ಹೆಂಡತಿ ಖ್ಯಾತ ಇನ್ಸ್ಟಾಗ್ರಾಮ್ ಸ್ಟಾರ್, ಪ್ರಿಯಕರನ ಜೊತೆ ಸೇರಿ ಗಂಡನ ಕಥೆ... Social Media
ಗಂಡ & ಹೆಂಡತಿ ನಡುವೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಮನಸ್ತಾಪವನ್ನೇ ತಂದು, ಸಂಸಾರ ಒಡೆದು ಹಾಕುತ್ತಿದೆ. ನನ್ನ ಹೆಂಡತಿ ಸೋಷಿಯಲ್ ಮೀಡಿಯಾದಲ್ಲಿ ಮೈಕೈ ಕುಣಿಸುವುದು ಬೇಡ ಅನ್ನೋದು ಗಂಡಂದಿರ ವಾದ. ಇದೇ ಕಾರಣಕ್ಕೆ ಗಂಡ & ಹೆಂಡತಿಯ ನಡುವೆ ಜಗಳವೇ ನಡೆದು, ಮದುವೆ ಸಂಬಂಧ ಮುರಿದುಕೊಂಡ ಘಟನೆಗಳು ಕೂಡ ಭಾರಿ ಸಂಚಲನ ಸೃಷ್ಟಿ ಮಾಡುತ್ತಿವೆ. ಹೀಗಿದ್ದಾಗಲೇ, ಹೆಂಡತಿ ಖ್ಯಾತ ಇನ್ಸ್ಟಾಗ್ರಾಮ್ ಸ್ಟಾರ್... ಪ್ರಿಯಕರನ ಜೊತೆ ಸೇರಿ ಗಂಡನ ಕಥೆ ಏನು ಮಾಡಿದ್ದಾಳೆ ಗೊತ್ತಾ?
ಸೋಷಿಯಲ್ ಮೀಡಿಯಾ ಮೂಲಕ ರೀಲ್ಸ್ ಮಾಡುತ್ತಾ, ಫಾಲೋವರ್ಸ್ ಪಡೆದು ಹಣ ಮಾಡಿ ಜೊತೆಗೆ ಹೆಸರು ಕೂಡ ಮಾಡುವುದು ಈಗ ಟ್ರೆಂಡ್ ಆಗಿದೆ. ಕೆಲವು ಕಡೆ ಗಂಡ & ಹೆಂಡತಿ ಇಬ್ಬರೂ ಸೇರಿ ರೀಲ್ಸ್ ಮಾಡುತ್ತಾ, ಟ್ರೋಲರ್ಸ್‌ಗೆ ಆಹಾರ ಆಗುತ್ತಾರೆ. ಹೀಗೆ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಇಂಡಿಯಾದಲ್ಲಿ ಸೋಷಿಯಲ್ ಮೀಡಿಯಾ ಅನ್ನೋದು ದೊಡ್ಡ ರೋಗ ಆಗಿದೆ ಅಂತಾರೆ ಪ್ರಜ್ಞಾವಂತರು. ಇಂತಹ ಸಮಯದಲ್ಲೇ ರೀಲ್ಸ್ ಹುಚ್ಚಿಗೆ ಬಿದ್ದಿದ್ದ ಹೆಂಡತಿ ಒಬ್ಬಳು ಗಂಡನಿಗೆ ಏನು ಮಾಡಿದ್ದಾಳೆ ಅಂದ್ರೆ...

ಹೆಂಡತಿ ಖ್ಯಾತ ಇನ್ಸ್ಟಾಗ್ರಾಮ್ ಸ್ಟಾರ್, ಗಂಡನ ಕಥೆ...
