Trisha: ಮುಂದೆ ಒಂದು ದಿನ ನಾನೂ ಸಿಎಂ ಆಗ್ತೀನಿ: ವಿಜಯ್ ಗೆಲುವಿನ ಬೆನ್ನಲ್ಲೇ ನಟಿ ತ್ರಿಶಾ ಹಳೆಯ ವಿಡಿಯೋ ವೈರಲ್

ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿರುವ ಬೆನ್ನಲ್ಲೇ, ನಟಿ ತ್ರಿಶಾ ಕೃಷ್ಣನ್ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ದಶಕಗಳ ಕಾಲ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ನಡುವೆ ಹಂಚಿಹೋಗಿದ್ದ ತಮಿಳುನಾಡಿನ ರಾಜಕೀಯ ಇತಿಹಾಸವನ್ನು ವಿಜಯ್ ಅವರ ಪಕ್ಷ ಬದಲಿಸಿದ್ದು, ಅವರು ಪೆರಂಬೂರ್ ಮತ್ತು ತಿರುಚ್ಚಿ ಈಸ್ಟ್ ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ತ್ರಿಶಾ ಅವರ ಹಳೆಯ ಹೇಳಿಕೆಯು ಅಭಿಮಾನಿಗಳ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ನಟಿ ತ್ರಿಶಾ ಅವರ 43ನೇ ಜನ್ಮದಿನದಂದೇ ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಅವರ ಆಪ್ತ ಸ್ನೇಹಿತ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಭರ್ಜರಿ ಗೆಲುವು ಸಾಧಿಸಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿರುವ ತ್ರಿಶಾ ಅವರಿಗೆ ಈ ಬಾರಿಯ ಹುಟ್ಟುಹಬ್ಬ ಅತ್ಯಂತ ವಿಶೇಷವಾಗಿ ಪರಿಣಮಿಸಿದೆ. ವಿಜಯ್ ಅವರ ಈ ರಾಜಕೀಯ ಹಾದಿಯು ಒಂದು ಸಿನಿಮೀಯ ಸ್ಕ್ರಿಪ್ಟ್‌ನಂತೆ ಭಾಸವಾಗುತ್ತಿದ್ದು, ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

Trisha

ವೈರಲ್‌ ವಿಡಿಯೋದಲ್ಲೇನಿದೆ?

ವಿಜಯ್ ಅವರ ಟಿವಿ ಕೆ ಪಕ್ಷವು ಭರ್ಜರಿ ಮುನ್ನಡೆ ಸಾಧಿಸಿ ದಶಕಗಳ ಕಾಲದ ಡಿಎಂಕೆ-ಎಐಎಡಿಎಂಕೆ ಪ್ರಾಬಲ್ಯವನ್ನು ಅಲುಗಾಡಿಸುತ್ತಿರುವ ಬೆನ್ನಲ್ಲೇ, ತ್ರಿಶಾ ಅವರ ಹಳೆಯ ಸಂದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. 2004ರ ಈ ಸಂದರ್ಶನದಲ್ಲಿ ತ್ರಿಶಾ ತಮ್ಮ ರಾಜಕೀಯ ಆಕಾಂಕ್ಷೆಯನ್ನು ಮುಕ್ತವಾಗಿ ಹಂಚಿಕೊಂಡಿದ್ದರು. "ನನಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿದೆ. ನಿಜವಾಗಿಯೂ ಕಾದು ನೋಡಿ, ಮುಂದಿನ 10 ವರ್ಷಗಳಲ್ಲಿ ನಾನು ಸಿಎಂ ಆಗುತ್ತೇನೆ" ಎಂದು ಹೇಳಿದ್ದರು. ಈ ಹಳೆಯ ವಿಡಿಯೋ ಈಗ ವಿಜಯ್ ಅವರ ಗೆಲುವಿನ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಅಂದು ಸಂದರ್ಶಕರು, "ಒಂದು ವೇಳೆ ನೀವು ಮುಖ್ಯಮಂತ್ರಿಯಾದರೆ ಮೊದಲು ಏನು ಮಾಡುತ್ತೀರಿ?" ಎಂದು ಕೇಳಿದ ಪ್ರಶ್ನೆಗೆ ತ್ರಿಶಾ, "ಮೊದಲು ನೀವೆಲ್ಲರೂ ನನಗೆ ವೋಟ್ ಹಾಕಿ ನನ್ನನ್ನು ಗೆಲ್ಲಿಸಿ, ಆಮೇಲೆ ನಾನು ಏನು ಮಾಡುತ್ತೇನೆ ಎಂದು ಹೇಳುತ್ತೇನೆ" ಎಂದು ತಮಾಷೆಯಾಗಿ ಉತ್ತರಿಸುವ ಮೂಲಕ ಅಂದು ಎಲ್ಲರನ್ನೂ ನಗಿಸಿದ್ದರು. ತ್ರಿಶಾ ಅವರ ಈ ಹಳೆಯ ಕನಸಿನ ವಿಡಿಯೋ ಟ್ರೆಂಡ್ ಆಗುತ್ತಿರುವ ದಿನವೇ ಅವರು ವಿಜಯ್ ಅವರ ಗೆಲುವನ್ನು ಸಂಭ್ರಮಿಸಲು ಅವರ ನಿವಾಸದಲ್ಲಿ ಜೊತೆಯಾಗಿದ್ದರು.

