ಕೀಳು ಮಟ್ಟದ, ಕೊಳಕು ಮನಸ್ಥಿತಿಯ ಜಂತುಗಳು: ದರ್ಶನ್ ಅಭಿಮಾನಿ ವಿರುದ್ಧ ಸಿಡಿದೆದ್ದ ಸೋಷಿಯಲ್ ಮಿಡಿಯಾ- ಯಾರು ಏನಂದ್ರು?
ನಟ ದರ್ಶನ್ ಅವರ ಅಭಿಮಾನಿಗಳ ವಿರುದ್ಧ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಈಗ ಗರಂ ಆಗಿದ್ದಾರೆ. ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ಅವರ ಕುರಿತು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ ಆರೋಪದ ಹಿನ್ನೆಲೆ, ನಟ ದರ್ಶನ್ ಅಭಿಮಾನಿ ಎಂದು ಹೇಳಲಾಗುತ್ತಿರುವ ವ್ಯಕ್ತಿ ವಿರುದ್ಧ ಇಡೀ ಸೋಷಿಯಲ್ ಮೀಡಿಯಾ ಗರಂ ಆಗಿದೆ. ಹಾಗಾದರೆ ಯಾರು ಯಾರು ಏನಂದ್ರು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
ದರ್ಶನ್ ಅವರ ಅಭಿಮಾನಿಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೈಟ್ ಮಾಡ್ತಾನೆ ಇರ್ತಾರೆ ಅನ್ನೋ ಆರೋಪ ಪದೇ ಪದೇ ಕೇಳಿಬರುತ್ತದೆ. ಇಂತಹ ಆರೋಪಗಳ ನಡುವೆ, ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ಅವರ ಬಗ್ಗೆಯೂ ಅವಾಚ್ಯ ಶಬ್ಧ ಬಳಸಿ ನಿಂದಿಸಿದ ಆರೋಪ ಕೂಡ ಈಗ ನಟ ದರ್ಶನ್ ಅವರ ಅಭಿಮಾನಿ ವಿರುದ್ಧ ಕೇಳಿ ಬಂದಿದೆ. ಹೀಗಾಗಿ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಏನ್ ಹೇಳುತ್ತಿದ್ದಾರೆ ಗೊತ್ತಾ? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.

ಅಪ್ಪು ಫ್ಯಾನ್ಸ್ ಆಕ್ರೋಶ
Rooswelt Joslynn ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ 'ಅಣ್ಣಾವ್ರ ಕುಟುಂಬದ ಮೇಲಿದ್ದ ದಶಕಗಳ ಅಸೂಯೆ, ಹೊಟ್ಟೆ ಉರಿ ಈಗ ಅಶ್ವಿನಿಯವರ ಮೇಲೂ ಬೀರುತ್ತಿದೆ ಅನ್ನೋದು ಸತ್ಯ..ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ದಿನ ಹೋದಂತೆ ಹೆಮ್ಮರವಾಗಿ ಬೆಳೆಯುತ್ತಿದ್ದಾರೆ. ಅಣ್ಣಾವ್ರಿಗೆ ಪರ್ಯಾಯವಾಗಿ ಅಪ್ಪು ಹೇಗೋ ಹಾಗೆ ಪಾರ್ವತಮ್ಮನವರಿಗೆ ಪರ್ಯಾಯವಾಗಿ ಅಶ್ವಿನಿಯವರು ಅನ್ನೋದು ಸಾಬೀತಾಗ್ತಾ ಇದೆ. ಅಣ್ಣಾವ್ರ ಕುಟುಂಬದ ಯಶಸ್ಸಿನಿಂದ ಕಂಗೆಟ್ಟು ದಿಕ್ಕಾಪಾಲಾಗಿ ಪತರುಗುಟ್ಟಿದ ಗುಂಪುಗಳು ಮೊದಲಿನಿಂದಲೂ ಪಿತೂರಿ ಮಾಡುತ್ತಲೇ ಬಂದಿರುತ್ತದೆ, ಆದರೆ ಅಣ್ಣಾವ್ರ ಕುಟುಂಬಕ್ಕಿದ್ದ ಜನಬಲ ಕಂಡು ಈ ದರಿದ್ರ ಗುಂಪು ತೆರೆಮರೆಯಲ್ಲಿ ಕೆಲಸ ಮಾಡುತ್ತಿತ್ತು.'
