ಲೋಕಸಭೆ ಚುನಾವಣೆಯಿಂದ ಯಶ್ ದೂರ.. ದೂರ.. ‘ಡಿ-ಬಾಸ್’ ದರ್ಶನ್ ಕೂಡ ದೂರ ಹೋಗ್ತಾರಾ? ಸುಮಲತಾ ಅಂಬರೀಶ್ ಗೆಲುವಿಗೆ ದೊಡ್ಡ ಅಡ್ಡಿ?
2024ರ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಅದ್ರಲ್ಲೂ ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಮತ್ತೊಂದು ಮಹಾಯುದ್ಧದ ರೂಪ ಪಡೆಯುತ್ತಿದೆ. ಈ ಮಧ್ಯೆ ಸುಮಲತಾ ಅಂಬರೀಶ್ ಬಿಜೆಪಿ ಟಿಕೆಟ್ ಬಿಟ್ಟು, ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡ ಪ್ರವೇಶ ಮಾಡಲು ಸಜ್ಜಾಗಿದ್ದಾರೆ ಎಂಬ ಮಾತುಗಳು ಓಡಾಡುತ್ತಿವೆ. ಈ ಸಮಯದಲ್ಲೇ ನಟ ಯಶ್ ಅವರು ಸುಮಲತಾ ಪರ ಪ್ರಚಾರ ಮಾಡಲ್ಲ ಅನ್ನೋದು ಗ್ಯಾರಂಟಿ ಆಗಿದೆ! ಹಾಗಾದ್ರೆ ನಟ ದರ್ಶನ್ ನಿರ್ಧಾರ ಏನು?
2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ & ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದವು. 2019ರಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಜೆಡಿಎಸ್ & ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ಆಗಿದ್ದರು. ಬಿಜೆಪಿ ಅಭ್ಯರ್ಥಿ ಹಾಕದೇ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರಿಗೆ ಬೆಂಬಲ ನೀಡಿತ್ತು. ಆಗ ನಟ ಯಶ್ & ನಟ ದರ್ಶನ್ ಅವರು ಪ್ರಚಾರ ಮಾಡಿ ಸುಮಲತಾ ಅಂಬರೀಶ್‌ರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ 2024 ಲೋಕಸಭೆ ಚುನಾವಣೆ ವೇಳೆ ನಟ ಯಶ್ ಸುಮಲತಾ ಅವ್ರ ಪರ ಪ್ರಚಾರ ಮಾಡಲ್ಲ ಅನ್ನೋದು ಪಕ್ಕಾ ಆಗಿದೆ. ಇದು ಒಂದು ಕಡೆಯಾದ್ರೆ ನಟ ದರ್ಶನ್ ನಿರ್ಧಾರ ಏನು?

