‘ಡಿ-ಬಾಸ್’ ದರ್ಶನ್ ನಿರ್ದೇಶಕ ಪ್ರಶಾಂತ್ ನೀಲ್‌ಗೆ ‘ಹ್ಯಾಟ್ಸ್‌ ಆಫ್’ ಹೇಳಿದ್ದೇಕೆ?

ಪ್ರಶಾಂತ್ ನೀಲ್ ಅವರು ಒಂದು ಕಾಲದಲ್ಲಿ ಭಾರಿ ಸಮಸ್ಯೆ ಎದುರಿಸಿ, ಮನೆಯನ್ನು ಕೂಡ ಮಾರಿಕೊಂಡು 'ಉಗ್ರಂ' ಸಿನಿಮಾ ರಿಲೀಸ್ ಮಾಡಿದ್ದು ನಿಮಗೆ ಗೊತ್ತಿದೆ. ಅದರಲ್ಲೂ ಆಗ 'ಡಿ-ಬಾಸ್' ದರ್ಶನ್ ಇರದೇ ಹೋಗಿದ್ರೆ, 'ಉಗ್ರಂ' ಸಿನಿಮಾ ರಿಲೀಸ್ ಮಾಡೋದಕ್ಕೆ ಕೂಡ ಕಷ್ಟವಾಗುತ್ತಿತ್ತು ಅನ್ನೋದು ಇತ್ತೀಚಿಗೆ ಪ್ರಶಾಂತ್ ನೀಲ್ ಅವರಿಂದಲೇ ಗೊತ್ತಾಗಿತ್ತು. ಆದರೆ ಈಗ ದರ್ಶನ್ ಅವರು ಪ್ರಶಾಂತ್ ನೀಲ್‌ಗೆ 'ಹ್ಯಾಟ್ಸ್‌ ಆಫ್' ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.

ಹೌದು, ಕನ್ನಡ ಸಿನಿಮಾ ರಂಗದಲ್ಲಿ ದರ್ಶನ್ ಅವರು ದೊಡ್ಡ ದೊಡ್ಡ ಸಿನಿಮಾ ಮೂಲಕ ಮಾತ್ರ ಹೆಸರು ಮಾಡಿಲ್ಲ. ದೊಡ್ಡ ದೊಡ್ಡ ಸಿನಿಮಾಗಳನ್ನು ರಿಲೀಸ್ ಮಾಡುವ ಮೂಲಕ ಕೂಡ ಹೆಸರು ಗಳಿಸಿದ್ದಾರೆ. ಇದರ ಜೊತೆಗೆ ಸಂಕಷ್ಟಕ್ಕೆ ಸಿಲುಕಿದ ಹಲವರಿಗೆ, ಸಹಾಯ ಕೂಡ ಮಾಡಿ ಹೊಸಬರ ಸಿನಿಮಾಗಳಿಗೆ ಬೆನ್ನೆಲುಬಾಗಿ ದರ್ಶನ್ ನಿಂತಿದ್ದರು. ಇದೀಗ ಅಂತಹದ್ದೇ ಘಟನೆ ಒಂದು ವೈರಲ್ ಆಗುತ್ತಿದೆ. 'ಉಗ್ರಂ' ಬಿಡುಗಡೆ ಆಗಿದ್ದ ಸಮಯದಲ್ಲಿ ನಟ ದರ್ಶನ್ ಅವರು ಪ್ರಶಾಂತ್ ನೀಲ್ ಕುರಿತು & ನಟ ಶ್ರೀಮುರಳಿ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Salaar Director Prashanth Neel And Actor Darshan In One Video

'ಹ್ಯಾಟ್ಸ್‌ ಆಫ್' ಪ್ರಶಾಂತ್ ನೀಲ್!

ಅಂದಹಾಗೆ ಪ್ರಶಾಂತ್ ನೀಲ್ ಅವರ ಮೊದಲ ಕನ್ನಡ ಸಿನಿಮಾ 'ಉಗ್ರಂ' ಬಿಡುಗಡೆಗಾಗಿ, ಸಾಕಷ್ಟು ಸೈಕಲ್ ಹೊಡೆದಿದ್ದ ನೀಲ್ ಅವರಿಗೆ ದರ್ಶನ್ ಸಪೋರ್ಟ್ ಮಾಡಿದ್ದರು. ಉಗ್ರಂ ಮೂಲಕ ಹೊಸ ಜೀವನ ಪಡೆದ ನಟ ಮುರಳಿಗೆ ಕೊಟ್ಟ ಮಾತಿನಂತೆ ದರ್ಶನ್ ಅವರು ಆಗ ಉಗ್ರಂ ಸಿನಿಮಾದ ವಿತರಣೆ ಮಾಡಿದ್ದರಂತೆ. ಈ ಮೂಲಕ ಅಂದು ಸಂಕಷ್ಟಕ್ಕೆ ಸಿಲುಕಿದ್ದ, ಸಾಕಷ್ಟು ಸಮಸ್ಯೆ ಎದುರಿಸಿದ್ದ ಪ್ರಶಾಂತ್ ನೀಲ್ ಮತ್ತು ನಟ ಮುರಳಿ ಅವರಿಗೆ ಸಿಕ್ಕಾಪಟ್ಟೆ ಸಪೋರ್ಟ್ ಮಾಡಿದ್ದರು ದರ್ಶನ್. ಹೀಗೆ ನಟ ದರ್ಶನ್ ಸುಮಾರು 10 ವರ್ಷಗಳ ಹಿಂದೆ, ಉಗ್ರಂ ಸಿನಿಮಾ ತಂಡದ ಪ್ರಶಾಂತ್ ನೀಲ್ & ಮುರಳಿ ಜೊತೆ ನಿಂತು ಮಾತನಾಡಿದ್ದ ಹಳೇ ವಿಡಿಯೋ ಈಗ ವೈರಲ್ ಆಗುತ್ತಿದೆ.