ರಾಜಕೀಯ ಅಖಾಡದಲ್ಲಿ ನಟರ ಅಬ್ಬರ: ಆಂಧ್ರ-ತಮಿಳುನಾಡಿನಲ್ಲಿ ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಯಾಕೆ ವರ್ಕ್ ಆಗುತ್ತಿಲ್ಲ?
ರಾಜಕೀಯ ಅಖಾಡದಲ್ಲಿ ನಟರ ಅಬ್ಬರ: ಆಂಧ್ರ-ತಮಿಳುನಾಡಿನಲ್ಲಿ ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಯಾಕೆ ವರ್ಕ್ ಆಗುತ್ತಿಲ್ಲ?

ಹುಟ್ಟುಹಬ್ಬದ ದಿನವೇ ಫಲಿತಾಂಶ

ತ್ರಿಶಾ ಅವರ 43ನೇ ಜನ್ಮದಿನದ ಉಡುಗೊರೆಯಾಗಿ ಈ ಚುನಾವಣಾ ಫಲಿತಾಂಶ ಬಂದಿದೆ ಎಂದು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಗೆಳೆಯ ವಿಜಯ್ ಅವರ ರಾಜಕೀಯ ಕನಸು ನನಸಾಗುತ್ತಿರುವ ಈ ಶುಭ ಘಳಿಗೆಯಲ್ಲಿ, ತ್ರಿಶಾ ಅವರ ಹಳೆಯ ಹೇಳಿಕೆಯೂ ಮತ್ತೆ ಸದ್ದು ಮಾಡುತ್ತಿದೆ. ಸದ್ಯ ವಿಜಯ್ ಅವರ ನಿವಾಸಕ್ಕೆ ಭೇಟಿ ನೀಡಿರುವ ತ್ರಿಶಾ, ತಮಿಳುನಾಡಿನ ಈ ಹೊಸ ರಾಜಕೀಯ ಬದಲಾವಣೆಗೆ ಸಾಕ್ಷಿಯಾಗುತ್ತಿದ್ದಾರೆ.

ಚುನಾವಣಾ ಫಲಿತಾಂಶದ ಮುನ್ನಡೆಗಳು ಸ್ಪಷ್ಟವಾಗುತ್ತಿದ್ದಂತೆಯೇ, ತ್ರಿಶಾ ಅವರು ಚೆನ್ನೈನಲ್ಲಿರುವ ವಿಜಯ್ ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ. ವಿಜಯ್ ಅವರ ನಿವಾಸದಿಂದ ಹೊರಬರುವಾಗ ಅವರು ಮಾಧ್ಯಮಗಳಿಗೆ 'ಥಮ್ಸ್ ಅಪ್' ತೋರಿಸುತ್ತಿರುವ ದೃಶ್ಯಗಳು ಕೂಡ ಕ್ಯಾಮರಾದಲ್ಲಿ ಸೆರೆಯಾಗಿವೆ. 2024ರಲ್ಲಿ ಪಕ್ಷವನ್ನು ಆರಂಭಿಸಿ ಕೇವಲ ಎರಡು ವರ್ಷಗಳಲ್ಲಿ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿರುವ ವಿಜಯ್ ಅವರ ಈ 'ಎಂ.ಜಿ.ಆರ್ ಮಾದರಿಯ' ಗೆಲುವನ್ನು ತ್ರಿಶಾ ಅವರು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದ್ದು, ಈಗ ಆ ಗೆಲುವಿನ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸದ್ಯ ತಮಿಳುನಾಡಿನ ರಾಜಕೀಯ ಚಿತ್ರಣ ಬದಲಾಗಿದ್ದು, ವಿಜಯ್ ಅವರು ಮುಖ್ಯಮಂತ್ರಿ ಗಾದಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದೇ ವೇಳೆ ತ್ರಿಶಾ ಅವರ ಹಳೆಯ ವಿಡಿಯೋ ಟ್ರೆಂಡ್ ಆಗುತ್ತಿರುವುದು ಅವರ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ತಂದಿದೆ. ತೆರೆಯ ಮೇಲೆ ಸಿಎಂ ಆಗಿ ಮಿಂಚಿದ್ದ ನಾಯಕ ಈಗ ನಿಜ ಜೀವನದಲ್ಲೂ ಸಿಎಂ ಆಗುತ್ತಿದ್ದಾರೆ, ಅವರ ಆತ್ಮೀಯ ಗೆಳತಿಯ ಹಳೆಯ ಮಾತೂ ಈಗ ನಿಜವಾದಂತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+