ದರ್ಶನ್ ಕಾಲಿಗೆ ಗುಂಡು ಹೊಡೆಯಲು ಪೊಲೀಸರು ಸಜ್ಜಾಗಿದ್ರಾ?

ದರ್ಶನ್ ತೂಗುದೀಪ್ ಇದೀಗ ಕೊಲೆ ಆರೋಪಿಯಾಗಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ. ಬೆಂಗಳೂರಲ್ಲಿ ತಮ್ಮ ಅಭಿಮಾನಿಯನ್ನೇ ಮರ್ಡರ್ ಮಾಡಿಸಿ, ಮೈಸೂರಿಗೆ ಹೋಗಿರುವ ಆರೋಪ ನಟ ದರ್ಶನ್ ಅವರ ವಿರುದ್ಧ ಇದೆ. ಹೀಗಿದ್ದಾಗಲೇ ನಟ ದರ್ಶನ್ ಅವರ ಕಾಲಿಗೆ ಪೊಲೀಸರು ಗುಂಡು ಹೊಡೆಯಲು ಸಜ್ಜಾಗಿದ್ದರು, ಎಂಬ ಆರೋಪ ಕೂಡ ಕೇಳಿಬಂದಿದೆ. ಅದು ಯಾವಾಗ ಗೊತ್ತೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಹೌದು, ದರ್ಶನ್ ತಮ್ಮ ಪ್ರೇಯಸಿ ಪವಿತ್ರಾ ಗೌಡ ವಿರುದ್ಧ ಕೆಟ್ಟ ಕಮೆಂಟ್ಸ್ ಹಾಕಿದ್ದ ಆರೋಪದ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರನ್ನು ಬೆಂಗಳೂರಿಗೆ ಕರೆಸಿ ಹಲ್ಲೆ ಮಾಡಿಸಿ ಕೊಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದು ಕಡೆ ಈ ವಿಚಾರವಾಗಿ ಈಗ ಪೊಲೀಸರು ಕೂಡ ದರ್ಶನ್ ಅವರನ್ನ ಆರೋಪಿ-2 ಎಂದು ಈ ಪ್ರಕರಣದಲ್ಲಿ ಗುರುತಿಸಿ, ಇದೀಗ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ನಟ ದರ್ಶನ್ ಅವರ ಕಾಲಿಗೆ ಪೊಲೀಸರು ಗುಂಡು ಹೊಡೆಯಲು ಸಜ್ಜಾಗಿದ್ದರು ಎಂಬ ಆರೋಪ ಕೂಡ ಕೇಳಿಬಂದಿದೆ. ಹಾಗಾದ್ರೆ ದರ್ಶನ್ ಅವರ ವಿರುದ್ಧ ಇಂತಹ ಆರೋಪ ಕೇಳಿಬಂದಿದ್ದು ಯಾಕೆ? ಮಾಹಿತಿಗಾಗಿ ಮುಂದೆ ಓದಿ.

This What Police Said To Kannada Actor Darshan Thoogudeepa

ನಟ ದರ್ಶನ್ ಕಾಲಿಗೆ ಗುಂಡು?