ಸಿನಿಮಾ ನೋಡಲು ದರ್ಶನ್ ಮನವಿ!

ಇನ್ನ ಈ ವಿಡಿಯೋದಲ್ಲಿ ನಟ ದರ್ಶನ್ ಅವರು 'ಉಗ್ರಂ' ಸಿನಿಮಾ ವಿಶೇಷ ಪ್ರದರ್ಶನ ನೋಡಿ ಮಾತನಾಡಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ್ದ ನಟ ದರ್ಶನ್ ಅವರು 'ಉಗ್ರಂ' ಸಿನಿಮಾದಲ್ಲಿ ನಟ ಮುರಳಿ ಅವರ ನಟನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು. ಅಲ್ಲದೆ ಇದೇ ವೇಳೆ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಅವರಿಗೆ ದರ್ಶನ್ ಅವರು ನೇರ 'ಹ್ಯಾಟ್ಸ್‌ ಆಫ್' ಹೇಳಿ ಇದೊಂದು ಬ್ಲಾಕ್ ಬಸ್ಟರ್ ಸಿನಿಮಾ ಆಗುತ್ತೆ ಅಂತಾ ಭವಿಷ್ಯ ನುಡಿದಿದ್ದರು.

Salaar Director Prashanth Neel And Actor Darshan In One Video

'ದರ್ಶನ್ ಅವರು ಇರದೇ ಇದ್ದಿದ್ದರೆ...'

ಪ್ರಶಾಂತ್ ನೀಲ್ ಕೆಲ ದಿನಗಳ ಹಿಂದೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಶ್ರೀಮುರಳಿ ಅವರ ಜೊತೆ 'ಉಗ್ರಂ' ಮಾಡುವಾಗ ತುಂಬಾ ಕಷ್ಟ ಎದುರಾಗಿತ್ತಂತೆ. ಆಗ ನಟನಾಗಿ ಶ್ರೀಮುರಳಿಗೂ ಹಿನ್ನಡೆ ಆಗುತ್ತಿತ್ತು. ಹೀಗಿದ್ದಾಗ ಮುರಳಿ ಅಭಿನಯಿಸಿದ್ದ ಉಗ್ರಂ ರಿಲೀಸ್ ಮಾಡೋದು ಕೂಡ ಕಷ್ಟವಾಗಿತ್ತಂತೆ. ಇಂತಹ ಸಮಯದಲ್ಲಿ, ಪ್ರಶಾಂತ್ ನೀಲ್ ಅವರಿಗೆ ಸಹಾಯ ಮಾಡಿದ್ದವರು ಡಿ-ಬಾಸ್ ದರ್ಶನ್.

ಸಿನಿಮಾಗಾಗಿ ಮನೆ ಮಾರಿಕೊಂಡರು..

ದರ್ಶನ್ ಸರ್ & ದಿನಕರ್ ಸರ್ ಸಹಾಯ ಮಾಡದೇ ಇದ್ದಿದ್ದರೆ 'ಉಗ್ರಂ' ಸಿನಿಮಾವನ್ನ ರಿಲೀಸ್ ಮಾಡೋದು ಕೂಡ ಕಷ್ಟ ಆಗುತ್ತಿತ್ತು. ಆದರೆ ಅವರು ಮಾಡಿದ ಸಹಾಯ ನಮಗೆ ದೊಡ್ಡ ಬಲ ನೀಡಿತ್ತು ಎಂದ್ದರು ಪ್ರಶಾಂತ್ ನೀಲ್. ಇದೇ ವೇಳೆ ತಮಗೆ ಅಲ್ಲಿ ಎದುರಾಗಿದ್ದ ಸಂಕಷ್ಟಗಳಿಂದ ನೀಲ್ ಹೇಗೆ ಮನೆ ಮಾರಿಕೊಂಡರು ಎಂಬ ಮಾಹಿತಿ ಶೇರ್ ಮಾಡಿದ್ದರು. ಪ್ರಶಾಂತ್ ನೀಲ್‌ರ ಈ ಹೇಳಿಕೆ & ನಟ ದರ್ಶನ್ & ಡೈರೆಕ್ಟರ್ ದಿನಕರ್ ಅವರ ಸಹಾಯವನ್ನ ನೆನೆಸಿಕೊಂಡ ಮಾತು ವೈರಲ್ ಆಗಿತ್ತು. ಜೊತೆಗೆ ಈಗ ಉಗ್ರಂ ಸಿನಿಮಾ ಬಗ್ಗೆ ದರ್ಶನ್ ಖುದ್ದಾಗಿ ಮಾತನಾಡಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಡಿ-ಬಾಸ್ ಬಗ್ಗೆ ಅಭಿಮಾನಿಗಳು ಹೆಮ್ಮೆಯನ್ನ ಕೂಡ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+