Get Updates
Get notified of breaking news, exclusive insights, and must-see stories!

Toxic: 'ಟಾಕ್ಸಿಕ್‌' ಟೀಸರ್‌ ಸುಂದರಿಯ ಅಸಲಿ ಹೆಸರು, ಫೋಟೋ ರಿವೀಲ್‌ ಮಾಡಿದ ನಿರ್ದೇಶಕಿ

ನಟ ರಾಕಿಂಗ್‌ ಸ್ಟಾರ್‌ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಟೀಸರ್ ಬಿಡುಗಡೆಯಾದ ಬಳಿಕ, ಅದರಲ್ಲಿರುವ ಹಸಿಬಿಸಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಕೆಲವರು ಟೀಸರ್‌ನ ದೃಶ್ಯಗಳನ್ನು ಕಲಾತ್ಮಕತೆ ಎಂದು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಅತಿರೇಕ ಎಂದು ಟೀಕಿಸುತ್ತಿದ್ದಾರೆ. ಈ ಪರ-ವಿರೋಧದ ಚರ್ಚೆಗಳ ನಡುವೆಯೇ, ಟಾಕ್ಸಿಕ್ ಸಿನಿಮಾದ ನಿರ್ದೇಶಕಿ ಗೀತು ಮೋಹನ್ ದಾಸ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡು ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಆ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋ ಹಾಗೂ ಹೆಸರನ್ನೂ ಬಹಿರಂಗಪಡಿಸಿದ್ದಾರೆ.

'ಟಾಕ್ಸಿಕ್' ಸಿನಿಮಾದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ, ಅದರಲ್ಲಿರುವ ಹಸಿಬಿಸಿ ದೃಶ್ಯಗಳು ಮತ್ತು ನಿರೂಪಣಾ ಶೈಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ವೈರಲ್ ಆಗುತ್ತಿದ್ದಂತೆ, ಕೆಲವರು ಇದನ್ನು ಅಂತರರಾಷ್ಟ್ರೀಯ ಮಟ್ಟದ ಪ್ರಸ್ತುತಿ ಎಂದು ಶ್ಲಾಘಿಸಿದರೆ, ಇನ್ನೂ ಕೆಲವರು ಭಾರತೀಯ ಸಂಸ್ಕೃತಿಗೆ ವಿರುದ್ಧ ಎಂದು ಟೀಕಿಸುತ್ತಿದ್ದಾರೆ.

Toxic Teaser Actress Real Name Revealed Director Geethu Mohandas Shares Photo

ಟೀಸರ್‌ ಸುತ್ತಲಿನ ವಿವಾದವು, ಮತ್ತೊಮ್ಮೆ ಕಲಾತ್ಮಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಂವೇದನೆ ನಡುವಿನ ಅಂತರವನ್ನು ಚರ್ಚೆಗೆ ತಂದಿದೆ. ಒಂದು ವರ್ಗದ ಪ್ರೇಕ್ಷಕರು "ಸಿನಿಮಾ ಸಮಾಜದ ಕನ್ನಡಿಯಾಗಿದೆ" ಎಂದು ಸಮರ್ಥಿಸಿದರೆ, ಮತ್ತೊಂದು ವರ್ಗ "ಮಿತಿಯ ಅಗತ್ಯವಿದೆ" ಎಂದು ಆಗ್ರಹಿಸುತ್ತಿದೆ. ಇದರ ನಡುವೆ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಅವರ ಪೋಸ್ಟ್‌ ಚರ್ಚೆಗೆ ಗ್ರಾಸವಾಗಿದೆ.

ಪೋಸ್ಟ್‌ನಲ್ಲಿ ಹೇಳಿದ್ದೇನು?

