Sonu Nigam Birthday: 51ನೇ ವಸಂತಕ್ಕೆ ಕಾಲಿಟ್ಟ ಸೋನು ನಿಗಮ್- ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಖ್ಯಾತ ಗಾಯಕ ಸೋನು ನಿಗಮ್ ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸುಮಧುರ ಹಾಡುಗಳಿಂದ ಕೋಟಿ ಕೋಟಿ ಅಭಿಮಾನಿಗಳ ಮನಗೆದ್ದ ಸೋನು ನಿಗಮ್‌ ಅವರಿಗೆ ಇಂದು ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಹೊಸ ಹಾಡುಗಳು ಬರುತ್ತವೆ, ಹೋಗುತ್ತವೆ. ಆದರೆ ಸೋನು ನಿಗಮ್ ಅವರು ಹಾಡಿದ ಕೆಲ ಹಾಡುಗಳು ಮಾತ್ರ ಇಂದಿಗೂ ಫೇಮಸ್. ಉದಾಹರಣೆಗೆ, 'ಯೇ ದಿಲ್ ದೀವಾನಾ' (Yeh Dil Deewana), 'ಸಂದೇಶ್ ಆತೇ ಹೈ' (Sandese Aate Hai), 'ಅಭಿ ಮುಜ್ ಮೇ ಕಹೀಂ' (Abhi Mujh Mein Kahin) ಮತ್ತು 'ಮೈ ಅಗರ್ ಕಹೂನ್' (Main Agar Kahoon) ಸೇರಿದಂತೆ ಹಲವು ಹಾಡುಗಳು ಕೇಳಿದಷ್ಟು ಮತ್ತೆ ಮತ್ತೆ ಕೇಳುವಷ್ಟು ಮಧುರವಾಗಿದೆ.

Sonu Nigam Birthday Sonu Nigam is celebrating his 51st birthday Today

ಸೋನು ನಿಗಮ್ ಬಾಲ್ಯ ಜೀವನ

ಅಂದಹಾಗೆ ಈ ಟ್ಯೂನ್‌ಗಳ ಮಾಸ್ಟರ್ ಸೋನು ನಿಗಮ್ ಅವರು ಜುಲೈ 30, 1973 ರಂದು ಜನಿಸಿದರು. ಉತ್ತಮ ಗಾಯನಕ್ಕಾಗಿ ಪದ್ಮಶ್ರೀ ಪಡೆದ ಸೋನು ನಿಗಮ್ ಚಿಕ್ಕ ವಯಸ್ಸಿನಲ್ಲೇ ಮದುವೆಗಳಲ್ಲಿ ಹಾಡಲು ಪ್ರಾರಂಭಿಸಿದರು. ತಮ್ಮ ತಂದೆ ಆಗಮ್ ಕುಮಾರ್ ನಿಗಮ್ ಅವರೊಂದಿಗೆ ವೇದಿಕೆಯಲ್ಲಿ ಪ್ರದರ್ಶನ ನೀಡಲು ಹೋಗುತ್ತಿದ್ದರು. ಸೋನು ನಿಗಮ್ ವಯಸ್ಕರಾದ ನಂತರ ಗಾಯನ ವೃತ್ತಿಯನ್ನು ಮುಂದುವರಿಸಲು ಮುಂಬೈಗೆ ಹೋದರು. ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಅವರಿಂದ ಹಾಡುವ ತಂತ್ರಗಳನ್ನು ಕಲಿತಿದ್ದ ಸೋನು ಕಷ್ಟಪಟ್ಟು ತಮ್ಮ ಹಾಡುವ ಕಲೆಯನ್ನು ವೃದ್ಧಿಸಿಕೊಂಡರು.

ಸೋನು ನಿಗಮ್ ವೈಯಕ್ತಿ ಜೀವನ

ಸೋನು ನಿಗಮ್ ಫೆಬ್ರವರಿ 15, 2002 ರಂದು ಮಧುರಿಮಾ ಮಿಶ್ರಾ ಅವರನ್ನು ವಿವಾಹವಾದರು. ಇಬ್ಬರೂ ನುವಾನ್ ಎಂಬ ಮಗನ ಪೋಷಕರಾಗಿದ್ದಾರೆ. ತಂದೆಯಂತೆ ಮಗನೂ ಕೂಡ ಹಾಡು ಹಾಡುವ ವೃತ್ತಿಯನ್ನು ಸಣ್ಣ ವಯಸ್ಸಿನಿಂದಲೇ ರೂಢಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಪುಟ್ಟ ಹುಡುಗ ನುವನ್ ಜನಸಾಗರ ತುಂಬಿದ ವೇದಿಕೆ ಮೇಲೆ ಪ್ರಸಿದ್ಧ ಗೀತೆ 'ಕೊಲವರಿ ಡಿ' ಹಾಡನ್ನು ಹಾಡುವ ಮೂಲಕ ಗಮನ ಸೆಳೆದಿದ್ದರು.

