Bhairathi Ranagal: ಪುನೀತ್ ಫೋಟೊ ಹಾಕಿಲ್ಲ ಎಂದು ಅಪ್ಪು ಫ್ಯಾನ್ಸ್ ಸಿಟ್ಟು; ಶಿವರಾಜ್‌ಕುಮಾರ್ ಹೇಳಿದ್ದೇನು?
ಶಿವರಾಜ್‌ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಬಿಡುಗಡೆಯಾಗಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ದೊಡ್ಮನೆ ಅಭಿಮಾನಿಗಳು ಸಿನಿಮಾ ನೋಡಿ ಖುಷಿಯಾಗಿದ್ದು ಸಿನಿಮಾವನ್ನು ಕೊಂಡಾಡುತ್ತಿದ್ದಾರೆ. ಸಿನಿಮಾ ಚನ್ನಾಗಿದ್ದರೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮಾತ್ರ ಶಿವರಾಜ್‌ಕುಮಾರ್ ಮೇಲೆ ಬೇಜಾರು ಮಾಡಿಕೊಂಡಿದ್ದಾರೆ. ಸಿನಿಮಾ ಆರಂಭಕ್ಕೆ ಮುನ್ನ ಪುನೀತ್ ರಾಜ್‌ಕುಮಾರ್ ಫೋಟೊ ಹಾಕಿಲ್ಲ ಎನ್ನುವುದು ಅಪ್ಪು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಭೈರತಿ ರಣಗಲ್ ನೋಡಿದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಬಹಿರಂಗವಾಗಿಯೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಬೇರೆ ಪ್ರೊಡಕ್ಷನ್, ನಟರ ಸಿನಿಮಾಗಳೇ ಪುನೀತ್ ರಾಜ್‌ಕುಮಾರ್ ಅವರ ಫೋಟೊ ಹಾಕಿ ಗೌರವ ಕೊಡುತ್ತಿರುವಾಗ ದೊಡ್ಮನೆ ಕುಟುಂಬದವರೇ ಹೀಗೆ ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದರು.

ಶಿವರಾಜ್‌ಕುಮಾರ್ ಹೇಳಿದ್ದೇನು?
ಖಾಸಗಿ ವಾಹಿನಿಯಲ್ಲಿ ನಟ ಶಿವರಾಜ್‌ಕುಮಾರ್ ಕಾರ್ಯಕ್ರಮ ನಡೆಸುವ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಯೊಬ್ಬರು ಕರೆ ಮಾಡಿದ್ದು, ಪುನೀತ್ ರಾಜ್‌ಕುಮಾರ್ ಫೋಟೊ ಯಾಕೆ ಹಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶಿವರಾಜ್‌ಕುಮಾರ್ ಉತ್ತರ ನೀಡಿದ್ದು, ನಿಮಗಿಂತ ಮೊದಲು ನಾನು ಪುನೀತ್ ರಾಜ್‌ಕುಮಾರ್ ಗೆ ಅಭಿಮಾನಿಯಾದವನು, ಅವರ ಸಿನಿಮಾ ಬಿಡುಗಡೆಯಾದರೆ ಫಸ್ಟ್ ಡೇ ಫಸ್ಟ್ ಶೋ ಹೋಗಿ ನೋಡುತ್ತಿದ್ದೆ. ಪುನೀತ್ ನಮ್ಮ ಜೊತೆ ಇಲ್ಲ ಎಂದು ನಾನು ಅಂದುಕೊಂಡಿಲ್ಲ, ನಮ್ಮ ಜೊತೆಯಲ್ಲೇ ಇದ್ದಾರೆ ಎಂದುಕೊಂಡಿದ್ದೇವೆ ಅದಕ್ಕಾಗಿಯೇ ಫೋಟೊ ಹಾಕಿಲ್ಲ, ಆತ ಇರಬೇಕಾಗಿರುವುದು ಫೋಟೋದಲ್ಲಿ ಅಲ್ಲ ನಮ್ಮ ಮನಸ್ಸಿನಲ್ಲಿ ಎಂದು ಹೇಳಿದ್ದಾರೆ.
ಏನೇ ಆದರೂ ಅಪ್ಪು ಫ್ಯಾನ್ಸ್ ದೊಡ್ಮನೆ ನಟ ಸಿನಿಮಾ ಬಿಡುಗಡೆಯಾದಾಗ ನೋಡಿ ಹಾರೈಸಿದ್ದಾರೆ. ಇದೀಗ ಭೈರತಿ ರಣಗಲ್ ಸಿನಿಮಾ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರು, ಶಿವಣ್ಣ ಅಭಿನಯವನ್ನು ಹಾಡಿ ಹೊಗಳುತ್ತಿದ್ದಾರೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚು ಶೋಗಳು ಹೌಸ್‌ಫುಲ್ ಆಗಿವೆ.
ಶಿವರಾಜ್‌ಕುಮಾರ್ ಮಾಸ್ ಅವತಾರದಲ್ಲಿ ಮಿಂಚಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಮಫ್ತಿ ಸಿನಿಮಾದ ಪ್ರೀಕ್ವೆಲ್ ಇದಾಗಿದ್ದು, ಕನ್ನಡದಲ್ಲಿ ಬಂದಿರುವ ಮೊದಲ ಪ್ರೀಕ್ವೆಲ್ ಸಿನಿಮಾ ಎನ್ನುವ ಹೆಗ್ಗಳಿಕೆ ಕೂಡ ಬೈರತಿ ರಣಗಲ್‌ದ್ದಾಗಿದೆ.
ನಿರ್ದೇಶಕ ನರ್ತನ್ ಅಚ್ಚುಕಟ್ಟಾಗಿ ಸಿನಿಮಾವನ್ನು ತೆರೆ ಮೇಲೆ ತಂದಿದ್ದು, ವಿಮರ್ಶಕರು ಕೂಡ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಶಿವರಾಜ್‌ಕುಮಾರ್ ಅವರೇ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಅದ್ದೂರಿಯಾಗಿ ಸಿನಿಮಾ ಮೂಡಿ ಬಂದಿದ್ದು, ಗಳಿಕೆ ವಿಚಾರದಲ್ಲೂ ದಾಖಲೆ ಬರೆಯುವ ಸಾಧ್ಯತೆ ಇದೆ.












Click it and Unblock the Notifications