'ಡಿ-ಬಾಸ್' ಪ್ರಚಾರ ಮಾಡೋದು...
ಸುಮಲತಾ & ದರ್ಶನ್ ಅವರ ಮಧ್ಯೆ ಅಮ್ಮ & ಮಗನ ಬಾಂಧವ್ಯ ಇದೆ. ಈ ಕಾರಣಕ್ಕೆ, ದರ್ಶನ್ ಅವರು ಅಭಿಷೇಕ್ ಅಂಬರೀಶ್ ಅವರನ್ನು ತಮ್ಮ ಎಂದು ಕರೆಯುತ್ತಾರೆ. ಹೀಗಾಗಿ, ಅಭಿಷೇಕ್ ಅಂಬರೀಶ್ ಕೂಡ ದರ್ಶನ್ ಅವರನ್ನ 'ಅಣ್ಣಾ' ಎಂದೇ ಕರೆಯುತ್ತಾರೆ. ಇಷ್ಟೆಲ್ಲ ಹೊಂದಾಣಿಕೆ ಇರುವ ದರ್ಶನ್ & ಅಂಬರೀಶ್ ಅವರ ಕುಟುಂಬ ಒಂದೇ ಫ್ಯಾಮಿಲಿ ರೀತಿಯೇ ಇದೆ. ಹೀಗಿದ್ದಾಗ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲಿ ಮತ್ತೆ ಲೋಕಸಭೆಗೆ ಸ್ಪರ್ಧೆ ಮಾಡುವುದು ಪಕ್ಕಾ ಆಗಿದೆ. ಹೀಗಿದ್ದಾಗ ನಟ ಯಶ್ ಅವರು ಪ್ರಚಾರಕ್ಕೆ ಬರದೇ ಇದ್ದರೂ ದರ್ಶನ್ ಅವರಿಂದ ಸುಮಲತಾ ಅವರಿಗೆ ಬೆಂಬಲ ಸಿಗುವುದು ಗ್ಯಾರಂಟಿ ಆಗಿದೆ. ಹಾಗಾದ್ರೆ ಯಶ್ ಅವರ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದೇನು?
ಈ ವಿಷಯ ಮೊದಲೇ ಗೊತ್ತಂತೆ!
ಅಂದಹಾಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಈ ಬಗ್ಗೆ ಸಂಸದೆ ಸುಮಲತಾರಿಂದ ಸ್ಪಷ್ಟನೆ ಸಿಕ್ಕಿದೆ. 'ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಯಶ್ ಹೇಳಿದ್ದಾರೆ. ಇದು ನಿಜಾನಾ?' ಅಂತಾ ಪತ್ರಕರ್ತರು ಪ್ರಶ್ನೆ ಮಾಡಿದ್ದರು. ಆಗ ಈ ಪ್ರಶ್ನೆಗೆ ಉತ್ತರ ನೀಡಿರುವ ಮಂಡ್ಯ ಸಂಸದೆ ಸುಮಲತಾ ಅವರು 'ಯಶ್ ನನ್ನ ಬಳಿ ಈ ಮೊದಲೇ ಈ ಬಗ್ಗೆ ಚರ್ಚೆಯನ್ನ ಮಾಡಿದ್ದರು. ಅಲ್ಲದೆ ಅವರು ಈಗ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿರುತ್ತಾರೆ. ಹೀಗಾಗಿ ಅವರನ್ನ ಕರೆಯಲು ನನಗೆ ಇಷ್ಟವಾಗುತ್ತಿಲ್ಲ. ಅವರ ಕೆಲಸ ಬಿಟ್ಟು ಹೇಗೆ ಬರ್ತಾರೆ ಹೇಳಿ?' ಅಂತಾ ಸಂಸದೆ ಸುಮಲತಾ ಅವರು ಉತ್ತರಿಸಿದ್ದಾರೆ.

ಜೆಡಿಎಸ್ VS ಸುಮಲತಾ VS ಕಾಂಗ್ರೆಸ್?
ಈಗಿರುವ ಮಾಹಿತಿ ಪ್ರಕಾರ ಬಿಜೆಪಿ ಪಕ್ಷದ ಮೈತ್ರಿ ಮಾತುಕತೆ ಕಾರಣಕ್ಕೆ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಟಿಕೆಟ್ ಸಿಗುವುದು ಬಹುತೇಕ ಪಕ್ಕಾ ಆಗಿದೆ. ಹೀಗಿದ್ದಾಗ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ, ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಡುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಕಾಂಗ್ರೆಸ್ ಕೂಡ ಅಭ್ಯರ್ಥಿಯನ್ನ ಹಾಕಲಿದ್ದು, ಹೀಗಾಗಿ ಚುನಾವಣಾ ಅಖಾಡ ರಂಗೇರಿದೆ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಯಾರು ಕಮಾಲ್ ಮಾಡಿ ಗೆಲುವು ಸಾಧಿಸುತ್ತಾರೆ? ಅಂತಾ ಕಾದು ನೋಡಬೇಕಿದೆ. ಇಂಡಿಯಾ ಚುನಾವಣೆಯಲ್ಲಿ ಹೀಗೆ ಮಂಡ್ಯ ಕ್ಷೇತ್ರ ಮತ್ತೊಮ್ಮೆ ಸೌಂಡ್ ಮಾಡೋದು ಪಕ್ಕಾ ಆಗುತ್ತಿದೆ.












Click it and Unblock the Notifications