Su From So: ಸು ಫ್ರಮ್ ಸೋ ಒಟಿಟಿ ರಿಲೀಸ್ ಡೇಟ್ ರಿವೀಲ್: ಎಷ್ಟು ಕೋಟಿ ಗಳಿಕೆ ?
Su From So: ಕನ್ನಡದಲ್ಲಿ ಇತ್ತೀಚೆಗೆ ಬಿಡುಗಡೆ ಆದ ಸು ಫ್ರಮ್ ಸೋ ಹಲವು ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿದೆ. ಮುಖ್ಯವಾಗಿ ಕನ್ನಡ ಸಿನಿಮಾರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಹೊಸ ಮಾದರಿಯ ಸಿನಿಮಾ ಎನ್ನುವ ಖ್ಯಾತಿಯನ್ನು ಸು ಫ್ರಮ್ ಸೋ ಗಳಿಸಿದೆ. ಮುಂದುವರಿದು ಸು ಫ್ರಮ್ ಸೋ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರವಲ್ಲ ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲೂ ಸೂಪರ್ ಹಿಟ್ ಆಗಿದೆ. ಇದರೊಂದಿಗೆ ಹಿಂದಿ ಭಾಷೆಗೂ ರಿಮೇಕ್ ಆಗುವ ಸಾಧ್ಯತೆ ಇದೆ. ಇದರ ನಡುವೆ ಸು ಫ್ರಮ್ ಸೋ ಯಾವಾಗ ಒಟಿಟಿಗೆ ಬರಲಿದೆ ಎನ್ನುವ ವಿಚಾರವಾಗಿಯೂ ಬಿಗ್ ಅಪ್ಡೇಟ್ಸ್ ಸಿಕ್ಕಿದೆ.
ಸು ಫ್ರಮ್ ಸೋ ಹಲವು ಕಾರಣಗಳಿಗೆ ವಿಶೇಷವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಾಕ್ಸ್ ಆಫೀಸ್‌ನಲ್ಲೂ ಸು ಫ್ರಮ್ ಸೋ ಹೊಸ ದಾಖಲೆ ಸೃಷ್ಟಿ ಮಾಡಿದೆ. ಈ ಸಿನಿಮಾ ಬಿಡುಗಡೆಯಾಗಿ 32 ದಿನಗಳಾಗಿವೆ. ಇನ್ನೂ ಸಹ ವಾರಾಂತ್ಯದಲ್ಲಿ ವಿವಿಧ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಅಬ್ಬರ ಕಡಿಮೆ ಆಗಿಲ್ಲ. ಸಿನಿಮಾ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಿದ್ದು ಇದೀಗ ಒಟಿಟಿ ದಿನಾಂಕವನ್ನು ರಿವೀಲ್ ಮಾಡಲಾಗಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾದ ಅಬ್ಬರ ಮುಂದುವರಿದಿದೆ.

ಬೇರೆ ಬೇರೆ ಭಾಷೆಯವರು ಸಹ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಆಗಿತ್ತು. ಮಲಯಾಳಂ ಪ್ರೇಕ್ಷಕರು ಈ ಸಿನಿಮಾ ತಮ್ಮದೇ ಎನ್ನುವಂತೆ ಮೆಚ್ಚಿಕೊಂಡಿದ್ದಾರೆ. ಇದೀಗ ಈ ಸಿನಿಮಾ ಯಾವಾಗ ಒಟಿಟಿಗೆ ಬರಲಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ಸ್ ಬಂದಿದೆ. ಇನ್ನು ಒಟಿಟಿಗೆ ಬರುವ ದಿನಾಂಕ ಸಮೀಪಿಸುತ್ತಿದ್ದರೂ ಚಿತ್ರಮಂದಿರಕ್ಕೆ ಬಂದು ನೋಡುವವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಪರಿ ಹಣ ಮಾಡಿದ ಹಾಗೂ ಜನರಿಂದ ಮೆಚ್ಚುಗೆಯನ್ನೂ ಪಡೆದ ಸಿನಿಮಾಗಳಲ್ಲಿ ಸು ಫ್ರಮ್ ಸೋ ಸೇರಿದೆ.
ಕನ್ನಡ ಸಿನಿಮಾಗಳ ಇತ್ತೀಚಿನ ವರ್ಷಗಳ ದಾಖಲೆಯನ್ನು ಮುರಿದು ಸು ಫ್ರಮ್ ಸೋ ಮುಂದುವರಿದಿದೆ. ಈ ಚಿತ್ರದ ಇಲ್ಲಿಯವರೆಗಿನ ಒಟ್ಟಾರೆ ಕಲೆಕ್ಷನ್ ಬರೋಬ್ಬರಿ 115.26 ಕೋಟಿ ರೂಪಾಯಿ ಆಗಿದೆ. ಅಲ್ಲದೇ ಇದರಲ್ಲಿ ವಿದೇಶದಿಂದ ಸಿನಿಮಾಗೆ ಹರಿದು ಬಂದಿರುವ 14 ಕೋಟಿ ರೂಪಾಯಿ ಸಹ ಸೇರಿದೆ ಎಂದು ಹೇಳಲಾಗುತ್ತಿದೆ.
ಸು ಫ್ರಮ್ ಸೋ ಒಟಿಟಿಗೆ: ಇನ್ನು ಸು ಫ್ರಮ್ ಸೋ ಸಿನಿಮಾವನ್ನು ಚಿತ್ರರಂಗದಲ್ಲಿ ಈಗಾಗಲೇ ನೋಡಿರುವವರು ಹಾಗೂ ನೋಡದೆ ಇರುವವರು ಸಹ ಯಾವಾಗ ಒಟಿಟಿಗೆ ಬರಲಿದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಒಂದು ಬಾರಿ ಸಿನಿಮಾವನ್ನು ನೋಡಿದ್ದರೂ ಒಟಿಟಿಯಲ್ಲಿ ನೋಡಬೇಕು ಎಂದು ಕಾಯುತ್ತಿರುವವರ ಸಂಖ್ಯೆಯೂ ಕಡಿಮೆ ಇಲ್ಲ. ದೊಡ್ಡ ಮಟ್ಟದ ಕಲೆಕ್ಷನ್‌ನ ನಡುವೆ ಈ ಸಿನಿಮಾ ಒಟಿಟಿಗೆ ಬರುವ ದಿನಾಂಕ ರಿವೀಲ್ ಆಗಿದೆ. ಸು ಫ್ರಮ್ ಸೋ ಸಿನಿಮಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications