ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಮೇಘನಾ ರಾಜ್‌: ಹೋಗಿದ್ದು ಯಾರ ಜೊತೆಗೆ?

ಮೇಘನಾ ಹಾಗೂ ಚಿರಂಜೀವಿ ಸರ್ಜಾ ಪ್ರೀತಿಸಿ ಮದುವೆ ಆದವರು. ಹತ್ತು ವರ್ಷ ಪ್ರೀತಿಯಲ್ಲಿದ್ದ ಜೋಡಿ ಅಕ್ಟೋಬರ್ 22, 2017 ರಂದು ನಿಶ್ಚಿತಾರ್ಥ ಮಾಡ್ಕೊಂಡಿದ್ರು. ಮೇ 2, 2018 ರಂದು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಈ ಸುಂದರ ಜೋಡಿಗೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. ಖುಷಿಯಾಗಿದ್ದ ಸರ್ಜಾ ಕುಟುಂಬಕ್ಕೆ ಬರಸಿಡಿಲು ಬಡಿದಿತ್ತು. ಕುಟುಂಬವನ್ನೇ ಜೀವ ಅಂದ್ಕೊಂಡಿದ್ದ, ಮೇಘನಾರನ್ನು ಅತಿಯಾಗಿ ಪ್ರೀತಿ ಮಾಡ್ತಿದ್ದ ಚಿರಂಜೀವಿ ಸರ್ಜಾ ಎಲ್ಲರನ್ನು ಅಗಲಿದ್ದರು.

ಸರ್ಜಾ ಕುಟುಂಬಕ್ಕೆ ಹಾಗೂ ಮೇಘನಾ ರಾಜ್‌ ಗೆ 2020 ಮರೆಯಲಾಗದ ವರ್ಷವಾಯ್ತು. ಜೂನ್ ಏಳರಂದು ಮೇಘನಾ ರಾಜ್, ತಮ್ಮ ಸರ್ವಸ್ವವಾಗಿದ್ದ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ್ರು. ಗರ್ಭಿಣಿಯಾಗಿದ್ದ ಮೇಘನಾ ನೋವು, ಕಣ್ಣೀರಿಗೆ ಕರುನಾಡ ಜನತೆ ಕಣ್ಣೀರು ಹಾಕಿದ್ದರು. ಕರ್ನಾಟಕದ ಪ್ರತಿಯೊಬ್ಬರೂ ಮೇಘನಾ ಹಾಗೂ ಸರ್ಜಾ ಕುಟುಂಬದ ಜೊತೆ ಸದಾ ನಿಂತಿದ್ದಾರೆ. ಚಿರಂಜೀವಿ ಸರ್ಜಾ ನಮ್ಮನ್ನಗಲಿ ಇಂದಿಗೆ ಐದು ವರ್ಷ ಕಳೆದಿದೆ. ಆದ್ರೆ ಚಿರು ದೈಹಿಕವಾಗಿ ಮಾತ್ರ ಇಲ್ಲ. ಮೇಘನಾ ಮನಸ್ಸಿನಲ್ಲಿ ಸದಾ ಚಿರು ಚಿರಂಜೀವಿ. ಮೇಘನಾ ರಾಜ್ ಪ್ರತಿಯೊಂದ ಕ್ಷಣದಲ್ಲೂ ಚಿರು ಅವರನ್ನ ಯಾವಾಗಲೂ ನೆನಪು ಮಾಡಿಕೊಳ್ಳುತ್ತಾರೆ. ಚಿರಂಜೀವಿ ನನ್ನ ಜೊತೆ ಸದಾ ಇದ್ದಾರೆ ಅಂದ್ಕೊಂಡಿದ್ದಲ್ಲದೆ, ತಮ್ಮ ಮಗ ರಾಯನ್ ನಲ್ಲಿ ಚಿರುವನ್ನು ಕಾಣ್ತಿದ್ದಾರೆ. ಮೇಘನಾ ರಾಜ್‌ ಗೆ ಸದ್ಯ ರಾಯನ್ ಪ್ರಪಂಚವಾಗಿದ್ದಾನೆ.

