Sanvi Sudeep: ಅಜ್ಜಿ ಅಂತ್ಯಕ್ರಿಯೆ ವೇಳೆ ನಡೆದ ಕೆಲ ಘಟನೆಗಳ ಬಗ್ಗೆ ಸಾನ್ವಿ ಸುದೀಪ್ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 21: ನಟ ಸುದೀಪ್ ತಾಯಿ ಸರೋಜಾ ಸಂಜೀವ್ ಅವರು ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ಅವರ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾದರು. ಕುಟುಂಬ ಸದಸ್ಯರು ಶೋಕ ಸಾಗರದಲ್ಲಿ ಮುಳುಗಿದ್ದು, ಭಾನುವಾರ ಸುದೀಪ್ ತಾಯಿಯ ಅಂತಿಮ ವಿಧಿ ವಿಧಾನಗಳನ್ನು ಸುದೀಪ್ ನೆರವೇರಿಸಿದ್ದರು.
ಪ್ರೀತಿಯ ಅಜ್ಜಿಯ ನಿಧನದಿಂದ ಬೇಸರಗೊಂಡಿರುವ ಸುದೀಪ್ ಮಗಳು ಸಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿದ್ದಾರೆ. ಅಂತ್ಯಕ್ರಿಯೆ ಬಳಿಕ ಸಾನ್ವಿ ಸುದೀಪ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅಜ್ಜಿಯ ಅಂತಿಮಯಾತ್ರೆ ಮತ್ತು ಅಂತ್ಯಕ್ರಿಯೆ ವೇಳೆ ನಡೆದ ಘಟನೆಗಳ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

ಸುದೀಪ್ ತಾಯಿ ನಿಧನದ ಸುದ್ದಿ ಕೇಳಿ ಸಾವಿರಾರು ಜನರು ಸುದೀಪ್ ಮನೆ ಮುಂದೆ ಜಮಾಯಿಸಿದ್ರು. ಕೆಲ ಜನರು ಫೋಟೋ, ವಿಡಿಯೋಗಳಿಗಾಗಿ ಮಾಡಿದ ಹುಚ್ಚಾಟಕ್ಕೆ ಸ್ವಾನಿ ಸಿಟ್ಟಾಗಿದ್ದಾರೆ. ಸಾವಿನ ಮನೆಯಲ್ಲೂ ಕೂಗಾಟ, ಚೀರಾಟ ಸರಿನಾ ಎಂದು ಸಾನ್ವಿ ಸುದೀಪ್ ಅವರು ಪ್ರಶ್ನೆ ಮಾಡಿ ಪೋಸ್ಟ್ ಶೇರ್ ಮಾಡಿದ್ದಾರೆ.
ಇದೇ ವಿಚಾರದ ಬಗ್ಗೆ ಸಾನ್ವಿ ಸುದೀಪ್ ಪ್ರತಿಕ್ರಿಯಿಸಿದ್ದು, ಇಂದು ನಮ್ಮ ಕುಟುಂಬಕ್ಕೆ ತುಂಬಾ ಕಷ್ಟದ ದಿನವಾಗಿತ್ತು. ನಮ್ಮ ಮನೆ ಮುಂದೆ ಸೇರಿದ್ದ ಜನರು ಜೋರಾಗಿ ಕಿರುಚುತ್ತಿದ್ರು. ನಮ್ಮ ಮುಖಕ್ಕೆ ಕ್ಯಾಮೆರಾ ಇಡಲು ಕಷ್ಟಪಡ್ತಿದ್ರು. ಕೆಲವರು ಮನುಷ್ಯತ್ವ ಇಲ್ಲದವರಂತೆ ನಡೆದುಕೊಂಡಿದ್ದಾರೆ. ನನ್ನ ತಂದೆ ಅವರ ತಾಯಿಗಾಗಿ ಕಣ್ಣೀರು ಹಾಕ್ತಿದ್ರು. ಆದರೆ ಜನರು ನಮ್ಮನ್ನು ತಳ್ಳಿ-ನೂಕ್ಕಿದ್ದಾರೆ ಎಂದು ಸಾನ್ವಿ ಬೇಸರದಿಂದ ಬರೆದಿದ್ದಾರೆ.
