Seetha Raama: ಕಣ್ಣೀರಿಡುತ್ತಾ ಸೀರಿಯಲ್‌ಗೆ ವಿದಾಯ ಹೇಳಿದ 'ಸೀತಾ ರಾಮ' ಟೀಂ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ವಿದಾಯ ಹೇಳುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಆಘಾತ, ಕಣ್ಣೀರು ತರಿಸಿದೆ. ಇತ್ತೀಚೆಗಷ್ಟೇ ಈ ಸೀರಿಯಲ್‌ ಮುಗಿಯುವ ವಿಚಾರ ಬಹಿರಂಗಗೊಂಡಿತ್ತು. ಆದರೆ ಸಾಕಷ್ಟು ಜನಪ್ರಿಯತೆ ಪಡೆದ ಈ ಸೀರಿಯಲ್‌ ದಿಢೀರ್‌ ಗುಡ್‌ಬೈ ಹೇಳುತ್ತಿರುವುದಂತೂ ಹಲವರಿಗೆ ಬೇಸರ ತಂದಿದ್ದುಂಟು. ಇನ್ನು ಕೊನೆಯ ಎಪಿಸೋಡ್‌ನ ಶೂಟಿಂಗ್‌ ದಿನ ಇಡೀ ಸೀತಾರಾಮ ಧಾರಾವಾಹಿಯ ಕಲಾವಿದರು ಕಣ್ಣೀರು ಸುರಿಸಿದ್ದಾರೆ. ತಂಡದ ಜೊತೆಗಿನ ಭಾವನಾತ್ಮಕ ನಂಟನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ.

ಈ ಸೀರಿಯಲ್‌ನ ನಾಯಕ ಗಗನ್‌ ಚಿನ್ನಪ್ಪ ಕೂಡ ಬಿಕ್ಕಳಿಸಿ ಅತ್ತಿದ್ದಾರೆ. ಈ ಕೊನೇ ಎಪಿಸೋಡ್‌ನ ಪ್ರೋಮೋವನ್ನು ಜೀ ವಾಹಿನಿ ಹಂಚಿಕೊಂಡಿದೆ. ನವಿರಾದ ಕಥೆಗೆ ಸಿಹಿಯಾದ ವಿದಾಯ, ಮತ್ತೆ ಭೇಟಿಯಾಗೋಣ ಹೊಸ‌ ರೂಪದಲ್ಲಿ ಎಂದು ಹೇಳಿದೆ. ಈ ಇನ್ನು ಸೀರಿಯಲ್‌ ಬಗ್ಗೆ ಮಾತನಾಡಿರುವ ಕಲಾವಿದರು, ಈ ತಂಡದೊಂದಿಗೆ ತುಂಬಾನೇ ಕನೆಕ್ಟ್‌ ಆಗಿದ್ವಿ, ಇದರಲ್ಲಿ ಪಾತ್ರ ನಿರ್ವಹಿಸಿದ್ದಕ್ಕೆ ತುಂಬಾ ಸಂತೋಷವಿದೆ ಎಂದು ಅನುಭವಗಳನ್ನು ತೆರೆದಿಟ್ಟಿದ್ದಾರೆ.