'ಅಣ್ಣಾವ್ರ ಕುಟುಂಬದ ಅತೀ ದೊಡ್ಡ ಆಧಾರ ಸ್ತಂಭವಾಗಿದ್ದ "ಅಪ್ಪು" ತೀರಿಕೊಂಡ ಮೇಲೆ ಈ ದರಿದ್ರ ಗುಂಪುಗಳ ಅಟ್ಟಹಾಸ ಎಲ್ಲೆ ಮೀರಿದೆ. ಬರೀ ಅಟ್ಟಹಾಸ ಆಗಿದ್ರೆ ಸುಮ್ಮನಿರಬಹುದಿತ್ತು. ಆದರೆ ಈ ದರಿದ್ರ ಗುಂಪುಗಳು ಈಗ ದೊಡ್ಮನೆ ಸೊಸೆ, ಘನತೆಗೆ ಇನ್ನೊಂದು ಹೆಸರಾಗಿರುವ "ಅಶ್ವಿನಿ ಪುನೀತ್ ರಾಜಕುಮಾರ್" ಅವರ ಬಗ್ಗೆ ಕೀಳಾಗಿ ಮಾತಾಡುತ್ತಿವೆ. ಇದು ಅಣ್ಣಾವ್ರ ಕುಟುಂಬವನ್ನು ಅಭಿಮಾನಿಸುವ ಕೋಟ್ಯಾಂತರ ಅಭಿಮಾನಿಗಳಿಗೂ ಅವಮಾನ. ಇಂಥಹ ಅಬ್ಬೆಪಾರಿ ಪುಂಡರಿಗೆ ಜೈಲೂಟ ಬಡಿಸುವ ಕಾರ್ಯಕ್ರಮವನ್ನು ಅಣ್ಣಾವ್ರ ಕುಟುಂಬದ ಅಭಿಮಾನಿ ಸಂಘಗಳು ಆದಷ್ಟು ಬೇಗ ಮಾಡಬೇಕಿದೆ...' ಎಂದು ಬರೆದುಕೊಂಡಿದ್ದಾರೆ.
'ಛೀ...ನಿಮ್ಮ ರಕ್ಕಸ ಮನದ...'
ವಚನಶ್ರೀ ಶಿವಕುಮಾರ ಪಾಟೀಲ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಅನಿಸಿಕೆ ಹಂಚಿಕೊಂಡಿದ್ದು, 'ಛೀ...ನಿಮ್ಮ ರಕ್ಕಸ ಮನದ ಮೌಡ್ಯವನ್ನ ಬಿಟ್ಟು
ಹೊರಬನ್ನಿ ಹೆಣ್ಣು ಮೊದಲೆ ಭೂಮಿಯೇ ಬಾಯಿಬಿಟ್ಟ ಹಾಗೆ ಮೌನದಿ ನೊವಲ್ಲಿ ಕುದಿಯುತ್ತಿರುತ್ತಾಳೆ ಸಾಧ್ಯವಾದರೆ ದೖರ್ಯ ಹೇಳಿ ಇಲ್ಲಾವಾದರೆ ಮೌನ ಇರೀ 😔 ಯಾವ ಮುತೈದಿಯು ಇಲ್ಲಾ ವಿದೆವೆಯು ಇಲ್ಲಾ ಎಲ್ಲವು ಒಂದೆ ಅದಲ್ಲ ಹೀನ ಮನದವರುಮಾಡಿದ್ದು. ಎಲ್ಲರು ಕರೆ ಬಂದಾಗ ಹೋಗುವದೆ ಪಟ್ಟ ಕಟ್ಟುವ ಹೆಸಿಗೆ ಮನದಿಂದ ಹೋರಬನನ್ನಿ ಜ್ಞಾನದಿ ಬಾಳಿ ಅಂಧಕಾರ ಬಿಡಿ🙏🏻' ಎಂದು ಬರೆದುಕೊಂಡಿದ್ದಾರೆ.
