ದರ್ಶನ್ & ಗ್ಯಾಂಗ್ ಉಮಾಪತಿ ಮೇಲೆ ಹಲ್ಲೆ ಮಾಡಲು ಬಂದಾಗ ಏನಾಗಿತ್ತು?

ದರ್ಶನ್ ತೂಗುದೀಪ್ ಅಲಿಯಾಸ್ ದರ್ಶನ್ ನಾಯ್ಡು ಕೊಲೆ ಆರೋಪದಲ್ಲಿ ಬಂಧನ ಆದ ನಂತರ ಒಂದೊಂದೇ ಸ್ಫೋಟಕ ವಿಚಾರ ಹೊರ ಬರುತ್ತಿದೆ. ಈ ಹಿಂದೆ ಕನ್ನಡದ ನಿರ್ಮಾಪಕ ಉಮಾಪತಿಗೆ ಗನ್ ತೋರಿಸಿ ದರ್ಶನ್ & ಗ್ಯಾಂಗ್ ಬೆದರಿಕೆ ಹಾಕಿತ್ತು, ಎಂಬ ಆರೋಪ ಸ್ವತಃ ಉಮಾಪತಿ ಅವರೇ ಮಾಡಿದ್ದರು. ಇದೀಗ ಸ್ವತಃ ನಟ ದರ್ಶನ್, ಉಮಾಪತಿ ಮೇಲೆ ಹಲ್ಲೆಗೆ ಮುಂದಾಗಿದ್ದರು ಎಂಬ ವಿಚಾರ ಬಯಲಾಗಿದೆ. ನಟ ದರ್ಶನ್ ಹಲ್ಲೆ ಮಾಡಲು ಬಂದಾಗ, ಉಮಾಪತಿ ಏನು ಮಾಡಿದ್ದರು ಗೊತ್ತೆ? ಬನ್ನಿ ತಿಳಿಯೋಣ.

ದರ್ಶನ್ ಜೀವನದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ಕಿತ್ತೋದ ಕೆಲವರ ಸಹವಾಸವೇ ದೊಡ್ಡ ಸಮಸ್ಯೆ ಮಾಡಿತ್ತು. ಹೀಗಾಗಿಯೇ ದರ್ಶನ್ ಸುಂದರ ಜೀವನ ಹಾಳು ಮಾಡಿಕೊಂಡರು ಎಂಬ ಆರೋಪ ಇದೆ. ಈ ರೀತಿ ದರ್ಶನ್ ಕಂಡ ಕಂಡವರ ಮೇಲೆ ಹಲ್ಲೆ ಮಾಡುವುದು & ಪೊಲೀಸರ ಮೇಲೆ ಕೂಡ ಹಲ್ಲೆ ಮಾಡಿದ್ದಾನೆ ಎಂಬ ಆರೋಪಗಳ ನಡುವೆ ಈಗ ಸ್ಫೋಟಕ ವಿಚಾರ ಒಂದನ್ನ ಸ್ವತಃ ನಿರ್ಮಾಪಕ ಉಮಾಪತಿ ಹೊರ ಹಾಕಿದ್ದಾರೆ. ಹಾಗಾದ್ರೆ ಉಮಾಪತಿ ಹೇಳಿದ ಆ ಸ್ಫೋಟಕ ಸಂಗತಿ ಯಾವುದು? ಉಮಾಪತಿ ದಿಢೀರ್ ದರ್ಶನ್‌ನ ತಳ್ಳಿದ್ದು ಯಾಕೆ? ಮುಂದೆ ಓದಿ.

This Is What Producer Umapathy Is Said About Kannada Actor Darshan Thoogudeepa

ದರ್ಶನ್ ಹೊಡೆಯಲು ಬಂದಾಗ...

ಅಂದಹಾಗೆ ದರ್ಶನ್ & ಗ್ಯಾಂಗ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ಜಗಳ ಆಗಿತ್ತು, ಆಗ ಕುಡಿದ ಮತ್ತಿನಲ್ಲಿ ನಟ ದರ್ಶನ್ ಉಮಾಪತಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ಈ ಸಮಯದಲ್ಲಿ ತನ್ನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ನಟ ದರ್ಶನ್‌ನ ಸ್ವತಃ ಉಮಾಪತಿ ಶ್ರೀನಿವಾಸ್ ತಳ್ಳಿದ್ದಾರೆ. ಹೀಗೆ ನಿರ್ಮಾಪಕ ಉಮಾಪತಿ, ನಟ ದರ್ಶನ್‌ನ ತಳ್ಳಿದ ನಂತರ ನಡೆದಿದ್ದೇ ರೋಚಕ!

