ಡಾರ್ಲಿಂಗ್ ಪ್ರಭಾಸ್ ‘ಸಲಾರ್’ ಸಂಭ್ರಮದಲ್ಲಿ ಕನ್ನಡಿಗರ ಮಿಲನ!
ಹೊಂಬಾಳೆ ಫಿಲ್ಮ್ಸ್ ದೊಡ್ಡ ಸವಾಲನ್ನು ಗೆದ್ದು ಬೀಗಿದ್ದು. ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ನೀಡಿರುವ, ಕನ್ನಡಿಗರೇ ಕಟ್ಟಿ ಬೆಳೆಸಿದ 'ಹೊಂಬಾಳೆ ಫಿಲ್ಮ್ಸ್' ಮತ್ತೊಂದು ಸಾಧನೆ ಮಾಡಿದೆ. ಅಷ್ಟಕ್ಕೂ ಡಾರ್ಲಿಂಗ್ ಪ್ರಭಾಸ್‌ರ ಸಲಾರ್ ಸಿನಿಮಾ ನಿರ್ಮಾಣ ಮಾಡಿ, ಗೆಲುವಿನ ನಿರೀಕ್ಷೆಯಲ್ಲಿ ಇದ್ದ 'ಹೊಂಬಾಳೆ'ಗೆ ಭರ್ಜರಿ ಜಯ ಸಿಕ್ಕಿದೆ. ಹೀಗಾಗಿಯೇ ಎಲ್ಲರೂ ಸೇರಿ, ಸಂಭ್ರಮಾಚಾರಣೆ ಮಾಡಿದ್ದಾರೆ. ಆ ವಿಡಿಯೋ ಈಗ ಶೇರ್ ಮಾಡಿದೆ ಹೊಂಬಾಳೆ ಸಂಸ್ಥೆ & ಆ ವಿಡಿಯೋ ನೋಡಲು ಮುಂದೆ ಓದಿ.
ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಿರುವ ಪ್ರಭಾಸ್ ಅಭಿನಯದ 'ಸಲಾರ್' ಚಿತ್ರ ಪ್ರಶಾಂತ್ ನೀಲ್ ಕೈಚಳಕವನ್ನ ಸ್ಪಷ್ಟಪಡಿಸಿದೆ. ಪ್ರೀತಿ & ಸ್ನೇಹದ ನಡುವೆ ಹಿಂಸೆಯು ಯಾಕೆ ಶುರುವಾಯ್ತು ಅನ್ನೋದನ್ನ ಹೇಳಿದೆ ಸಿನಿಮಾ. ಹಾಗೇ ಕೊನೆಯಲ್ಲಿ ಸ್ನೇಹಿತರು ಹೇಗೆ ದೊಡ್ಡ ಶತ್ರುಗಳಾಗಿ ಬೆಳೆಯುತ್ತಾರೆ? ಅನ್ನೋ ಹಿಂಟ್ ಸಿಕ್ಕಿದೆ. ಈ ಮೂಲಕ ಪ್ರಭಾಸ್ & ಪೃತ್ವಿರಾಜ್‌ಗು ದೊಡ್ಡ ಬ್ರೇಕ್ ಸಿಕ್ಕಿದೆ. ಹೀಗೆ ಸಲಾರ್ ಸಿನಿಮಾ ಎಲ್ಲಾ ವಿಭಾಗದಲ್ಲೂ ದೊಡ್ಡ ಹೆಸರನ್ನು ಗಳಿಸಿದೆ. ಇದರ ಜೊತೆಗೆ 25 ದಿನ ಪೂರೈಸಿ ಸುಮಾರು 750 ಕೋಟಿ ಸಂಪಾದನೆ ಮಾಡಿದೆ. ಈ ಸಮಯದಲ್ಲೇ ಸಿನಿಮಾ ಟೀಂ ಸಂಭ್ರಮಾಚರಣೆ ನಡೆಸಿದೆ.

