ಇಳಯ ದಳಪತಿ ವಿಜಯ್ ಅಬ್ಬರಕ್ಕೆ ಫುಲ್ ಸೈಲೆಂಟ್ ಆಯ್ತು ತಮಿಳುನಾಡು ರಾಜಕೀಯ!
ತಮಿಳುನಾಡು ರಾಜಕೀಯದಲ್ಲಿ ಇಳಯ ದಳಪತಿ ವಿಜಯ್ ಇದೀಗ ಹೊಸ ಬಿರುಗಾಳಿ ಎಬ್ಬಿಸಿದ್ದಾರೆ. ಇಳಯ ದಳಪತಿ ವಿಜಯ್ ಅಬ್ಬರ ಕಂಡು ಸ್ವತಃ ತಮಿಳುನಾಡು ಸರ್ಕಾರ & ಡಿಎಂಕೆ ನಾಯಕರೇ ಈ ಸಮಯದಲ್ಲಿ ನಡುಗುವ ಪರಿಸ್ಥಿತಿ ಬಂದಿದೆ. ಅದರಲ್ಲೂ 2026 ರಲ್ಲಿ ವಿಧಾನಸಭೆ ಚುನಾವಣೆಯನ್ನ ಎದುರಿಸಲು ಸಜ್ಜಾಗಿರುವ ತಮಿಳುನಾಡು ರಾಜ್ಯದಲ್ಲಿ ಏನಾಗಿದೆ ಗೊತ್ತೆ? ಇಳಯ ದಳಪತಿ ವಿಜಯ್ ಆಯೋಜನೆ ಮಾಡಿರುವ ಒಂದೇ ಒಂದು ರಾಜಕೀಯ ಕಾರ್ಯಕ್ರಮ ತಲ್ಲಣ ಸೃಷ್ಟಿ ಮಾಡಿರುವುದು ಏಕೆ? ಬನ್ನಿ ತಿಳಿಯೋಣ.
ತಮಿಳು ನಟ ವಿಜಯ್ ಈಗ ಸಿನಿಮಾ ಬಿಟ್ಟು ರಾಜಕೀಯ ನಾಯಕನಾಗಿ ಹೊರ ಹೊಮ್ಮುತ್ತಿದ್ದಾರೆ. ಹೊಸ ರಾಜಕೀಯ ಪಕ್ಷ ಸ್ಥಾಪಿಸಿವುದಾಗಿ ತಮಿಳು ನಟ ವಿಜಯ್ ಅವರು ಘೋಷಿಸಿ ಇಡೀ ದೇಶದ ಗಮನ ಸೆಳೆದಿದ್ದರು. ತಮ್ಮ ಪಕ್ಷಕ್ಕೆ ವಿಜಯ್ 'ತಮಿಳಗ ವೆಟ್ರಿ ಕಳಗಂ' ಎಂದು ನಾಮಕರಣ ಕೂಡ ಮಾಡಿದ್ದು, ತಮಿಳುನಾಡಿನ ವಿಧಾನಸಭೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದರು. ಇನ್ನೂ 2 ವರ್ಷದಲ್ಲೇ ನೆರೆ ರಾಜ್ಯ ತಮಿಳುನಾಡು ವಿಧಾಸನಭೆಗೆ ಚುನಾವಣೆ ನಡೆಯಲಿದೆ. 2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ವಿಜಯ್ ಅವರ ಪಕ್ಷ ಅಖಾಡ ಪ್ರವೇಶ ಮಾಡಲಿದೆ. ಈ ಸಮಯದಲ್ಲೇ, ಬೃಹತ್ ಮಟ್ಟದ ರಾಜಕೀಯ ಕಾರ್ಯಕ್ರಮ ಆಯೋಜನೆ ಮಾಡಿರುವ ತಮಿಳು ನಟ ವಿಜಯ್ ತಲ್ಲಣ ಎಬ್ಬಿಸಿದ್ದಾರೆ.

ಎಐಎಡಿಎಂಕೆ ಜಾಗಕ್ಕೆ ವಿಜಯ್ ಪಕ್ಷ ಎಂಟ್ರಿ?
ತಮಿಳುನಾಡು ರಾಜಕೀಯ ಅಂದ್ರೆನೆ ಸಿಕ್ಕಾಪಟ್ಟೆ ಡಿಫರೆಂಟ್. ಯಾಕೆ ಅಂದ್ರೆ ಅಲ್ಲಿನ ಜನ ಯಾವುದೇ ಒಂದು ಪಕ್ಷ ನಂಬಿ ಮತ ಹಾಕುವವರು ಅಲ್ಲ. ಹಾಗೇ ಒಂದು ಪಕ್ಷಕ್ಕೆ ಸತತವಾಗಿ ಅಧಿಕಾರ ನೀಡಿ, ಒಂದು ಪಕ್ಷವನ್ನೇ ತಲೆ ಮೇಲೆ ಹೊತ್ತು ಮೆರಿಸಿದ ಜನರೂ ಅಲ್ಲ. ಈ ವಿಚಾರದಲ್ಲಿ ತಮಿಳುನಾಡಿನ ಮತದಾರ ಪ್ರಭು ತುಂಬಾ ಬುದ್ಧಿವಂತ.
