ಸಿಹಿ ಸುದ್ದಿ ಕೊಟ್ಟ ಶಿಶಿರ್..ಐಶ್ವರ್ಯ: ಜೊತೆಯಾಗಿ ಹೊಸ ಹೆಜ್ಜೆಯಿಟ್ಟ ಬಿಗ್ ಬಾಸ್ ಜೋಡಿ
ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿಗಳಾದ ನಟ ಶಿಶಿರ್ ಶಾಸ್ತ್ರಿ, ನಟಿ ಐಶ್ವರ್ಯ ಸಿಂಧೋಗಿ ಹಾಗೂ ಪಾರು ಖ್ಯಾತಿಯ ಮೋಕ್ಷಿತಾ ಪೈ ಸ್ನೇಹ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಮತ್ತಷ್ಟು ಗಟ್ಟಿಯಾಗಿದೆ. ಬಿಗ್ ಬಾಸ್ ಮನೆಯೊಳಗಿದ್ದಾಗಲೂ ಈ ಮೂವರು ಉತ್ತಮ ಸ್ನೇಹಿತರಾಗಿದ್ದು, ಒಬ್ಬರ ಪರವಾಗಿ ಒಬ್ಬರು ಸದಾ ನಿಲ್ಲುತ್ತಿದ್ದರು. ಮನೆಯಿಂದ ಹೊರ ಬಂದ ಬಳಿಕ ಈ ಸ್ನೇಹ ಇನ್ನಷ್ಟು ಬಲವಾಗಿದ್ದು, ಈ ಮೂವರೇ ಎಲ್ಲಾ ಕಡೆಗಳಲ್ಲಿಯೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಮೂವರ ಪೈಕಿ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯ ಸಿಂಧೋಗಿ ಇದೀಗ ಜೊತೆಯಾಗಿ ಹೊಸ ಹೆಜ್ಜೆಯಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಪ್ರೇಕ್ಷಕರ ಗಮನ ಸೆಳೆದಿದ್ದ ಈ ಜೋಡಿ ಬಿಗ್ ಬಾಸ್ ಮುಗಿದ ಬಳಿಕವೂ ಜೊತೆಯಾಗಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್‌ವೊಂದನ್ನು ನೀಡಿದ್ದಾರೆ.

ಹೌದು, ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯ ಸಿಂಧೋಗಿ ಈಗ ಬ್ಯುಸಿನೆಸ್ ಪಾರ್ಟ್ನರ್ ಆಗಿದ್ದು, ನಿನ್ನೆ ಅಂದರೆ ರಾಮನವಮಿಯ ದಿನ ತಮ್ಮ ಹೊಸ ಬ್ಯುಸಿನೆಸ್ ಆರಂಭಿಸಿದ್ದಾರೆ. ಈ ಬಗ್ಗೆ ಸ್ವತಃ ಶಿಶಿರ್ ಹಾಗೂ ಐಶ್ವರ್ಯ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
'ಈ ಹಿಂದೆ ದೊಡ್ಡ ಘೋಷಣೆ ಮಾಡುತ್ತೇವೆ ಎಂದಿದ್ದೆವು. ಇದೀಗ ಅದರ ಬಗ್ಗೆ ಮಾತನಾಡಲು ಬಂದಿದ್ದೇವೆ. ಈ ಹಿಂದೆ ಒಂದು ಸಂದರ್ಶನದಲ್ಲಿ ನೀವಿಬ್ಬರು ಪಾರ್ಟ್ನರ್ ಆಗುತ್ತೀರಾ ಅಂತಾ ಕೇಳಿದಾಗ ನಾವಿಬ್ಬರು ಬ್ಯುಸಿನೆಸ್ ಪಾರ್ಟ್ನರ್ ಆಗುತ್ತೇವೆ ಅಂತಾ ಹೇಳಿದ್ದೇವೆ. ರಾಮನವಮಿಯ ಈ ವಿಶೇಷ ದಿನದಂದು ನಮ್ಮ ಮುಂದಿನ ಹೆಜ್ಜೆಯ ಬಗ್ಗೆ ಹಂಚಿಕೊಳ್ಳಬೇಕು ಎಂದುಕೊಂಡಿದ್ದೇವೆ. ಅದೆನಪ್ಪಾ ಅಂದರೆ ನಾವಿಬ್ಬರು ಜೊತೆಯಾಗಿ ಒಂದು ಪ್ರೊಡಕ್ಷನ್ಸ್ ಹೌಸ್‌ನ ಶುರು ಮಾಡುತ್ತಿದ್ದೇವೆ. ಅದರ ಹೆಸರು ಹರ ಸ್ಟುಡಿಯೋಸ್'.

'ಹರ ಸ್ಟುಡಿಯೋಸ್‌ಯಿಂದ ಏನೇನು ಆಗುತ್ತದೆ ಅಂದರೆ ಬ್ರಾಂಡ್ ಶೂಟ್ ಆಗುತ್ತದೆ. ಕಂಟೆಂಟ್ ಶೂಟ್, ಪ್ರೀ-ವೆಡ್ಡಿಂಗ್ ಶೂಟ್, ಜೊತೆಗೆ ಜಾಹಿರಾತುಗಳು. ಹೀಗೆ ಎಲ್ಲಾ ರೀತಿಯ ಶೂಟ್‌ಗಳನ್ನು ಹರ ಸ್ಟುಡಿಯೋಸ್ ಕಡೆಯಿಂದ ಮಾಡುತ್ತೇವೆ. ಅಲ್ಲದೇ ಹರ ಸ್ಟುಡಿಯೋಸ್‌ನಲ್ಲಿ ಮೇಕಪ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್, ಕೊರಿಯೋಗ್ರಾಫರ್, ಬರಹಗಾರರು, ನಿರ್ದೇಶಕರು ಎಲ್ಲರೂ ಒಂದೇ ಕಡೆಯಲ್ಲಿ ಸಿಗುತ್ತಾರೆ' ಎಂದು ಶಿಶಿರ್ ಹಾಗೂ ಐಶ್ವರ್ಯ ತಮ್ಮ ಹೊಸ ಹೆಜ್ಜೆ ಹರ ಸ್ಟುಡಿಯೋಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಜೋಡಿಯಾಗಿ ಹೊಸ ವ್ಯವಹಾರ ಆರಂಭಿಸಿದ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯ ಸಿಂಧೋಗಿಗೆ ಅಭಿಮಾನಿಗಳು ಸೇರಿದಂತೆ ನಟ-ನಟಿಯರು ಕೂಡ ಶುಭಾಶಯ ಕೋರಿದ್ದು, ಈ ಪಯಣದಲ್ಲಿ ಯಶಸ್ಸು ನಿಮ್ಮದಾಗಲಿ ಎಂದು ಹಾರೈಸಿದ್ದಾರೆ.












Click it and Unblock the Notifications