Challenging Star Darshan: ಅವಾಚ್ಯ ಶಬ್ದ ಬಳಕೆ: ನಟ ದರ್ಶನ್ ವಿರುದ್ಧ ದೂರು
ಬೆಂಗಳೂರು, ಫೆಬ್ರವರಿ 21: ಅವಾಚ್ಯ ಶಬ್ದ ಬಳಸಿ ಗುಮ್ಮುಸ್ಕೋತಿಯ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟ ದರ್ಶನ್ ವಿರುದ್ಧ ಕರ್ನಾಟಕ ಪ್ರಜಾಪರ ವೇದಿಕೆಯು ಇಂದು( ಫೆಬ್ರವರಿ 21) ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ.
ನಿನ್ನೆ(ಫೆಬ್ರವರಿ 20) ದರ್ಶನ್ ನಟನೆಯ ಕಾಟೇರ ಸಿನಿಮಾ 50 ದಿನ ಪೂರೈಸಿದ ಸಂಭ್ರಮದ ವೇದಿಕೆ ಮೇಲೆ ನಿಂತು ದರ್ಶನ್ ಗುಮ್ಮುಸ್ಕೊತಿಯ ಎಂದು ನಿರ್ದೇಶಕರೊಬ್ಬರಿಗೆ ಬೆದರಿಕೆ ಹಾಕಿದ್ದರು. ಇದಕ್ಕೆ ಕ್ಷಮೆಯಾಚಿಸಬೇಕು ಅಂತ ಕರ್ನಾಟಕ ಪ್ರಜಾಪರ ವೇದಿಕೆ ಆಗ್ರಹ ಮಾಡಿದೆ.

ಕರ್ನಾಟಕ ಪ್ರಜಾಪರ ವೇದಿಕೆ ದಾಖಲಿಸಿರುವ ದೂರಿನಲ್ಲೇನಿದೆ..?
ಅವಾಚ್ಯ ಶಬ್ದ ಬಳಸಿ ಗುಮ್ಮುಸ್ಕೋತಿಯ ಎಂದು ಬೆದರಿಕೆ ಹಾಕಿರುವ ನಟ ದರ್ಶನ್ ವಿರುದ್ಧ ದೂರು. ಈ ಮೂಲಕ ತಿಳಿಯ ಬಯಸುವುದೇನೆಂದರೆ ವೇದಿಕೆಯ ಮೇಲೆ ನಟ ದರ್ಶನ್ ಅವರು, ಗುಮ್ಮುಸ್ಕೋತಿಯ ಎಂದು ಬೆದರಿಕೆ ಹಾಕಿದ್ದು, ಇದು ಕಾನೂನು ಬಾಹೀರವಾಗಿದ್ದು, ಕೂಡಲೇ ನಟ ದರ್ಶನ್ ನಿರ್ಮಾಪಕರಿಗೆ ಕ್ಷಮೆಯಾಚಿಸಬೇಕು.
ಇಲ್ಲವಾದರೆ ಕರ್ನಾಟಕ ಪ್ರಜಾಪರ ವೇದಿಕೆ ಹಾಗೂ ನೂರಾರು ಸಂಘಟನೆಗಳಿರುವ ಕನ್ನಡಿಗರ ಒಕ್ಕೂಟ ವತಿಯಿಂದ ನಟ ದರ್ಶನ್ ಮನೆ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕರ್ನಾಟಕ ಪ್ರಜಾಪರ ವೇದಿಕೆ ದೂರು ದಾಖಲಿಸಿದ್ದಾರೆ.
ನಿರ್ಮಾಪಕರ ವಿರುದ್ಧ ನಟ ದರ್ಶನ್ ಹೇಳಿದ್ದೇನು?
ಕಾಟೇರ ಸಿನಿಮಾ 50 ದಿನ ಪೂರೈಸಿದ ಸಂಭ್ರಮದ ವೇದಿಕೆ ಮೇಲೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ಗರಂ ಆಗಿದ್ದ ನಟ ದರ್ಶನ್ ನೇರ ವಾಗ್ದಾಳಿ ನಡೆಸಿದ್ದರು. 'ಅಯ್ಯೋ ತಗಡೇ ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಹಾಗಾದರೆ ಇಂಥ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?' ಹೀಗೆ ಕಾಟೇರ ಕಥೆ ಬಿಟ್ಟು ಕೊಟ್ಟಿದ್ದು ಯಾಕೆ? ಅಂತಾನು ನಿರ್ಮಾಪಕ ಉಮಾಪತಿಗೆ ಪ್ರಶ್ನೆ ಮಾಡಿದ್ದಾರೆ ನಟ ದರ್ಶನ್.
ತಮ್ಮ ಮಾತು ಮುಂದುವರಿಸಿದ್ದ ದರ್ಶನ್ 'ಕೊಟ್ಟಿದ್ದು ಮಾಡಿದ್ದನ್ನ ಹೇಳಬಾರದು ಒಂದು ಸಾರಿ ಆಗಿರುವ ಘಟನೆಯಿಂದ ಬುದ್ದಿ ಕಲಿತಿಲ್ಲ. ಇಂತಹ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು.? ನಿನ್ನ ಜಡ್ಜ್‌ಮೆಂಟ್ ಚೆನ್ನಾಗಿದೆ, ಬಟ್ ಯಾಕೆ ಈ ಕಥೆ ಬಿಟ್ಟಿದ್ದು? ಕಾಟೇರ ಟೈಟಲ್ ಕೊಟ್ಟಿದ್ದೇ ನಾನು. ಬಂದು ಬಂದು ಯಾಕೆ ಗುಮ್ಮಿಸ್ಕೋತಿಯಾ ಎಂದು ಉಮಾಪತಿ ವಿರುದ್ಧ ಆಕ್ರೋಶದ ಮಾತುಗಳನಾಡಿದ್ದರು.











Click it and Unblock the Notifications