Actor vishal: ಪತಿ ಮನೇಲಿ ಇಲ್ಲದಾಗ ವಿಶಾಲ್ ಬಾಟಲಿ ಹಿಡಿದು ಬಾಗಿಲು ತಟ್ಟಿದ್ದ, ನಟನ ಸ್ಥಿತಿಗೆ ಇದೇನಾ ಕಾರಣ?
ತಮಿಳು ನಟ ವಿಶಾಲ್ ಅವರು ಸದ್ಯ ಅನಾರೋಗ್ಯ ಸಮಸ್ಯೆ ವೈರಲ್ ಫೀವರ್‌ನಿಂದ ಬಳಲುತ್ತಿದ್ದು, ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅಭಿಮಾನಿಗಳೆಲ್ಲರೂ ವಿಶಾಲ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಮತ್ತೊಂದೆಡೆ ನಟ ವಿಶಾಲ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ವಿಶಾಲ್ ಹೀಗೆಲ್ಲ ಮಾಡಿದ್ರಾ ಎಂದು ಎಲ್ಲರೂ ಶಾಕ್ ಕೂಡ ಆಗಿದ್ದಾರೆ.
ನಟ ವಿಶಾಲ್ ಅವರು ಇತ್ತೀಚೆಗೆ ಅವರು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ವಿಶಾಲ್ ಅವರ ಕೈ ನಡುಗುತ್ತಿತ್ತು. ಅವರ ಕೈಯಲ್ಲಿ ಮೈಕ್ ಹಿಡಿದು ಮಾತನಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಮಾತನಾಡಲು ಕೂಡ ಅವರು ತೊದಲುತ್ತಿದ್ದರು. ಅಲ್ಲದೆ ವಿಶಾಲ್ ಅವರು ಗುರುತೇ ಸಿಗದ ಸ್ಥಿತಿಯಲ್ಲಿ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿ ಸಂಚಲನವನ್ನೇ ಸೃಷ್ಟಿಸಿತ್ತು.

ಆ ಕಾರ್ಯಕ್ರಮದಿಂದ ಹೊರಟು ವಿಶಾಲ್ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿಯಾಗಿದೆ. ಈ ಸಂಬಂಧ ಹೆಲ್ತ್ ಬುಲೆಟಿನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಶಾಲ್ ಅವರಿಗೆ ವೈರಲ್ ಫೀವರ್ ಇದೆ ಎಂದು ದೃಢಪಡಿಸಿದ್ದಾರೆ. ಅಲ್ಲದೆ ವಿಶಾಲ್ ಅವರು ಹಲವು ದಿನಗಳವರೆಗೆ ಬೆಡ್ ರೆಸ್ಟ್‌ನಲ್ಲೇ ಇರಬೇಕು ಎಂದೂ ವೈದ್ಯರು ಸೂಚಿಸಿದ್ದಾರೆ.
ಈ ಹಿನ್ನೆಲೆ ನಟ ವಿಶಾಲ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಮತ್ತೊಂದೆಡೆ ನಟ ವಿಶಾಲ್‌ಗೆ ಸರಿಯಾಗಿಯೇ ಆಗಿದೆ ಎಂದು ಗಾಯಕಿಯೊಬ್ಬರು ಸಂಭ್ರಮಿಸಿದ್ದಾರೆ. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಗಮನ ಸೆಳೆಯುವ ಕಾಲಿವುಡ್‌ನ ಖ್ಯಾತ ಗಾಯಕಿ ಸುಚಿತ್ರಾ ಅವರು ವಿಶಾಲ್ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸುಚಿತ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಪ್ರಚೋದನಕಾರಿ ಶೀರ್ಷಿಕೆ ಕೂಡ ನೀಡಿದ್ದು, ಕರ್ಮ ಯಾರನ್ನೂ ಬಿಡಲ್ಲ, ನೀವು ಕೆಳಗೆ ಹೋಗುತ್ತಿದ್ದೀರಿ ಎಂದು ಸುಚಿತ್ರಾ ಬರೆದುಕೊಂಡಿದ್ದಾರೆ. ಅಲ್ಲದೆ ನಟ ವಿಶಾಲ್ ಅವರ ಕುರಿತಂತೆ ಘಟನೆಯೊಂದನ್ನು ವಿವರಿಸಿದ್ದಾರೆ. ಹಲವಾರು ವರ್ಷಗಳ ನನ್ನ ಪತಿ ಕಾರ್ತಿಕ್ ಮನೆಯಲ್ಲಿ ಇಲ್ಲದಾಗ ವಿಶಾಲ್ ಬಂದು ಮನೆ ಬಾಗಿಲು ತಟ್ಟಿದ್ದರು. ವಿಶಾಲ್ ಕುಡಿದ ಅಮಲಿನಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡು ನಮ್ಮನೆ ಬಾಗಿಲು ಬಡಿದಿದ್ದ ಎಂದು ಆರೋಪಿಸಿದ್ದಾರೆ.

ಅಲ್ಲದೆ ವಿಶಾಲ್ ಅಭಿಮಾನಿಗಳಿಗೆ ಫುಲ್ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ. ಅಭಿಮಾನಿಗಳೆಲ್ಲರೂ ವಿಶಾಲ್ ಬಗ್ಗೆ ತುಂಬಾ ಅನುಕಂಪ ಹೊಂದಿದ್ದೀರಿ. ಆದರೆ ವಿಶಾಲ್ ಏನು ಮಾಡಿದ್ದ ಎಂದು ನಾನು ಹೇಳುತ್ತೇನೆ. ವಿಶಾಲ್ ಮದ್ಯದ ಅಮಲಿನಲ್ಲಿ ಮನೆ ಬಾಗಿಲು ತಟ್ಟಿದ್ದ. ಆತ ತುಂಬಾ ಮದ್ಯದ ನಶೆಯಲ್ಲಿದ್ದ. ಬಂದು ಕಾರ್ತಿಕ್ ಇದ್ದಾರೆಯೇ ಎಂದು ಕೇಳಿದ್ದರು. ನಾನು ಎಂದಿದ್ದೆ ಎಂದು ಸುಚಿತ್ರಾ ಹೇಳಿದ್ದಾರೆ.
ಬಳಿಕ ಮನೆಯ ಒಳಗೆ ಬರಲು ಪ್ರಯತ್ನಿಸಿದರು. ನಾನು ಅದಕ್ಕೆ ಒಪ್ಪಲಿಲ್ಲ. ನಂತರ ವಿಶಾಲ್ ಅವರು ಮದ್ಯದ ಬಾಟಲಿಯನ್ನ ನನ್ನ ಕೈಗೆ ಕೊಟ್ಟು ಇದಕ್ಕಾಗಿಯೇ ಬಂದಿದ್ದೇನೆ ಎಂದರು. ಕಾರ್ತಿಕ್ ಮನೆಯಲ್ಲಿಲ್ಲ ಎಂದು ನಾನು ಅವನಿಗೆ ಹೇಳಿದೆ. ಬಳಿಕ ನಾನು ಬಾಗಿಲು ಮುಚ್ಚಿ ಅಲ್ಲಿ ಅವರೊಂದಿಗೆ ಮಾತು ಕೊನೆಗೊಳಿಸಿದೆ. ಈಗ ವಿಶಾಲ್‌ನ ಈ ರೀತಿ ನೋಡಲು ನನಗೆ ತುಂಬಾ ಸಂತೋಷವಾಗಿದೆ ಎಂದು ಸುಚಿತ್ರಾ ಹೇಳುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ.












Click it and Unblock the Notifications