Darshan Thoogudeepa: ಪವಿತ್ರಾ ಗೌಡ ಬಳ್ಳಾರಿ ಜೈಲಿಗೆ ಶಿಫ್ಟ್? ಡಿ-ಬಾಸ್ ಇರುವ ಜೈಲಿಗೆ ಪವಿತ್ರಾ ಗೌಡ ಸವಾರಿ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿದ್ದ ದರ್ಶನ್ ತೂಗುದೀಪ್ ಅವರು, ಜೈಲಿನ ಒಳಗಡೆ ನಿಯಮ ಮೀರಿ ವರ್ತಿಸಿದ್ದಾರೆ ಎಂಬ ಆರೋಪಗಳ ನಡುವೆ ದಿಢೀರ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಅಲ್ಲದೆ ದರ್ಶನ್ ಅವರ ಜೊತೆಗಾರರು ಕೂಡ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳ ಜೈಲಿಗೆ ಶಿಫ್ಟ್ ಆಗಿದ್ದಾರೆ. ಹೀಗಿದ್ದಾಗಲೇ ಪವಿತ್ರಾ ಗೌಡ ಮಾತ್ರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಉಳಿದುಕೊಂಡಿದ್ದು, ಇದೀಗ ಅವರನ್ನು ಕೂಡ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ತಯಾರಿ ನಡೆದಿದೆ ಎಂಬ ಸುದ್ದಿಯನ್ನ ಹಬ್ಬಿಸಲಾಗುತ್ತಿದೆ!
ಪವಿತ್ರಾ ಗೌಡ ಕಾರಣಕ್ಕೆ ಇದೀಗ ಇಷ್ಟೆಲ್ಲಾ ನಡೆದು ಹೋಗಿದ್ದು, ದರ್ಶನ್ ತೂಗುದೀಪ್ & ಜೊತೆಗಾರರು ಜೈಲಿಗೆ ಹೋಗಲು ಪರೋಕ್ಷವಾಗಿ ಪವಿತ್ರಾ ಗೌಡ ಕಾರಣ ಎಂಬ ಆರೋಪವನ್ನ ದರ್ಶನ್ ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ಹೀಗಿದ್ದಾಗ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ಒಳಗೆ ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಭೇಟಿ ಆಗುತ್ತಿದ್ದರು, ಹಾಗೆ & ಹೀಗೆ ಎಂಬ ಸುಳ್ಳು ಸುದ್ದಿ ಹಬ್ಬಿದ್ದವು. ಹೀಗಿದ್ದಾಗ, ದರ್ಶನ್ ಅವರನ್ನು ಬೇರೆಯದ್ದೇ ಕಾರಣಕ್ಕೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ವಿಚಾರ ಕಿಚ್ಚು ಹೊತ್ತಿಸಿರುವ ಸಮಯದಲ್ಲಿಯೇ ಮತ್ತೊಂದು ಸ್ಫೋಟಕ ವಿಚಾರ ಚರ್ಚೆ ಆಗುತ್ತಿದೆ. ಪವಿತ್ರಾ ಗೌಡರನ್ನ ಇದೀಗ ಪೊಲೀಸರು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುತ್ತಾರೆ ಅಂತಾ ಚರ್ಚೆ ಶುರುವಾಗಿದೆ. ಹಾಗಾದ್ರೆ ಇದು ನಿಜಾನಾ?

ಪವಿತ್ರಾ ಗೌಡ ಬಳ್ಳಾರಿ ಜೈಲಿಗೆ?
ದರ್ಶನ್ ತೂಗುದೀಪ್ ಅವರ ಆಪ್ತ ಗೆಳತಿ ಪವಿತ್ರಾ ಗೌಡ ಇದೀಗ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಮುದ್ದೆ ಮುರಿಯುತ್ತಾ, ಪರದಾಡುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಇದೇ ಪವಿತ್ರಾ ಗೌಡ ಎ1 ಆರೋಪ ಆಗಿದ್ದು, ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ. ಆದರೆ ಇಷ್ಟು ದಿನ ದರ್ಶನ್ ತೂಗುದೀಪ್ & ಗ್ಯಾಂಗ್ ಕೂಡ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಇತ್ತು. ಯಾವಾಗ ದರ್ಶನ್ ತೂಗುದೀಪ್ & ಗ್ಯಾಂಗ್ ಪರಪ್ಪನ ಅಗ್ರಹಾರದ ಒಳಗೆ ತಮಗೆ ಇಷ್ಟ ಬಂದ ರೀತಿ ಬದುಕುತ್ತಿದೆ ಎಂಬ ಆರೋಪ ಕೇಳಿ ಬಂತೋ, ಆಗ ತಕ್ಷಣ ಸರ್ಕಾರ ಎಚ್ಚೆತ್ತುಕೊಂಡು ಎಲ್ಲರನ್ನೂ ಚೆಲ್ಲಾಪಿಲ್ಲಿ ಮಾಡಿದೆ. ಹಾಗಾದ್ರೆ, ಇದೀಗ ಪವಿತ್ರಾ ಗೌಡ ಕೂಡ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಾರಾ? ಸತ್ಯ ತಿಳಿಯಲು ಮುಂದೆ ಓದಿ.
ನಟ ದರ್ಶನ್ ತೂಗುದೀಪ್ ಒದ್ದಾಟ?
ಪರಪ್ಪನ ಅಗ್ರಹಾರ ಜೈಲಿನ ಒಳಗೆ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಕೂತು ಸಿಗರೇಟ್ ಸೇದುತ್ತಾ, ಟೀ ಕುಡಿಯುತ್ತಿದ್ದ ಫೋಟೋ ವೈರಲ್ ಆಗಿದ್ದೇ ತಡ ನಟ ದರ್ಶನ್ ಅವರು ಪರದಾಡಿದ್ದರು. ಯಾಕಂದ್ರೆ ದರ್ಶನ್ ತೂಗುದೀಪ್ ವಿರುದ್ಧ ಹಲವು ಗಂಭೀರವಾದ ಆರೋಪ ಕೇಳಿಬಂದಿತ್ತು. ಇದೇ ಸಮಯದಲ್ಲಿ ಬಳ್ಳಾರಿ ಜೈಲಿಗೆ ನಟ ದರ್ಶನ್ ತೂಗುದೀಪ್ ಶಿಫ್ಟ್ ಆಗಿದ್ದರೂ ಕಾಂಟ್ರವರ್ಸಿ ಕಡಿಮೆ ಆಗುತ್ತಿಲ್ಲ. ಅದರಲ್ಲೂ ಕೆಲವರು ಇದೀಗ ಪವಿತ್ರಾ ಗೌಡ ಕೂಡ ದರ್ಶನ್ ತೂಗುದೀಪ್ ಇರುವ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಾರೆ ಎನ್ನುತ್ತಿದ್ದಾರೆ. ಆದರೆ ಇದು ಸುಳ್ಳು ಸುದ್ದಿ ಎಂಬ ಆರೋಪ ಕೂಡ ಕೇಳಿಬಂದಿದೆ. ಯಾಕಂದ್ರೆ ಈ ಕುರಿತು ಪೊಲೀಸರೇ ಆಗಲಿ ಅಥವಾ ಸಂಬಂಧಪಟ್ಟ ಯಾರೇ ಆಗಲಿ ಅಧಿಕೃತ ಮಾಹಿತಿ ನೀಡಿಲ್ಲ.












Click it and Unblock the Notifications