ಅಂದು ‘ಕೆಜಿಎಫ್’ ಇಂದು ‘ಸಲಾರ್’! ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಸಿನಿಮಾಗೆ ಹಿನ್ನಡೆ?

ದಕ್ಷಿಣ ಭಾರತದ ಸಿನಿಮಾಗಳು ಮತ್ತೆ ಜಗತ್ತಿನಾದ್ಯಂತ ಮಿಂಚುತ್ತಿವೆ. ಬಾಹುಬಲಿ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಅವರ ಕಾಂಬಿನೇಷನ್ ವರ್ಕೌಟ್ ಆಗಿದೆ. 'ಸಲಾರ್' ಅಬ್ಬರಿಸಿದೆ ಹಾಗೂ 'ಕೆಜಿಎಫ್' ನಿರ್ಮಿಸಿದ್ದ ಇತಿಹಾಸವನ್ನು ಮತ್ತೆ ಮತ್ತೆ ನೆನಪು ಮಾಡಿದೆ. ಹೀಗಿದ್ದಾಗ ನಟ ಶಾರುಖ್ ಅವರಿಗೆ 'ಕೆಜಿಎಫ್' ಸಿನಿಮಾ ಎದುರು ಸಿಕ್ಕ ಆಘಾತ ಈಗ ಪ್ರಭಾಸ್‌ರ ಸಲಾರ್ ಸಿನಿಮಾ ಎದುರು ಕೂಡ ಸಿಕ್ಕಿದೆಯಾ? ಎಂಬ ಪ್ರಶ್ನೆ ಕೂಡ ಮೂಡಿದೆ.

ಹೌದು, ಡಾರ್ಲಿಂಗ್ ಪ್ರಭಾಸ್ ಅಭಿನಯಿಸಿರುವ 'ಸಲಾರ್' ಸಿನಿಮಾ ಮೊದಲ ದಿನವೇ 175 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಅಲ್ಲದೆ 3 ದಿನದಲ್ಲಿ ಬರೋಬ್ಬರಿ 400 ಕೋಟಿಗೂ ಹೆಚ್ಚು ವಸೂಲಿ ಮಾಡಿದೆ. ಆದರೆ ಇದೇ ಸಮಯದಲ್ಲಿ, ನಟ ಶಾರುಖ್ ಅವರಿಗೆ ಆಘಾತ ಎದುರಾಗಿದೆ ಎನ್ನಲಾಗಿದೆ. ಈ ಹಿಂದೆ 2018ರಲ್ಲಿ ಕೆಜಿಎಫ್-1 ರಿಲೀಸ್ ಆಗಿದ್ದಾಗ ಶಾರುಖ್ ಅವರ 'ಝೀರೋ' ಸಿನಿಮಾ ರಿಲೀಸ್ ಆಗಿತ್ತು. ಆದರೆ ಕೆಜಿಎಫ್ ಎದುರು ಶಾರುಖ್ ಖಾನ್ ಅವರ ಝೀರೋ ಚಿತ್ರ ಸೋತಿತ್ತು. ಇದೀಗ 'ಡಂಕಿ' ಸಿನಿಮಾಗೆ ಕೂಡ ಇದೇ ರೀತಿ ಹಿನ್ನಡೆ ಆಗಿದೆ ಎನ್ನಲಾಗುತ್ತಿದೆ. ಹಾಗಾದರೆ ಈ ಮಾತು ನಿಜಾನಾ? ಹಾಗಾದರೆ ಡಂಕಿ ಇದುವರೆಗೂ ಗಳಿಸಿದ ಹಣ ಎಷ್ಟು ನೂರು ಕೋಟಿ?

Shah Rukh Khan Movie Dunki Collected More Than 200 Crore In Box Office

ಶಾರುಖ್ ಸಿನಿಮಾಗೆ ಎಷ್ಟು ಕೋಟಿ?

ಶಾರುಖ್ ಖಾನ್‌ರ 'ಡಂಕಿ' ಚಿತ್ರವನ್ನ 120 ಕೋಟಿ ರೂ. ಬಂಡವಾಳ ಹಾಕಿ ನಿರ್ಮಿಸಲಾಗಿದೆ. ಜಗತ್ತಿನಾದ್ಯಂತ ಈ ಚಿತ್ರ ರಿಲೀಸ್ ಮಾಡಿ ಭಾರಿ ದೊಡ್ಡ ಮೊತ್ತದ ಹಣ ಗಳಿಸುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಗಳು ಮೊದಲ 2 ದಿನಗಳ ಕಾಲ ಹುಸಿಯಾದವು. ಮೊದಲ ದಿನವೇ, 30 ಕೋಟಿ ರೂಪಾಯಿಗೆ ತೃಪ್ತಿ ಪಟ್ಟುಕೊಂಡಿತ್ತು 'ಡಂಕಿ' ಸಿನಿಮಾ. 2ನೇ ದಿನ ಭಾರಿ ಇಳಿಕೆ ಕಂಡು ಕೇವಲ 20 ಕೋಟಿ ರೂಪಾಯಿ ಗಳಿಸಿತ್ತು ಎನ್ನಲಾಗಿತ್ತು. ಹಾಗಾದ್ರೆ ಶನಿವಾರ ಹಾಗೂ ಭಾನುವಾರ ಏನ್ ಆಯ್ತು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಫಿನಿಕ್ಸ್ ರೀತಿ ಎದ್ದು ಬಂದ ಶಾರುಖ್!