ಅಷ್ಟಕ್ಕೂ ನಟ ದರ್ಶನ್ ಅವರನ್ನು ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಅರೆಸ್ಟ್ ಮಾಡೋಕೆ ಹೋದ ಸಮಯದಲ್ಲಿ, ನಟ ದರ್ಶನ್ ಖಾಸಗಿ ಐಷಾರಾಮಿ ಹೋಟೆಲ್ ಒಂದರಲ್ಲಿ ಜಿಮ್ ಮಾಡ್ತಾ ಇದ್ದರು ಎನ್ನಲಾಗಿದೆ. ಬೆಂಗಳೂರು ಪೊಲೀಸರು ಮೈಸೂರಿಗೆ ಹೋದ ಸಮಯದಲ್ಲಿ, ಸುಮ್ಮನೆ ಪೊಲೀಸರ ಕಾರು ಹತ್ತುವಂತೆ ನಟ ದರ್ಶನ್‌ಗೆ ಆದೇಶ ನೀಡಲಾಗಿತ್ತು ಎನ್ನಲಾಗಿದೆ. ಆಗಲೇ ನೋಡಿ ದರ್ಶನ್ ಅವರು ಪೊಲೀಸರ ಜೊತೆ ಕಿರಿಕ್ ಮಾಡಿ, ಪೊಲೀಸರ ಗನ್ & ಬುಲೆಟ್‌ಗೆ ಕೆಲಸ ಕೊಡಲು ಸಜ್ಜಾಗಿದ್ದರು ಎಂಬ ಆರೋಪ ಕೇಳಿಬಂದಿದೆ.

ಪೊಲೀಸರ ಬುಲೇರೋ ವಾಹನ ಹತ್ತಲು ದರ್ಶನ್ ನಿರಾಕರಿಸಿ ಕಿರಿಕ್ ಮಾಡಿದ್ದರು ಎಂದು ಆರೋಪ ಮಾಡಲಾಗಿದೆ. ಹಾಗೆ ನನ್ನ ಹತ್ತಿರ ಐಷಾರಾಮಿ ಕಾರು ಇದೆ ಅದ್ರಲ್ಲೇ ನಾನು ಬೆಂಗಳೂರಿಗೆ ಬರ್ತೀನಿ ಎಂದು ದರ್ಶನ್ ಹೇಳಿದ್ದರು. ಆಗ ಅಲ್ಲೇ ಇದ್ದ ಖಡಕ್ ಪೊಲೀಸ್ ಅಧಿಕಾರಿ ಒಬ್ಬರು, ಸುಮ್ಮನೆ ಕಾರನ್ನು ಹತ್ತದೇ ಇದ್ದರೆ ನಿಮ್ಮ ಕಾಲಿಗೆ ಗುಂಡು ಹೊಡೆದು ಕರೆದುಕೊಂಡು ಹೋಗಬೇಕಾಗುತ್ತದೆ, ಎಂದು ಎಚ್ಚರಿಕೆ ನೀಡಿ ಕರೆದುಕೊಂಡು ಬಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.

30 ಲಕ್ಷ ರೂಪಾಯಿಗೆ ಡೀಲ್?

ದರ್ಶನ್ ತೂಗುದೀಪ್ ತಮ್ಮ ಪ್ರೇಯಸಿ ವಿಚಾರಕ್ಕೆ ಬಂದ ರೇಣುಕಾಸ್ವಾಮಿ ಹತ್ಯೆ ಮಾಡಿಸಿದ್ದಾರೆ, ಅಲ್ಲದೆ ಸ್ವತಃ ತಾವೇ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಸಮಯದಲ್ಲಿ ಮತ್ತೊಂದು ಗಂಭೀರವಾದ ಆರೋಪ ಕೂಡ ಕೇಳಿಬಂದಿದೆ. ಅದು ಏನೆಂದರೆ ಹಲ್ಲೆ ಮಾಡುವ ಸಮಯದಲ್ಲಿ ದಿಢೀರ್ ರೇಣುಕಾಸ್ವಾಮಿ ಸತ್ತು ಹೋಗಿದ್ದಾರೆ, ಆಗ ಆ ಹೆಣವನ್ನು ಎಲ್ಲಾದರೂ ದಫನ್ ಮಾಡಿ ಎಂದು ಸ್ವತಃ ದರ್ಶನ್ ನಾಯ್ಡು ಆದೇಶ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಇದೀಗ ದರ್ಶನ್ ವಿರುದ್ಧವೇ ಗಂಭೀರ ಆರೋಪ ಕೇಳಿಬಂದಿದ್ದು, 30 ಲಕ್ಷ ರೂಪಾಯಿಗೆ ಡೀಲ್‌ನ ಕೂಡ ಮಾಡಿದ್ದರು ಎಂದು ಆರೋಪಿಸಲಾಗಿದೆ.

