Darshan: ದರ್ಶನ್ ಮಾಡಿದ ಆ ಕೆಲಸ ಯಾವತ್ತೂ ಮರೆಯಲ್ಲ: ನಟಿ ರಕ್ಷಿತಾ ಹೇಳಿದ್ದೇನು?
ನಟ ದರ್ಶನ್ ಹಾಗೂ ನಟಿ ರಕ್ಷಿತಾ ಪ್ರೇಮ್ ಅಂದ್ರೆ ಸ್ಯಾಂಡಲ್‌ವುಡ್‌ನ ಹಿಟ್ ಜೋಡಿ ಎಂದೇ ಫೇಮಸ್ ಆಗಿದ್ದವರು. ಸುಂಟರಗಾಳಿ ಸಿನಿಮಾದಲ್ಲಿ ಇಬರಿಬ್ಬರ ನಟನೆಗೆ ಫಿದಾ ಆಗದವರಿಲ್ಲ. ಇನ್ನು ನಟನೆಯಿಂದ ಹೊರಗೂ ದರ್ಶನ್ ಹಾಗೂ ರಕ್ಷಿತಾ ಅವರು ಒಳ್ಳೆಯ ಸ್ನೇಹಿತರು ಕೂಡ. ಒಬ್ಬರನ್ನೊಬ್ಬರು ಬೆಸ್ಟ್ ಫ್ರೆಂಡ್ ಎಂದೇ ಕರೆದುಕೊಳ್ಳುವ ಮೂಲಕ ಒಬ್ಬರ ಕಷ್ಟದಲ್ಲೊಬ್ಬರು ಆಗಿದ್ದಾರೆ. ಇದೀಗ ದರ್ಶನ್ ಅವರು ಮಾಡಿದ್ದ ಕೆಲಸವೊಂದನ್ನು ರಕ್ಷಿತಾ ನೆನೆದಿದ್ದಾರೆ.
ನಟಿ ರಕ್ಷಿತಾ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ದರ್ಶನ್ ಅವರು ತಮ್ಮ ಕುಟುಂಬದೊಂದಿಗೆ ಯಾವ ರೀತಿ ಜೊತೆಯಲ್ಲಿದ್ದರು ಎಂಬುದನ್ನು ವಿವರಿಸಿದ್ದಾರೆ. ದರ್ಶನ್ ಹಾಗೂ ನನ್ನ ಒಡನಾಟ ಕೇವಲ ಸಿನಿಮಾಗಳಿಂದ ಮಾತ್ರವಲ್ಲ, ಅದರ ಆಚೆಗೂ ದರ್ಶನ್ ನಮ್ಮ ಕುಟುಂಬದೊಂದಿಗೆ ಇದ್ದರು ಎಂದು ರಕ್ಷಿತಾ ಹೇಳಿದ್ದಾರೆ.

ನಮ್ಮ ತಂದೆಯವರ ಮನೆಯಲ್ಲಿ ನನ್ನ ದೊಡ್ಡಮ್ಮ ಒಮ್ಮೆ ಡಿಪ್ರೆಶನ್‌ನಲ್ಲಿ ಬೆಂಕಿ ಹಚ್ಚಿಕೊಂಡಿದ್ದರು. ಆಗ ಅಪ್ಪಾಜಿ ಮೊದಲಿಗೆ ನನಗೆ ಫೋನ್ ಮಾಡಲೇ ಇಲ್ಲ. ಮೊದಲು ಫೋನ್ ಹೋಗಿದ್ದು ದರ್ಶನ್‌ಗೆ. ದರ್ಶನ್ ಆಗ ತಕ್ಷಣ ಬಂದಿದ್ದ. ಅವನ ಬಳಿ ಒಂದು ಮಾರುತಿ ಕಾರು ಇತ್ತು. ಬೆಂಕಿ ಹಚ್ಚಿಕೊಂಡಿದ್ದ ದೊಡ್ಡಮ್ಮನನ್ನು ಕಾರಲ್ಲಿ ಕರೆದೊಯ್ದು ಆಸ್ಪತ್ರೆಗೆ ಸೇರಿಸಿದ್ದೇ ಅವನು ಎಂದು ರಕ್ಷಿತಾ ಆ ಘಟನೆಯನ್ನು ನೆನೆದಿದ್ದಾರೆ.
