ದರ್ಶನ್ ಮರ್ಮಾಂಗದ ಚರ್ಮ ಸುಲಿದು ರೇಣುಕಾಸ್ವಾಮಿಗೆ ಟಾರ್ಚರ್ ಕೊಟ್ಟಿದ್ದನಾ?
ದರ್ಶನ್ & ಗ್ಯಾಂಗ್ ಸೇರಿ ರೇಣುಕಾಸ್ವಾಮಿ ಕೊಲೆಯನ್ನು ಮಾಡಿರುವ ಆರೋಪದ ನಡುವೆ ಪ್ರತಿ ಕ್ಷಣಕ್ಕೂ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬರುತ್ತಿದೆ. ಅದರಲ್ಲೂ ರೇಣುಕಾಸ್ವಾಮಿ ಹತ್ಯೆ ಮಾಡುವ ಮೊದಲು, ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದು ಆತನ ಮರ್ಮಾಂಗದ ಚರ್ಮ ಕೂಡ ಸುಲಿದಿದ್ದರಂತೆ ಈ ರಾಕ್ಷಸ ಕುಲದವರು. ಈ ಬಗ್ಗೆ ನೀವೆಲ್ಲಾ ಓದಬೇಕಾದ ಸುದ್ದಿ ಇಲ್ಲಿದೆ, ಮುಂದೆ ಓದಿ.
ದರ್ಶನ್ & ಗ್ಯಾಂಗ್ ಕೊಲೆ ಆರೋಪದಲ್ಲಿ ಕಂಬಿ ಎಣಿಸುತ್ತಿದ್ದು, ಪೊಲೀಸರು ಈಗ ಸರಿಯಾಗಿ ರಿಮ್ಯಾಂಡ್ ಎತ್ತುತ್ತಿದ್ದಾರೆ. ಹೀಗಿದ್ದಾಗಲೇ ಪೊಲೀಸರು ದರ್ಶನ್ & ಗ್ಯಾಂಗ್ ಫೋನ್ ಪರಿಶೀಲನೆ ಮಾಡಿದ ಸಮಯದಲ್ಲಿ ಸ್ಫೋಟಕ ಸಂಗತಿ ಬಯಲಾಗಿದೆ. ಅದು ಏನೆಂದರೆ ರೇಣುಕಾ ಸ್ವಾಮಿಗೆ ಹಿಂಸೆ ಕೊಡಲು ಇದೇ ದರ್ಶನ್ & ಗ್ಯಾಂಗ್ ಸೇರಿಕೊಂಡು ಮರ್ಮಾಂಗದ ಮೇಲೆ ದಾಳಿಯ ಮಾಡಿತ್ತು ಎಂದು ಆರೋಪಿಸಲಾಗಿದೆ. ಅದರಲ್ಲೂ ರೇಣುಕಾಸ್ವಾಮಿ ಮರ್ಮಾಂಗದ ಚರ್ಮ ಸುಲಿದು, ಆತನಿಗೆ ಟಾರ್ಚರ್ ಕೊಟ್ಟು ಕೊಲೆ ಮಾಡಿರುವ ಸ್ಫೋಟಕ ಆರೋಪ ಕೇಳಿಬಂದಿದೆ.

ಮರ್ಮಾಂಗದ ಚರ್ಮ ಸುಲಿದರು?
