ಕಾಡಿನ ರಾಜ ಸಿಂಹನೇ, ಅದು ಯಾರೆಂದು ಎಲ್ಲರಿಗೂ ಗೊತ್ತಿದೆ: ಧನ್ವೀರ್‌ ಬೆನ್ನಲ್ಲೇ ವಿನಯ್‌ ಗೌಡ ಪೋಸ್ಟ್‌ ವೈರಲ್

ಸ್ಯಾಂಡಲ್‌ವುಡ್‌ ಈಗ ಸ್ಟಾರ್‌ ನಟರಾದ ದರ್ಶನ್‌ ತೂಗುದೀಪ ಹಾಗೂ ಕಿಚ್ಚ ಸುದೀಪ್‌ ಅವರ ಅಭಿಮಾನಿಗಳ ನಡುವೆ ಫ್ಯಾನ್‌ ವಾರ್‌ ಮುಂದುವರಿದಿದೆ. ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್‌ ದೊಡ್ಡ ಪಡೆ ಯುದ್ಧಕ್ಕೆ ರೆಡಿಯಾಗ್ತಿದೆ, ನಾವೂ ರೆಡಿ ಎಂದಿದ್ದು, ಇತ್ತ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್‌ ಇಲ್ಲದಿದ್ದಾಗ ಅವರ ಬಗ್ಗೆ ಏನೇನೋ ಮಾತನಾಡ್ತಾರೆ ಎಂದಿದ್ದು ಇದಕ್ಕೆ ಕಾರಣ. ಈಗ ಇದು ದರ್ಶನ್‌ ಆಪ್ತ ಧನ್ವೀರ್‌ vs ಸುದೀಪ್‌ ಆಪ್ತ ವಿನಯ್‌ ಗೌಡ ಎನ್ನುವ ತಿರುವು ಪಡೆದುಕೊಂಡಿದೆ. ಇದಕ್ಕೆ ಕಾರಣವಾಗಿದ್ದು, ಇಬ್ಬರೂ ಹಂಚಿಕೊಂಡ "ಕಾಡಿನ ರಾಜ ಸಿಂಹ" ಎನ್ನುವ ಪೋಸ್ಟ್‌ಗಳು.

ಹೌದು, ಒಂದೆಡೆ ದರ್ಶನ್‌ ಹಾಗೂ ಸುದೀಪ್‌ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಚ್ಚಾಡುತ್ತಿದ್ದಾರೆ. ಸುದೀಪ್‌ ವೇದಿಕೆ ಮೇಲೆ ದರ್ಶನ್‌ ಅವರ ಹೆಸರು ಉಲ್ಲೇಖಿಸಲೇ ಇಲ್ಲ, ಇತ್ತ ವಿಜಯಲಕ್ಷ್ಮಿ ಅವರೂ ಸುದೀಪ್‌ ಅವರ ಹೆಸರನ್ನು ಹೇಳಲೇ ಇಲ್ಲ. ಈಗಾಗಲೇ ಸುದೀಪ್‌ ಅವರು ನಾನು ಹೇಳಿದ್ದು ಪೈರಸಿ ಬಗ್ಗೆ ಎಂದು ಕ್ಲಾರಿಟಿಯೂ ಕೊಟ್ಟಾಗಿದೆ. ಆದರೂ ಡಿಬಾಸ್‌ ಅಭಿಮಾನಿಗಳು ಹಾಗೂ ಕಿಚ್ಚನ ಅಭಿಮಾನಿಗಳು ಒಬ್ಬರ ಮೇಲೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದಾರೆ.