Sonu Nigam Birthday Sonu Nigam is celebrating his 51st birthday Today

ಸೋನು ನಿಗಮ್ ಹಿಂದಿ ಭಾಷೆಯಲ್ಲಿ ಮಾತ್ರವಲ್ಲದೆ ಬೆಂಗಾಲಿ, ಮರಾಠಿ, ಕನ್ನಡ, ಮಲಯಾಳಂ, ತಮಿಳು, ತೆಲುಗು, ಭೋಜ್‌ಪುರಿ, ಗುಜರಾತಿ, ಛತ್ತೀಸ್‌ಗಢಿ, ಒಡಿಯಾ, ನೇಪಾಳಿ, ತುಳು ಭಾಷೆಗಳಲ್ಲಿಯೂ ಹಾಡಿದ್ದಾರೆ. ಅವರು 'ಬ್ಲೂ' ಚಿತ್ರದಲ್ಲಿ ಆಸ್ಟ್ರೇಲಿಯಾದ ಗಾಯಕಿ ಕೈಲಿ ಮಿನೋಗ್ ಅವರೊಂದಿಗೆ 'ಚಿಗ್ಗಿ ವಿಗ್ಗಿ' ಹಾಡನ್ನು ಹಾಡಿದ್ದು ವಿಶೇಷ.

ಸೋನು ನಿಗಮ್ ಹುಟ್ಟುಹಬ್ಬದಂದು ಸಾಕ್ಷ್ಯಚಿತ್ರ ಬಿಡಗಡೆ

ಈ ಬಾರಿ ಸೋನು ನಿಗಮ್ ಅವರ 51ನೇ ಹುಟ್ಟುಹಬ್ಬ ತುಂಬಾ ವಿಶೇಷವಾಗಿರಲಿದೆ. ಯಾಕೆಂದರೆ ಅವರು ತಮ್ಮ ಹುಟ್ಟುಹಬ್ಬದಂದು ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಇದರಲ್ಲಿ ಜನರು ಸೋನು ಜೀವನದ ಬಗ್ಗೆ ಅನೇಕ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ ಮತ್ತು ಅವರನ್ನು ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ.

Sonu Nigam Birthday Sonu Nigam is celebrating his 51st birthday Today

ಸಾಕ್ಷ್ಯಚಿತ್ರದ ಹೆಸರು 'ಸಿಂಫನಿ ಆಫ್ ಫೇಟ್'. ಇದರಲ್ಲಿ ಜನರು ಸೋನು ಅವರ ಪ್ರಯಾಣವನ್ನು ನೋಡುತ್ತಾರೆ. ದುಬೈನಲ್ಲಿ ಸಂಗೀತ ಕಾರ್ಯಕ್ರಮದ ವೇಳೆ ಅವರಿಗೆ ದೊಡ್ಡ ಅಪಘಾತ ಸಂಭವಿಸಿದಾಗಿನ ಸಂದರ್ಭವನ್ನು ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ. ಆಗ ಸೋನು ಅವರು ತಮ್ಮ ಧ್ವನಿಯನ್ನು ಕಳೆದುಕೊಂಡಿದ್ದರು. ಸೋನು ಅವರ ಮಧುರ ಕಂಠ ಹೇಗೆ ಮರಳಿ ಬಂತು ಎಂಬುದು ಸಾಕ್ಷ್ಯಚಿತ್ರದಲ್ಲಿ ಬಹಿರಂಗವಾಗಲಿದೆ.

Sonu Nigam Birthday Sonu Nigam is celebrating his 51st birthday Today

ಸೋನು ನಿಗಮ ಕನ್ನಡ ಹಿಟ್ ಸಾಂಗ್ಸ್ ಇಲ್ಲಿದೆ...

1.Andaje Siguthilla

2.Sadha Ninna kannali

3. Ba Nodu Gelathi

4. Paravashanadenu

5. Ninna Nodo

6. Neenu Nanna Saviganasu

7. Minchagi Neenu Baralu

8. Oh Gunavantha

9. Nee Sheetala

10. E Usirige Galiye Ninagiru

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+