ದರ್ಶನ್ & ಗ್ಯಾಂಗ್ ವಿರುದ್ಧ ಈಗ ಕೇಳಿಬಂದಿರುವ ಆರೋಪದ ಪ್ರಕಾರ, ಅವರೆಲ್ಲಾ ಸೇರಿ ರೇಣುಕಾಸ್ವಾಮಿ ಕೊಲೆ ಮಾಡುವ ಸಮಯದಲ್ಲಿ ಮರ್ಮಾಂಗದ ಚರ್ಮ ಸುಲಿದಿದ್ದರು ಅಂತಾ ಆರೋಪ ಮಾಡಲಾಗಿದ್ದು, ಕನ್ನಡದ ಪ್ರಖ್ಯಾತ ನ್ಯೂಸ್ ಚಾನೆಲ್‌ಗಳ ಬಳಿ ರೇಣುಕಾಸ್ವಾಮಿ ಮರ್ಮಾಂಗದ ಚರ್ಮ ಸುಲಿದ ಬಗ್ಗೆ ವಿಡಿಯೋ & ಫೋಟೋ ಸಾಕ್ಷಿ ಕೂಡ ಇದೆಯಂತೆ. ಈ ಮೂಲಕ ದರ್ಶನ್ & ಆತನ ಪಟಾಲಂ ಅದೆಷ್ಟು ಕ್ರೂರಿಗಳು ಅನ್ನೋದು ಈಗ ಜಗತ್ತಿನ ಎದುರು ಬಟಾ ಬಯಲಾಗಿದೆ.
ಮಗನ ಬಗ್ಗೆಯೇ ಕೆಟ್ಟ ಮಾತು?
ಹೌದು, ಕಳೆದ ಕೆಲವು ದಿನಗಳಿಂದ ದರ್ಶನ್ ಅವರ ಪುತ್ರನ ಪೋಸ್ಟ್ ವೈರಲ್ ಆಗುತ್ತಿದೆ. ಹಾಗೇ ಅಪ್ಪನ ಬಗ್ಗೆ ದರ್ಶನ್ ಮಗನಿಗೆ ಇರುವ ಬಾಂಧವ್ಯ, ಗೌರವದ ಬಗ್ಗೆ ಅಭಿಮಾನಿಗಳಿಗೆ ಹೆಮ್ಮೆಯ ಭಾವ ಮೂಡಿದೆ. ಆದ್ರೆ ಇಂತಹ ಮಗನ ಬಗ್ಗೆಯೇ ಕೊಲೆ ಆರೋಪಿ ದರ್ಶನ್, ಹೆಂಡತಿಯ ಬಳಿ ಹೇಗೆಲ್ಲ ಮಾತನಾಡಿದ್ದ ಗೊತ್ತಾ? ಅದು ಬರೀ ಕೆಟ್ಟ ಕೆಟ್ಟ ಮಾತು ಮಾತ್ರವಲ್ಲ, ಇದೇ ದರ್ಶನ್ ಕೆಲ ವರ್ಷಗಳ ಹಿಂದೆ ತನ್ನ ಪತ್ನಿಯನ್ನ ಬೈಯುವ ವೇಳೆ ಮಗನ ಬಗ್ಗೆಯು ಹೊಲಸು ಹೊಲಸು ಪದಗಳನ್ನ ಬಳಕೆ ಮಾಡಿದ್ದ. ಅದೇ ಆಡಿಯೋ ಮತ್ತೆ ವೈರಲ್ ಆಗ್ತಿದೆ ಆಡಿಯೋ ಮುಂದಿಟ್ಟು ಈಗ ನೆಟ್ಟಿಗರು 'ಜಲಗಾರ' ದರ್ಶನ್‌ರ ನೈತಿಕತೆ ಪ್ರಶ್ನೆ ಮಾಡ್ತಿದ್ದಾರೆ.
118 ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು?
ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಖಡಕ್ ತನಿಖೆ ನಡೆಸುತ್ತಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಕರ್ನಾಟಕದ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದು, ಯಾವುದೇ ರೀತಿಯ ಒತ್ತಡಗಳಿಗೆ ಮಣಿಯಬೇಡಿ ಎಂದಿದ್ದಾರೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ. ಅದರಲ್ಲೂ ದರ್ಶನ್ & ಗ್ಯಾಂಗ್ ವಿರುದ್ಧ ಈವರೆಗೂ ಸುಮಾರು 118 ಸಾಕ್ಷ್ಯ ಸಂಗ್ರಹವಾಗಿದೆ ಎಂಬ ಸುದ್ದಿ ತಿಳಿದುಬಂದಿದೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದ್ದು, ಈಗ ದರ್ಶನ್‌ಗೆ ಜೈಲೂಟ ಗ್ಯಾರಂಟಿ ಆಗಿದೆ.
