Shiva Rajkumar: ಶಿವಣ್ಣ ಅವರ ಆರೋಗ್ಯದ ಬಗ್ಗೆ ಪುತ್ರಿ ನೀಡಿದ್ದಾರೆ ಮಹತ್ವದ ಮಾಹಿತಿ!
ಕನ್ನಡಿಗರ ಪಾಲಿನ ಹ್ಯಾಟ್ರಿಕ್ ಹೀರೋ, ಸೆಂಚ್ಯುರಿ ಸ್ಟಾರ್ & ಸಿನಿಮಾಗಳ ಮೂಲಕ ಶತಕ ಬಾರಿಸಿರುವ ಡಾ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು ಟೆನ್ಷನ್ ಮಾಡಿಕೊಂಡಿದ್ದರು. ಶಿವಣ್ಣ ಶಸ್ತ್ರಚಿಕಿತ್ಸೆ ಕಾರಣಕ್ಕೆ ಅಮೆರಿಕಗೆ ಹೋದ ನಂತರ ಈ ಟೆನ್ಷನ್ ಇನ್ನಷ್ಟು ಜಾಸ್ತಿಯೇ ಆಗಿತ್ತು. ಈಗಾಗಲೇ ಡಾ. ಶಿವರಾಜ್‌ಕುಮಾರ್ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಮಹತ್ವದ ಮಾಹಿತಿ ನೀಡಿದ್ದಾರೆ. ಈ ನಡುವೆ ದಿಢೀರ್ ಶಿವಣ್ಣ ಅವರ ಮಗಳು...
ಡಾ. ಶಿವರಾಜ್‌ಕುಮಾರ್ ತಮ್ಮ ಸಿನಿಮಾಗಳ ಮೂಲಕ ಮಾತ್ರವಲ್ಲ ತಮ್ಮ ಜೀವನದ ಮೂಲಕ ಕೂಡ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಹೀಗಾಗಿಯೇ ನಟ ಶಿವಣ್ಣ ಅಂದ್ರೆ ಕನ್ನಡ ನಾಡಿನ ಜನರಿಗೆ ಸಿಕ್ಕಾಪಟ್ಟೆ ಪ್ರೀತಿ. ಹೀಗಿದ್ದಾಗ ದಿಢೀರ್ ಶಿವಣ್ಣ ಅವರಿಗೆ ಗಂಭೀರ ಕಾಯಿಲೆ ಕಾಡ್ತಾ ಇದೆ ಅನ್ನೋ ಸುದ್ದಿ ಹೊರಬಿದ್ದು, ಸಂಚಲನವೇ ಸೃಷ್ಟಿ ಆಗಿತ್ತು. ಅದರಲ್ಲೂ ಅಮೆರಿಕಗೆ ತೆರಳಿ ನಟ ಶಿವಣ್ಣ ಸರ್ಜರಿ ಕೂಡ ಮಾಡಿಸಿಕೊಳ್ಳುತ್ತಾರೆ ಎಂಬ ಸುದ್ದಿ ಕೂಡ ಭಾರಿ ತಲ್ಲಣ ಎಬ್ಬಿಸಿತ್ತು.

ಶಿವಣ್ಣ ಅವರ ಆರೋಗ್ಯದ ಬಗ್ಗೆ ಪುತ್ರಿ....
ದೇವರ ಕೃಪೆಯಿಂದ ನನ್ನ ತಂದೆಯವರ ಶಸ್ತ್ರ ಚಿಕಿತ್ಸೆಯು ಯಶಸ್ವಿಯಾಗಿ ಸಂಪೂರ್ಣಗೊಂಡು ಈಗ ಅವರ ಆರೋಗ್ಯವು ಸ್ಥಿರವಾಗಿ ಇದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವಾದ, ಮಿಯಾಮಿ ಹೆಲ್ತ್ ಕೇರ್ ನಲ್ಲಿ ಅಸಾಧಾರಣ ಸೇವೆ ಒದಗಿಸಿದ ವೈದ್ಯಕೀಯ ತಂಡ ಮತ್ತು ಡಾ. ಮುರುಗೇಸನ್ ಮನೋಹರನ್ ಅವರ ಅಚಲ ಬೆಂಬಲ ಹಾಗೂ ಕಾಳಜಿಗೆ ನಮ್ಮ ಹೃತ್ತೂರ್ವಕ ಧನ್ಯವಾದ ಎಂದಿದ್ದಾರೆ ನಿವೇದಿತಾ ಶಿವರಾಜ್‌ಕುಮಾರ್ ಅವರು.
ಹಾಗೇ, ಈ ಪ್ರಯಾಣದಲ್ಲಿ ನನ್ನ ತಂದೆ ತೋರಿದ ಸ್ಥೈರ್ಯ ಮತ್ತು ಶಕ್ತಿಗೆ ಅವರೇ ಸಾಟಿ. ಈ ಸವಾಲುಗಳನ್ನ ಎದುರಿಸುವಲ್ಲಿ ಅವರು ತೋರಿದ ಮನೋಬಲ ನಮಗೂ ಆಶಾಭಾವ ಮೂಡಿಸಿ ನಮ್ಮೆಲ್ಲರಿಗು ಧೈರ್ಯ ಒದಗಿಸಿದೆ ಎಂದು ತಿಳಿಸಿದ್ದಾರೆ ಡಾ.ರಾಜ್‌ಕುಮಾರ್ ಅವರ ಮೊಮ್ಮಗಳು & ಶಿವಣ್ಣ ಅವರ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ಅವರು. ಇದೀಗ ಶಿವಣ್ಣ ಆರೋಗ್ಯ ಸ್ಥಿರವಾಗಿರುವ ಕಾರಣಕ್ಕೆ, ಇನ್ನೇನು ಕೆಲವೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬೆಂಗಳೂರಿಗೆ ಬರುವ ನಿರೀಕ್ಷೆ ಇದೆ.
ಕನ್ನಡ ನಾಡಿನ ಜನರ ಪ್ರಾರ್ಥನೆ
ಕರ್ನಾಟಕದ ವಿವಿಧ ಜಿಲ್ಲೆ & ತಾಲೂಕು ಕೇಂದ್ರಗಳು ಸೇರಿ ಹಳ್ಳಿಗಳಲ್ಲಿ ಕೂಡ ಶಿವಣ್ಣ ಅವರು ಆರೋಗ್ಯಕರವಾಗಿ ಬೆಂಗಳೂರಿಗೆ ಮರಳಿ ಬರಲಿ ಅಂತಾ ಅಭಿಮಾನಿಗಳು ಪ್ರಾರ್ಥನೆ ಮಾಡಿ ಪೂಜೆ ಸಲ್ಲಿಸಿದ್ದರು. ಹಾಗೇ, ಪೂಜೆ & ಹೋಮ ಕೂಡ ನಡೆಸಿದ್ದರು. ಇದೀಗ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆಯು ಫಲಿಸಿದ್ದು, ಶಿವಣ್ಣ ಆರೋಗ್ಯವಾಗಿದ್ದು ಚೇತರಿಕೆಯೂ ಕಂಡು ಬರುತ್ತಿದೆ ಹೀಗಾಗಿ ಶೀಘ್ರದಲ್ಲೇ ಅವರು ಬೆಂಗಳೂರಿಗೆ ಮರಳುವ ನಿರೀಕ್ಷೆ ಇದೆ.












Click it and Unblock the Notifications