ಶ್ರೀರಾಮನ ಬಂಟ ‘ಹನುಮಾನ್’ ಸಿನಿಮಾಗೆ ಕನ್ನಡಿಗರ ಬೆಂಬಲ!
ಸದ್ದೇ ಇಲ್ಲದೆ ಬರುವ ಸಿನಿಮಾಗಳು ದೊಡ್ಡ ಹೆಸರು ಮಾಡುತ್ತವೆ. ಹಾಗೇ ಗಲ್ಲಾಪೆಟ್ಟಿಗೆಯ ತುಂಬಾ ಕಾಸು ಮಾಡುತ್ತವೆ. ಈ ಮಾತು ಇದೀಗ 'ಹನುಮಾನ್' ಸಿನಿಮಾ ವಿಚಾರದಲ್ಲೂ ನಿಜವಾಗಿ ಹೋಗಿದೆ. ಅದರಲ್ಲೂ ಈ ಸಿನಿಮಾಗೆ ಕನ್ನಡ ಸಿನಿಮಾ ರಂಗದ ದೊಡ್ಡ ದೊಡ್ಡ ಸ್ಟಾರ್ ನಟರೇ ಸಾಥ್ ನೀಡುತ್ತಿದ್ದಾರೆ. ಅಲ್ಲದೆ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಸೂಪರ್ ಹೀರೋ ಕಾನ್ಸೆಪ್ಟ್ ಹೊಂದಿದ ಹನು-ಮಾನ್ ಸಿನಿಮಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ ತೇಜ ಸಜ್ಜಾ, ವರಲಕ್ಷ್ಮೀ ಶರತ್ ಕುಮಾರ್, ಕನ್ನಡದವರೇ ಆದ ಅಮೃತಾ ಐಯ್ಯರ್, ದೀಪಕ್ ಶೆಟ್ಟಿ ನಟಿಸಿದ ಚಿತ್ರಕ್ಕೆ ಪ್ರೇಕ್ಷಕ ಜೈಕಾರ ಹಾಕುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ಟಕ್ಕರ್ ಕೊಡುತ್ತಿರುವ ಹನು-ಮಾನ್ ಚಿತ್ರವನ್ನ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ವೀಕ್ಷಿಸಿ ಖುಷಿ ವ್ಯಕ್ತಪಡಿಸಿದ್ದಾರೆ.

ಹ್ಯಾಟ್ರಿಕ್ ಹೀರೋ ಹೇಳಿದ್ದೇನು?
ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ, ಕುಟುಂಬ ಸಮೇತ ಹನು-ಮಾನ್ ಸಿನಿಮಾ ನೋಡಿದ ಶಿವಣ್ಣ ಅವರಿಗೆ ತೇಜ್ ಸಜ್ಜಾ & ಅಮೃತಾ ಸಾಥ್ ಕೊಟ್ಟರು. ಇನ್ನ ಚಿತ್ರ ವೀಕ್ಷಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಿವಣ್ಣ ಹನುಮಾನ್ ಸಿನಿಮಾವನ್ನ 'ಮೈಂಡ್ ಬ್ಲೋಯಿಂಗ್' ಅಂತಾ ಹೇಳಿದ್ರು. ತೇಜ ಸಜ್ಜಾ, ಅಮೃತಾ, ವರಲಕ್ಷ್ಮೀ ಅಭಿನಯದ ಬಗ್ಗೆ ಈ ವೇಳೆ ಹೆಮ್ಮೆಯಿಂದ ಮಾತನಾಡಿದ್ರು. ಈ ಮಾತುಗಳು ಸಿನಿಮಾ ತಂಡಕ್ಕೆ ಮತ್ತಷ್ಟು ಬಲ ನೀಡಿದಂತೆ ಇತ್ತು.
ಪ್ಯಾನ್ ವರ್ಲ್ಡ್ ಸಿನಿಮಾ ಇದು
ಹೌದು, ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಿರುವ & ತೇಜ ಸಜ್ಜ ನಟನೆ ಮಾಡಿರುವ ಪ್ಯಾನ್ ಇಂಡಿಯಾ ಸಿನಿಮಾ 'ಹನು-ಮಾನ್' ಸಂಕ್ರಾಂತಿಗೆ ರಿಲೀಸ್ ಆಗಿದ್ದು. ಈಗಾಗಲೇ ಸಿನಿಮಾಗೆ ಸಖತ್ ರೆಸ್ಪಾನ್ ಸಿಕ್ಕಿದೆ. ಇನ್ನು ಈ ಸಿನಿಮಾದ ನಾಯಕ ನಟ ತೇಜ್ ಸಜ್ಜಾ ಫುಲ್ ಖುಷಿಯಾಗಿ ಮೊದಲ ಸಿನಿಮಾದಲ್ಲೇ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ವರಲಕ್ಷ್ಮೀ ಶರತ್ ಕುಮಾರ್ & ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಿಲೀಸ್ ಆಗಿದ್ದು ಯಾವಾಗ?
ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ 'ಹನು-ಮಾನ್' ಕುರಿತು ಕಥೆಯ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮಿದ್ದು. ಹೀರೋ ಆಗಿ ತೇಜ ಸಜ್ಜ ನಟಿಸಿದ್ದು, ನಾಯಕಿ ಆಗಿ ಅಮೃತಾ ಐಯ್ಯರ್ ನಟಿಸಿದ್ದಾರೆ. ಇನ್ನು ಅಂಜನಾದ್ರಿ ಎಂಬ ಕಾಲ್ಪನಿಕ ಊರಲ್ಲಿ ನಡೆಯುವ ಹನುಮಾನ್ ಬಗ್ಗೆ ಎಲ್ಲರಲ್ಲಿಯೂ ನಿರೀಕ್ಷೆ ಹೆಚ್ಚಾಗಿತ್ತು. ಚಿತ್ರ ಜನವರಿ 12ಕ್ಕೆ ರಿಲೀಸ್ ಆಗಿದ್ದು, ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ಹನುಮಾನ್ ರಿಲೀಸ್ ಆಗಿದೆ.

ಯಾವ ಯಾವ ಭಾಷೆಯಲ್ಲಿ ರಿಲೀಸ್?
ತೆಲುಗು, ಕನ್ನಡ, ಮರಾಠಿ, ತಮಿಳು, ಮಲಯಾಳಂ, ಇಂಗ್ಲೀಷ್, ಸ್ಯಾನೀಶ್, ಚೈನೀಸ್, ಜಪಾನೀಸ್ ಮತ್ತು ಕೊರಿಯನ್ ಭಾಷೆಯಲ್ಲಿ ರಿಲೀಸ್ ಆಗಿದೆ. ಸಂಕ್ರಾಂತಿ ಹಬ್ಬಕ್ಕೆ ವಿಶ್ವಾದ್ಯಂತ ಹನುಮಾನ್ ದರ್ಶನ ಆಗಿದ್ದು, ಕನ್ನಡದಲ್ಲಿ ಚಿತ್ರವನ್ನು ಕೆಆರ್‌ಜಿ ಬಿಡುಗಡೆ ಮಾಡಿದೆ. ಹೀಗೆ ಸಖತ್ ಸದ್ದು ಮಾಡುತ್ತಿದೆ ಟಾಲಿವುಡ್ ಸಿನಿಮಾ.












Click it and Unblock the Notifications