ಡಿ-ಗ್ಯಾಂಗ್‌ಗೆ ಮಾನಸಿಕ ವಿಕೃತಿ?
ದರ್ಶನ್ & ಗ್ಯಾಂಗ್ ಸೇರಿ ರೇಣುಕಾಸ್ವಾಮಿ ಕೊಲೆ ಮಾಡಿರುವ ರೀತಿ ನೋಡಿದರೆ, ಈ ಗ್ಯಾಂಗ್ ಮಾನಸಿಕ ವಿಕೃತಿ ಹೊಂದಿದೆಯಾ? ಎಂಬ ಅನುಮಾನ ಮೂಡಿದೆ ಯಾಕಂದ್ರೆ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಭಯಾನಕ ಸಂಗತಿ ಗೊತ್ತಾಗಿದೆ. ರೇಣುಕಾಸ್ವಾಮಿ ಚರ್ಮಕ್ಕೆ, ತಲೆಗೆ ಹಾಗೂ ಮರ್ಮಾಂಗಕ್ಕೆ ಭಾರಿ ಗಾಯ ಮಾಡಲಾಗಿದೆ. ಹಾಗೇ ಮರ್ಮಾಂಗದ ಚರ್ಮ ಸುಲಿದು ಟಾರ್ಚರ್ ಕೊಟ್ಟಿದ್ದಾರೆ. ಈ ಮೂಲಕ ವಿಕೃತವಾಗಿ ರೇಣುಕಾಸ್ವಾಮಿ ಕೊಲೆ ಮಾಡಿದೆ ಈ ವಿಕೃತರ ಗ್ಯಾಂಗ್. ಹೀಗಾಗಿಯೇ ಪೊಲೀಸರು ಈ ಗ್ಯಾಂಗ್‌ಗೆ ವಿಕೃತ ಮನಸ್ಥಿತಿ ಇದೆಯಾ? ಎಂಬ ಆಂಗಲ್ ಮೂಲಕವೂ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಇವರಿಂದ ಇನ್ನೂ ಯಾರು, ಯಾರೆಲ್ಲಾ ಸಮಸ್ಯೆ ಎದುರಿಸಿದ್ದಾರೆ? ಅನ್ನೋದನ್ನ ಕೂಡ ಪರಿಶೀಲನೆ ಮಾಡಲಾಗುತ್ತಿದೆ.
ಮುಂದೆ ಐತೆ ಮಾರಿ ಹಬ್ಬ?
ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಮಾಡಿದೆ ಅಂತಾ ಗಂಭೀರ ಆರೋಪವು ಕೇಳಿಬಂದ ನಂತರದಲ್ಲಿ ಇಡೀ ಗ್ಯಾಂಗ್‌ನ ಜೀಪ್‌ಗೆ ಎತ್ತಾಕಿ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ಕಳೆದ 10 ದಿನದಿಂದ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್ ನೇರವಾಗಿ ರೇಣುಕಾಸ್ವಾಮಿಯ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪಗಳ ನಡುವೆ, ಈಗಾಗಲೇ ಎರಡು ಬಾರಿ ದರ್ಶನ್ & ಗ್ಯಾಂಗ್‌ನ ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಇದೀಗ ಮತ್ತೊಮ್ಮೆ, ದರ್ಶನ್ ಮತ್ತು ಸಹಚರರ ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಕೋರ್ಟ್ ಕೂಡ ಪೊಲೀಸರ ಮನವಿ ಪುರಸ್ಕರಿಸಿ, ದರ್ಶನ್ & ಗ್ಯಾಂಗ್‌ನ ಪೊಲೀಸರ ವಶಕ್ಕೆ ನೀಡಲಾಗಿದೆ.
ದರ್ಶನ್ ಅಲಿಯಾಸ್ ರೌಡಿ ದರ್ಶನ್?
