Darshan Thoogudeepa: ‘ಲ್ಯಾಂಬೋರ್ಗಿನಿ ಉರುಸ್’ ಇದ್ದರೂ ತನ್ನದೇ ಸಿನಿಮಾ ನೋಡಲು ಆಗಲ್ಲ ದರ್ಶನ್ ತೂಗುದೀಪ್!
ದರ್ಶನ್ ತೂಗುದೀಪ್ ಪರಿಸ್ಥಿತಿ ಬಳ್ಳಾರಿ ಜೈಲಿನಲ್ಲಿ ತೀರಾ ಹೀನಾಯವಾಗಿದೆ. ನಟ ದರ್ಶನ್ ತೂಗುದೀಪ್ ಹೊರಗೆ ಇದ್ದಾಗ 'ಲ್ಯಾಂಬೋರ್ಗಿನಿ ಉರುಸ್' ಕಾರಿನಲ್ಲಿ ಎಸಿ ಹಾಕಿಕೊಂಡು ಫುಲ್ ಬಿಂದಾಸ್ ಜೀವನ ನಡೆಸುತ್ತಿದ್ದರು. ಒಂದು ಹೊತ್ತಿನ ಊಟಕ್ಕೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುತ್ತಾ ಹಾಯಾಗಿ ಇದ್ದ ದಾಸ ದರ್ಶನ್ ತೂಗುದೀಪ್‌ಗೆ, ಈಗ ಜೈಲಿನ ಊಟವೇ ಗತಿ ಆಗಿದೆ. ಅಲ್ಲದೆ ಟಾಯ್ಲೆಟ್ ತೊಳೆದು & ಕಸ ಗುಡಿಸಿದರೆ ಮಾತ್ರ ಊಟ ಎನ್ನುವ ಸ್ಥಿತಿ ದರ್ಶನ್ ತೂಗುದೀಪನಿಗೆ ಬಂದಿದೆ. ಪರಿಸ್ಥಿತಿ ಹೀಗಿದ್ದಾಗ ದರ್ಶನ್ ಜೈಲಿನ ಕೋಣೆಯಲ್ಲಿ ಟಿವಿ ಹಾಕಿದರೂ, ದರ್ಶನ್ ತೂಗುದೀಪ್ ತನ್ನದೇ ಸಿನಿಮಾ ನೋಡಲು ಆಗದ ಸ್ಥಿತಿ ಬಂದಿದೆ!
ದರ್ಶನ್ ತೂಗುದೀಪ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹೋದ ನಂತರ ಸ್ಥಿತಿ ಕೈಮೀರಿ ಹೋಗಿದೆ. ಬಳ್ಳಾರಿ ಜೈಲಿನ ಬಿಸಿಲು, ಒಂಟಿತನ, ಬಳ್ಳಾರಿಯ ಊಟ ಈಗ ನಟ ದರ್ಶನ್ ತೂಗುದೀಪ್‌ಗೆ ಬಿಲ್‌ಕುಲ್ ಹಿಡಿಸುತ್ತಿಲ್ಲ. ಇಂತಹ ಸಮಯದಲ್ಲಿ ನನಗೆ ಟಿವಿ ಬೇಕು & ನ್ಯೂಸ್ ನೋಡಬೇಕು ಅಂತಾ ಹಠ ಹಿಡಿದಿದ್ದರಂತೆ ದರ್ಶನ್ ತೂಗುದೀಪ್. ಈ ವಿಚಾರಕ್ಕೆ ಮಾನ್ಯ ನ್ಯಾಯಾಲಯದ ಬಳಿ ಕೂಡ ದರ್ಶನ್ ತೂಗುದೀಪ ಮನವಿ ಮಾಡಿದ್ದರು. ಕೊನೆಗೂ ಟಿವಿ ಸಿಕ್ಕಿದ್ದು, ದರ್ಶನ್ ತೂಗುದೀಪ್ ಇರುವ ಬಳ್ಳಾರಿ ಜೈಲಿನ ಕೋಣೆಗೆ ಟಿವಿ ಫಿಕ್ಸ್ ಮಾಡಿ ಹೋಗಿದ್ದಾರೆ ಅಧಿಕಾರಿಗಳು. ಹೀಗಿದ್ದರೂ, 'ಲ್ಯಾಂಬೋರ್ಗಿನಿ ಉರುಸ್' ಇದ್ದರೂ ತನ್ನದೇ ಸಿನಿಮಾ ನೋಡಲು ಆಗಲ್ಲ ದರ್ಶನ್ ತೂಗುದೀಪ್! ಯಾಕೆ ಗೊತ್ತಾ? ಮುಂದೆ ಓದಿ.

