Mokshitha Pai: ಕೊನೆಗೂ ರಿವೀಲ್‌ ಆಯ್ತು ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಲವ್ ಸ್ಟೋರಿ

ಕಿರುತೆರೆ ಪ್ರೇಕ್ಷಕರು ಬಹಳ ಕಾತುರದಿಂದ ಕಾಯುತ್ತಿದ್ದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಗ್ರ್ಯಾಂಡ್‌ ಫಿನಾಲೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಫಿನಾಲೆಗೆ ಬಂದಿರುವ ಆರು ಸ್ಪರ್ಧಿಗಳು ನೂರಕ್ಕೂ ಹೆಚ್ಚು ದಿನಗಳನ್ನು ಈ ಮನೆಯಲ್ಲಿ ಕಳೆದಿದ್ದು, ಅನೇಕ ನೆನಪುಗಳನ್ನು ಈ ಮನೆಯಲ್ಲಿ ಹೊಂದಿದ್ದಾರೆ. ಜೊತೆಗೆ ಒಂದೊಳ್ಳೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಕೆಲವು ಜೋಡಿಗಳು ಕೂಡ ಈ ಬಾರಿಯ ಬಿಗ್‌ ಬಾಸ್‌ ಮನೆಯಲ್ಲಿ ಹೈಲೈಟ್‌ ಆಗಿವೆ.

ಗ್ರ್ಯಾಂಡ್‌ ಫಿನಾಲೆ ವೇದಿಕೆ ಮೇಲೆ ಈವರೆಗೂ ಮನೆಯಲ್ಲಿ ನಡೆದ ಅನೇಕ ವಿಚಾರಗಳು ರಿವೀಲ್‌ ಆಗುತ್ತಿದ್ದು, ಈ ವರೆಗೂ ಪ್ರೇಕ್ಷಕರು ಕಾಯುತ್ತಿದ್ದ ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಜೋಡಿಯ ವಿಡಿಯೋ ರಿವೀಲ್‌ ಆಗಿದೆ. ಬಿಗ್‌ ಬಾಸ್‌ ಆರಂಭವಾಗುತ್ತಿದ್ದಂತೆ ಪರಸ್ಪರ ಜೊತೆಯಲ್ಲಿರುವ ಇಬ್ಬರು ಸ್ಪರ್ಧಿಗಳ ಹೆಸರನ್ನು ಹ್ಯಾಷ್‌ಟ್ಯಾಗ್‌ ಆಗಿ ಬಳಸಿ ವಿಡಿಯೋ ಹಾಗೂ ಫೋಟೋಗಳನ್ನು ವೈರಲ್‌ ಮಾಡುವುದು ಸಾಮಾನ್ಯ. ಆದರೆ ಈ ಬಾರಿ ವಿಶೇಷ ಎನ್ನುವಂತೆ ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಹೆಸರನ್ನು ಒಟ್ಟಾಗಿ ತ್ರಿಮೋಕ್ಷಿ ಎಂದು ಹ್ಯಾಷ್‌ಟ್ಯಾಗ್‌ ರಚಿಸಿ ವಿಡಿಯೋಗಳನ್ನು ಪೋಸ್ಟ್‌ ಮಾಡಲಾಗಿದ್ದು, ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿವೆ.

Trivikram And Mokshitha s Viral Video Finally Been Revealed In Bigg Boss Kannada Grand Finale

ತ್ರಿಮೋಕ್ಷಿ ಜೋಡಿ ವಿಶೇಷ ಎನ್ನುವುದಕ್ಕೆ ಕಾರಣ ಕೂಡ ಇದೆ. ಯಾಕೆಂದರೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸೀಜನ್ ಆರಂಭದಲ್ಲೇ ಆರಂಭವಾದ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಕೊನೆಯ ವಾರದ ವರೆಗೂ ಮುಂದುವರಿದುಕೊಂಡು ಬಂದಿತ್ತು. ಎಂದೂ ಇಬ್ಬರು ಒಟ್ಟಿಗೆ ಕಾಣಿಸಿಕೊಂಡವರಲ್ಲ, ಒಟ್ಟಾಗಿ ಕುಳಿತು ಮಾತನಾಡಿದವರಲ್ಲ, ಕೈ ಕೈ ಹಿಡಿದು ತಿರುಗಾಡಿದವರಲ್ಲ, ಯಾವಾಗಲೂ ವಾಗ್ವಾದಲ್ಲಿಯೇ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಎಂದರೆ ನೋಡುಗರಿಗೆ ಒಂಥರಾ ಪ್ರೀತಿ.

ನೂರಕ್ಕೂ ಹೆಚ್ಚು ದಿನಗಳು ಬಿಗ್‌ ಬಾಸ್‌ ಮನೆಯೊಳಗೆ ಅಪರೂಪಕ್ಕೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡ ವಿಡಿಯೋಗಳನ್ನೇ ಜೋಡಿಸಿ ತ್ರಿಮೋಕ್ಷಿ ಎಂದು ಹ್ಯಾಷ್‌ಟ್ಯಾಗ್‌ ರಚಿಸಿ ವಿಡಿಯೋಗಳನ್ನು ವೈರಲ್‌ ಮಾಡಲಾಗುತ್ತಿತ್ತು. ಇದೇ ವಿಡಿಯೋಗಳನ್ನು ಇಂದು ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆಯ ವೇದಿಕೆಯ ಮೇಲೆ ತೋರಿಸಿದ್ದು, ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಮಾತ್ರವಲ್ಲದೇ ಮನೆಯೊಳಗಿರುವ ಇತರ ಸ್ಪರ್ಧಿಗಳು ಕೂಡ ಶಾಕ್‌ ಆಗಿದ್ದಾರೆ.

Trivikram And Mokshitha s Viral Video Finally Been Revealed In Bigg Boss Kannada Grand Finale

ಈ ವಿಡಿಯೋ ನೋಡಿದ ಮೋಕ್ಷಿತಾ ಹಾಗೂ ತ್ರಿವಿಕ್ರಮ್‌ ಆ ರೀತಿ ಏನೂ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ. ಆದರೆ ಹೊರಗಡೆ ಬರುತ್ತಿದ್ದಂತೆ ಅವರೇ ಶಾಕ್‌ ಆಗುವಷ್ಟು ವಿಡಿಯೋಗಳು ವೈರಲ್‌ ಆಗುತ್ತಿದೆ. ಭವ್ಯ ಹಾಗೂ ತ್ರಿವಿಕ್ರಮ್‌ ಜೊತೆಯಾಗಿ ಕಾಣಿಸಿಕೊಳ್ಳುವುದರಿಂದ ಇವರಿಬ್ಬರೇ ಈ ಸೀಸನ್‌ನ ಬೆಸ್ಟ್‌ ಜೋಡಿ ಎಂದು ಅನೇಕರು ಹೇಳುತ್ತಿದ್ದರು. ಆದರೆ ಮೋಕ್ಷಿತಾ ಹಾಗೂ ತ್ರಿವಿಕ್ರಮ್‌ ಜೋಡಿ ಹೊರಗಡೆ ಬೇರೆ ಲೆವೆಲ್‌ಗೆ ಹೈಪ್‌ ಕ್ರಿಯೆಟ್‌ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+