ಡಾರ್ಲಿಂಗ್ ಪ್ರಭಾಸ್ ಸಿನಿಮಾ ಸುಲಭವಾಗಿ 400 ಕೋಟಿ ಬಾಚಿದ್ದು ಹೇಗೆ?
ಡಾರ್ಲಿಂಗ್ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಅವರ ಕಾಂಬಿನೇಷನ್‌ನಲ್ಲಿ 'ಸಲಾರ್' ಸಿನಿಮಾ ಜಗತ್ತಿನಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಎಲ್ಲೆಲ್ಲೂ ಅಬ್ಬರಿಸಿ, ಬಾಕ್ಸ್ ಆಫಿಸ್‌ನಲ್ಲಿ ಹೊಸ ಅಲೆ ಎಬ್ಬಿಸಿದೆ 'ಸಲಾರ್'. ಹಾಗಾದರೆ ರಿಲೀಸ್ ಆದ 4 ದಿನದಲ್ಲಿ ನಟ ಡಾರ್ಲಿಂಗ್ ಪ್ರಭಾಸ್ ಅವರ ಸಿನಿಮಾ ಗಳಿಸಿದ ಹಣ ಎಷ್ಟು ನೂರು ಕೋಟಿ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಸಲಾರ್ ನಿರ್ಮಾಣ ಮಾಡಿರುವುದು ಕನ್ನಡಿಗರು. ಕನ್ನಡ ಸಿನಿ ರಂಗದಲ್ಲಿ ಮಿಂಚು ಹರಿಸಿದ್ದ, ಹೊಂಬಾಳೆ ಸಂಸ್ಥೆ ಸಲಾರ್ ಸಿನಿಮಾ ನಿರ್ಮಾಣ ಮಾಡಿದೆ. ಹೀಗಾಗಿ ಕನ್ನಡಿಗರಿಗೆ ಮೊದಲನೇ ಆದ್ಯತೆ ನೀಡಲಾಗಿದೆ. ರವಿ ಬಸ್ರೂರು ಕೆಜಿಎಫ್ ರೀತಿಯೇ ಮತ್ತೆ ಸಲಾರ್ ಮೂಲಕ ಸಂಗೀತದ ಕಮಾಲ್ ಮಾಡಿದ್ದಾರೆ. ಹಾಗೇ, ಕೆಜಿಎಫ್ ಸಿನಿ ಸರಣಿಗೆ ಕ್ಯಾಮೆರಾ ವರ್ಕ್ ಮಾಡಿದ್ದ ಭುವನ್ ಗೌಡ ಇಲ್ಲೂ ಮಿಂಚಿದ್ದು ವಿಶೇಷ ಎನ್ನಬಹುದು. ಇದರ ಜೊತೆ ಕನ್ನಡ ಚಿತ್ರರಂಗದ ದೊಡ್ಡ ನಟರು & ನಟಿಯರ ದಂಡೇ 'ಸಲಾರ್' ಸಿನಿಮಾಗೆ ಕೆಲಸ ಮಾಡಿದ್ದು, ಪ್ರಭಾಸ್‌ಗೆ ಸಾಥ್ ಕೊಟ್ಟಿದೆ. ಹಾಗಾದರೆ ಸಲಾರ್ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ?

ಸುಲಭವಾಗಿ 400 ಕೋಟಿ ವಸೂಲಿ!
ಯೆಸ್, ಎಲ್ಲವೂ ಅಂದುಕೊಂಡ ರೀತಿಯೇ ನಡೆದಿದೆ. ನಟ ಬಾಹುಬಲಿ ಪ್ರಭಾಸ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅದರಲ್ಲೂ ಪ್ರಶಾಂತ್ ನೀಲ್ ಅವರ ಡೈರೆಕ್ಷನ್ ಇಲ್ಲೂ ಇತಿಹಾಸ ನಿರ್ಮಿಸಿದೆ. ಕನ್ನಡಿಗರು ಸೇರಿ ನಿರ್ಮಿಸಿರುವ 'ಸಲಾರ್' ಸಿನಿಮಾ ಬರೋಬ್ಬರಿ 400 ಕೋಟಿ ಹಣವನ್ನು ಸುಲಭವಾಗಿ ವಸೂಲಿ ಮಾಡಿದೆ ಎನ್ನಲಾಗಿದೆ. ಈ ಸಾಧನೆಯನ್ನ ಕೇವಲ 3ನೇ ದಿನಕ್ಕೆ ಸಾಧಿಸಿದೆ ಕನ್ನಡಿಗರು ನಿರ್ಮಿಸಿರುವ ತೆಲುಗು ಸಿನಿಮಾ 'ಸಲಾರ್'. ಜಗತ್ತಿನಾದ್ಯಂತ ಪ್ರಭಾಸ್ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಳ್ಳುತ್ತಿದ್ದಾರೆ.
ಕ್ರಿಸ್‌ಮಸ್ ರಜೆಯಲ್ಲಿ ಸಂಭ್ರಮ ಡಬಲ್
ಅಷ್ಟಕ್ಕೂ 'ಸಲಾರ್' ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಸಿನಿಮಾ ತಂಡ ಒಳ್ಳೆಯ ನಿರ್ಧಾರನ ಕೈಗೊಂಡಿತ್ತು. ಡಿಸೆಂಬರ್ 22ಕ್ಕೆ ಸಲಾರ್ ರಿಲೀಸ್ ಮಾಡುವ ಮೂಲಕ ಟ್ರೆಂಡ್ ಹುಟ್ಟುಹಾಕಿ ಕೋಟಿ ಕೋಟಿ ಬಾಚಿದೆ. ಡಿ. 22ರ ಶುಕ್ರವಾರ ರಿಲೀಸ್ ಆಗಿದ್ದ ಸಲಾರ್ ನೂರಾರು ಕೋಟಿ ಹಣವನ್ನು ಬಾಚಿತ್ತು. ಮೊದಲ ದಿನವೇ 175 ಕೋಟಿಗೂ ಹೆಚ್ಚು ಗಳಿಸಿ ಇತಿಹಾಸ ನಿರ್ಮಾಣ ಮಾಡಿತ್ತು.