ಈ ಪೋಸ್ಟ್ ಮೂಲಕ ಗೀತು ಮೋಹನ್ ದಾಸ್ ಅವರು, "ಮಹಿಳೆಯರ ಸಂತೋಷ, ಒಪ್ಪಿಗೆ, ವ್ಯವಸ್ಥೆಗಳಲ್ಲಿ ಮಹಿಳೆಯರ ಪಾತ್ರ ಇವೆಲ್ಲವನ್ನು ಜನರು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುವಾಗ, ನಾನು ಆರಾಮವಾಗಿ ಚಿಲ್ ಮಾಡ್ತಿದ್ದೀನಿ" ಎಂದು ಬರೆದುಕೊಂಡಿದ್ದಾರೆ. ಸಿನಿಮಾದಲ್ಲಿ ಮಹಿಳೆಯರ ಆಸೆ, ಒಪ್ಪಿಗೆ, ಮತ್ತು ಮಹಿಳೆಯರು ವ್ಯವಸ್ಥೆಯೊಳಗೆ ಹೇಗೆ ತಮ್ಮ ಸ್ಥಾನವನ್ನು ರೂಪಿಸಿಕೊಳ್ಳುತ್ತಾರೆ ಎಂಬ ವಿಚಾರಗಳನ್ನು ಜನ ಇನ್ನೂ ಅರ್ಥಮಾಡಿಕೊಳ್ಳಲು ಹೋರಾಡುತ್ತಿದ್ದಾರೆ ಎಂಬ ಸಂದೇಶವನ್ನು ನಿರ್ದೇಶಕಿ ಗೀತು ನೀಡಿದ್ದಾರೆ ಎನ್ನಲಾಗುತ್ತಿದೆ.

ಯಶ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇರುವ ಹಿನ್ನೆಲೆಯಲ್ಲಿ, ಟೀಸರ್‌ನ ಈ ರೀತಿಯ ದೃಶ್ಯಗಳು ಅವರ ಇಮೇಜ್‌ಗೆ ತಕ್ಕವೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಆದರೆ ಬೆಂಬಲಿಗರು, "ಯಶ್ ಹೊಸ ಪ್ರಯೋಗಕ್ಕೆ ಧೈರ್ಯ ತೋರಿಸಿದ್ದಾರೆ" ಎಂದು ಹೇಳುತ್ತಿದ್ದಾರೆ. ಟೀಸರ್ ಸುತ್ತಲಿನ ಈ ವಿವಾದವು 'ಟಾಕ್ಸಿಕ್' ಸಿನಿಮಾಗೆ ನಿರೀಕ್ಷೆ ಹೆಚ್ಚಿಸುವ ಕೆಲಸ ಮಾಡಿದೆ. ಸಿನಿಮಾ ಬಿಡುಗಡೆಯಾದ ಬಳಿಕವೇ, ಟೀಸರ್‌ನ ದೃಶ್ಯಗಳು ಕಥೆಗೆ ಎಷ್ಟು ಅಗತ್ಯವಿತ್ತು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

Toxic Teaser Actress Real Name Revealed Director Geethu Mohandas Shares Photo

ಹಸಿಬಿಸಿ ಸುಂದರಿ ಯಾರು?

ಟೀಸರ್‌ನಲ್ಲಿ ಹಸಿಬಿಸಿ ದೃಶ್ಯಗಳೇ ಈಗ ಚರ್ಚೆಯ ವಿಷಯವಾಗಿದೆ. ಅಲ್ಲದೆ ಆ ದೃಶ್ಯಗಳಲ್ಲಿ ನಟಿಸಿರುವ ಸುಂದರಿ ಯಾರು ಎಂದೂ ಬಹುತೇಕರು ತಲೆಕೆಡಿಸಿಕೊಂಡಿದ್ದಾರೆ. ಮೊದಲಿಗೆ ಅದು ನಟಿ ನಟಾಲಿಯಾ ಬರ್ನ್ ಎಂದು ಭಾವಿಸಿದ್ದರು. ಅಸಲಿಗೆ ಅದು ಸುಳ್ಳು. ನಟಿಯ ಫೋಟೋ ಹಾಗೂ ಹೆಸರನ್ನು ನಿರ್ದೇಶಕಿ ಗೀತು ಮೋಹನ್‌ ದಾಸ್‌ ಅವರೇ ರಿವೀಲ್ ಮಾಡಿದ್ದಾರೆ. ಆಕೆಯ ಹೆಸರು ಬೀಟ್ರಿಜ್ ಟೌಫೆನ್‌ಬಾಚ್ (Beatriz Taufenbach) ಎಂದು ಹೇಳಿದ್ದು, ಆಕೆಯ ಫೋಟೊ ಹಂಚಿಕೊಂಡಿದ್ದಾರೆ. ಈ ಬ್ರೆಜಿಲಿಯನ್ ನಟಿ ಹಾಗೂ ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಈ ಹೆಸರಿನ ಖಾತೆ ಪ್ರೈವೇಟ್‌ನಲ್ಲಿದೆ. ಹೀಗಾಗಿ ಈ ಸುಂದರಿ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇಂಟರ್‌ನೆಟ್‌ನಲ್ಲಿ ಈ ನಟಿಯ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನದಲ್ಲೇ ಬ್ಯುಸಿಯಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+