Udit Narayan: ಅದು ನನ್ನ ಅಭಿಮಾನಿ ನಡುವಿನ ಪ್ರೀತಿಯಷ್ಟೇ: ಲಿಪ್‌ಲಾಕ್ ಬಗ್ಗೆ ಗಾಯಕ ಸಮರ್ಥನೆ
ಖ್ಯಾತ ಗಾಯಕ ಉದಿತ್ ನಾರಾಯಣ್ ಅವರು ಲೈವ್ ಶೋ ವೇಳೆ ಸೆಲ್ಫಿ ತೆಗೆದುಕೊಳ್ಳಲು ಬಂದ ಮಹಿಳಾ ಅಭಿಮಾನಿಯ ತುಟಿಗೆ ಚುಂಬಿಸಿ ವಿವಾದಕ್ಕೆ ಕಾರಣವಾಗಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿ ಉದಿತ್ ಅವರ ಈ ನಡೆ ಬಗ್ಗೆ ಹಲವು ಟೀಕೆಗಳು ವ್ಯಕ್ತವಾಗಿ ಈಗಲೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉದಿತ್ ನಾರಾಯಣ್ ಅವರು ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ.
ಈ ಸಂಗೀತ ಕಾರ್ಯಕ್ರಮ ನಡೆದು ಬಹಳ ತಿಂಗಳು ಕಳೆದಿದೆ. ಆದರೆ, ಇದಕ್ಕಿದ್ದಂತೆ ಏಕೆ ವೈರಲ್ ಆಯಿತು ಗೊತ್ತಿಲ್ಲ ಎಂದು ಆಶ್ಚರ್ಯಪಟ್ಟಿದ್ದಾರೆ. ಈ ವಿಡಿಯೋ ಬಗ್ಗೆ ನನಗೆ ವುದೇ ಮುಜುಗರ ಅಥವಾ ಅವಮಾನವನ್ನು ಅನುಭವಿಸುವುದಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ನನ್ನ ನಡೆಯು ಶುದ್ಧ ವಾತ್ಸಲ್ಯದಿಂದ ಕೂಡಿದ್ದು, ಯಾವುದೇ ಕೊಳಕು ನಡವಳಿಕೆಯಲ್ಲ. ಈ ವಿವಾದವು ನನ್ನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ.

ನಾನು ನನ್ನ ಕುಟುಂಬಕ್ಕೆ ಅಥವಾ ನನ್ನ ದೇಶಕ್ಕೆ ಅವಮಾನ ಮಾಡುವ ಕೆಲಸ ಎಂದಾದರೂ ಏನಾದರೂ ಮಾಡಿದ್ದೇನೆಯೇ?ಹಾಗಾದರೆ ನಾನು ಎಲ್ಲವನ್ನೂ ಸಾಧಿಸಿರುವಾಗ ನನ್ನ ಜೀವನದ ಈ ಹಂತದಲ್ಲಿ ನಾನು ಏಕೆ ಹಾಗೆಲ್ಲ ಮಾಡುತ್ತೇನೆ? ನನ್ನ ಅಭಿಮಾನಿಗಳು ಮತ್ತು ನನ್ನ ನಡುವೆ ಆಳವಾದ ಶುದ್ಧ ಮತ್ತು ಮುರಿಯಲಾಗದ ಬಾಂಧವ್ಯವಿದೆ. ನೀವು ಹೇಳುತ್ತಿರುವ ವೈರಲ್ ವೀಡಿಯೊದಲ್ಲಿ ನೀವು ನೋಡಿರುವುದು ನನ್ನ ಅಭಿಮಾನಿಗಳು ಮತ್ತು ನನ್ನ ನಡುವಿನ ಪ್ರೀತಿಯ ಅಭಿವ್ಯಕ್ತಿಯಾಗಿದೆ. ಅಭಿಮಾನಿಗಳು ನನ್ನ ಪ್ರೀತಿಸುತ್ತಾರೆ, ನಾನು ಅವರನ್ನ ಮತ್ತೆ ಮತ್ತೆ ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.