ಇನ್ನು ಮರುದಿನ ಅಂದರೆ ಡಿ. 23ರ ಶನಿವಾರ ಹಲವರಿಗೆ ರಜೆ ಇದ್ದು, ನಂತರ ಭಾನುವಾರ ಮತ್ತಷ್ಟು ಪ್ರೇಕ್ಷಕರು ಥಿಯೇಟರ್‌ಗೆ ಓಡಿ ಬಂದರು. ಜೊತೆಗೆ ಇಂದು ಕ್ರಿಸ್‌ಮಸ್ ರಜೆ ಇರೋದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿತ್ತು. ಹೀಗಾಗಿ, ಸಲಾರ್ ನೋಡೋಕೆ ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ. ಇಂದು ಕೂಡ ಭರ್ಜರಿಯಾಗಿ ಗಳಿಕೆ ಮಾಡುವ ನಿರೀಕ್ಷೆ ಇದೆ.
ಸಿನಿಮಾ ಮಾಡಲು ಎಷ್ಟು ಕೋಟಿ?
ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ 4ನೇ ಸಿನಿಮಾ 'ಸಲಾರ್' ಎಲ್ಲೆಲ್ಲೂ ಅಬ್ಬರಿಸುತ್ತಿದೆ. ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ಈ ಸಿನಿಮಾ ಈಗಾಗಲೇ ಬಂಡವಾಳ ವಸೂಲಿ ಮಾಡಿದೆ. ನಿನ್ನೆವರೆಗೂ ಸಿನಿಮಾ 400 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದೆ ಸಲಾರ್. ಇನ್ನು ಇಂದು ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ, ಸಲಾರ್ ಸಿನಿಮಾ ಇಂದು ಮತ್ತಷ್ಟು ದೊಡ್ಡ ಮೊತ್ತದ ಹಣ ಗಳಿಸುವ ನಿರೀಕ್ಷೆ ಇದೆ.
ಒಟ್ನಲ್ಲಿ, ಸಲಾರ್ ಮತ್ತೊಮ್ಮೆ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯ ಖದರ್ ಏನೆಂದು ತೋರಿಸಿದೆ. ಸಲಾರ್ ಇನ್ನೂ ಹಲವು ದಿನಗಳ ಕಾಲ ಇದೇ ರೀತಿಯ ಅಬ್ಬರವನ್ನ ತೋರಿ, ಮತ್ತಷ್ಟು ದಾಖಲೆಗಳನ್ನು ಸರಿಗಟ್ಟುವ ನಿರೀಕ್ಷೆ ಇದೆ. ಹಾಗೇ ದಿನದಿಂದ ದಿನಕ್ಕೆ ಸ್ಕ್ರೀನ್‌ಗಳ ಸಂಖ್ಯೆ ಕೂಡ ಹೆಚ್ಚಿಸಿಕೊಳ್ಳುತ್ತಿದೆ. ಹೀಗಾಗಿ ಅಭಿಮಾನಿಗಳ ಕ್ರೇಜ್ ಕೂಡ ಡಬಲ್ ಆಗಿದೆ. ಜೊತೆಗೆ ಗಲ್ಲಾಪೆಟ್ಟಿಗೆ ಅಖಾಡ ಕೂಡ ಝಣ ಝಣ ಎನ್ನುತ್ತಿದೆ.












Click it and Unblock the Notifications