Su From So: ಸು ಫ್ರಮ್ ಸೋ ಕನ್ನಡ & ಮಲಯಾಳಂ 2 ಭಾಷೆಗಳಲ್ಲಿ ಸಕ್ಸಸ್‌ಗೆ 5 ಪ್ರಮುಖ ಕಾರಣಗಳು!
Su From So: ಕನ್ನಡದ "ಸು ಫ್ರಮ್ ಸೋ" ಸಿನಿಮಾ ಕನ್ನಡ ಮಾತ್ರವಲ್ಲ. ಮಲಯಾಳಂ ಭಾಷೆಯಲ್ಲೂ ಪ್ರೇಕ್ಷಕರ ಮನಸ್ಸು ಗೆದ್ದಿದ್ದು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದರೊಂದಿಗೆ ತೆಲುಗು ಭಾಷೆ ಹಾಗೂ ತಮಿಳು ಭಾಷೆಗೂ ಡಬ್ ಆಗಲಿದೆ ಎಂದು ಹೇಳಲಾಗುತ್ತಿದೆ. ಹಿಂದಿ ಭಾಷೆಗೆ ರಿಮೇಕ್ ಆಗಲಿದೆ. ಕನ್ನಡದ ಸಿನಿಮಾವೊಂದು ಈ ವರ್ಷ ರೀತಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಸುದ್ದಿಯಾಗಿದ್ದು ಮತ್ತು ಮೆಚ್ಚುಗೆ ಪಡೆದಿದ್ದು ಸು ಫ್ರಮ್ ಸೋ ಎಂದು ಹೇಳಬಹುದು. ಈ ಸಿನಿಮಾವನ್ನು ಜೆಪಿ ತುಮ್ಮಿನಾಡ್ ಅವರು ನಿರ್ದೇಶನ ಮಾಡಿದ್ದು ರಾಜ್ ಬಿ ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಕನ್ನಡ ಮತ್ತು ಮಲಯಾಳಂ ಪ್ರೇಕ್ಷಕರನ್ನು ಏಕಕಾಲಕ್ಕೆ ಸೆಳೆದಿದೆ. ಎರಡೂ ಭಾಷೆಗಳಲ್ಲೂ ಈ ಸಿನಿಮಾ ಸೂಪರ್ ಹಿಟ್ ಆಗುತ್ತಿದೆ. ಕನ್ನಡದಲ್ಲಿ ಈಗಾಗಲೇ ಬಂಪರ್ ಆದಾಯ ಗಳಿಸಿದ್ದು, ಮಲಯಾಳಂನಲ್ಲೂ ಇದೇ ಹಾದಿಯಲ್ಲಿದೆ. ಈ ಸಿನಿಮಾ ಸಕ್ಸಸ್ ಆಗುವುದಕ್ಕೆ 5 ಪ್ರಮುಖ ಕಾರಣಗಳು ಇಲ್ಲಿವೆ.
ತಿಳಿ ಹಾಸ್ಯ: ಸು ಫ್ರಮ್ ಸೋ ಸಿನಿಮಾ ಹಿಟ್ ಆಗುವುದಕ್ಕೆ ಮುಖ್ಯ ಕಾರಣ ಈ ಸಿನಿಮಾದ ಕಥೆ. ಇತ್ತೀಚಿನ ವರ್ಷಗಳಲ್ಲಿ ಪೂರ್ಣ ಪ್ರಮಾಣದ ಹಾಸ್ಯ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಅಲ್ಲದೇ ಕಿರುತೆರೆ ಹಾಗೂ ಹಿರಿತೆರೆಯಲ್ಲೂ ಹಾಸ್ಯದ ಹೆಸರಿನಲ್ಲಿ ಡಬಲ್ ಮೀನಿಂಗ್ ಹಾಗೂ ಬಾಡಿ ಶೇಮಿಂಗ್ ತುಂಬಿ ಹೋಗಿತ್ತು. ಆದರೆ ಸು ಫ್ರಮ್ ಸೋ ಸಿನಿಮಾ ಈ ರೀತಿಯ ವಿಷಯಗಳಿಂದ ವಿಭಿನ್ನವಾಗಿ ನಿಲ್ಲುತ್ತದೆ. ಈ ಸಿನಿಮಾದಲ್ಲಿ ಸೆನ್ಸ್ ಆಫ್ ಹ್ಯೂಮರ್ ಸಖತ್ ಆಗಿ ವರ್ಕ್ ಆಗಿದೆ. ಕುಟುಂಬದೊಂದಿಗೆ ಕುಳಿತು ನೋಡಬಹುದಾದ ಸಿನಿಮಾ ಎನ್ನುವುದು ಮುಖ್ಯ ಕಾರಣವಾಗಿದೆ. ಯಾವುದೇ ಕೊಳಕು ಜೋಕುಗಳನ್ನು ಈ ಸಿನಿಮಾದಲ್ಲಿ ಸೇರಿಸಿಲ್ಲ.

