35 ಆದ್ರೂ ಮದುವೆ ಯಾಕಾಗಿಲ್ಲ? ಪ್ರಶ್ನೆಗೆ ವಿನಯ್ ರಾಜ್‌ಕುಮಾರ್ ಕೊಟ್ಟ ಉತ್ತರವೇನು..?
ಬೆಂಗಳೂರು, ಆಗಸ್ಟ್ 28: ನನ್ನ ಮದುವೆ ಯಾಕೆ ಆಗಿಲ್ಲ ಎನ್ನುವ ಪ್ರಶ್ನೆ ಎಲ್ಲರನ್ನು ಯಾಕೆ ಕಾಡುತ್ತಿದೆ ನನಗೆ ಅಂತಾ ಗೊತ್ತಿಲ್ಲ. ಪೆಪೆ ಸಿನಿಮಾ ಗೆದ್ದ ಮೇಲೆ ಅಂತಲ್ಲಾ ಸದ್ಯಕ್ಕೆ ಮದುವೆ ಇಲ್ಲ. ನನಗೂ ಮೊದಲು ಮದುವೆ ಯಾವಾಗ ಅಂತಾ ಪ್ರಶ್ನೆ ಶುರು ಮಾಡಿದ್ದರೂ, ಈಗ ಆ ಪ್ರಶ್ನೆಯನ್ನು ನಿಲ್ಲಿಸಿ ಬಿಟ್ಟಿದ್ದಾರೆ. ನನಗಿನ್ನೂ 35 ವರ್ಷ. ಸದ್ಯಕ್ಕಂತಲ್ಲಾ ಮದುವೆ ಆಗಲ್ಲ ಅನಿಸುತ್ತದೆ ಸ್ವಲ್ಪ ದಿನ ಎಂದು ವಿನಯ್ ರಾಜ್‌ಕುಮಾರ್ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಫಿಲ್ಮೀಬೀಟ್ ಕನ್ನಡದ ಜೊತೆ ಮಾತನಾಡಿದ ಅವರು, ಮದುವೆ ಅಂದರೆ ಅದನ್ನು ಆಗಬೇಕು ಅಂತಾ ನಮಗೆ ಅನಿಸಬೇಕು. ಆ ಫೀಲಿಂಗ್ ನಮ್ಮಲ್ಲಿ ಇರಬೇಕು. ಕಾಲೇಜು ದಿನಗಳಲ್ಲಿ ಲವ್ ಕ್ರಶ್ ಎಲ್ಲಾರಿಗೂ ಆಗೇ ಆಗುತ್ತದೆ. ಕಾಲೇಜು ದಿನಗಳಲ್ಲಿ 100% ಲವ್ ಆಗಿರುತ್ತದೆ. ಎಷ್ಟು ಪ್ರೀತಿ ಆಗಿರುತ್ತದೆ ಅದು ನಮಗೆ ಮಾತ್ರ ಗೊತ್ತಿರುತ್ತದೆ ಎಂದರು.

ಒಂದು ಪ್ರೀತಿ ಆಗಿರುತ್ತದೆ. ಈ ತರ ನಾಲ್ಕು ಪ್ರೀತಿ ಆಗುತ್ತದೆ ಎಂದರೆ ಇದು ಪ್ರೀತಿನಾ..? ಅದು ಪ್ರೀತಿನಾ ಎನ್ನುವ ಗೊಂದಲ ಇರುತ್ತದೆ. ಆ ವಯಸ್ಸಿನಲ್ಲಿ ಪ್ರೀತಿ ಯಾವುದು..? ಅಟ್ರ್ಯಾಕ್ಷನ್ ಯಾವುದು..? ಎನ್ನುವ ಗೊಂದಲ ಇರುತ್ತದೆ ಎಂದು ವಿನಯ್ ರಾಜ್‌ಕುಮಾರ್ ಕಾಲೇಜು ಸಮಯದಲ್ಲಿ ತಮಗೂ ಪ್ರೀತಿಯಾಗಿರುವುದು ನಿಜ ಎಂದು ಹೇಳಿದ್ದಾರೆ.
ಸಿನಿಮಾಗಳು ಸೋತಾಗ ಹೇಗೆ ಮತ್ತೆ ಕಂಬ್ಯಾಕ್ ಮಾಡಬೇಕು ಎನ್ನುವುದರ ಬಗ್ಗೆ ಮಾತನಾಡಿದ ಅವರು, ಸಿನಿಮಾಗಳಲ್ಲಿ ಸೋಲು-ಗೆಲುವು ಎನ್ನುವುದು ಸಾಮಾನ್ಯ. ಆದರೆ ಸೋಲಾದಾಗ ಒಂದು ರೀತಿಯಲ್ಲಿ ನೋವು ಆಗಿಯೇ ಆಗುತ್ತದೆ. ನಮ್ಮ ಪ್ರಕಾರ ಏನೇ ಫೀಲಿಂಗ್ ಇದ್ದರೂ ಅದನ್ನು ಸಂಪೂರ್ಣವಾಗಿ ಅನುಭವಿಸಬೇಕು. ಹಾಗಿದ್ದರೆ ಮಾತ್ರ ಆ ಫೀಲಿಂಗ್ ಹೋಗುವುದು. ಅದನ್ನು ಅಲ್ಲೇ ಬಿಟ್ಟು ಬಿಟ್ಟರೆ ಅಲ್ಲೇ ಉಳಿದು ನಮ್ಮ ಜೊತೆಗೆನೇ ಇದ್ದು ಬಿಡುತ್ತದೆ. ಖುಷಿಯಾಗಿರಬಹುದು, ಕಷ್ಟವಾಗಿರಬಹುದು ಅದನ್ನು ಸಂಪೂರ್ಣವಾಗಿ ಅನುಭವಿಸಿದ ತಕ್ಷಣ ಅದು ಹೋಗಿ ಬಿಡುತ್ತದೆ ಎಂದರು.

ಇನ್ನೂ ಹೆಚ್ಚಾಗಿ ಬೇಸರ ಕಳೆಯಲು ಟ್ರಾವೆಲ್ ಮಾಡುತ್ತೇನೆ. ಗೆಳೆಯರ ಜೊತೆ ಹೆಚ್ಚಿನ ಸಮಯ ಕಳೆಯುತ್ತೇನೆ. ಒಂದೊಂದು ಸಲ ಹೋಗಿ ನಾಟಕಗಳನ್ನು ನೋಡುತ್ತೇನೆ. ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತೇನೆ. ಎಲ್ಲಿಂದಾದರೂ ಒಂದು ಸ್ಪೂರ್ತಿ ಪಡೆದುಕೊಂಡು ಮತ್ತೆ ಕಂಬ್ಯಾಕ್ ಆಗುತ್ತೇನೆ. ಕೆಲವೊಮ್ಮೆ ಫ್ಯಾನ್ಸ್‌ಗಳು ಇಂತಹ ಸಿನಿಮಾ ಮಾಡಿ ಅಂತಾ ಪ್ರೇರೇಪಿಸುತ್ತಾರೆ. ಪ್ರೇರಣೆ ಎನ್ನುವುದು ನಮ್ಮ ಸುತ್ತಲೇ ಇರುತ್ತದೆ. ನಾವು ಹುಡುಕಿಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ ಎಂದು ವಿನಯ್ ಹೇಳಿದರು.












Click it and Unblock the Notifications