Bigg Boss: ಕನ್ನಡ ಬಿಗ್‌ಬಾಸ್‌ಗೆ ಸಿಗಬೇಕಾದ ಗೌರವ ಸಿಗುತ್ತಿಲ್ವಾ? ಸುದೀಪ್‌ಗೆ ಬೇಸರ ಯಾಕೆ?

ಬಿಗ್ ಬಾಸ್ ಇಂಗ್ಲಿಷ್‌ನಲ್ಲಿ ಆರಂಭವಾದ ರಿಯಾಲಿಟಿ ಶೋ ಇಂದು ಭಾರತದ ಹಲವು ಭಾಷೆಗಳಲ್ಲಿ ಕೂಡ ಯಶಸ್ವಿಯಾಗಿ ನಡೆಯುತ್ತಿದೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ಕಮಲ್ ಹಾಸನ್, ತೆಲುಗಿನಲ್ಲಿ ನಾಗಾರ್ಜುನ ಕಾರ್ಯಕ್ರಮದ ನಿರೂಪಕರಾಗಿದ್ದರೆ ಕನ್ನಡದಲ್ಲಿ ಕಿಚ್ಚ ಸುದೀಪ್‌ ನಿರೂಪಕರಾಗಿದ್ದಾರೆ.

ನಿರೂಪಣೆ ವಿಚಾರಕ್ಕೆ ಬಂದಾಗ ಸುದೀಪ್ ಎಲ್ಲಾ ವಾಹಿನಿಗಳಿಂತ ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ ಎನ್ನುವುದು ಅಭಿಮಾನಿಗಳ ಮಾತು. ಬೇರೆ ಭಾಷಿಕರು ಕೂಡ ಸುದೀಪ್‌ರ ನಿರೂಪಣೆಯನ್ನು ಕೊಂಡಾಡಿದ್ದಾರೆ. 11 ಆವೃತ್ತಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಸುದೀಪ್‌, ಇದೇ ನನ್ನ ಕೊನೆಯ ಆವೃತ್ತಿ, ಇನ್ನು ಮುಂದೆ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

sudeep expresses disappointment over bigg boss show quality

ಡಿಸೆಂಬರ್ 25ರಂದು ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಲಿದ್ದು ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ಖಾಸಗಿ ವಾಹಿನಿಗಳಿಗೆ ಸಂದರ್ಶನ ಕೊಡುತ್ತಿರುವ ಅವರು ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಕೂಡ ಮಾತನಾಡಿದ್ದು, ತಾವು ಹೊರಬರಲು ಕಾರಣವೇನು ಎನ್ನುವ ವಿಚಾರವನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಸಿಗಬೇಕಾದ ಗೌರವ ಸಿಗುತ್ತಿಲ್ಲ

ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಸುದೀಪ್ ಇದು ನನ್ನ ವೈಯಕ್ತಿಕ ವಿಚಾರವಲ್ಲ ಭಾಷೆ, ಇಲ್ಲಿನ ಪ್ರೇಕ್ಷಕರ ವಿಚಾರ ಬಂದಾಗ ಕನ್ನಡ ಬಿಗ್‌ಬಾಸ್‌ಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ತೆಲುಗು, ಹಿಂದಿ, ತಮಿಳು ಬಿಗ್ ಬಾಸ್ ಕಾರ್ಯಕ್ರಮಗಳ ಗುಣಮಟ್ಟದ ಜೊತೆ ಹೋಲಿಕೆ ಮಾಡಿದರೆ ಕನ್ನಡ ಬಿಗ್‌ ಬಾಸ್‌ನಲ್ಲಿ ಕೆಲವೊಂದು ಕೊರತೆಗಳಿದೆ, ಇಲ್ಲಿನ ಜನ ಕೊಡತ್ತಿರುವ ಪ್ರೀತಿ, ಟಿಆರ್ ಪಿಗೆ ಹೋಲಿಕೆ ಮಾಡಿದರೆ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.

ಇದು ವಾಹಿನಿಯ ತಪ್ಪಲ್ಲ ಅದಕ್ಕೂ ಮೇಲಿರುವವರು ಕಾರ್ಯಕ್ರಮದ ಆಯೋಜಕರು ಈ ಬಗ್ಗೆ ಗಮನಹರಿಸಬೇಕು. ಬಿಗ್ ಬಾಸ್ ತಂಡದಲ್ಲಿರುವವರು ಬೇರೆ ರೀತಿಯಲ್ಲಿ ಆಲೋಚನೆ ಮಾಡಬೇಕು. ಕನ್ನಡ ಬಿಗ್‌ ಬಾಸ್ ಇನ್ನಷ್ಟು ಚನ್ನಾಗಿ ಮೂಡಿಬರಬೇಕು ಎಂದು ಸಲಹೆ ಕೊಟ್ಟಿದ್ದಾರೆ.

ಸುದೀಪ್‌ ಬಿಗ್‌ ಬಾಸ್ ಕಾರ್ಯಕ್ರಮವನ್ನು ತುಂಬಾ ಪ್ರೀತಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ತಾಯಿಗೆ ಅನಾರೋಗ್ಯ ಎಂದಾಗಲೂ ಅವರು ಕಾರ್ಯಕ್ರಮದ ಶೂಟಿಂಗ್‌ ಮುಗಿಸೇ ಆಸ್ಪತ್ರೆಗೆ ಹೋಗಿದ್ದರು. ಇದು ಅವರು ನಿರೂಪಣೆ ಬಗೆಗಿನ ಬದ್ದತೆಗೆ ಸಾಕ್ಷಿ, ಅದರೆ ಸುದೀಪ್‌ಗೆ ಬಿಗ್‌ ಬಾಸ್‌ನಲ್ಲಿ ಸಿಗಬೇಕಾದ ಗೌರವ ಸಿಗುತ್ತಿಲ್ಲಾ ಎನ್ನುವ ಅಸಮಾಧಾನ ಅಭಿಮಾನಿಗಳಿಗೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+