ತಮಿಳುನಾಡು ವಿಧಾನಸಭೆಗೆ ಒಂದು ಬಾರಿ ಡಿಎಂಕೆ ಆಡಳಿತ ಇದ್ದರೆ ಮತ್ತೊಂದು ಬಾರಿ ಎಐಎಡಿಎಂಕೆ ಆಡಳಿತ ಇರುತ್ತಿತ್ತು. ಆದರೆ ಈಗ ಎಐಎಡಿಎಂಕೆ ಪಕ್ಷವೇ ನಾಶವಾಗಿ ಹೋಗಿದೆ. ಜಯಲಲಿತಾ ಅವರ ಸಾವಿನ ನಂತರ ಎಐಎಡಿಎಂಕೆ ಪಕ್ಷ ಬಡವಾಗಿದೆ. ಹೀಗಾಗಿ, ಎಐಎಡಿಎಂಕೆ ಜಾಗ ತುಂಬಲು ತಮಿಳು ನಟ ವಿಜಯ್ ಈಗ ಎಂಟ್ರಿ ಕೊಟ್ಟಿದ್ದಾರೆ ಎಂಬ ಮಾತು ಬಲವಾಗಿ ಓಡಾಡುತ್ತಿದೆ.
ತಮಿಳುನಾಡು ವಿಧಾನಸಭೆಗೆ ಭರ್ಜರಿ ಸಿದ್ಧತೆ?
ಹೌದು, 2026ರ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ತಮಿಳುನಾಡು ರಾಜಧಾನಿ ಚೆನ್ನೈನಿಂದ 154 ಕಿಮೀ ದೂರದ ಪ್ರಮುಖ ಜಾಗದಲ್ಲಿ ರಾಜಕೀಯ ಸಮಾವೇಶವನ್ನು ವಿಜಯ್ ಹಮ್ಮಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ರಾಜಧಾನಿ ಚೆನ್ನೈನಿಂದ 154 ಕಿಮೀ ದೂರದ ವಿಲ್ಲುಪುರಂ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿತ್ತು. ಅಲ್ಲದೆ ಹತ್ತಾರು ಲಕ್ಷ ಜನರು ತಮ್ಮ ನೆಚ್ಚಿನ ನಟ ವಿಜಯ್ ಅವರ ರಾಜಕೀಯ ಸಮಾವೇಶಕ್ಕಾಗಿ ಬಂದಿದ್ದರು. ಈ ಸಮಾವೇಶದಲ್ಲಿ ಹಿಂದುಳಿದ ವರ್ಗಗಳ ಪರ ಮಹತ್ವದ ಘೋಷಣೆ ಹೊರಡಿಸುವ & ಬಡವರಿಗೆ ಭರ್ಜರಿ ಬೆಂಬಲ ಘೋಷಿಸುವ ನಿರೀಕ್ಷೆಯಲ್ಲಿ ಜನ ಸೇರಿದ್ದರು.
ಪೆರಿಯಾರ್ & ಅಂಬೇಡ್ಕರ್ ಅವರ ಕಟೌಟ್
ಮತ್ತೊಂದು ವಿಶೇಷತೆ ಏನು ಅಂದ್ರೆ, ತಮಿಳು ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷದ ಮೊದಲ ರಾಜಕೀಯ ಸಮಾವೇಶದಲ್ಲಿ ಸಾಮಾಜಿಕ ಹೋರಾಟಗಾರರ ಕಟೌಟ್‌ಗಳು ಮಿಂಚಿವೆ. ಇದು ಕೂಡ ಭಾರತದ ಮೂಲೆ ಮೂಲೆಯಲ್ಲಿ ಸದ್ದು ಮಾಡುತ್ತಿದೆ. ಅಂದಹಾಗೆ ದ್ರಾವಿಡ ಕುಲದ ಪರವಾಗಿ ಹೋರಾಟ ನಡೆಸಿದ್ದ ಧೀಮಂತ 'ಪೆರಿಯಾರ್' ಅವರು ಸೇರಿದಂತೆ, ಡಾ. ಬಿ.ಆರ್. ಅಂಬೇಡ್ಕರ್ ಅವರ ದೊಡ್ಡ ದೊಡ್ಡ ಕಟೌಟ್ ನಿಲ್ಲಿಸಲಾಗಿತ್ತು. ಹಾಗೇ ತಮಿಳು ರಾಜ ಮನೆತನದ ರಾಜರ ಕಟೌಟ್‌ಗಳನ್ನು ನಿಲ್ಲಿಸುವ ಮೂಲಕ ನಟ ವಿಜಯ್ ಅವರ ಸಮಾವೇಶ ಗಮನ ಸೆಳೆಯಿತು. ರಾಷ್ಟ್ರೀಯ ಹೆದ್ದಾರಿ 45ಕ್ಕೆ ಹೊಂದಿಕೊಂಡ ರೀತಿಯೇ ಸಮಾವೇಶ ನಡೆಯುತ್ತಿದ್ದು, ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.












Click it and Unblock the Notifications