Darshan: ಕಾಲಾಯ ತಸ್ಮೈ ನಮಃ; ದರ್ಶನ್ ಅಭಿಮಾನಿಗಳಿಗೆ ಶ್ರೀಮುರಳಿ ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ತೂಗುದೀಪ ಸದ್ಯ ಬಳ್ಳಾರಿ ಜೈಲಿನಲ್ಲಿದ್ದು, ಜಾಮೀನು ಪಡೆಯಲು ಹೋರಾಟ ಮಾಡುತ್ತಿದ್ದಾರೆ. ಅಕ್ಟೋಬರ್ 28ರಂದು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಬೆನ್ನು ನೋವಿನ ಕಾರಣ ಅವರಿಗೆ ಜಾಮೀನು ಕೊಡಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ. ಜಾಮೀನು ಸಿಕ್ಕರೆ ಸಾಕು ಎಂದು ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ.

ನಟ ಶ್ರೀಮುರಳಿ ತಮ್ಮ ಹೊಸ ಸಿನಿಮಾ 'ಬಘೀರ' ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಪ್ರಚಾರ ಕಾರ್ಯಕ್ರಮದಲ್ಲಿ ದರ್ಶನ್ ಬಗ್ಗೆ ಮಾತನಾಡಿದ್ದು ಅಭಿಮಾನಿಗಳ ಮನಗೆದ್ದಿದ್ದಾರೆ. ಶ್ರೀಮುರಳಿ ಮಾತನಾಡಲು ಶುರು ಮಾಡುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು 'ಡಿ ಬಾಸ್' 'ಡಿ ಬಾಸ್' ಎಂದು ಕರೆಯಲು ಶುರು ಮಾಡುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಶ್ರೀಮುರಳಿ, ನನ್ನ ಅವರ ಸ್ನೇಹ ಸಂಬಂಧ ಯಾವತ್ತಿಗೂ ಬದಲಾಗಲ್ಲ, ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಅವರ ಮೇಲೆ ಗೌರವ ಹಾಗೇ ಇದೆ, ಅವರು ಆದಷ್ಟು ಬೇಗ ಹೊರಗೆ ಬರ್ತಾರೆ, 'ಕಾಲಾಯ ತಸ್ಮೈ ನಮಃ' ಎಂದು ಹೇಳಿದರು. ಶ್ರೀಮುರಳಿ ಹೀಗೆ ಹೇಳುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಜೋರಾಗಿ ಕಿರುಚುವ ಮೂಲಕ ಖುಷಿ ವ್ಯಕ್ತಪಡಿಸಿದರು.

Sri Murali Assures Fans Darshan Will Be Back Soon at Bagheera Event

ತೆರೆಗೆ ಬರಲು ಸಜ್ಜಾದ ಬಘೀರ

ಶ್ರೀಮುರಲಿ ಅಭಿಯನದ ಬಹುನಿರೀಕ್ಷಿತ ಬಘೀರ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಅಕ್ಟೋಬರ್ 31ರಂದು ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ಚಿತ್ರ ತಂಡ ಪ್ರಚಾರದಲ್ಲಿ ತೊಡಗಿದೆ. ಈಗಾಗಲೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಬಘೀರ ಸಿನಿಮಾಗೆ ಕತೆ ಬರೆದಿದ್ದು, ಡಾ. ಸೂರಿ ನಿರ್ದೇಶನ ಮಾಡಿದ್ದಾರೆ.

ದರ್ಶನ್‌ಗೆ ಬೆನ್ನುನೋವು

ನಟ ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ಆರೋಗ್ಯ ಸಮಸ್ಯೆ ದೊಡ್ಡ ತಲೆನೋವಾಗಿದೆ. ದಿನೇ ದಿನೇ ಬೆನ್ನು ನೋವು ಹೆಚ್ಚುತ್ತಿದ್ದು ಜಾಮೀನು ಸಿಗಲಿ ಎಂದು ಕಾಯುತ್ತಿದ್ದಾರೆ. ಆರಂಭದಲ್ಲಿ ಬಳ್ಳಾರಿಯಲ್ಲಿ ಎಂಆರ್‍ಐ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ನಿರಾಕರಿಸಿದ್ದ ದರ್ಶನ್ ನೋವು ಹೆಚ್ಚಾಗಿದ್ದರಿಂದ ಅನಿವಾರ್ಯವಾಗಿ ವಿಮ್ಸ್ ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ದರ್ಶನ್ ಬೆನ್ನು ನೋವಿನ ಬಗ್ಗೆ ಹೈಕೋರ್ಟ್ ಕೂಡ ವರದಿ ಕೇಳಿದ್ದು, ವರದಿಯನ್ನು ಪರಿಶೀಲನೆ ಮಾಡಿ ದರ್ಶನ್‌ಗೆ ಜಾಮೀನು ನೀಡುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.

ಸೆಷನ್ಸ್ ಕೋರ್ಟ್‌ನಲ್ಲಿ ದರ್ಶನ್‌ಗೆ ಜಾಮೀನು ಕೊಡುವಂತೆ ಹಿರಿಯ ವಕೀಲ ನಾಗೇಶ್ ಸಾಕಷ್ಟು ವಾದ ಮಾಡಿದ್ದರೂ ಜಾಮೀನು ನಿರಾಕರಿಸಲಾಗಿದೆ. ಎಸ್‌ಪಿಪಿ ಪ್ರಸನ್ನ ಕುಮಾರ್ ದರ್ಶನ್‌ಗೆ ಜಾಮೀನು ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದರು, ಕೋರ್ಟ್ ಎಸ್‌ಪಿಪಿ ಅವರ ವಾದವನ್ನು ಪುರಸ್ಕರಿಸಿ ಜಾಮೀನು ನಿರಾಕರಿಸಿ ಆದೇಶ ಮಾಡಿತ್ತು. ದಸರಾ ಹಬ್ಬದ ವೇಳೆಗ ದರ್ಶನ್ ಬಿಡುಗಡೆಯಾಗುತ್ತಾರೆ ಎಂದು ಕಾದಿದ್ದವರಿಗೆ ಕೋರ್ಟ್ ಆದೇಶ ಆಘಾತ ತಂದಿತ್ತು.

ಇದೀಗ ಹೈಕೋರ್ಟ್‌ನಲ್ಲಾದರೂ ದರ್ಶನ್‌ಗೆ ಜಾಮೀನು ಸಿಕ್ಕರೆ ಸಾಕು ಎಂದು ಅಭಿಮಾನಿಗಳು, ಕುಟುಂಬಸ್ಥರು ಕಾಯುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ಕೂಡ ಜಾಮೀನು ಸಿಗದೇ ಇದ್ದರೆ, ಸುಪ್ರೀಂಕೋರ್ಟ್‌ಗೆ ಹೋಗುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+