ಹೊಸ ವರ್ಷಕ್ಕೆ ಖುಷಿ ಸುದ್ದಿ: 2024ಕ್ಕೆ ನಾನು 'ಅಮ್ಮ' ಎಂದ ನಟಿ ಅದಿತಿ ಪ್ರಭುದೇವ
ಕನ್ನಡ ಚಿತ್ರರಂಗದ ಶಾನೇ ಟಾಪ್ ಹುಡುಗಿ ನಟಿ ಅದಿತಿ ಪ್ರಭುದೇವ ಹೊಸ ವರ್ಷಕ್ಕೆ ಖುಷಿ ಸುದ್ದಿಯನ್ನು ಕೊಟ್ಟಿದ್ದಾರೆ. 2024ರ ಮೊದಲ ದಿನವೇ ನಟಿ ಅದಿತಿ ಪ್ರಭುದೇವ ತಮ್ಮ ಜೀವನ ಅಮೂಲ್ಯವಾದ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
2024 ಕ್ಕೆ ನಾನು 'ಅಮ್ಮ' ಎನ್ನುವ ಮೂಲಕ ನಟಿ ಅದಿತಿ ಪ್ರಭುದೇವ ಹೊಸ ವರ್ಷದ ದಿನವೇ ತಾವು ತಾಯಿಯಾಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಮೆಟರ್ನಿಟಿ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಅದಿತಿ ಪ್ರಭುದೇವ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಅದಿತಿ, ಪತಿ ಯಶಸ್ ಚಂದ್ರಕಾಂತ್ ಪಟ್ಲಾ ಹಾಗೂ ತಮ್ಮ ಪ್ರೀತಿಯ ಪೆಟ್ ಚಾಕಲೇಟ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳ ಜೊತೆಗೆ ನಟಿ ಅದಿತಿ ಪ್ರಭುದೇವ ನೀಡಿರುವ ಸಾಲುಗಳು ವಾವ್ ಎನಿಸುವಂತಿದೆ. ಹೀಗಾಗಿ ಅಭಿಮಾನಿಗಳು ಶುಭಾಶಯದ ಜೊತೆ ಅದಿತಿ ಪ್ರಭುದೇವ ಅವರ ಅಮ್ಮ ಪದದ ವರ್ಣನೆಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.

'ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ ಅಮ್ಮ. ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ ಅಮ್ಮ. ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ ಅಮ್ಮ. 2024 ಕ್ಕೆ ನಾನು ಅಮ್ಮ' ಎಂದು ಅದಿತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಹೊಸ ವರ್ಷಕ್ಕೆ ಶುಭಾಶಯ ತಿಳಿಸಿದ್ದಾರೆ.

ಗುಡ್ ನ್ಯೂಸ್ ಹಚ್ಚಿಕೊಂಡ ಅದಿತಿ ಪ್ರಭುದೇವ ದಂಪತಿಗೆ ಆ್ಯಂಕರ್ ಅನುಶ್ರೀ ಸೇರಿದಂತೆ ಸೆಲೆಬ್ರೆಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ದಾವಣಗೆರೆ ಮೂಲದ ನಟಿ ಅದಿತಿ ಪ್ರಭುದೇವ ಅವರು 2022ರಲ್ಲಿ ಉದ್ಯಮಿ ಯಶಸ್ ಚಂದ್ರಕಾಂತ್ ಪಟ್ಲಾ ಅವರನ್ನು ವಿವಾಹವಾದರು.

ಇನ್ನು ಅದಿತಿ ಪ್ರಭುದೇವ ಸಿನಿಮಾದ ಜೊತೆಗೆ ತಮ್ಮ ಯೂಟ್ಯೂಬ್ ಚಾನಲ್ ಕೂಡ ತೆರೆದಿದ್ದು, ನೋಡುಗರಿಗೆ ಉಪಯುಕ್ತ ಮಾಹಿತಿ ಜೊತೆಗೆ ತಮ್ಮ ದಿನ ನಿತ್ಯದ ಜೀವನದ ಘಟನೆಗಳನ್ನು ಕೂಡ ಹಂಚಿಕೊಳ್ಳುತ್ತಿರುತ್ತಾರೆ. ತಾವು ತಾಯಾಗುತ್ತಿರುವ ವಿಚಾರವನ್ನು ಪತಿ ಯಶಸ್ ಅವರಿಗೆ ತಿಳಿಸಿದ ಸುಂದರ ಕ್ಷಣವನ್ನು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications