ಕನ್ನಡ ಸಿನಿಮಾ ರಂಗದಲ್ಲಿ ‘ಆರಾಮ್ ಅರವಿಂದ ಸ್ವಾಮಿ’ ಸೌಂಡ್!
ಕನ್ನಡ ಸಿನಿಮಾ ರಂಗದಲ್ಲಿ ಡಿಫರೆಂಟ್ ಡಿಫರೆಂಟ್ ಟೈಟಲ್ ಸಿನಿಮಾಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಕೂಡ ಟೈಟಲ್ ನೋಡಿಯೇ ಸಿನಿಮಾ ನೋಡಬೇಕು ಅಂತ ಫಿಕ್ಸ್ ಆಗ್ತಿದ್ದಾರೆ. ಅದೇ ರೀತಿ ಈಗ 'ಆರಾಮ್ ಅರವಿಂದ ಸ್ವಾಮಿ' ಕೂಡ, ತನ್ನ ಟೈಟಲ್ ಮೂಲಕ ಹವಾ ಎಬ್ಬಿಸುತ್ತಿದೆ. ಇದೀಗ ಈ ಸಿನಿಮಾದ ಫ್ರೆಷ್ ಅಪ್‌ಡೇಟ್ ಹೊರಬಿದ್ದಿದೆ.
'ನಮ್ ಏರಿಯಾಲಿ ಒಂದ್ ದಿನ' & 'ಪೊಲೀಸ್ ಕ್ವಾಟ್ರಸ್', 'ಅಕಿರ', 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸೇರಿ 'ರಾಮಾರ್ಜುನ' ಹೀಗೆ ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥಾಹಂದರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಐಡೆಂಟಿಟಿ ಕ್ರಿಯೇಟ್ ಮಾಡ್ಕೊಂಡ ನಟ ಅನೀಶ್ ತೇಜೇಶ್ವರ್ ಮತ್ತೆ ಸದ್ದು ಮಾಡ್ತಿದ್ದಾರೆ. ಹೊಸ ಸಿನಿಮಾ ಮೂಲಕ ಸಿನಿಮಾ ಪ್ರೇಕ್ಷಕರಿಗೆ ಹತ್ತಿರ ಆಗ್ತಾ ಇದ್ದಾರೆ. ಇಂದು ಬರ್ತ್ ಡೇಯ ಸಂಭ್ರಮದಲ್ಲಿ ಅವರಿದ್ದಾರೆ. ಈ ಹಿನ್ನೆಲೆಯಲ್ಲಿ ಅನೀಶ್ ಬರ್ತಡೇ ಸ್ಪೆಷಲ್ ಆಗಿ ಆರಾಮ್ ಅರವಿಂದ ಸ್ವಾಮಿ ಸಿನಿಮಾ ಮೊದಲ ಹಾಡನ್ನು ಅನಾವರಣ ಮಾಡಲಾಗಿದೆ.

ಟೈಟಲ್ ಟ್ರ್ಯಾಕ್ ಹವಾ ಶುರು
ಅಷ್ಟಕ್ಕೂ, 'ಆರಾಮ್ ಅರವಿಂದ ಸ್ವಾಮಿ' ಟೈಟಲ್ ಟ್ರ್ಯಾಕ್‌ಗೆ ಇದೀಗ ನಾಗಾರ್ಜುನ್ ಶರ್ಮಾ ಪದಪುಂಜ ಪೊಣಿಸಿದ್ದು, ನಿಶಾನ್ ರೈ ಕಂಠ ಕುಣಿಸಿದ್ದಾರೆ ಅರ್ಜುನ್ ಜನ್ಯ ಮ್ಯೂಸಿಕ್ ಹಾಡಿನ ಕಿಕ್ ಏರಿಸಿದೆ. ನಾಯಕನ ಗುಣವನ್ನು ವರ್ಣಿಸುವ ಈ ಟೈಟಲ್ ಟ್ರ್ಯಾಕ್‌ಗೆ ಅನೀಶ್ ಜಬರ್ದಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಬಾಬಾ ಭಾಸ್ಕರ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಈ ಸಿಂಗಿಂಗ್ ಮಸ್ತಿ ಮೂಡಿಬಂದಿದೆ. ಹೀಗಾಗಿ ಸಾಂಗ್ ಈಗ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಸಿನಿಮಾ ರಿಲೀಸ್ ಯಾವಾಗ?
ತನ್ನ ಪ್ರಮೋಷನ್ ಕಂಟೆಂಟ್ ನಿಂದ ಈಗಾಗಲೇ ಸದ್ದು ಮಾಡುತ್ತಿರುವ ಈ ಆರಾಮ ಅರವಿಂದ ಸ್ವಾಮಿ ಸಿನಿಮಾಗೆ ಅಭಿಷೇಕ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನ ನಮ್ ಗಣಿ ಬಿಕಾಂ ಪಾಸ್ ಮತ್ತೆ ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 3ನೇ ಸಿನಿಮಾ ಇದು. ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಆರಾಮ್ ಅರವಿಂದ ಸ್ವಾಮಿ ಶೂಟಿಂಗ್ ಮುಗಿಸಿ ಬಿಡುಗಡೆಗೆ ಕೂಡ ಸಜ್ಜಾಗಿದೆ.
ನಿರ್ಮಾಣದ ಹೊಣೆ ಯಾರದ್ದು?
ಈ ಸಿನಿಮಾದಲ್ಲಿ ಅನೀಶ್ ತೇಜೇಶ್ವರ್ ಜೋಡಿಯಾಗಿ ಮಿಲನ ನಾಗರಾಜ್ & ಹೃತಿಕಾ ಶ್ರೀನಿವಾಸ್ ನಟಿಸುತ್ತಿದ್ದಾರೆ. ಅಕಿರ ಸಿನಿಮಾ ಖ್ಯಾತಿ ಶ್ರೀಕಾಂತ್ ಪ್ರಸನ್ನ & 'ಗುಳ್ಟು' ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಸೇರಿದಂತೆ ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್. ಬಿ. ಸಂಕಲನ ಈ ಸಿನಿಮಾಗೆ ಇದೆ.












Click it and Unblock the Notifications