Kiranraj K: 'ನನಗೆ ಹೆಣ್ಣು ನೋಡಿದ್ದಾರೆ ಅಂದ ಕೂಡ್ಲೇ ರಕ್ಷಿತ್ ಶೆಟ್ಟಿ ನಂಬರ್ ಕೇಳಿದಳು'
ಕಿರಣ್ ರಾಜ್ ಕೆ ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ. ಚಾರ್ಲಿ ಚಿತ್ರದ ಮೂಲಕ ಜನಪ್ರಿಯತೆ ಪಡೆದು ಕೊಂಡ ಕಿರಣ್ ರಾಜ್ ಕೆ ಕನ್ನಡ ಚಿತ್ರರಂಗಕ್ಕೆ ಮತ್ತೊಂದಿಷ್ಟು ಹಿಟ್ ಸಿನಿಮಾಗಳನ್ನು ನೀಡಲು ಸಜ್ಜಾಗುತ್ತಿದ್ದಾರೆ. ನಿರ್ದೇಶಕ ಮಾತ್ರವಲ್ಲ ಹೀರೋ ಲುಕ್ ಕೂಡ ಕಿರಣ್ ರಾಜ್‌ಗೆ ಇದ್ದು, ಅದೆಷ್ಟೋ ಹುಡುಗಿಯರು ಇವರ ಲುಕ್‌ಗೆ ಮುಖ್ಯವಾಗಿ ನಡವಳಿಕೆಗೆ ಫಿದಾ ಆಗಿದ್ದಾರೆ. ಇದೇ ರೀತಿ ಕಿರಣ್‌ಗೆ ಫಿದಾ ಆದ ಹುಡುಗಿ ಬಳಿಕ ರಕ್ಷಿತ್ ಶೆಟ್ಟು ನಂಬರ್ ಕೇಳಿದ ಕಥೆ ಇಲ್ಲಿದೆ.
ಈ ಕಥೆಯನ್ನು ಸ್ವತಃ ಕಿರಣ್ ರಾಜ್ ತಮ್ಮ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 'ಇನ್ಸ್ಟಾಗ್ರಾಮ್‌ನಲ್ಲಿ ಹುಡುಗಿ ಒಬ್ಬಳು ಮೆಸೇಜ್ ಮಾಡುತ್ತಿದ್ದಳು. ಇದು ಚಾರ್ಲಿ ಸಿನಿಮಾಗೂ ಮುಂಚೆ. ಆದರೆ ಚಾರ್ಲಿ ಸಿನಿಮಾ ಆಗುತ್ತಿದೆ ಅಂತಾ ಎಲ್ಲರಿಗೂ ಗೊತ್ತಿತ್ತು.

ಇನ್ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿ ನಾನು ನನ್ನ ತಂದೆ-ತಾಯಿಗೆ ಒಬ್ಬಳೇ ಮಗಳು. ಈಗ ಅಪ್ಪ ತೀರಿ ಹೋಗಿದ್ದಾರೆ. ಅಮ್ಮ ಒಬ್ಬರೇ ಇರುವುದು. ಅಮ್ಮನೇ ನನ್ನನ್ನು ಕಷ್ಟಪಟ್ಟು ಸಾಕಿರುವುದು ಅಂತಾ ಆಕೆಯ ಕಥೆಯನ್ನು ಹೇಳಿಕೊಂಡಿದ್ದರು.
ನಾನು ಈಗ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ತುಂಬಾ ಹುಡುಗರು ಪ್ರಪೋಸ್ ಮಾಡಿದ್ದಾರೆ. ಆದರೆ ನನಗೆ ಯಾರ ಮೇಲೂ ಯಾವ ರೀತಿ ಪ್ರೀತಿ ಬಂದಿಲ್ಲ. ಪ್ರೀತಿ ಅಂತೆಲ್ಲಾ ಅನಿಸೇ ಇಲ್ಲ. ಅವರುಗಳ ಬಗ್ಗೆ ಏನೂ ಭಾವನೆ ಬೆಳೆಯಲೇ ಇಲ್ಲ. ಆದರೆ ನಿಮ್ಮನ್ನು ನಾನು ಫಾಲೋ ಮಾಡುತ್ತಿದ್ದೇನೆ. ಹೀಗಾಗಿ ನೀವೆ ನನಗೆ ಸರಿಯಾದ ಸಂಗಾತಿ ಅಂತಾ ಅನಿಸಿತು ಅಂದರು.

ನಿಮ್ಮನ್ನು ನನ್ನ ಲೈಫ್ಟ್ ಪಾರ್ಟ್ನರ್ ಆಗಿ ನಿರ್ಧಾರ ಮಾಡಿದ್ದೇನೆ ಅಂತೆಲ್ಲಾ ಸಾಲು ಸಾಲು ಮೆಸೇಜ್ ಹಾಕಿದ್ದರು. ಪ್ಲೀ ರೀಪ್ಲೇ, ದಯವಿಟ್ಟು ಅರ್ಥ ಮಾಡಿಕೊಳ್ಳಿ ಅಂತೆಲ್ಲಾ ಮೆಸೇಜ್ ಬರುತ್ತಾ ಇತ್ತು. ನಾನು ನೋಡುತ್ತಿದ್ದೆ. ಕೊನೆಗೆ ನಾನು ರೀಪ್ಲೇ ಮಾಡಿ, ಇಲ್ಲಾ ನನಗೆ ಮನೆಯಲ್ಲಿ ಅಮ್ಮಾ ಈಗಾಗಲೇ ಹೆಣ್ಣು ಹುಡುಕಿದ್ದಾರೆ ಅಂತಾ ಹೇಳಿದೆ.
ನಿಜ ಹೇಳಬೇಕು ಅಂದರೆ ನನಗೆ ಏನು ಹೇಳಬೇಕು ಅಂತಾ ಗೊತ್ತಾಗಲಿಲ್ಲ. ಆದರೆ ಕೊನೆಯಲ್ಲಿ ಆ ಹುಡುಗಿ ನನ್ನ ಮೆಸೇಜ್ ನೋಡಿ ಹೋ ಹೌದಾ, ಹಾಗಿದ್ದರೆ ರಕ್ಷಿತ್ ಶೆಟ್ಟಿ ಅವರ ನಂಬರ್ ಕೊಡಬಹುದಾ ಅಂತಾ ಕೇಳಿದ್ದಳು' ಎಂದು ಕಿರಣ್ ಇನ್ಸ್ಟಾಗ್ರಾಮ್‌ನಲ್ಲಿ ನಡೆದ ಮಾತುಕತೆ ಬಗ್ಗೆ ಹೇಳಿಕೊಂಡು ಜೋರಾಗಿ ನಕ್ಕಿದ್ದಾರೆ.












Click it and Unblock the Notifications