Bigg Boss: ಹೊಟ್ಟೆಯಲ್ಲಿರುವ ಮಗು ನಂದೇ ಎಂದು ಕಿಚ್ಚ ಸುದೀಪ್ ಬಳಿ ಒಪ್ಪಿಕೊಂಡ ತ್ರಿವಿಕ್ರಮ್: ಆಗಿದ್ದೇನು?

ಕನ್ನಡ ಕಿರುತೆರೆಯ ಪ್ರಖ್ಯಾತ ರಿಯಾಲಿಟಿ ಶೋ ಎಂದರೇ ಅದು ಬಿಗ್‌ಬಾಸ್ ಕನ್ನಡ. ಬಿಗ್‌ ಬಾಸ್‌ ಕನ್ನಡದ 11ನೇ ಆವೃತ್ತಿ ಶುರುವಾಗಿ ಹಲವು ವಾರಗಳು ಕಳೆದಿದ್ದು, ಹಲವು ಮಂದಿ ಬಿಗ್ ಬಾಸ್ ನಿಂದ ಹೊರ ಹೋಗಿದ್ದಾರೆ. ಬಿಗ್‌ ಬಾಸ್‌ ಮನೆ ಒಂದಲ್ಲ ಒಂದು ಕಾರಣಕ್ಕೆ ದೊಡ್ಡ ಸದ್ದು ಮಾಡುತ್ತಿದ್ದು, ಹೊಟ್ಟೆಯಲ್ಲಿರುವ ಮಗುವಿನ ವಿಚಾರವು ಬಿಗ್‌ ಬಾಸ್‌ ಮನೆಯಲ್ಲಿ ರೀವಿಲ್‌ ಆಗಿದೆ.

ಕಳೆದ ಎರಡು ವಾರ ನಿರೂಪಕ ಕಿಚ್ಚ ಸುದೀಪ್ ವಾರದ ಪಂಚಾಯಿತಿಯನ್ನು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಇದೀಗ ಕಿಚ್ಚ ಸುದೀಪ್‌ ಕಮ್‌ ಬ್ಯಾಕ್‌ ಮಾಡಿದ್ದು, ಶನಿವಾರ ಹಾಗೂ ಭಾನುವಾರದ ಸಂಚಿಕೆಯಲ್ಲಿ ವಾರದ ಪಂಚಾಯ್ತಿಯನ್ನು ನಡೆಸಿಕೊಟ್ಟಿದ್ದಾರೆ.

special moment in bigg boss house sudeep reaction goes viral

ವಾರದ ಪಂಚಾಯಿತಿಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಒಂದಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾರೆ ಗೊತ್ತಿಲ್ಲದೆ ತಪ್ಪು ಮಾಡಿದವರಿಗೆ ಮತ್ತೊಮ್ಮೆ ಮಾಡದಂತೆ ಸಲಹೆ ನೀಡುತ್ತಾರೆ ಗೊತ್ತಿದ್ದು ತಪ್ಪು ಮಾಡಿದವರಿಗೆ ಎಚ್ಚರಿಕೆ ಕೊಡುತ್ತಾರೆ ಆದರೆ, ಇಂದಿನ ಸಂಚಿಕೆಯಲ್ಲಿ ಹಾಸ್ಯಾಸ್ಪದ ಘಟನೆಯೊಂದು ನಡೆದಿದ್ದು, ಪ್ರೇಕ್ಷಕರು ಹಾಗೂ ಸ್ಪರ್ಧಿಗಳು ನಗೆಗಡಲಲ್ಲಿ ತೇಲಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ತ್ರಿಕೋನ ಪ್ರೇಮಕಥೆಗೆ ವಿಚಾರ ಪ್ರಸ್ತಾಪವಾಗಿದೆ.

ಭಾನುವಾರ ಕಿಚ್ಚನ ಪಂಚಾಯ್ತಿಯಲ್ಲಿ ಉಗ್ರಂ ಮಂಜು ಅವರೇ ನೀವು ಭವ್ಯ, ಧನರಾಜ್ ನೀವು ಭನ್ಯಾ ನೀವಿಬ್ಬರು ಸೇರಿ ತ್ರಿವಿಕ್ರಮ್‌ ನ ಲವ್ ಮಾಡ್ತಿದ್ದೀರಾ ಎಂದು ಸುದೀಪ್ ಹೇಳುತ್ತಾರೆ ಆಗ ಭನ್ಯಾ ಪಾತ್ರಧಾರಿ ಧನರಾಜ್ ನಾನು ಮೊದಲೇ ಹೇಳಿದ್ದೀನಿ ಅದು ನಂದು ಎಂದು ಹೇಳುತ್ತಾರೆ ಇದಕ್ಕೆ ಪ್ರತಿಕ್ರಿಯಿಸುವ ಭವ್ಯಾ ಪಾತ್ರಧಾರಿ ಮಂಜು ಓಡೋ ಅತ್ತುಬುಡ್ತೀನಿ ನಿಂಕಲೋ ಓಟ ಎಂದು ಹೇಳುತ್ತಾರೆ.

ಇನ್ನೂ ಧನರಾಜ್ ನೀ ಮಾಡಿದ್ದೇನು ಅದೇ ತಾನೇ ಬಿಗ್‌ಬಾಸ್‌ನಲ್ಲಿ ಉಗ್ರಂ ಮಂಜು.ಹೇ ಧನರಾಜ್ ನಾನು ಇಲ್ಲಿಯವರೆಗೂ ಒಂದು ವಿಷಯವನ್ನು ಹೇಳಿಲ್ಲ ಹೊಟ್ಟೆಯಲ್ಲಿ ಒಂದು ಮಗು ಇದೆ ಎಂದರು ಈ ವೇಳೆ ಇಡೀ ಮನೆಯಲ್ಲಿರುವ ಸ್ಪರ್ಧಿಗಳು ಹಾಗೂ ಕಿಚ್ಚ ಸುದೀಪ್ ಓಹ್ ಎಂದು ಹೇಳುತ್ತ ಜೋರಾಗಿ ನಗುತ್ತಾರೆ.

ಅನಂತರ ಕಿಚ್ಚ ಸುದೀಪ್ ತ್ರಿವಿಕ್ರಮ್ ಬಳಿ ಭವ್ಯಾ ಅಥವಾ ಭನ್ಯಾ ಎಂದು ಕೇಳಿದಾಗ, ಹೊಟ್ಟೆಲಿರೋದು ನಂದ ಎಂದು ತ್ರಿವಿಕ್ರಮ್ ಅವರು ಧನರಾಜ್ (ಭನ್ಯಾ) ಕೈ ಎತ್ತುತ್ತಾರೆ. ಇನ್ನೂ ಈ ವೇಳೆ ಕಿಚ್ಚ ಸುದೀಪ್ ಹೊಟ್ಟೆಲಿರೋದು ನಂದು ಅಂತ ಕ್ಕೆ ಎತ್ತಿದ್ರಿ. ಪಕ್ಕದಲ್ಲಿ ಇರೋ ಆ ಕೈ ಯಾಕೆ ಬಿಡ್ತಿಲ್ಲ ಎಂದು ತ್ರಿವಿಕ್ರಮ್ ಕಾಲು ಎಳೆದಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+