ಸಿನಿಮಾ ನೆಕ್ಸ್ಟ್ ಲೆವೆಲ್!
ಅಂದಹಾಗೆ ಯಾವಾಗ ಸಲಾರ್ ಸೆಟ್ಟೇರಿತ್ತೋ ಅಂದೇ ಈ ಸಿನಿಮಾ ನೆಕ್ಸ್ಟ್ ಲೆವೆಲ್ ಹೋಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತೆ ಅಂತಾ ಪ್ರಶಾಂತ್ ನೀಲ್ & ಪ್ರಭಾಸ್ ಅಭಿಮಾನಿ ಬಳಗ ನಿರ್ಧಾರ ಮಾಡಿತ್ತು. ಎಲ್ಲವೂ ಈಗ ಅಂದುಕೊಂಡ ರೀತಿಯೆ ನಡೆದು ಹೋಗಿದ್ದು. ಪ್ರಚಂಡ ಗೆಲುವು ಕಂಡಿರುವ ಸಲಾರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಹಣ ಗಳಿಸಿ, ದಕ್ಷಿಣ ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ. ಹೀಗೆ ಸಿನಿಮಾ ಟೀಂ ಭರ್ಜರಿಯಾಗಿ ಸಂಭ್ರಮಿಸಿದ್ದು, ಅದರ ವಿಡಿಯೋ ನೋಡಲು ಮುಂದೆ ಓದಿ.
ಡಾರ್ಲಿಂಗ್ ಪ್ರಭಾಸ್‌ಗೆ ನೆಮ್ಮದಿ!
ಪ್ರಭಾಸ್ ಅಂದ್ರೆ ಮಾಸ್, ಪ್ರಭಾಸ್ ಅಂದ್ರೆ ಕ್ಲಾಸ್ ಹೀಗೆ ಎಲ್ಲಾ ರೀತಿ ಪಾತ್ರಗಳಿಗೆ ನಟ ಪ್ರಭಾಸ್ ಹೊಂದಿಕೊಳ್ಳುತ್ತಾರೆ. ಆದರೆ ಬಾಹುಬಲಿ ಬಳಿಕ ಸಾಲು ಸಾಲು ಸೋಲು ನಟ ಪ್ರಭಾಸ್ ಅವರ ಬೆನ್ನು ಹತ್ತಿದ್ದವು. 'ರಾಧೆ ಶ್ಯಾಮ್' & 'ಆದಿಪುರುಷ್' ಸೋಲು ಪ್ರಭಾಸ್ ಅವರನ್ನ ಸಖತ್ ಕಂಗೆಡಿಸಿ, ಅಭಿಮಾನಿಗಳಲ್ಲೂ ಆತಂಕ ಹುಟ್ಟಿಸಿದ್ದವು. ಇದೇ ಕಾರಣಕ್ಕೆ 'ಸಲಾರ್' ಸಿನಿಮಾ ಮೇಲೆ ಕೋಟ್ಯಂತರ ಫ್ಯಾನ್ಸ್ ನಂಬಿಕೆಯ ಇಟ್ಟು ಕಾಯುತ್ತಿದ್ದರು. ಆ ನಿರೀಕ್ಷೆ ಸುಳ್ಳಾಗದೆ ಈಗ ನಿಜವಾಗಿ, ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿ ಬಂದಿದೆ.
ಬರ್ತಾ ಇದೆ ಸಲಾರ್ ಚಾಪ್ಟರ್-2
ಸಲಾರ್ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಅತ್ಯದ್ಭುತ ಎನ್ನುವ ಮಾತುಗಳು ಕೇಳಿಬಂದಿವೆ. ಪ್ರಶಾಂತ್ ನೀಲ್ ಇಲ್ಲಿ ತಮ್ಮ ಕೈಚಳಕ ತೋರಿಸಿದ್ದು, ಕೆಜಿಎಫ್ ಚಾಪ್ಟರ್ 1 ರೀತಿ ಇಲ್ಲಿಯೂ ಸರ್ಪ್ರೈಸ್ ಕ್ಲೈಮ್ಯಾಕ್ಸ್ ಇಟ್ಟಿದ್ದಾರೆ. ಈ ಮೂಲಕ ಸಲಾರ್ 1 ಕೊನೆಯಲ್ಲಿ ಸಲಾರ್ ಚಾಪ್ಟರ್ 2 ಕುರಿತಾಗಿ ದೊಡ್ಡ ಹಿಂಟ್ ಕೊಟ್ಟಿದ್ದಾರೆ. ಅಭಿಮಾನಿಗಳಿಗೆ ಈ ಸಿನಿಮಾ ದೊಡ್ಡ, ಅತಿದೊಡ್ಡ ಸರ್ಪ್ರೈಸ್ ನೀಡಿದೆ. ಪ್ರಭಾಸ್ ಅವರು ಇದೀಗ, ಸೋಲಿನ ಸುಳಿಯಿಂದ ಹೊರಗಡೆ ಬಂದು ತಮ್ಮ ಖದರ್ ತೋರಿಸಿದ್ದಾರೆ. ಸಲಾರ್-2 ಬಗ್ಗೆಯೂ ಈ ಮೂಲಕ ಹೊಸ ಕುತೂಹಲ ಮೊಳಕೆ ಒಡೆದಿದೆ.

ಒಟ್ನಲ್ಲಿ ಸಲಾರ್ ಸಿನಿಮಾ ತಂಡ ಸಂಭ್ರಮಿಸಿದೆ, ಹಾಗೇ ಸಿನಿಮಾ ಗೆದ್ದ ಖುಷಿಯನ್ನ ಈಗ ಹಂಚಿಕೊಂಡಿದೆ. ಇದೇ ಸಮಯದಲ್ಲಿ ಸಲಾರ್-2 ಶೂಟಿಂಗ್ ಶುರು ಮಾಡೋದಕ್ಕೆ ಕೂಡ ತಯಾರಿ ಆರಂಭವಾಗಿದೆ. ಇನ್ನೇನು ಕೆಲ ದಿನದಲ್ಲಿ, ಸಲಾರ್-2 ಶೂಟಿಂಗ್ ಶುರು ಆಗುವ ನಿರೀಕ್ಷೆ ಇದೆ. ಹೀಗಾಗಿ ಪ್ರಶಾಂತ್ ನೀಲ್ ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯೂ ಇದೆ.












Click it and Unblock the Notifications