Sandwood Fan War Vinay Gowda Kiccha Sudeep Post Goes Viral After Dhanveer Darshan Post

ʼಕಾಡಿನ ರಾಜ ಸಿಂಹ ಪೋಸ್ಟ್‌ʼ

ಸುದೀಪ್‌ ಅವರೇ ಖುದ್ದಾಗಿ ನಾನು ಮಾತನಾಡಿದ್ದು ಪೈರಸಿ ಬಗ್ಗೆ ಎಂದು ಸ್ಪಷ್ಟನೆ ನೀಡಿದ್ದಾರೆ. ವಿಜಯಲಕ್ಷ್ಮಿ ನನ್ನ ಹೆಸರೇ ಹೇಳಿದ್ರೆ ಉತ್ತರ ಕೊಡ್ತೀನಿ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಆದರೂ ಫ್ಯಾನ್ಸ್‌ ನಡುವೆ ಟಾಕ್‌ ವಾರ್‌ ಮುಂದುವರಿದಿದೆ. ಮತ್ತೊಂದೆಡೆ ನಟ ಧನ್ವೀರ್‌ ಗೌಡ ಹಾಗೂ ವಿನಯ್‌ ಗೌಡ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳು ಕೂಡ ಈ ಫ್ಯಾನ್‌ ವಾರ್‌ ಎಂಬ ಬೆಂಕಿಗೆ ತುಪ್ಪ ಸುರಿದಿವೆ.

ನಟ ಧನ್ವೀರ್‌ ಗೌಡ ಅವರು ಎಲ್ಲರಿಗೂ ಗೊತ್ತಿರುವಂತೆ ದರ್ಶನ್‌ ಅವರ ಆಪ್ತರು. ದರ್ಶನ್‌ ಅವರ ಕಷ್ಟಕಾಲದಲ್ಲೂ ಜೊತೆ ನಿಂತಿದ್ದಾರೆ. ಹೀಗಾಗಿ ಫ್ಯಾನ್‌ ವಾರ್‌ ನಡುವೆಯೇ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡ ಧನ್ವೀರ್‌, "ಕಾಡಲ್ಲಿ ಸಾಕಷ್ಟು ಪ್ರಾಣಿಗಳು ಇರುತ್ತೆ. ಆದ್ರೆ ಆ ಕಾಡಿಗೆ ಒಂದೇ ಸಿಂಹ ಇರುತ್ತೆ" ಎನ್ನುವ ಡೈಲಾಗ್‌ ಸೇರಿಸಿದ್ದರು. ಇದು ಸುದೀಪ್‌ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಕಾಡಿನ ರಾಜ ಸಿಂಹ, ಅದು ಕಿಚ್ಚ ಎಂದ ವಿನಯ್‌

ಧನ್ವೀರ್‌ ಪೋಸ್ಟ್‌ ಬೆನ್ನಲ್ಲೇ ನಟ ಹಾಗೂ ಸುದೀಪ್‌ ಆಪ್ತ ವಿನಯ್‌ ಗೌಡ ಕೂಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕಾಡಿನ ರಾಜ ಕುರಿತಂತೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 'ಖಂಡಿತ ಸಿಂಹ ಕಾಡಿನ ರಾಜ, ಆ ಸಿಂಹ ಯಾರೆಂದು ನಮಗೆಲ್ಲರಿಗೂ ತಿಳಿದಿದೆ' ಎಂದು ಸುದೀಪ್‌ ಅವರ ಫೋಟೋ ಇರುವ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಇದು ಧನ್ವೀರ್‌ ಪೋಸ್ಟ್‌ಗೆ ವಿನಯ್‌ ಗೌಡ ಕೌಂಟರ್‌ ನೀಡಿದಂತೆಯೇ ಇದೆ, ಇಬ್ಬರೂ ಕಾಡಿನ ರಾಜ ಸಿಂಹ ಕುರಿತಾಗಿಯೇ ಹಂಚಿಕೊಂಡಿರುವ ಪೋಸ್ಟ್‌ಗಳು ಫ್ಯಾನ್‌ ವಾರ್‌ ಬೆಂಕಿಯನ್ನು ಧಗಧಗನೆ ಉರಿಯುವಂತೆ ಮಾಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+