2011ರ ಸಮಯದಲ್ಲಿ ತನ್ನ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಿನಲ್ಲಿ ತನ್ನ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಹಾಗೂ ಹಲವು ನಿರ್ಮಾಪಕ, ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಇದೀಗ, ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಕನ್ನಡ ನಾಡಿನ ಪೊಲೀಸರು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆ ಎಲ್ಲಾ ದಾಖಲೆಗಳನ್ನ ಸಂಗ್ರಹಿಸುವ ಮೂಲಕ, ದರ್ಶನ್ & ಗ್ಯಾಂಗ್‌ಗೆ ಶಾಕ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ'?
ಕಲಾಸಿಪಾಳ್ಯ, ಮೆಜೆಸ್ಟಿಕ್ ಅಂತಾ ಬೆಂಗಳೂರಿನ ಏರಿಯಾಗಳ ಹೆಸರನ್ನು ಇಟ್ಟುಕೊಂಡೇ ಭಾರಿ ಭರ್ಜರಿ ಸಿನಿಮಾ ನೀಡಿದ್ದ ದರ್ಶನ್, ಈಗ 'ಪರಪ್ಪನ ಅಗ್ರಹಾರ' ಸೇರಿದ್ದಾರೆ. ದರ್ಶನ್ ತಾನೇ ಮಾಡಿಕೊಂಡ ಎಡವಟ್ಟಿಗೆ & ದುರಹಂಕಾರಕ್ಕೆ ಇಂದು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ ಅಂತಾರೆ ಅವರ ಸ್ನೇಹಿತರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗೆ ದರ್ಶನ್ ಕೊಲೆ ಆರೋಪದಲ್ಲಿ ಸೆಂಟ್ರಲ್ ಜೈಲ್ 'ಪರಪ್ಪನ ಅಗ್ರಹಾರ'ಕ್ಕೆ ಹೋಗಿದ್ದು, ಕೊಲೆ ಆರೋಪಿ ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ' ಆಗಿರಲಿದೆ ಅಂತಿದ್ದಾರೆ ದರ್ಶನ್ ವಿರೋಧಿಗಳು. ಹೀಗಾಗಿ ದರ್ಶನ್ & ಅವರ ವಿರೋಧಿಗಳ ಫೈಟಿಂಗ್‌ಗೆ ಭರ್ಜರಿ ತಿರುವು ಸಿಕ್ಕಿದೆ.
ದರ್ಶನ್ ಬೆನ್ನಿಗೆ ನಾಗ & ಸೈಕಲ್ ರವಿ?
ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ A2 ಆರೋಪಿ ಆಗಿದ್ದಾರೆ ಅಲ್ಲದೆ ಕಂಬಿ ಎಣಿಸುತ್ತಿದ್ದಾರೆ. ಹೀಗಿದ್ದಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ಗೆ ಸೇವೆ ಮಾಡಲು ಅಂದ್ರೆ ಆತಿಥ್ಯ ನೀಡಲು ಬೆಂಗಳೂರಿನ ರೌಡಿ ಶೀಟರ್ ನಾಗ & ಸೈಕಲ್ ರವಿ ನಡುವೆ ಇದೀಗ ಭರ್ಜರಿಯಾಗಿ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಸ್ಫೋಟಕ ಹಾಗೂ ಭಯಾನಕ ಮಾಹಿತಿಯನ್ನ ಕನ್ನಡದ ಟಿವಿ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಇದೇ ಸಮಯದಲ್ಲಿ ರೌಡಿ ಶೀಟರ್ ನಾಗ ಜೈಲಿನಲ್ಲೇ ಇದ್ದು, ಜೈಲಿನಿಂದ ಹೊರಗೆ ಇರುವ ಸೈಕಲ್ ರವಿ ತನ್ನ ಹುಡುಗರ ಮೂಲಕ ದರ್ಶನ್‌ಗೆ ಆತಿಥ್ಯ ನೀಡಲು ಮುಂದಾಗಿರುವ ಆರೋಪ ಕೇಳಿಬಂದಿದೆ. ಈ ಸುದ್ದಿ ಇದೀಗ ಸಂಚಲನವನ್ನೇ ಸೃಷ್ಟಿ ಮಾಡಿದೆ.












Click it and Unblock the Notifications