Bigg Boss: ಮೋಕ್ಷಿತಾಗೆ ಮದುವೆ ಎಂದರೆ ಭಯ ಯಾಕೆ?
ಬಿಗ್ ಬಾಸ್ 11ನೇ ಆವೃತ್ತಿಯಲ್ಲಿ ಫೈನಲ್ ತಲುಪುಬಹುದಾದ ಸ್ಪರ್ಧಿಗಳಲ್ಲಿ ಮೋಕ್ಷಿತಾ ಕೂಡ ಒಬ್ಬರು. ಇತ್ತಿಚೆಗೆ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಮನೆಯವರು ಭೇಟಿ ಕೊಡುತ್ತಿದ್ದಾರೆ. ಮೋಕ್ಷಿತಾ ಕುಟುಂಬ ಕೂಡ ಬಿಗ್ ಬಾಸ್ ಮನೆಗೆ ಭೇಟಿ ಕೊಟ್ಟಿತ್ತು. ಮೋಕ್ಷಿತಾ ತಮ್ಮನನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದನ್ನು ನೋಡಿ ಪ್ರೇಕ್ಷಕರ ಕಣ್ಣು ಕೂಡ ಒದ್ದೆಯಾಗಿತ್ತು.
ವಿಶೇಷ ಚೇತನ ತಮ್ಮನನ್ನು ಮೋಕ್ಷಿತಾ ಮಗನಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಅವರಿ ಪಾರು ಧಾರವಾಹಿ ಮಾಡುವಾಗ ಕೂಡ ತಮ್ಮನಿಗಾಗಿ ಸಮಯ ಮೀಸಲಿಡುತ್ತಿದ್ದರು. ತಮ್ಮನ ಬಗ್ಗೆ ಅಷ್ಟು ಕಾಳಜಿ, ಅಕ್ಕರೆ. ಮೋಕ್ಷಿತಾ ಪೋಷಕರು ಕೂಡ ಬಿಗ್ ಬಾಸ್ ಮನೆಗೆ ಬಂದು ಕಾಲ ಕಳೆದರು.

ತಮ್ಮ ಕುಟುಂಬದ ಮಾತನಾಡುವ ಸಂದರ್ಭದಲ್ಲಿ ಮೋಕ್ಷಿತಾ ತನಗೆ ಮದುವೆ ಬಗ್ಗೆ ಇರುವ ಭಯವನ್ನು ಹೇಳಿಕೊಂಡರು. ತನ್ನ ಅಪ್ಪ ಅಮ್ಮ ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ. ಕೆಲಸಕ್ಕೆ ಹೋದಾದ ನೈಟ್ ಶಿಫ್ಟ್ ಇದ್ದದ್ದು ನೋಡಿ ಅಪ್ಪ ಕೆಲಸ ಬಿಡಿಸಿ ಮನೆಯಲ್ಲೇ ನೋಡಿಕೊಂಡರು. ನನಗೆ ಕಷ್ಟ ಬರದಂತೆ ನೋಡಿಕೊಂಡಿದ್ದಾರೆ. ಅವರನ್ನು ಚನ್ನಾಗಿ ನೋಡಿಕೊಳ್ಳಬೇಕು ಎಂದರು.
ಈ ಕಾರಣಕ್ಕೆ ಮದುವೆ ಎಂದರೆ ಭಯ
ನನ್ನ ತಮ್ಮನೇ ನನಗೆ ಪ್ರಪಂಚ, ಆತನೆಂದರೆ ನನಗೆ ಮಗುವಿದ್ದಂತೆ. ನಾನು ಅವನಿಗೆ ಅಕ್ಕ ಅಲ್ಲ ತಾಯಿ. ನಾನು ಯಾರನ್ನಾದರೂ ಮದುವೆಯದಾರೆ ಅಮ್ಮ, ಅಪ್ಪ, ತಮ್ಮನಿಂದ ಎಲ್ಲಿ ದೂರ ಮಾಡುತ್ತಾರೋ ಎನ್ನುವ ಭಯ ಇದೆ. ಅದೇ ಕಾರಣಕ್ಕೆ ನಾನು ಇನ್ನೂ ಮದುವೆಯ ಬಗ್ಗೆ ನಿರ್ಧಾರ ಮಾಡಿಲ್ಲ. ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಹುಡುಗ ಸಿಕ್ಕರೆ ಮಾತ್ರ ಮದುವೆ, ಇಲ್ಲವಾದರೆ ಹೀಗೆ ಇದ್ದುಬಿಡುತ್ತೇನೆ ಎಂದು ಹೇಳಿದ್ದಾರೆ.
ಮೋಕ್ಷಿತಾ ತಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ ಕಂಡು ಪ್ರೇಕ್ಷಕರು ಕೂಡ ಭಾವುಕರಾಗಿದ್ದಾರೆ. ಮೋಕ್ಷಿತಾಗೆ ಒಂದೊಳ್ಳೆ ಮನಸ್ಸಿದೆ. ಆಕೆ ಬಿಗ್ ಬಾಸ್ ಗೆಲ್ಲಲಿ ಎಂದು ಆಕೆಯ ಅಭಿಮಾನಿಗಳು ಹಾರೈಸಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಕುಟುಂಬ
ಬಿಗ್ ಬಾಸ್ ಸ್ಪರ್ಧಿಗಳ ಕುಟುಂಬದ ಸದಸ್ಯರಿಗೆ ಬಿಗ್ ಬಾಸ್ ಮನೆಯಲ್ಲಿ ಒಂದು ದಿನ ಕಳೆಯಲು ಅವಕಾಶ ನೀಡಲಾಗಿತ್ತು. ಎಲ್ಲಾ ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಭೇಟಿ ನೀಡಿ ಸಮಯ ಕಳೆದಿದ್ದಾರೆ. ಈ ವಾರವಿಡೀ ಕುಟುಂಬದ ಸೆಂಟಿಮೆಂಟ್ ನೋಡುಗರನ್ನು ಭಾವುಕರನ್ನಾಗಿಸಿದೆ. 90 ದಿನ ಮನೆಯವರಿಂದ ದೂರವಿದ್ದ ಸ್ಪರ್ಧಿಗಳು ಕುಟುಂಬಸ್ಥರನ್ನು ಕಂಡು ಕಣ್ಣೀರಿಟ್ಟಿದ್ದಾರೆ.











Click it and Unblock the Notifications