Bigg Boss: ಬಿಗ್‌ಬಾಸ್ ಟ್ರೋಪಿ ಗೆದ್ದ ಹನುಮಂತು ಮೇಲೆ ತ್ರಿವಿಕ್ರಮ್ ತಾಯಿ ಬೇಸರ
Bigg Boss: ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಟ್ ಫಿನಾಲೆ ಮುಗಿದು, ಟ್ರೋಪಿ ಹಳ್ಳಿ ಹೈದ ಹನುಮಂತನ ಕೈಸೇರಿದೆ. ಮತ್ತೊಬ್ಬ ಸ್ಪರ್ಧಿ ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಈ ಬಗ್ಗೆ ತ್ರಿವಿಕ್ರಮ್ ತಾಯಿ ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯೋಣ ಬನ್ನಿ.
ಈ ಬಾರಿಯ ಬಿಗ್ ಬಾಸ್ 11ನೇ ಸೀಸನ್ ಎಲ್ಲಾ ಸೀಸನ್‌ಗಳಿಗಿಂತ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಅಲ್ಲದೆ, ದಾಖಲೆಯೊಂದು ನಿರ್ಮಾಣವಾಗಿದೆ. ಪ್ರತಿ ಬಾರಿಯೂ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರು ಮಧ್ಯದಲ್ಲಿಯೇ ಮನೆಯಿಂದ ಆಚೆ ಹೋಗಿಬಿಡುತ್ತಿದ್ದರು. ಆದರೆ ಇದೀಗ ಅದು ಉಲ್ಟಾ ಆಗ್ಬಿಟ್ಟಿದೆ. ಸೀಸನ್ 11ಕ್ಕೆ ಗ್ರ್ಯಾಂಡ್ ಆಗಿ ವೈಲ್ಡ್ ಕಾರ್ಡ್ ಎಂಟ್ರಿಯಾದ ಹನುಮಂತು ಹಾಗೂ ರಜತ್ ಸಖತ್ ಸೌಂಡ್ ಮಾಡಿದ್ದರು. ಇವರಿಬ್ಬರು ಸಹ ಫಿನಾಲೆ ವಾರದವರೆಗೂ ಬಂದರು.

ಇವರಿಬ್ಬರ ಪೈಕಿ ರಜತ್ ಟಾಪ್ 3 ವರೆಗೂ ಬಂದು ಕೊನೇ ಗಳಿಗೆಯಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಬಂದರು. ಹೀಗೆ ಬಂದರೂ ಕೂಡ ಎಲ್ಲಾ ಬಾರಿಗಿಂತ ಈ ಬಾರಿ ಸಖತ್ ಸೌಂಡ್ ಮಾಡಿದ ಪಟ್ಟ ರಜತ್‌ಗೆ ಸಲ್ಲುತ್ತದೆ. ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ಇನ್ನು ಕೊನೆಗೆ ತ್ರಿವಿಕ್ರಮ್ ಹಾಗೂ ಹನುಮಂತು ಉಳಿದುಕೊಂಡಿದ್ದು, ಇವರಿಬ್ಬರಿಗೂ ಢವಢವ ಶುರುವಾಗಿತ್ತು. ಸುದೀಪ್ ಅವರು ಕೊನೆಗೆ ವೀಕ್ಷಕರು ಹಾಕಿದ ವೋಟ್‌ಗಳನ್ನಾಧರಿಸಿ ಹನುಮಂತು ಕೈ ಮೇಲೆತ್ತಿದ್ದರು.