ಹಾಗಾಗಿ ದರ್ಶನ್ ಅವರೊಂದಿಗಿನ ಒಡನಾಟ ಇಂದಿನದ್ದೇನಲ್ಲ. ನನ್ನ ತಂದೆಗೆ ಕಷ್ಟ ಬಂದಾಗಿನಿಂದಲೂ ದರ್ಶನ್ ನಮ್ಮೊಂದಿಗೆ ಇದ್ದಾನೆ. ಹಾಗಾಗಿ ದರ್ಶನ್ ನಮಗೆ ಬೇರೆ ಯಾರೋ ಅಲ್ಲ, ನಮ್ಮ ಕುಟುಂಬದವನು ಎಂದಿದ್ದಾರೆ. ನನಗೆ ಜೀವನದಲ್ಲೇನಾದ್ರೂ ತೊಂದರೆ, ಕಷ್ಟ ಬಂದ್ರೆ ದರ್ಶನ್ ಖಂಡಿತವಾಗಿಯೂ ಅಲ್ಲಿ ಇದ್ದೇ ಇರ್ತಾನೆ. ನಾನು ಕೂಡ ಅಷ್ಟೇ, ಅವನಿಗೇನಾದ್ರೂ ಆದ್ರೆ ನಾನೂ ಇದ್ದೇ ಇರುತ್ತೇನೆ. ಅವನಿಗೆ ಇನ್ಮುಂದೆ ಏನೂ ಆಗಲ್ಲ ಎಂದುಕೊಂಡಿದ್ದೇನೆ ಎಂದು ರಕ್ಷಿತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ದರ್ಶನ್ ಅವರ ಸದ್ಯದ ಪರಿಸ್ಥಿತಿ ಬಗ್ಗೆಯೂ ರಕ್ಷಿತಾ ಮಾತನಾಡಿದ್ದಾರೆ. ದರ್ಶನ್‌ಗೆ ಬೆನ್ನು ನೋವಿನ ಸಮಸ್ಯೆ ಇದೆ. ಅವನ ಜೀವನದಲ್ಲಿ ಎಲ್ಲ ಸಹಜ ಸ್ಥಿತಿಗೆ ಬರಲು ಸಮಯ ಹಿಡಿಯುತ್ತದೆ. ಎಲ್ಲವೂ ಒಂದೇ ಟೈಮ್‌ಗೆ ಆಗಲ್ಲ, ಕಾಲ ಕೂಡಿ ಬರಬೇಕು. ವೈದ್ಯರು ದರ್ಶನ್‌ಗೆ ಸರ್ಜರಿ ಮಾಡಬೇಕು ಎಂದಿದ್ದಾರೆ. ನೋಡೋಣ ಎಂದು ರಕ್ಷಿತಾ ಹೇಳಿದ್ದಾರೆ.
ದರ್ಶನ್ ಸದ್ಯ ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ. ಮೈಸೂರಿನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಅವರು ಕುಟುಂಬಸ್ಥರೊಂದಿಗೆ ಸಂಕ್ರಾಂತಿ ಆಚರಣೆಯಲ್ಲಿ ತೊಡಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕ ಹಿನ್ನೆಲೆ ಅವರು ಮೈಸೂರಿಗೆ ತೆರಳಲು ಕೋರ್ಟ್ ಮತ್ತೆ ಅನುಮತಿ ನೀಡಿರುವುದರಿಂದ ಅವರು ಫಾರ್ಮ್‌ಹೌಸ್‌ನಲ್ಲೇ ಸುಗ್ಗಿ ಸಂಭ್ರಮದಲ್ಲಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಫೋಟೋವೊಂದನ್ನು ಹಂಚಿಕೊಂಡಿದ್ದು, ದರ್ಶನ್ ಹಾಗೂ ವಿಜಯಲಕ್ಷ್ಮಿ ತೋಟದ ಮನೆಯಲ್ಲಿ ಪ್ರಾಣಿಗಳೊಂದಿಗೆ ಇದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.












Click it and Unblock the Notifications