡಿದವನು ನೀನು ಎಂದು ತ್ರಿವಿಕ್ರಮ್‌ ಹೇಳಿದ್ದಾರೆ.

ನೀನು ನಿನ್ನನ್ನು ಜಿಂಕೆಗೆ ಯಾಕೆ ಹೋಲಿಕೆ ಮಾಡಿಕೊಳ್ಳುತ್ತಿದ್ದೆ ಅನ್ನೋದು ಗೊತ್ತಿರಲಿಲ್ಲ. ಆದರೆ, ಅದನ್ನು ಫ್ಯಾಮಿಲಿ ರೌಂಡ್ನಲ್ಲಿ ನೋಡಿದಾಗ ಗೊತ್ತಾಯ್ತು. ಪುತ್ತೂರಲ್ಲಿ ಜಿಂಕೆ ಬಿಡಾರವೇ ಇದೆ. ಮನಸ್ಸಿಂದ, ವಯಸ್ಸಲ್ಲಿ, ಕ್ಯಾರೆಕ್ಟರ್ನಲ್ಲಿ ದೊಡ್ಡವನು, ಮನಸ್ಸಿಂದ ಇನ್ನೂ ದೊಡ್ಡವನು. ಎಲ್ಲರ ಎದುರು ಚಿಕ್ಕವನಂತೆ ಇದ್ದು ಎಲ್ಲರ ಮನಸ್ಸು ಗೆದ್ದಿದೀಯಾ. ಸಿಂಪಲ್ ಆಗಿ ಎಂಟ್ರಿ ಕೊಟ್ಟೆ, ಎಕ್ಸಿಟ್ ಮಾತ್ರ ಸೂಪರ್. ಕೊಳಕು ಅಂಟದ ಬಿಳಿ ಹಾಳೆ ನೀನು. ದೇವರ ಮಗ ನೀನು. ನಿಮ್ಮ (ಹನುಮಂತ) ಗೆಳೆತನದ ಮೂಲಕ ದಕ್ಷಿಣ ಹಾಗೂ ಉತ್ತರ ಕರ್ನಾಟಕ ಒಂದು ಮಾಡಿದೀಯಾ. ನೀನು ಇರೋ ಕಡೆ ನಗುವಿಗೆ ಬರಗಾಲ ಇಲ್ಲ. ನಿನ್ನಿಂದ ಕಲಿತಿದ್ದು, ಕಲಿಬೇಕಿರೋದು ತುಂಬಾ ಇದೆ. ನೀನು ಕನ್ನಡ ಚಿತ್ರರಂಗದ ಬೇಡಿಕೆಯ ನಟ ಆಗ್ತೀಯಾ ಎಂದು ಧನರಾಜ್‌ ಆಚಾರ್‌ ಅವರ ಕುರಿತು ತ್ರಿವಿಕ್ರಮ್‌ ಹೇಳಿದ್ದಾರೆ.

ಇನ್ನೂ ತ್ರಿವಿಕ್ರಮ್‌ ಅವರ ವಿಶ್‌ ಗೆ ಧನರಾಜ್‌ ಆಚಾರ್‌ ಅವರು ಕಾಮೆಂಡ್‌ ಮಾಡಿದ್ದು, ಈ ಭಾಂದವ್ಯನ ಪಡೆದಿರೋದಕ್ಕೆ ನಾನು ನಿಜಕ್ಕೂ ಪುಣ್ಯ ಮಾಡಿದ್ದೆ ಮಾಸ್ಟರ್.. ಈ ಪತ್ರ ನನ್ನ ಹುಟುಹಬ್ಬಕ್ಕೆ ಸಿಕ್ಕ ತುಂಬಾ ತುಂಬಾ ವಿಶೇಷ ಪತ್ರ. ಹೃದಯದಿಂದ ಬರೆದ ಪತ್ರ ನನ್ನ ಹೃದಯ ತಲುಪಿತು ಮಾಸ್ಟರ್. ನಿಮ್ಮ ಬರವಣಿಗೆ ಅದು ಮನಸ್ಸಿನ ಮೆರವಣಿಗೆ.. ಭಾಂದವ್ಯ ಇದ್ದೂ ಜೀವನ ಪೂರ್ತಿ ಹೀಗೆ ಇರುವ ಲವ್ ಯು ಮಾಸ್ಟರ್ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+