ದರ್ಶನ್ ಅವರೇ ಬೇಗನೆ ಮೀಡಿಯಾ ಮುಂದೆ ಬಂದು ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಇಲ್ಲವಾದಲ್ಲಿ ಕಂಡ ಕಂಡಲ್ಲಿ ಚಪ್ಪಲಿ ಎಸೆತ ಎದುರಿಸುವುದಂತು ಖಚಿತ.@dasadarshan #PuneethRajkumar pic.twitter.com/qd8OaN2H6N
— Karnataka Box Office | ಕರ್ನಾಟಕ ಬಾಕ್ಸ್ ಆಫೀಸ್ (@Karnatakaa_BO) April 4, 2024
"ಯುವ" ಸಿನೆಮಾ ಅಭೂತಪೂರ್ವ ಯಶಸ್ಸು
ಹಾಗೇ ಪಚ್ಚೆ ನಂಜುಂಡ ಸ್ವಾಮಿ ಎಂಬುವವರು, 'ಅಶ್ವಿನಿಯವರ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡ "ಯುವ" ಸಿನೆಮಾ ಅಭೂತಪೂರ್ವ ಯಶಸ್ಸು ಗಳಿಸಿದೆ ಎಂದಮೇಲೆ ಅವರ ಕಾಲ್ಗುಣಕ್ಕೆ ಎಂತಹ ಅದ್ಭುತವಾದ ಶಕ್ತಿಯಿದೆ ಎಂದರ್ಥ ಅಲ್ಲವೇ? ಅವರಿಗಾಗಿರುವ ನೋವಿನ ನಡುವೆ ಅಶ್ವಿನಿಯವರು ವಹಿಸಿರುವ ಬಂಗಾರದಂತಹ ಮೌನವೇ ಅವರನ್ನು ಯಾವಾಗಲೂ ಸಾರ್ವಜನಿಕವಾಗಿ ಗೌರವಯುತವಾಗಿರಿಸಿರುವುದು ಎಂದರೆ ಅತಿಶಯೋಕ್ತಿ ಅಲ್ಲ.'
'ಅಶ್ವಿನಿಯವರ ಬಗ್ಗೆ ಕೀಳು ಮಟ್ಟದ ಪೋಸ್ಟ್ ಹಾಕುವ ಯಾವ್ಯಾವುದೋ Dynasty ಎಂದು ಕರೆಯಿಸಿಕೊಳ್ಳುವವರು ಒಂದು ವಿಷಯ ತಿಳಿದುಕೊಳ್ಳಬೇಕು.ಅದೇನೆಂದರೆ, ಅಂತಹ "ನೂರು"Dynasty ಗಳು ಸೇರಿದರೂ "ಒಂದು" Raj Dynasty ಗೆ ಸಮವಾಗುವುದಿಲ್ಲ. ಆ ಕುಟುಂಬದಲ್ಲಿ ದೊಡ್ಡತನ ಇರುವುದಕ್ಕಾಗಿಯೇ ಆ ಮನೆಯನ್ನು "ದೊಡ್ಮನೆ" ಎಂದು ಗೌರವ ಪೂರ್ವಕವಾಗಿ ಕರ್ನಾಟಕದ ಮಹಾಜನತೆ ಕರೆಯುವುದು ಎಂದು. ಅಶ್ವಿನಿಯವರು ಇನ್ನು ಮುಂದೆ ಕೆಂಪು ಕುಂಕುಮ ಮತ್ತು ಮಾಂಗಲ್ಯವನ್ನು ಧರಿಸಲಿ. ಕಾರಣ ಅಪ್ಪು ಅಜರಾಮರ ಎಂದ ಮೇಲೆ ಅಶ್ವಿನಿ ರವರೂ ಕೂಡ ಶಾಶ್ವತ ಸುಮಂಗಲಿ ಎಂದರ್ಥ.' ಎಂದು ಬರೆದುಕೊಂಡಿದ್ದಾರೆ.












Click it and Unblock the Notifications