ಡಿ-ಬಾಸ್ ಜೀವನದಲ್ಲಿ ಹಿಂಗೆಲ್ಲಾ ಆಯ್ತಾ?
ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ಎಂಬ ಬಿರುದು ಪಡೆದಿದ್ರು ನಟ ದರ್ಶನ್ ತೂಗುದೀಪ್. ಇಂತಿಪ್ಪ ನಟ ದರ್ಶನ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವ ಕುರಿತು ಸಂಚಲನ ಸೃಷ್ಟಿ ಮಾಡುವ ಸುದ್ದಿ ಇದೀಗ ಹಬ್ಬಿದೆ. ಸೋಷಿಯಲ್ ಮೀಡಿಯಾದಲ್ಲಿ ಈಗ ನಟ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವ ಬಗ್ಗೆ ಸುದ್ದಿ ಓಡಾಡುತ್ತಿದೆ. ಇದೇ ಸಮಯದಲ್ಲಿ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ಟಿವಿ ಇದ್ದರೂ, ತಮ್ಮ ಇಷ್ಟದ ಸಿನಿಮಾ ನೋಡಲು ಆಗದೆ ಒದ್ದಾಡುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ...
ಬಳ್ಳಾರಿ ಜೈಲಲ್ಲಿ ನಟ ದರ್ಶನ್ ತೂಗುದೀಪ್ ಟಿವಿ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಆದ್ರೆ ಜೈಲಿನ ನಿಯಮದ ಪ್ರಕಾರ ಸರ್ಕಾರಿ ಚಾನೆಲ್‌ಗಳನ್ನ ಮಾತ್ರ ನೋಡಬೇಕು ಎಂಬ ರೂಲ್ಸ್ ಇದೆ. ಸರ್ಕಾರಿ ಚಾನೆಲ್ ಬಿಟ್ಟು ಜೈಲಿನ ಒಳಗೆ ದರ್ಶನ್ ತೂಗುದೀಪ್ ಬೇರೆ ಚಾನೆಲ್‌ಗಳನ್ನ ನೋಡಲು ಆಗಲ್ಲ. ಡಿಡಿ ನ್ಯೂಸ್, ಚಂದನ ಈ ರೀತಿಯ ಚಾನೆಲ್‌ಗಳನ್ನು ನೋಡಬೇಕಿದೆ. ಅದನ್ನ ಬಿಟ್ಟು ಈಗ ದರ್ಶನ್ ತೂಗುದೀಪ ಯಾವುದೇ ಖಾಸಗಿ ಚಾನಲ್ ನೋಡಲು ಆಗಲ್ಲ. ಹೀಗಾಗಿ ದರ್ಶನ್‌ಗೆ ಈ ವಿಚಾರ ದೊಡ್ಡ ತಲೆನೋವು ತಂದೊಡ್ಡಿದೆ.
ಬಟ್ಟೆ ಒಗೆಯುತ್ತಿರುವ ದರ್ಶನ್ ತೂಗುದೀಪ!
ಟಾಯ್ಲೆಟ್ ಮಾತ್ರ ಅಲ್ಲದೆ ದರ್ಶನ್ ತೂಗುದೀಪ ಇದೀಗ ಬಳ್ಳಾರಿ ಜೈಲಿನಲ್ಲಿ ತನ್ನ ಬಟ್ಟೆಯ ತಾನೇ ಒಗೆಯುವ ಸ್ಥಿತಿ ಇದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್‌ಗೆ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತಿದ್ದರು ಸಹ ಖೈದಿಗಳು. ಇದೀಗ ಬಳ್ಳಾರಿ ಜೈಲು ದರ್ಶನ್ ತೂಗುದೀಪನಿಗೆ ನರಕದಂತೆ ಆಗಿದೆ. ಹೀಗಾಗಿ ತನ್ನ ಜೈಲಿನ ಕೋಣೆ ಒಳಗೆ ತಾನೇ ಟಾಯ್ಲೆಟ್ ತೊಳೆಯುತ್ತಾ, ಕಸ ಗುಡಿಸಿಕೊಂಡು & ನೆಲ ಒರೆಸಿ, ಬಟ್ಟೆ ಕೂಡ ತೊಳೆಯುತ್ತಾ ಜೀವನ ಕಳೆಯುವಂತೆ ಆಗಿದೆ ದಾಸ ದರ್ಶನ್!












Click it and Unblock the Notifications