ಈ ವಿಡಿಯೋದಿಂದ ನನಗೆ ಮುಜುಗರವೋ ಅಥವಾ ನಾಚಿಕೆಯೋ ಇಲ್ಲವೇ ಇಲ್ಲ, ನಾನೇಕೆ ನಾಚಿಕೆ ಪಡಬೇಕು? ನನ್ನ ಧ್ವನಿಯಲ್ಲಿ ಯಾವುದೇ ವಿಷಾದ ಅಥವಾ ದುಃಖವಿಲ್ಲ. ಇದು ಕೊಳಕು ಅಥವಾ ರಹಸ್ಯವೂ ಅಲ್ಲ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದೆ. ನನ್ನ ಹೃದಯ ಶುದ್ಧವಾಗಿದೆ. ಕೆಲವು ಜನರು ನನ್ನ ಶುದ್ಧ ಪ್ರೀತಿಯ ನಡೆಯಲ್ಲಿ ಏನಾದರೂ ಕೊಳಕು ಕಾಣಲು ಬಯಸಿದರೆ, ನಾನು ಅವರ ಬಗ್ಗೆ ವಿಷಾದಿಸುತ್ತೇನೆ. ನಾನು ಅವರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಈಗ ಅವರು ನನಗಿಂತ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ ಎಂದು ತಮ್ಮ ಮೇಲಿನ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

ನಾನು ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿಗಳು, ರಾಷ್ಟ್ರೀಯ ಪ್ರಶಸ್ತಿಗಳು, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೇನೆ. ಲತಾ ಮಂಗೇಶ್ಕರ್ ಅವರಂತೆ ನನಗೂ ಭಾರತ ರತ್ನ ಸಿಗಬೇಕು ಎಂಬ ಆಸೆ ಇದೆ. ಅವರು ನನ್ನ ಆರಾಧ್ಯ ದೈವ. ನನ್ನ ತಲೆಮಾರಿನ ಗಾಯಕರಲ್ಲಿ ನಾನು ಲತಾ ಜೀ ಅವರ ನೆಚ್ಚಿನ ಸಹ-ಗಾಯಕ. ನನ್ನ ಪೀಳಿಗೆಯ ಗಾಯಕರ ಪೈಕಿ ನಾನು ಅವರೊಂದಿಗೆ ಹಲವು ಹಾಡುಗಳನ್ನ ಹಾಡಿದ್ದೇನೆ. ನನಗೆ ಸರಸ್ವತಿ ಮಾತೆಯ ಆಶೀರ್ವಾದ ಇರುವಾಗ, ಇತರರ ಯಶಸ್ಸನ್ನು ಸಹಿಸದ ಜನರ ಬಗ್ಗೆ ನಾನೇಕೆ ತಲೆಕೆಡಿಸಿಕೊಳ್ಳುತ್ತೇನೆ? ಎಂದೂ ಅವರು ಟಾಂಗ್ ನೀಡಿದ್ದಾರೆ.
ಈ ಸಂಗೀತ ಕಾರ್ಯಕ್ರಮ ನಡೆದು ಹಲವು ತಿಂಗಳು ಕಳೆದಿದೆ. ಆದರೆ ಈಗ ದಿಢೀರನೆ ವಿಡಿಯೋ ಹೇಗೆ ವೈರಲ್ ಆಗಿದೆ ಎಂಬುದು ಅನುಮಾನ ಮೂಡಿಸುತ್ತಿದೆ. ಇದು ಅಮೇರಿಕಾದಲ್ಲೋ ಕೆನಡಾದಲ್ಲೋ ನಡೆದಿದ್ದಿರುವುದು ಈಗ ಏಕೆ ಹೊರಬಂದಿದೆ ತಿಳಿಯುತ್ತಿಲ್ಲ. ನಾನು ಕಿಡಿಗೇಡಿಗಳಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ನೀವು ನನ್ನನ್ನು ಕೆಳಕ್ಕೆ ಎಳೆಯಲು ಪ್ರಯತ್ನಿಸಿದರೆ, ನಾನು ಇನ್ನೂ ಮೇಲಕ್ಕೆ ಹೋಗುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ವಿಡಿಯೋದಲ್ಲಿ ಉದಿತ್ ನಾರಾಯಣ್ ಅವರು ಮಹಿಳಾ ಅಭಿಮಾನಿಗಳ ತುಟಿಗೆ ಚುಂಬಿಸಿದ್ದರು. ಇದಕ್ಕೆ ಮಹಿಳಾ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications