Udit Narayan: ಲೈವ್ ಶೋನಲ್ಲೇ ಮಹಿಳಾ ಫ್ಯಾನ್ಸ್‌ಗೆ ಲಿಪ್‌ಲಾಕ್ ಮಾಡಿದ ಖ್ಯಾತ ಗಾಯಕ
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತಮ್ಮ ಗಾಯನದ ಮೂಲಕ ಮೋಡಿ ಮಾಡಿರುವ ಗಾಯಕ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. ಲೈವ್ ಶೋನಲ್ಲೇ ಮಹಿಳಾ ಅಭಿಮಾನಿ ಲಿಪ್‌ಲಾಕ್ ಮಾಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ. ಖ್ಯಾತ ಗಾಯಕ ಉದಿತ್ ನಾರಾಯಣ್ ಅವರ ಈ ನಡೆಯು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.
ಗಾಯಕ ಉದಿತ್ ನಾರಾಯಣ್ ಅವರಿಗೆ ಎಲ್ಲ ಭಾಷೆಗಳಲ್ಲೂ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಅಭಿಮಾನಿಗಳು ಮುಗಿಬೀಳುತ್ತಾರೆ. ಅದರಂತೆ ಉದಿತ್ ನಾರಾಯಣ್ ಅವರು ಲೈವ್ ಶೋನಲ್ಲಿ ಹಾಡುತ್ತಿದ್ದರು. ಈ ವೇಳೆ ವೇದಿಕೆಯ ಮುಂಭಾಗಕ್ಕೆ ಬಂದ ಅವರ ಬಳಿ ಯುವತಿಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಹತ್ತಿರಕ್ಕೆ ಬಂದ ಯುವತಿಯನ್ನು ಗಾಯಕ ಉದಿತ್ ನಾರಾಯಣ್ ಅವರು ಗಟ್ಟಿಯಾಗಿ ಹಿಡಿದು ಆಕೆಯ ತುಟಿಗೆ ಚುಂಬಿಸಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಗಾಯಕನ ನಡೆಗೆ ನೆಟ್ಟಿಗರಿಂದಲೂ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ವಯಸ್ಸಲ್ಲಿ ಇದೆಲ್ಲಾ ಬೇಕಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಎಲ್ಲಿಯದ್ದು, ಲೈವ್ ಶೋ ನಡೆದಿದ್ದು ಎಲ್ಲಿ? ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಗಾಯಕ ಲಿಪ್‌ಲಾಕ್ ಮಾಡಿರುವ ವಿಡಿಯೋ ಸಂಚಲನ ಸೃಷ್ಟಿಸಿದೆ.
ಅಭಿಮಾನದಿಂದ ಸೆಲ್ಫಿ ಕೇಳಿದರೆ ಫೋಟೋ ಅಷ್ಟೇ ಕೊಡಬೇಕಿತ್ತು. ಅಭಿಮಾನದ ಹೆಸರಲ್ಲಿ ಯುವತಿಯ ಖಾಸಗಿತನಕ್ಕೆ ಧಕ್ಕೆ ಮಾಡಿದ್ದಾರೆ ಎಂಬ ಅಭಿಪ್ರಾಯವೂ ಗಾಯಕನ ವಿರುದ್ಧ ವ್ಯಕ್ತವಾಗುತ್ತಿದೆ. ಇನ್ನು ವಿಡಿಯೋದಲ್ಲಿ ಗಾಯಕ ಲಿಪ್‌ಲಾಕ್ ಮಾಡಿದ್ದಕ್ಕೆ ಅಲ್ಲಿದ್ದವರೆಲ್ಲ ಜೋರಾಗಿ ಕೂಗಿ ಸಂಭ್ರಮಿಸಿದ್ದಾರೆ. ಹಾಗಾಗಿ ಗಾಯಕ ಉದಿತ್ ನಾರಾಯಣ್ ಅವರಿಗೆ ಹಲವರು ಕೂಡ ಬೆಂಬಲ ನೀಡಿದ್ದಾರೆ.

ಒಂದು ವೇಳೆ ಆ ಯುವತಿಗೆ ಗಾಯಕ ಲಿಪ್‌ಲಾಕ್ ಮಾಡಿದ್ದು ಇಷ್ಟವಿಲ್ಲದಿದ್ದರೆ, ವಿರೋಧ ಮಾಡುತ್ತಿದ್ದರು. ಅಷ್ಟೆಲ್ಲ ಆದರೂ ಆಕೆಯೇ ಅದನ್ನು ಎಂಜಾಯ್ ಮಾಡಿದ್ದಾರೆ. ಹೀಗಿದ್ದಾಗ ನಿಮಗೇನ್ ಪ್ರಾಬ್ಲಂ? ಎಂದೂ ಕೆಲವರು ಉದಿತ್ ನಾರಾಯಣ್ ಪರ ನಿಂತಿದ್ದಾರೆ. ತಮ್ಮ ಮೇಲಿನ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಗಾಯಕ ಉದಿತ್ ನಾರಾಯಣ್, ನಾನು ಬಾಲಿವುಡ್‌ನಲ್ಲಿ 46 ವರ್ಷಗಳಿಂದ ಇದ್ದೇನೆ. ಅಭಿಮಾನಿಗಳಿಗೆ ಬಲವಂತವಾಗಿ ಚುಂಬಿಸುವ ಇಮೇಜ್ ನನ್ನದಲ್ಲ. ನನ್ನ ಅಭಿಮಾನಿಗಳು ನನ್ನ ಮೇಲೆ ಪ್ರೀತಿ ತೋರಿದಾಗ, ವೇದಿಕೆಯಲ್ಲಿದ್ದಾಗ, ನಾನು ನಮಸ್ಕರಿಸುತ್ತೇನೆ ಎಂದಿದ್ದಾರೆ.
ಅಭಿಮಾನಿಗಳು ತುಂಬಾ ಕ್ರೇಜಿ, ಆದರೆ ನಾವು ಹಾಗಲ್ಲ, ಬಹಳ ಸಭ್ಯರು ಎಂದಿದ್ದಾರೆ. ಕೆಲವರು ಇದನ್ನು ಪ್ರೋತ್ಸಾಹಿಸಿ ತಮ್ಮ ಪ್ರೀತಿಯನ್ನು ಈ ಮೂಲಕ ತೋರಿಸುತ್ತಾರೆ. ಈ ವಿಚಾರವನ್ನು ಹರಡುವುದರಲ್ಲಿ ಅರ್ಥವೇನಿದೆ? ಅಭಿಮಾನಿಗಳು ಶೇಕ್ ಹ್ಯಾಂಡ್‌ಗಾಗಿ ತಮ್ಮ ಕೈಗಳನ್ನು ಚಾಚುತ್ತಾರೆ. ಕೆಲವರು ಕೈಗಳನ್ನು ಚುಂಬಿಸುತ್ತಾರೆ. ಇದೆಲ್ಲ ಹುಚ್ಚುತನ, ನಾವು ಇದರ ಬಗ್ಗೆ ಗಮನ ಹರಿಸಬಾರದು ಎಂದು ಉದಿತ್ ನಾರಾಯಣ್ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ಹರಿದಾಡುತ್ತಿದೆ.












Click it and Unblock the Notifications