ಬಹುತೇಕ ಮಂದಿ ತ್ರಿವಕ್ರಮ್ ಗೆಲುವು ಸಾಧಿಸಿ ಟ್ರೋಪಿ ಎತ್ತಲಿದ್ದಾರೆ ಅಂದುಕೊಂಡಿದ್ದರು. ಆದರೆ, ಜನರು ಹಾಕಿದ ವೋಟ್‌ಗಳ ಆಧಾರದ ಮೇಲೆ ಗೆಲುವು ಹನುಮಂತು ಅವರದ್ದಾಗಿದೆ. ಗ್ರ್ಯಾಂಡ್ ಫಿನಾಲೆಯ ಕೊನೇ ದಿನದ ಮುಂಚೆಯೇ ಕಿಚ್ಚ ಸುದೀಪ್ ಅವರು ವಿನ್ ಆಗಲಿರುವ ಮೊದಲ ಸ್ಪರ್ಧಿ 5,23,89,318 ವೋಟ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ಘೋಷಿಸಿದರು. ಆದರೆ, ವಿನ್ನರ್ ಯಾರಾಗಿದ್ದಾರೆ ಎಂದು ಘೋಷಣೆ ಮಾಡಿರಲಿಲ್ಲ. ನಿನ್ನೆ ಎಫಿಸೋಡ್‌ನಲ್ಲಿ ಈ ವೋಟ್‌ಗಳು ಬಂದಿರುವುದು ಹನುಂತುಗೆ ಎನ್ನುವ ಮಾಹಿತಿ ಬಹಿರಂಗವಾಯ್ತು.
ಈ ಬಗ್ಗೆ ಖಾಸಗಿ ಮಾಧ್ಯಮವೊಂದ ಜೊತೆ ರನ್ನರ್ ಅಪ್ ಆದ ತ್ರಿವಿಕ್ರಮ್ ತಾಯಿ ಮಾತನಾಡಿ, ತ್ರಿವಿಕ್ರಂಗೆ ಕಪ್ ಬರಲಿಲ್ಲಿ ಅಂದರೂ ಪರವಾಗಿದ್ದಿಲ್ಲ. 100ಕ್ಕೂ ಹೆಚ್ಚು ದಿನ ಬಿಗ್ ಬಾಸ್ ಮನೆಯಲ್ಲಿ ಜೀವಿಸಿದ ಇನ್ನುಳಿದ ಯಾರಿಗಾದರೂ ಟ್ರೋಪಿ ಬರಬೇಕಿತ್ತು. ಹನುಮಂತುಗೂ ಬಂದಿರುವುದು ಒಂದು ಕಡೆ ಖುಷಿಯಾಗುತ್ತಿದೆ. ಮತ್ತೊಂದೆಡೆ 50 ದಿನ ಆದ ಮೇಲೆ ಬಂದು ಟ್ರೋಪಿ ಎತ್ತಿರುವುದು ಬೇಸರವಾಗುತ್ತಿದೆ ಎಂದು ಹೇಳಿದರು.
ಹನುಮಂತುಗೆ ಬಿಟ್ಟು ಬೇರೆ ಯಾರಿಗಾದರೂ ಟ್ರಪಿ ಸಿಕ್ಕಿದ್ದರೂ ನನಗೆ ತುಂಬಾ ಸಂತೋಷ ಆಗುತ್ತಿತ್ತು. ನನ್ನ ಮಗನಿಗೆ ಸಿಕ್ಕಿಲ್ಲ ಅಂತಾ ಬೇಸರ ಇಲ್ಲ, ಅಷ್ಟು ಜನರಲ್ಲಿ ಹನುಮಂತನಿಗೆ ಬಿಟ್ಟು ಬೇರೆಯವರಿಗೆ ಸಿಗಬೇಕಿತ್ತು ಎಂದಿದ್ದಾರೆ. ಆದರೂ ಒಂದು ಕಡೆ ಅಷ್ಟೊಂದು ಜನ ಹನುಮಂತುಗೆ ವೋಟ್ ಮಾಡಿ ಗೆಲ್ಲಿಸಿರುವುದು ತುಂಬಾ ದೊಡ್ಡ ವಿಚಾರ ಎಂದು ಹೇಳಿದ್ದಾರೆ.
ಇನ್ನು ಇದೀಗ ಬಿಗ್‌ಬಾಸ್ ಕನ್ನಡ 11 ಸೀಸನ್ ಟ್ರೋಫಿ ಗೆದ್ದ ಹನುಮಂತು ಸಂಭ್ರಮದಲ್ಲಿದ್ದಾರೆ. ಮತ್ತೊಂದೆಡೆ ರಾಜ್ಯದ ಬಹುತೇಕ ಕಡೆ ಹನುಮಂತು ಗೆದ್ದಿರುವುದಕ್ಕೆ ಪಟಾಕಿ ಹೊಡೆದು ಸಂಭ್ರಮಿಸಿದ ಘಟನೆಗಳೂ ಕೂಡ ನಡೆದಿವೆ.












Click it and Unblock the Notifications