Seetha Rama Kannada Serial Wraps Up Emotional Final Shoot

ಸೀರಿಯಲ್‌ ಶೂಟಿಂಗ್‌ ವೇಳೆ ಪ್ರತಿದಿನವೂ ನಾವು ಎಂಜಾಯ್‌ ಮಾಡುತ್ತಾ ಭಾಗಿಯಾಗುತ್ತಿದ್ವಿ. ಪ್ರತಿದಿನವೂ ಈ ಸೀರಿಯಲ್‌ನಲ್ಲಿ ಏನೋ ಒಂದು ಹೊಸದು ಇರ್ತಿತ್ತು, ಯಾವ ಧಾರಾವಾಹಿ ಕೊಡದ ಜನಪ್ರಿಯತೆಯನ್ನು ಇದು ಕೊಟ್ಟಿದೆ. ಎಂದಿದ್ದಾರೆ. ಇನ್ನು ವೈಷ್ಣವಿ ಗೌಡ ಕೂಡ ಸೀರಿಯಲ್‌ ಮುಗಿಯುತ್ತಿರುವ ಬಗ್ಗೆ ಬೇಸರ ಹೊರಹಾಕಿದ್ದಾರೆ. ನಾನು ಮೊದಲ ಬಾರಿಗೆ ತಾಯಿ ಪಾತ್ರ ಮಾಡಿದೆ ಎಂದು ಹೇಳಿದ್ದಾರೆ. ಸೀತೆ ಮತ್ತು ರಾಮನ ಗುಣಗಳನ್ನು ಹೋಲುವಂತಹ ಇಂದಿನ ಸಮಾಜಕ್ಕೆ ಬೇಕಾದ ಪಾತ್ರಗಳನ್ನು ಸೃಷ್ಟಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಬಹುತೇಕ ಕಲಾವಿದರು ಮುಖ್ಯಮಂತ್ರಿ ಅವರೊಂದಿಗೆ ನಟಿಸಿದ್ದೇ ನಮ್ಮ ಅದೃಷ್ಟ ಎಂದು ಹೇಳಿಕೊಂಡಿದ್ದಾರೆ. ಈ ಸೀರಿಯಲ್‌ನ ಅಟ್ರಾಕ್ಷನ್‌ ಪುಟಾಣಿ ರೀತುಗೆ ಕೂಡ ದೊಡ್ಡ ಮಟ್ಟದ ಸ್ಟಾರ್ ಪಟ್ಟ ಸಿಕ್ಕಿದ್ದು, ಈಗ ಸೀರಿಯಲ್‌ ಮುಗಿಯುತ್ತಿರುವುದಕ್ಕೆ ಬಿಕ್ಕಳಿಸಿ ಅತ್ತಿದ್ದಾಳೆ. ಸೀತಾರಾಮ ಸೀರಿಯಲ್ ಕೊನೆಯ ದಿನದ ಶೂಟಿಂಗ್ನಲ್ಲಿ ಇಡೀ ತಂಡ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದೆ. 2023ರ ಜುಲೈ ತಿಂಗಳಲ್ಲಿ ಸೀತಾ ರಾಮ ಧಾರಾವಾಹಿ ತೆರೆಗೆ ಬಂದಿತ್ತು. ಆದರೆ ಇನ್ನೂ ಎರಡು ವರ್ಷವೂ ಪೂರೈಸದೆ ವಿದಾಯ ಹೇಳುತ್ತಿರುವುದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಮೊದಲು ಟೈಟಲ್ ಹಾಗೂ ಟೀಸರ್ ಮೂಲಕವೇ ಕುತೂಹಲ ಹೆಚ್ಚಿಸಿದ್ದ ಈ ಸೀರಿಯಲ್‌ ಇತ್ತೀಚೆಗಷ್ಟೇ ತನ್ನ ಕೊನೆಯ ಎಪಿಸೋಡ್‌ನ ಶೂಟಿಂಗ್‌ ಮುಗಿಸಿದೆ.

ಕೊನೆಯ ದಿನದ ಶೂಟಿಂಗ್ನಲ್ಲಿ ನಟ ಗಗನ್‌ ಚಿನ್ನಪ್ಪ, ನಟಿ ವೈಷ್ಣವಿ ಗೌಡ, ಪದ್ಮಕಲಾ, ಪೂಜಾ ಲೋಕೇಶ್‌, ಜಯದೇವ್‌ ಮೋಹನ್‌, ಅಶೋಕ್‌ ಶರ್ಮಾ, ರೀತು ಸಿಂಗ್‌, ಕಲಾಗಂಗೋತ್ರಿ ಮಂಜು, ಮುಖ್ಯಮಂತ್ರಿ ಚಂದ್ರು, ಸಿಂಧು ರಾವ್‌, ಪೂರ್ಣಚಂದ್ರ ಸೇರಿದಂತೆ ಬಹುತೇಕ ಕಲಾವಿದರು ಭಾಗಿಯಾಗಿದ್ದಾರೆ. ಕೇಕ್‌ ಕತ್ತರಿಸಿ ಸಂಭ್ರಮದಿಂದಲೇ ಕೊನೆಗೆ ವಿದಾಯ ಹೇಳಿರುವ ಕಲಾವಿದರು, ಕ್ಯಾಮೆರಾ ಮುಂದೆ ಕಣ್ಣೀರು ತಡೆಯಲಾರದೆ ನೋವು ಹೊರಹಾಕಿದ್ದಾರೆ. ವೀಕ್ಷಕರು ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಾಧ್ಯವಾದ್ರೆ ಇದೇ ತಂಡವು ಮತ್ತೊಂದು ಸೀರಿಯಲ್‌ ಮಾಡಲಿ ಎಂಬ ಬಯಕೆ ಬಿಚ್ಚಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+