Sandalwood actress Meghana Raj Spending Quality Time in Goa

ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಮದುವೆಯಾಗಿ ಏಳು ವರ್ಷ ಕಳೆದಿದೆ. ಏಪ್ರಿಲ್ 29 ಮೇಘನಾ ರಾಜ್, ಕ್ರಿಶ್ಚಿಯನ್ ಸಂಪ್ರದಾಯ ದಂತೆ ನಟ ಚಿರಂಜೀವಿ ಸರ್ಜಾ ಮನದೊಡತಿಯಾಗಿದ್ರು. ಇನ್ನೂ ಮೇ 2, 2018ರಂದು ಹಿಂದೂ ಸಂಪ್ರದಾಯದಂತೆ ಇಬ್ಬರ ಮದುವೆ ನೆರವೇರಿತ್ತು. ಈ ವಿಶೇಷ ದಿನದಂದು ಮೇಘನಾ ರಾಜ್, ಚಿರಂಜೀವಿ ಜೊತೆಗಿನ ಅಪರೂಪದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಇನ್ನೂ ಮೇಘನಾ ರಾಜ್ ಅವರು ಕುಟುಂಬದ ಜೊತೆ ಸಾಕಷ್ಟು ಸಮಯ ಕಳೆಯಲು ಬಯಸುತ್ತಾರೆ. ಕಡಲ ತೀರದಲ್ಲಿ ಮೇಘನಾ ರಾಜ್ ಅವರು ತಮ್ಮ ಜನ್ಮದಿನದ ಸಂಭ್ರಮವನ್ನ ಆಚರಿಸಿಕೊಂಡಿದ್ದಾರೆ. ಗೋವಾದ ಕಡಲ ತೀರದಲ್ಲಿ ತಮ್ಮ ಪುತ್ರ ರಾಯನ್‌ ಹಾಗೂ ಕುಟುಂಬದವರ ಜೊತೆಗೆ ಬರ್ತ್‌ಡೇಯನ್ನ ಸೆಲೆಬ್ರೇಟ್ ಮಾಡಿದ್ದಾರೆ. ಮೇಘನಾ ರಾಜ್‌ ಅವರು ತಮ್ಮ ಕುಟುಂಬದ ಜೊತೆ ಗೋವಾ ಟ್ರಿಪ್ ತೆರಳಿದ್ದಾರೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ಎಲ್ಲಾರ ಗಮನ ಸೆಳೆದಿದೆ.

ನಟಿ ಮೇಘನಾ ರಾಜ್ ಅವರು ಬೇಸಿಗೆ ರಜವನ್ನು ಗೋವಾದಲ್ಲಿ ಕಳೆಯುತ್ತಿದ್ದು, ಮಗ ರಾಯನ್ ಹಾಗೂ ತಾಯಿ ಜೊತೆ ಅವರು ಗೋವಾ ಬೀದಿ ಹಾಗೂ ಬೀಚ್​ಗಳಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಮೇಘನಾ ರಾಜ್ ಅವರು ಮಗನ ಜೊತೆ ಬೀಚ್​ನಲ್ಲಿ ಆಟ ಆಡಿದ್ದಾರೆ. ಖುಷಿಯಿಂದ ಅವರು ಸಮಯ ಕಳೆದಿದ್ದಾರೆ. ಮೇಘನಾ ಅಭಿಮಾನಿಗಳಿಗೆ ಈ ಫೋಟೋ ಸಾಕಷ್ಟು ಇಷ್ಟ ಆಗಿದ್ದು, ಮೇಘನಾ ರಾಜ್‌ ಹಾಗೂ ರಾಯನ್‌ ಸರ್ಜಾ ಖುಷಿಯಾಗಿರೋದು ನೋಡಿ ಅಭಿಮಾನಿಗಳಿಗೆ ಮತ್ತಷ್ಟು ಖುಷಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+