ಗ್ರಾಮೀಣ ಸೊಗಡು, ನೈಜತೆ: ಈ ಸಿನಿಮಾ ಸಕ್ಸಸ್ ಆಗುವುದಕ್ಕೆ ಮತ್ತೊಂದು ಹಾಗೂ ಪ್ರಮುಖ ಕಾರಣವೆಂದರೆ ಈ ಸಿನಿಮಾದಲ್ಲಿನ ನೈಜತೆ. ಕರಾವಳಿಯ ಸೊಗಡು, ಭಾಷೆ ಹಾಗೂ ಆಹಾರ ಪದ್ಧತಿಗಳು ಮತ್ತು ಆಚರಣೆಗಳ ಕಾರಣಕ್ಕೆ ಇದು ಸಿನಿಮೀಯ ಎನಿಸದೆ ನೈಜ ಸಿನಿಮಾ ಎನಿಸಿಕೊಳ್ಳುತ್ತದೆ. ಕಲಾವಿದರ ಸಹಜ ಅಭಿನಯ ಹಾಗೂ ಮಾಸ್ ಡೈಲಾಗ್‌ಗಳು ಇಲ್ಲದೆ ತಿಳಿ ಹಾಸ್ಯ ಇರುವುದು. ಇದರೊಂದಿಗೇ ಒಂದು ಮೆಸೇಜ್ ಸಹ ಕೊಟ್ಟಿರುವುದು ಸಿನಿಮಾಗೆ ಪ್ಲಸ್ ಪಾಯಿಂಟ್ಸ್ ಎನ್ನಬಹುದು.
ಅತಿಯಾದ ವೈಭವೀಕರಣ ಇಲ್ಲ: ಸಿನಿಮಾದ ನಾಲ್ಕರಿಂದ ಐದು ದೃಶ್ಯಗಳನ್ನು ಹೊರತುಪಡಿಸಿ. ಇಡೀ ಸಿನಿಮಾ ಬಿಗಿಯಾಗಿದೆ. ಎಲ್ಲಿಯೂ ಈ ಸೀನ್ ಬೇಡವಾಗಿತ್ತು. ಅತಿಯಾಯ್ತು ಎಂದು ಅನಿಸುವುದಿಲ್ಲ. ಅಷ್ಟೊಂದು ಬಿಗಿಯಾಗಿ ಸಿನಿಮಾವನ್ನು ತೆಗೆದುಕೊಂಡು ಹೋಗಲಾಗಿದೆ. ಎಲ್ಲಿಯೂ ಸಿನಿಮಾ ಬೇಸರ ಮೂಡಿಸುವುದಿಲ್ಲ. ಕೇವಲ ಹಾಸ್ಯ ಮಾತ್ರವಲ್ಲ ವಿಡಂಬನೆ, ಭಾವನಾತ್ಮಕ ದೃಶ್ಯಗಳೂ ಈ ಸಿನಿಮಾದಲ್ಲಿ ಇದೆ.
ಅಬ್ಬರದ ಪ್ರಚಾರ ಇಲ್ಲ ಹೊಸ ಮಾದರಿ: ಸಿನಿಮಾ ಸಕ್ಸಸ್ ಆಗುವುದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಹೊಡಿಬಡಿ - ಲಾಂಗ್‌ಗಳಿಲ್ಲದೆ ತಿಳಿ ಹಾಸ್ಯ ಮತ್ತು ಹೊಸ ಮಾದರಿಯ ಕಥೆ ಈ ಸಿನಿಮಾ ಗೆಲ್ಲುವುದಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್. ಕನ್ನಡ ಸಿನಿಮಾಗಳಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ರೌಡಿಸಂ ಮತ್ತು ಪ್ರೇಮ ಕಥೆಗಳೇ ಹೆಚ್ಚು ಬಂದಿದ್ದವು. ಹೊಸ ಮಾದರಿಯ ಹಾಗೂ ಕುಟುಂಬ ಸಮೇತರಾಗಿ ಅದರಲ್ಲೂ ಹಾಸ್ಯ ಪ್ರಧಾನವಾದ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಈ ಕಾರಣಗಳಿಗೆ ಸಿನಿಮಾ ಆಪ್ತವಾಗಿದೆ. ಅಬ್ಬರದ ಪ್ರಚಾರವನ್ನು ಮಾಡಿಲ್ಲ ಎನ್ನುವುದು ಸಹ ಮತ್ತೊಂದು ಕಾರಣ.
ಸಿನಿಮಾದ ಛಾಯಾಗ್ರಹಣ, ಕಲಾವಿದರು & ಸೆಟ್: ಕೊನೆಯದಾಗಿ ಈ ಸಿನಿಮಾದ ಪ್ರತಿಯೊಂದು ಅಂಶವೂ ಸಿನಿಮಾದ ಗೆಲುವಿಗೆ ಕಾರಣವಾಗಿದೆ. ಮೊದಲನೆಯದು ಕಲಾವಿದರ ಅಭಿನಯ. ಪ್ರತಿ ಪಾತ್ರವೂ ತನ್ನದೇ ಛಾಪು ಮೂಡಿಸಿದೆ. ಎಲ್ಲೂ ಅತಿ ಎನಿಸುವುದಿಲ್ಲ. ರಾತ್ರಿ ಮತ್ತು ಬೆಳಿಗ್ಗೆಯ ಚಿತ್ರೀಕರಣದ ದೃಶ್ಯಗಳು ಛಾಯಾಗ್ರಹಣ ಅದ್ಭುತವಾಗಿದೆ. ಸೆಟ್ ಹಾಕಿರುವುದು ಮತ್ತು ಪ್ರತಿ ದೃಶ್ಯಕ್ಕೆ ಆಯ್ಕೆ ಮಾಡಿಕೊಂಡ ಪ್ರದೇಶಗಳು ಸೂಪರ್ ಆಗಿವೆ. ಈ ಎಲ್ಲಾ ಕಾರಣಗಳಿಗೆ ಸಿನಿಮಾ ಸೂಪರ್ ಹಿಟ್ ಆಗಿದೆ. ಇನ್ನೊಂದು ವಿಷಯವೆಂದರೆ ಈ ಸಿನಿಮಾದ ಪ್ರಚಾರ ಬಾಯಿ ಮಾತಿನಿಂದಲೇ ಆಗಿದೆ.












Click it and Unblock the Notifications