ಉಮಾಪತಿ ತಳ್ಳಿದಾಗ ನೆಲಕ್ಕೆ ಬಿದ್ದಿದ್ದ ದರ್ಶನ್‌ ಅನ್ನ ಸಹಚರರು ಎತ್ತಿ ನಿಲ್ಲಿಸಿದ್ದರಂತೆ. ಆಗ ದರ್ಶನ್ ರೈಸ್ ಆಗಿ ನಿರ್ಮಾಪಕ ಉಮಾಪತಿಗೆ 'ನನ್ನ ಮೇಲೆ ಹಲ್ಲೆ ಮಾಡ್ತೀಯಾ?' ಅಂತಾ ಕೇಳಿದ್ದರಂತೆ. ಆಗ ಉಮಾಪತಿ, 'ಇಲ್ಲ ನಾನು ನಿಮ್ಮ ಮೇಲೆ ಹಲ್ಲೆ ಮಾಡಿಲ್ಲ. ನೀವು ನನ್ನ ಹೊಡೆಯಲು ಬಂದಾಗ ನಾನು ನನ್ನನ್ನ ರಕ್ಷಣೆ ಮಾಡಿಕೊಂಡಿದ್ದು. ಅಕಸ್ಮಾತ್ ನೀವು ಹಲ್ಲೆಗೆ ನಿರ್ಧಾರ ಮಾಡಿದ್ದರೆ, ನಾನು ಸುಮ್ಮನೆ ಇರಲ್ಲ' ಎಂದಿದ್ದರಂತೆ ಉಮಾಪತಿ. ಈ ಆರೋಪ ಖುದ್ದಾಗಿ ನಿರ್ಮಾಪಕ ಉಮಾಪತಿ ಅವರೇ ಮಾಡಿದ್ದು, ಖಾಸಗಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಫುಲ್ ವೈರಲ್ ಆಗುತ್ತಿದೆ.

118 ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು?

ದರ್ಶನ್ & ಗ್ಯಾಂಗ್ ವಿರುದ್ಧ ಕೇಳಿಬಂದ ಕೊಲೆ ಆರೋಪ ಹಿನ್ನೆಲೆ ಕರ್ನಾಟಕ ಪೊಲೀಸರು ಈಗ ಖಡಕ್ ತನಿಖೆ ನಡೆಸುತ್ತಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಕನ್ನಡ ನಾಡಿನ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದು ಯಾವುದೇ ರೀತಿ ಒತ್ತಡಗಳಿಗೂ ಮಣಿಯಬೇಡಿ ಎಂದಿದ್ದಾರೆ. ಹೀಗೆ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ. ಅದರಲ್ಲೂ ದರ್ಶನ್ & ಗ್ಯಾಂಗ್ ವಿರುದ್ಧ ಈವರೆಗೂ ಸುಮಾರು 118 ಸಾಕ್ಷ್ಯ ಸಂಗ್ರಹವಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ.

ದರ್ಶನ್ ಬೆನ್ನಿಗೆ ನಾಗ & ಸೈಕಲ್ ರವಿ?

ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ A2 ಆರೋಪಿ ಆಗಿದ್ದಾರೆ ಅಲ್ಲದೆ ಕಂಬಿ ಎಣಿಸುತ್ತಿದ್ದಾರೆ. ಹೀಗಿದ್ದಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ಗೆ ಸೇವೆ ಮಾಡಲು ಅಂದ್ರೆ ಆತಿಥ್ಯ ನೀಡಲು ಬೆಂಗಳೂರಿನ ರೌಡಿ ಶೀಟರ್ ನಾಗ & ಸೈಕಲ್ ರವಿ ನಡುವೆ ಇದೀಗ ಭರ್ಜರಿಯಾಗಿ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.

ಈ ಬಗ್ಗೆ ಸ್ಫೋಟಕ ಹಾಗೂ ಭಯಾನಕ ಮಾಹಿತಿಯನ್ನ ಕನ್ನಡದ ಟಿವಿ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಇದೇ ಸಮಯದಲ್ಲಿ ರೌಡಿ ಶೀಟರ್ ನಾಗ ಜೈಲಿನಲ್ಲೇ ಇದ್ದು, ಜೈಲಿನಿಂದ ಹೊರಗೆ ಇರುವ ಸೈಕಲ್ ರವಿ ತನ್ನ ಹುಡುಗರ ಮೂಲಕ ದರ್ಶನ್‌ಗೆ ಆತಿಥ್ಯ ನೀಡಲು ಮುಂದಾಗಿರುವ ಆರೋಪ ಕೇಳಿಬಂದಿದೆ. ಈ ಸುದ್ದಿ ಇದೀಗ ಸಂಚಲನವನ್ನೇ ಸೃಷ್ಟಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+