ದರ್ಶನ್ & ಗ್ಯಾಂಗ್‌ಗೆ ಅನ್ನ-ಸಾರು!

ಪ್ರತಿದಿನ ಎಣ್ಣೆ ಹೊಡೆದು, ಸಖತ್ ಎಂಜಾಯ್ ಮಾಡುತ್ತಾ ಮಾಂಸ ತಿನ್ನುತ್ತಿದ್ದ ನಟ ದರ್ಶನ್ & ಗ್ಯಾಂಗ್ ಈಗ ಅನ್ನ ಸಾರು ತಿಂದು ಮಲಗುವ ಪರಿಸ್ಥಿತಿ ಬಂದಿದೆ. ಪೊಲೀಸರು ಆರೋಪಿಗಳ ತಂಡಕ್ಕೆ ಅನ್ನ ಸಾರು ನೀಡಿ, ಚಾಪೆ ಕೊಟ್ಟು ಮಲಗಿಸಿದ್ದಾರೆ. ಈ ಮೂಲಕ ಕೊಲೆ ಆರೋಪದ ಹಿನ್ನೆಲೆ ಕಂಬಿ ಹಿಂದೆ ಬಿದ್ದಿರುವ, ಸೋ ಕಾಲ್ಡ್ ಡಿ-ಬಾಸ್ ಇದೀಗ ಹಿಂಸೆ ಅನುಭವಿಸುತ್ತಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ದರ್ಶನ್ ಅವರ ಬೆನ್ನುಹತ್ತುವ ಅಪಾಯ ಕಾಡುತ್ತಿದ್ದು, ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ತೂಗುದೀಪ ದರ್ಶನ್ ಅವರ ಅಭಿಮಾನಿಗಳು ಸೈಲೆಂಟ್ ಆಗುತ್ತಿದ್ದಾರೆ.

ಪತ್ರಕರ್ತರ ತೀವ್ರ ಆಕ್ರೋಶ!

ಪೊಲೀಸ್ ಅಧಿಕಾರಿಗಳ ವರ್ತನೆಯಿಂದ ಮಾಧ್ಯಮ ಸಿಬ್ಬಂದಿ ಆಕ್ರೋಗೊಂಡಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ, ದರ್ಶನ್ ಅಭಿಮಾನಿ ಮಾಧ್ಯಮಗಳ ಎದುರಿಗೆ ಬಂದು ಮಾಧ್ಯಮಗಳ ಕುರಿತು ತುಂಬ ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ವೇಳೆ ಅಲ್ಲಿದ್ದ ಮಾಧ್ಯಮ ಸಿಬ್ಬಂದಿ ದಿಢೀರ್ ರೊಚ್ಚಿಗೆದ್ದಿದ್ದು ಆತನ ಮುಖಚರಿ ಸೆರೆಹಿಡಿಯಲು ಹೋಗಿದ್ದಾರೆ. ಈ ವೇಳೆ ಹೆದರಿದ ದರ್ಶನ್ ಅಭಿಮಾನಿ, ಆ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇಷ್ಟಾದರೂ ಮಾಧ್ಯಮಗಳ ಸಿಬ್ಬಂದಿ ಆತನ ಹಿಂದೆ ಓಡಿದ್ದಾರೆ. ಆಗ ತಕ್ಷಣ ಪೊಲೀಸರು ಆತನನ್ನ ಪೊಲೀಸ್ ಠಾಣೆ ಒಳಗೆ ಕರೆದುಕೊಂಡು ಹೋಗಿದ್ದಾರೆ. ಹಾಗೇ ಆತನಿಗೆ ಅವರದ್ದೇ ಭಾಷೆಯಲ್ಲಿ ಬುದ್ಧಿ ಹೇಳಿ, ರುಚಿ ತೋರಿಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+