ಬಾಲಿವುಡ್ ಸಿನಿಮಾಗಳು, ದಕ್ಷಿಣ ಭಾರತದ ಸಿನಿಮಾಗಳ ಎದುರು ಡಮ್ಮಿ ಅನ್ನೋ ಆರೋಪ ಮೊದಲಿನಿಂದ ಇದೆ. ಈ ಆರೋಪಕ್ಕೆ ಸಾಕ್ಷಿ ಎನ್ನುವಂತೆ ಸಾಲು ಸಾಲು ಹಿಂದಿ ಸಿನಿಮಾಗಳು ಸೌತ್ ಸಿನಿಮಾಗಳ ಎದುರು ಸೋತಿವೆ. ಇದೀಗ ಅದೇ ಟ್ರೆಂಡ್ 'ಸಲಾರ್' & 'ಡಂಕಿ' ಸಿನಿಮಾ ನಡುವೆಯೂ ಮುಂದುವರಿದಂತೆ ಕಾಣುತ್ತಿದೆ ಎನ್ನಲಾಗಿತ್ತು. ಮೊದಲ 2 ದಿನ ಡಂಕಿ ಚಿತ್ರವು ಇದೇ ರೀತಿ ಹಿನ್ನಡೆ ಅನುಭವಿಸಿತ್ತು. ಆದ್ರೆ 3 & 4ನೇ ದಿನದಿಂದ ಶಾರುಖ್ ಅವರ ಸಿನಿಮಾ ತೊಡೆತಟ್ಟಿ ಎದ್ದು ನಿಂತಿದ್ದು, ಒಟ್ಟಾರೆ 200 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

Shah Rukh Khan Movie Dunki Collected More Than 200 Crore In Box Office

'ಸೂಪರ್' ಅಂತಿದ್ದಾರೆ ಅಭಿಮಾನಿಗಳು

ಶಾರುಖ್ ಖಾನ್ & ರಾಜ್‌ ಕುಮಾರ್ ಹಿರಾನಿ ಈ ಕ್ರೇಜಿ ಕಾಂಬಿನೇಷನ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಡಂಕಿ'. ಶಾರುಖ್ ಖಾನ್ ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್ ಮೇಲೆ ಹೊಸ ಹೊಸ ದಾಖಲೆ ಸೃಷ್ಟಿಸೋಕೆ ಎಂಟ್ರಿ ಕೊಟ್ಟಿದ್ದಾರೆ. '3 ಇಡಿಯಟ್ಸ್', 'ಲಗೆ ರಹೋ ಮುನ್ನಾಭಾಯಿ' ಮತ್ತು 'ಪಿಕೆ' ಸೇರಿದಂತೆ 'ಸಂಜು' & 'ಮುನ್ನಾಭಾಯಿ ಎಂಬಿಬಿಎಸ್' ರೀತಿ ಅತ್ಯುತ್ತಮ ಸಿನಿಮಾ ನೀಡಿದ್ದ ರಾಜ್‌ಕುಮಾರ್ ಹಿರಾನಿ ಇದೇ ಮೊದಲ ಬಾರಿ, ಶಾರುಖ್ ಖಾನ್ ಜೊತೆ ಸೇರಿ 'ಡಂಕಿ' ಸಿನಿಮಾ ನಿರ್ದೇಶನ ಮಾಡಿದ್ದಾರೆ. ಫ್ಯಾನ್ಸ್ ಈ ಸಿನಿಮಾಗೆ ಫಿದಾ ಆಗಿದ್ದು ಬಾಲಿವುಡ್ ಬಾದ್ ಷಾಗೆ ಜೈ ಅಂತಿದ್ದಾರೆ.

ಹೇಗಿದೆ ಶಾರುಖ್ ಖಾನ್ ಸಿನಿಮಾ?

ಬಾಲಿವುಡ್ ಬಾದ್ ಷಾ ಬಿರುದು ಪಡೆದಿರುವ ಶಾರುಖ್ ಖಾನ್ ಈ ವರ್ಷವೇ ಎರಡೆರಡು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದಾರೆ. ಹೀಗೆ 2023ರಲ್ಲಿ ಶಾರುಖ್ ಸಾಧನೆ ಕಂಡು ಅವರ ಫ್ಯಾನ್ಸ್ ಖುಷ್ ಆಗಿದ್ದಾರೆ. 'ಜವಾನ್​' & 'ಪಠಾಣ್' ಸಿನಿಮಾ ಮೂಲಕ ಅಪ್ಪಟ ಮಾಸ್​ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದ ಶಾರುಖ್ ಖಾನ್, ಕೇವಲ ಒಂದೇ ರೀತಿಯ ಸಿನಿಮಾಗೆ ಅಂಟಿಕೊಂಡಿಲ್ಲ. ಇದರ ಭಾಗವಾಗಿ ಡಿಫರೆಂಟ್ ಚಿತ್ರ ಆಯ್ಕೆ ಮಾಡಿಕೊಂಡಿದ್ದಾರೆ. 'ಡಂಕಿ' ಸಿನಿಮಾ ಮೂಲಕ ಈ ಮಾತು ಸಾಬೀತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+