ಇಂದು ನನ್ನ ಕುಟುಂಬಕ್ಕೆ ತುಂಬಾ ಕಷ್ಟದ ದಿನವಾಗಿತ್ತು. ಆದರೆ ನಮ್ಮ ಮನೆಯ ಹೊರಗೆ ಜಮಾಯಿಸಿದ್ದ ಜನರು, ಜೋರಾಗಿ ಹರ್ಷೋದ್ಗಾರ ಮಾಡುತ್ತಿದ್ದರು. ನಾನು ದುಃಖಿಸಲು ಪ್ರಯತ್ನಿಸುತ್ತಿರುವಾಗ ನನ್ನ ಮುಖಕ್ಕೆ ಕ್ಯಾಮೆರಾಗಳನ್ನು ಹಿಡಿದರು, ಇದು ಬಹಳ ಬೇಸರ ತರಿಸಿತ್ತು. ಕೆಲವರು ಇಷ್ಟು ಅಮಾನವೀಯವಾಗಿ ನಡೆದುಕೊಳ್ಳುತ್ತಾರೆ ಎಂದುಕೊಂಡಿರಲಿಲ್ಲ ಎಂದು ಸಾನ್ವಿ ಬರೆದುಕೊಂಡಿದ್ದಾರೆ.
ನನ್ನ ತಂದೆ ತನ್ನ ತಾಯಿಗಾಗಿ ಅಳುತ್ತಿದ್ದಾಗ, ಜನರು ತಳ್ಳುತ್ತಿದ್ದರು, ಎಳೆಯುತ್ತಿದ್ದರು. ಆಕೆಗೆ ಉತ್ತಮವಾದ ರೀತಿಯಲ್ಲಿ ವಿದಾಯ ಹೇಳುವುದಕ್ಕೆ ನಾವು ತುಂಬಾ ತೊಂದರೆ ಅನುಭವಿಸಿದ್ದೇವೆ. ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಕ್ಕೆ ನಾನು ಅಳುತ್ತಿದ್ದೇನೆ, ಆದರೆ ಈ ಜನ ರೀಲ್ಸ್ ಬಗ್ಗೆ ಕಾಳಜಿ ವಹಿಸಿದ್ದರು ಎಂದು ಸಾನ್ವಿ ಬೇಸರ ಹೊರ ಹಾಕಿದ್ದಾರೆ.
ಸುದೀಪ್ ಅವರ ಜೆಪಿ ನಗರ ನಿವಾಸದಲ್ಲಿ ಸರೋಜ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಗಣ್ಯರು ಅಂತಿಮ ದರ್ಶನ ಪಡೆದ್ರು. ಅಂತಿಮಯಾತ್ರೆ ಬಳಿಕ ವಿಲ್ಸನ್ ಗಾರ್ಡನ್ ಚಿತಾಗಾರದ ಹೊರಗೆ ಸರೋಜ ಅವರ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿದ್ರು. ಮಗ ಸುದೀಪ್ ಅವರು ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಿದ್ರು. ಅಮ್ಮನಿಗೆ ವಿದಾಯ ಹೇಳಿ ಬಾರದ ಮನಸ್ಸಿನಿಂದಲೇ ಚಿತಾಗಾರದಿಂದ ಹೊರಗೆ ಬಂದ ಸುದೀಪ್ ಅವರು ಅಳುತ್ತಲೇ ಅಭಿಮಾನಿಗಳಿಗೆ ಕೈ ಮುಗಿದ್ರು. ಸುದೀಪ್ ನೋಡಲು ಚಿತಾಗಾರದ ಬಳಿ ಅಭಿಮಾನಿಗಳು ಹರಿದು ಬಂದಿದ್ರು. ನೋವಿನಲ್ಲೂ ಸುದೀಪ್ ಅಭಿಮಾನಿಗಳತ್ತ ನೋಡಿ ಕೈ ಮುಗಿದಿದ್ದಾರೆ.
ಚಿತ್ರರಂಗದ ಗಣ್ಯರಿಂದ ಸಂತಾಪ
ನಟ ಸುದೀಪ್ ಅವರ ತಾಯಿ ನಿಧನಕ್ಕೆ ಚಿತ್ರರಂಗದ ನಟ ದುನಿಯಾ ವಿಜಯ್, ತಾರಾ ಅನುರಾಧ, ಡಾಲಿ ಧನಂಜಯ್, ಸೃಜನ್ ಲೋಕೇಶ್ ಅಂತಿಮ ದರ್ಶನ ಪಡೆದ್ರು. ರಾಜಕೀಯ ನಾಯಕರಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಶಾಸಕ ಸತೀಶ್ ರೆಡ್ಡಿ ಹಾಗೂ ಮಾಜಿ ಕಾರ್ಪೋರೇಟರ್ ಮೋಹನ್ ರಾಜ್ ಸಹ ಅಂತಿಮ ನಮನ ಸಲ್ಲಿಸಿದ್ರು. ಚಿತ್ರರಂಗ ಹಾಗೂ ಕಿರುತೆರೆಯ ಬಹಳಷ್ಟು ಕಲಾವಿದರು ಸುದೀಪ್ ತಾಯಿ ಸರೋಜಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.












Click it and Unblock the Notifications