ಹುಡುಗರ ಬದುಕು ಬೀದಿಗೆ ಬಿದ್ದಿದೆ, ಮದುವೆ ಆಗದೆ ನರಳುತ್ತಿದ್ದಾರೆ ಎಂಬ ಆರೋಪ ಇದೆ. ಇನ್ನು ಮದುವೆ ಆಗಿರುವವರ ಕಥೆ ಕೂಡ ಹಲವು ಸಮಸ್ಯೆಗಳ ಸುಳಿಗೆ ಸಿಲುಕುವಂತೆ ಆಗಿದೆ. ಗಂಡ ಕೆಲಸಕ್ಕೆ ಹೋದಾಗ ಹೆಂಡತಿ ಮನೆ ನೋಡಿಕೊಳ್ಳಬೇಕು, ಸಂಸಾರ ನಡೆಸಬೇಕು ಎಂಬ ಆಸೆ ಜಗತ್ತಿನ ಪ್ರತಿಯೊಬ್ಬರದ್ದೂ ಆಗಿದೆ. ಆದರೆ ಗಂಡ ಕೆಲಸಕ್ಕೆ ಹೋದಾಗ ಹೆಂಡತಿ ರೀಲ್ಸ್ ಮಾತ್ರ ಮಾಡಿದರೆ ಪರವಾಗಿಲ್ಲ, ರೀಲ್ಸ್ ಹುಚ್ಚಿಗೆ ಬಿದ್ದು ಗಂಡನಿಗೆ ಒಂದು ಗತಿ ಕಾಣಿಸಿದರೆ ಹೇಗೆ ಇರಬೇಡ?
ಅಷ್ಟಕ್ಕೂ 32 ವರ್ಷದ ರವೀನಾ ಎಂಬ ರೀಲ್ಸ್ ಸ್ಟಾರ್ ತನ್ನ ಪ್ರಿಯಕರನ ಜೊತೆಗೆ ಸೇರಿ, ಸ್ವಂತ ಗಂಡನನ್ನೇ ಭೀಕರವಾಗಿ ಕೊಲೆ ಮಾಡಿರುವ ಆರೋಪವು ಕೇಳಿ ಬಂದಿದೆ. ರವೀನಾ ಮತ್ತು ಸುರೇಶ್ ಎಂಬ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಮಾಡಿದ್ದರು. ಹರಿಯಾಣದ ಪ್ರೇಮ್ ನಗರದ ಆರೋಪಿಗಳು, ಶಾರ್ಟ್ ವಿಡಿಯೋ ಮಾಡುತ್ತಾ ತುಂಬಾ ಕ್ಲೋಸ್ ಆಗಿದ್ದರು. ಹೀಗಿದ್ದಾಗಲೇ, ರವೀನಾ ಗಂಡನಿಗೆ ಇದು ಹಿಡಿಸಲೇ ಇಲ್ಲ. ಇದೇ ವಿಚಾರವಾಗಿ, ರವೀನಾ ಗಂಡ ಪ್ರವೀಣ್ ಪ್ರಶ್ನೆ ಮಾಡಿ ಗಲಾಟೆ ಕೂಡ ಮಾಡಿದ್ದನಂತೆ.
ಗಂಡನ ಕೊಲೆ ಮಾಡಿದ್ದು ಹೇಗೆ?
ಇನ್ನು ರವೀನಾ ಫೇಮಸ್ ಆಗುತ್ತಿದ್ದಂತೆ, ಬೇರೆ ಬೇರೆ ರೀಲ್ಸ್ ಸ್ಟಾರ್‌ಗಳನ್ನ ಕೂಡ ಕೂಡಿಸಿ & ಸೋಷಿಯಲ್ ಮೀಡಿಯಾ ಮೂಲಕ ಫೇಮಸ್ ಆಗಲು ಹೋಗಿದ್ದಳು. ಆದರೆ ರವೀನಾ ಮತ್ತು ಸುರೇಶ್ ಚಕ್ಕಂದ ಆಡಲು ಶುರು ಮಾಡಿದ್ದ ವಿಚಾರ ಗಂಡನಿಗೆ ಗೊತ್ತಾಗಿ, ಇಬ್ಬರ ಅಕ್ರಮ ಸಂಬಂಧ ಬಯಲು ಮಾಡಿದ್ದನಂತೆ. ಮಾರ್ಚ್ 25 ರಂದು ಘಟನೆ ನಡೆದ ನಂತರ, ರವೀನಾ ತನ್ನ ಪ್ರಿಯಕರ ಸುರೇಶ್ ಜೊತೆ ಸೇರಿ ಗಂಡನ ಕತ್ತು ಹಿಸುಕಿ ಕೊಲೆಯನ್ನೇ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ತನ್ನ ದುಪ್ಪಟ್ಟಾದಿಂದ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂಬ ಆರೋಪ ಮಾಡಲಾಗಿದೆ. ಪ್ರವೀಣ್ ಹಾಗೂ ರವೀನಾ ದಂಪತಿಗೆ 6 ವರ್ಷದ ಮಗ ಸಹ ಇದ್ದು, ಮಗು ಇದೀಗ ಅನಾಥವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications