Kamal Haasan: ಕಮಲ್ ಹಾಸನ್ ಥಗ್‌ಲೈಫ್ ಕರ್ನಾಟಕದಲ್ಲಿ ಬಿಡುಗಡೆಗೆ ತೊಡಕಾದ ತಮಿಳಿಗರು! Thuglife
Kamal Haasan: ನಟ ಕಮಲ್ ಹಾಸನ್ ಅವರ ಥಗ್‌ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ತಮಿಳಿಗರಿಂದಲೇ ಕರ್ನಾಟಕದಲ್ಲಿ ಕಮಲ್ ಹಾಸನ್ ಅವರ ಸಿನಿಮಾ ಬಿಡುಗಡೆಗೆ ಸಂಕಷ್ಟ ಎದುರಾಗಿದೆ. ಹೌದು ಎಲ್ಲವೂ ಅಂದು ಕೊಂಡಂತೆಯೇ ಆಗಿದ್ದರೆ ಥಗ್‌ಲೈಫ್ ಸಿನಿಮಾವು ಏಕಕಾಲಕ್ಕೆ ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ಎಲ್ಲಾ ಕಡೆಗಳಲ್ಲೂ ಬಿಡುಗಡೆ ಆಗಬೇಕಾಗಿತ್ತು. ಆದರೆ, ಅನಿರೀಕ್ಷಿತ ಬೆಳವಣಿಗೆ ಹಾಗೂ ನಟ ಕಮಲ್ ಹಾಸನ್ ಅವರ ಹೇಳಿಕೆಯಿಂದಾಗಿ ಕರ್ನಾಟಕದಲ್ಲಿ ಕಮಲ್ ಸಿನಿಮಾ ಬಿಡುಗಡೆ ಆಗಿಲ್ಲ. ಕನ್ನಡದ ತಾಯಿ ತಮಿಳು, ತಮಿಳಿನಿಂದಲೇ ಕನ್ನಡ ಬಂದಿದೆ ಎಂದು ನಟ ಕಮಲ್ ಹಾಸನ್ ಹೇಳಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದರೂ, ತಮಿಳುನಾಡಿನವರೇ ಮಾಡಿರುವ ಎಡವಟ್ಟು ಕಮಲ್‌ಗೆ ಬಿಸಿ ತುಪ್ಪವಾಗಿದೆ.
ಕಮಲ್ ಹಾಸನ್ ಈಗ ನಟ ಮಾತ್ರವಲ್ಲ. ರಾಜಕಾರಣಿಯೂ ಹೌದು ಮಕ್ಕಳ್ ನಿಧಿ ಮಯಂ ಎನ್ನುವ ಪಕ್ಷವನ್ನು ನಟ ಕಮಲ್ ಹಾಸನ್ ಅವರು ಕಟ್ಟಿದ್ದಾರೆ. ಈ ಪಕ್ಷದ ಮೂಲಕ ಹಾಗೂ ಡಿಎಂಕೆ ಸಹಕಾರದೊಂದಿಗೆ ರಾಜ್ಯಸಭೆ ಪ್ರವೇಶಿಸುವ ಸಿದ್ಧತೆಯಲ್ಲಿ ಇದ್ದಾರೆ. ಆದರೆ, ಸಿನಿಮಾದ ಕಾರ್ಯಕ್ರಮವೊಂದರಲ್ಲಿ ತಮಿಳಿನಿಂದಲೇ ಕನ್ನಡ ಬಂದಿದೆ ಅಂತ ಅವರು ಹೇಳಿದ್ದ ಮಾತು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಸಿನಿಮಾ ತಂಡದವರು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಇದೀಗ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಮೊದಲು ಈ ಸಿನಿಮಾ ತಮಿಳುನಾಡಿನಲ್ಲಿ ಬಿಡುಗಡೆಯಾಗಿತ್ತು. ಅಲ್ಲಿ ಆಗಿರುವ ಎಡವಟ್ಟು ಇದೀಗ ಕರ್ನಾಟಕದಲ್ಲಿ ಕಮಲ್‌ಗೆ ಮುಳುವಾಗಿದೆ.

ಕಮಲ್ ಅವರ ಸಿನಿಮಾ ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಜೂನ್ 5ರಂದೇ ಬಿಡುಗಡೆ ಆಗಬೇಕಿತ್ತು. ಕರ್ನಾಟಕವನ್ನು ಹೊರತುಪಡಿಸಿ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಥಗ್‌ಲೈಫ್ ಸಿನಿಮಾ ಈಗಾಗಲೇ ಬಿಡುಗಡೆಯಾಗಿದೆ. ಅದೇ ಇದೀಗ ಕರ್ನಾಟಕದಲ್ಲಿ ಕಮಲ್‌ಗೆ ಮುಳುವಾಗಿದೆ. ಮೊದಲ ದಿನವೇ ಈ ಸಿನಿಮಾಗೆ ನೆಗೆಟಿವ್ ಫೀಡ್‌ಬ್ಯಾಕ್ ಬಂದಿತ್ತು. ಅಲ್ಲದೇ ತಮಿಳಿಗರೇ ಈ ಸಿನಿಮಾ ಚೆನ್ನಾಗಿಲ್ಲ. ಕನ್ನಡಿಗರು ಈ ಸಿನಿಮಾ ನೋಡುವುದರಿಂದ ತಪ್ಪಿಸಿಕೊಂಡು ಬಿಟ್ಟರು ಎಂದು ಕಮಲ್ ಬಗ್ಗೆ ವ್ಯಂಗ್ಯವಾಡಿದ್ದರು. ಈ ರೀತಿ ತಮಿಳಿಗರಿಂದಲೇ ಅಪಹಾಸ್ಯಕ್ಕೆ ಒಳಗಾಗಿರುವ ಸಿನಿಮಾ ಎಲ್ಲಾ ಕಡೆಗಳಲ್ಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಮಿಳುನಾಡಿನಲ್ಲಿ ಸಿನಿಮಾ ಸೋಲಾಗಿರುವುದು, ಅಲ್ಲಿನ ಜನರ ಜನಾಭಿಪ್ರಾಯ ಕೇಳಿದ ಮೇಲೆ ಹಾಗೂ ಕನ್ನಡಿಗರ ವಿರೋಧದ ನಡುವೆಯೂ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಿ ಕೈಸುಟ್ಟುಕೊಳ್ಳುವುದು ಬೇಡ ಅಂತ ಸಿನಿಮಾ ವಿತರಕರು ಹಾಗೂ ಹಲವು ಚಿತ್ರಮಂದಿರದ ಮಾಲೀಕರು ನಿರ್ಧರಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಬಹುತೇಕ ಚಿತ್ರವಿತರಕರು ಹಾಗೂ ಚಿತ್ರಮಂದಿರದ ಮಾಲೀಕರು ಈ ರೀತಿ ಯೋಚನೆ ಮಾಡುತ್ತಿದ್ದಾರೆ. ಇದು ತಮಿಳಿಗರಿಂದಲೇ ಕಮಲ್‌ಗೆ ಎದುರಾದ ಸಂಕಷ್ಟ ಎಂದು ಹೇಳಲಾಗುತ್ತಿದೆ.












Click it and Unblock the Notifications