Saregamapa Finale: 6 ಫೈನಲಿಸ್ಟ್‌ಗಳಲ್ಲಿ ಯಾರ ಕೈಸೇರಲಿದೆ ಸರಿಗಮಪ ಟ್ರೋಫಿ?
ಕನ್ನಡದ ಜನಪ್ರಿಯ ಸಂಗೀತ ಕಾರ್ಯಕ್ರಮ ಸರಿಗಮಪ ಸೀಸನ್-21ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಆರು ಮಂದಿ ಟಫ್ ಸ್ಪರ್ಧಿಗಳು ಫಿನಾಲೆ ಅಂಗಳದಲ್ಲಿದ್ದಾರೆ. ಇನ್ನು ಅಂತಿಮ ಸುತ್ತಿನಲ್ಲಿ ಯಾರು ಈ ಬಾರಿ ಸರಿಗಮಪ ಕಪ್ ಗೆಲ್ತಾರೆ? ಎನ್ನುವ ಕುತೂಹಲ ಹೆಚ್ಚಾಗಿದೆ. ಸಂಗೀತಪ್ರಿಯರ ಒಲವು ಯಾವ ಸ್ಪರ್ಧಿಯ ಮೇಲಿದೆ ಎಂದು ಈ ವಾರವೇ ಗೊತ್ತಾಗಲಿದೆ. ಫೈನಲ್ ತಲುಪಿರುವ ಆ ಆರು ಮಂದಿ ಸ್ಪರ್ಧಿಗಳು ಯಾರು? ಫಿನಾಲೆ ನಡೆಯುವುದು ಯಾವಾಗ? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ..
ಸರಿಗಮಪ ಫಿನಾಲೆಗೆ ವೇದಿಕೆ ಸಜ್ಜಾಗಿದ್ದು, ಆರು ಸ್ಪರ್ಧಿಗಳು ಫಿನಾಲೆ ಹಂತ ತಲುಪಿದ್ದಾರೆ. ಬೀದರ್‌ನ ಶಿವಾನಿ, ಮೈಸೂರಿನ ರಶ್ಮಿ ಡಿ, ಹಾವೇರಿಯ ಬಾಳು ಬೆಳಗುಂದಿ, ಉಡುಪಿಯ ಆರಾಧ್ಯ ರಾವ್, ದ್ಯಾಮೇಶ್ ಹಾಗೂ ಬೆಳಗಾವಿಯ ಅಮೋಘ ವರ್ಷ ಫಿನಾಲೆಯಲ್ಲಿ ಇರೋ ಸ್ಪರ್ಧಿಗಳು. ಜೂನ್ 7ರಂದು ಶನಿವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಫಿನಾಲೆ ಎಪಿಸೋಡ್ ಪ್ರಸಾರವಾಗಲಿದೆ.

ಫಿನಾಲೆಯಲ್ಲಿ ಲಹರಿ ಇರಬೇಕಿತ್ತು!
ಈಗಾಗಲೇ ಫೈನಲಿಸ್ಟ್‌ಗಳ ಆಯ್ಕೆ ಮುಗಿದಿದೆ. ಆರು ಮಂದಿ ಫಿನಾಲೆ ಅಂಗಳದಲ್ಲಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಬ್ಬ ಸ್ಪರ್ಧಿ ಬಗ್ಗೆ ಬೇಸರದ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಈ ಸ್ಪರ್ಧಿ ಕೂಡ ಫೈನಲ್ ಅಂಗಳದಲ್ಲಿರಬೇಕಿತ್ತು ಎಂದು ಹೇಳುತ್ತಿದ್ದಾರೆ. ಆ ಸ್ಪರ್ಧಿ ಬೇರೆ ಯಾರೂ ಅಲ್ಲ, ಲಹರಿ ಮಹೇಶ್. ಹೌದು ಲಹರಿಯನ್ನು ಫೈನಲ್‌ಗೆ ಯಾಕೆ ಆಯ್ಕೆ ಮಾಡಲಿಲ್ಲ? ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಲಹರಿ ಅತ್ಯುತ್ತಮ ಪ್ರತಿಭೆ, ಕನ್ನಡಕ್ಕೆ ಭವಿಷ್ಯದ ಶ್ರೇಯಾ ಘೋಷಲ್ ಎಂದು ಕರೆಯುತ್ತಿದ್ದಾರೆ. ಈ ಸೀಸನ್‌ನಲ್ಲಿ ಲಹರಿ ಗಾಯನಕ್ಕೆ ಮನಸೋಲದವರಿಲ್ಲ, ಆದರೂ ಆಕೆಯನ್ನ ಫಿನಾಲೆಯಿಂದ ಕೈಬಿಟ್ಟಿದ್ದೇಕೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಲಹರಿ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಇಷ್ಟು ದಿನ ಸಪೋರ್ಟ್ ಮಾಡಿದ್ದ ಸಂಗೀತ ಪ್ರಿಯರಿಗೆ ಧನ್ಯವಾದ ಎಂದಿದ್ದಾರೆ. ನಾನು ಸೆಮಿಫೈನಲ್‌ವರೆಗೆ ಬಂದು ಫೈನಲ್‌ನಿಂದ ಹೊರಗುಳಿದಿದ್ದೇನೆ. ನಾನು ಇಲ್ಲಿವರೆಗೆ ಬರಲು ಕಾರಣವಾದ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹಕ್ಕೆ ಚಿರಋಣಿ. ಫೈನಲ್‌ನಲ್ಲಿ ನನ್ನ ನೋಡಬೇಕು ಎನ್ನುವ ನಿಮ್ಮ ಆಸೆ ಹುಸಿ ಮಾಡಿದ್ದಕ್ಕೆ ಕ್ಷಮೆ ಇರಲಿ. ಇನ್ನು ಮುಂದೆಯೂ ನನ್ನ ಸಂಗೀತದ ಪಯಣದಲ್ಲಿ ನನ್ನೊಂದಿಗೆ ಇರಿ ಎಂದು ಲಹರಿ ಕೇಳಿಕೊಂಡಿದ್ದಾರೆ.
ನೀವು ಹುಸಿಗೊಳಿಸಿದ್ದಲ್ಲ, ಲಹರಿ ನಿಮ್ಮಂತಹ ಸ್ಪರ್ಧಿಗಳಿಗೆ ಒಳ್ಳೆಯ ಅವಕಾಶ ಸಿಗಲಿಲ್ಲ, ಸಂಗೀತ ಶಾರದೆ ಆಶೀರ್ವಾದದ ಜೊತೆಗೆ ನಿಮ್ಮ ಅಭಿಮಾನಿಗಳು ಸದಾ ನಿಮ್ಮ ಜೊತೆಗಿರುತ್ತಾರೆ. ಬದುಕಿನ ಸ್ಪರ್ಧೆಯಲ್ಲಿ ಗೆದ್ದೇ ಗೆಲ್ಲುತ್ತೀರಿ ಆಶಾವಾದಿಯಾಗಿರಿ ಎಂದು ಹಲವರು ಲಹರಿಗೆ ಧೈರ್ಯ ತುಂಬಿದ್ದಾರೆ. ಈ ಹಿಂದೆ ಸಂಜಿತ್ ಹೆಗ್ಡೆ ಗೊತ್ತಲ್ವಾ? ಅವರ ತರಾನೇ ಬೆಳೆಯುತ್ತೀರಿ ಎಂದು ಹೇಳಿದ್ದಾರೆ.












Click it and Unblock the Notifications