ಸಿಂಪಲ್ ಬ್ಯೂಟಿ ಎಂದವರಿಗೆ ನಟಿ ಸಾಯಿ ಪಲ್ಲವಿ ಹೀಗಾ ಶಾಕ್ ಕೊಡೋದು?
ಬಹುಭಾಷಾ ನಟಿ ಸಾಯಿ ಪಲ್ಲವಿ ಅವರನ್ನು ಸಿಂಪಲ್ ಸ್ಟಾರ್, ಸಿಂಪಲ್ ಬ್ಯೂಟಿ ಎಂದೇ ಕರೆಯುತ್ತಾರೆ. ಅವರ ಅಭಿನಯ ಹಾಗೂ ಅಂದ ಕೂಡ ಸಿಂಪಲ್ ಆಗಿರುತ್ತೆ ಎನ್ನುತ್ತಾರೆ ಅವರ ಅಭಿಮಾನಿಗಳು. ಮೇಕಪ್‌ಗೆ ಹೆಚ್ಚು ಆದ್ಯತೆ ಕೊಡದೆ ಇರುವ ಅಂದವೇ ಸಾಕು ಅನ್ನೋದು ಸಾಯಿ ಪಲ್ಲವಿ ಸ್ಟೈಲ್. ಬೇರೆ ನಟಿಯರಂತೆ ಹೆಚ್ಚಾಗಿ ಮಾಡ್ರನ್ ಡ್ರೆಸ್‌ಗಳನ್ನು ಕೂಡ ಹಾಕೋ ಗೋಜಿಗೆ ಸಾಯಿ ಪಲ್ಲವಿ ಹೋಗುತ್ತಿರಲಿಲ್ಲ. ಹೀಗಾಗಿ ಪಕ್ಕಾ ಸಿಂಪಲ್ ಬ್ಯೂಟಿ ಎಂದು ಅವರನ್ನು ಕರೆಯುವುದು ಮಾತ್ರವಲ್ಲದೆ, ಇದೇ ಸಿಂಪಲ್‌ಗೆ ದೊಡ್ಡ ಅಭಿಮಾನಿ ಬಳಗವೂ ಇದೆ. ಆದರೆ ಸಾಯಿ ಪಲ್ಲವಿ ಅವರ ಇತ್ತೀಚಿನ ಫೋಟೋಗಳು ವೈರಲ್ ಆಗಿದ್ದು, ಸಿಂಪಲ್ ಬ್ಯೂಟಿ ಹೀಗಾ ಶಾಕ್ ಕೊಡೋದು ಅಂತ ಬೆರಗಾಗಿದ್ದಾರೆ. ಅಂತಹ ಬಟ್ಟೆ ಧರಿಸಿದ್ದಾರೆ ಸಾಯಿ ಪಲ್ಲವಿ.
ತಮಿಳು, ತೆಲುಗು ಸಿನಿಮಾಗಳಿಂದ ಫೇಮಸ್ ಆಗಿರುವ ನಟಿ ಸಾಯಿ ಪಲ್ಲವಿ ಇತ್ತೀಚೆಗೆ ಬೀಚ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೇನು ವಿಶೇಷ? ಅಂತ ಜನ ಕೇಳಬಹುದು. ಆದರೆ ವಿಶೇಷ ಇರೋದೇ ಅಲ್ಲಿ. ಸಾಯಿ ಪಲ್ಲವಿ ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಬೀಚ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಹೋದರಿ ಹಂಚಿಕೊಂಡ ಬೀಚ್ ಫೋಟೋಗಳಲ್ಲಿ ನಟಿ ಸ್ವಿಮ್ ಸೂಟ್ ಧರಿಸಿದ್ದಾರೆ. ಈ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು, ನಟಿ ಮೇಲೆ ಟೀಕೆಗಳು ಕೂಡ ಕೇಳಿಬಂದಿವೆ. ಸಾಯಿ ಪಲ್ಲವಿ ಅವರನ್ನು ಇಂತಹ ಗೆಟಪ್‌ನಲ್ಲಿ ನಾವು ನಿರೀಕ್ಷಿಸಿರಲಿಲ್ಲ ಎಂದೆಲ್ಲ ಟ್ರೋಲ್ ಕೂಡ ಮಾಡುತ್ತಿದ್ದಾರೆ.

ಸರಳತೆ ಮತ್ತು ಸರಳ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದ ನಟಿ ಸಾಯಿ ಪಲ್ಲವಿ, ಇತ್ತೀಚೆಗೆ ತಮ್ಮ ಸಹೋದರಿ ಪೂಜಾ ಕಣ್ಣನ್ ಜೊತೆಗಿನ ಬೀಚ್ ಫೋಟೋಗಳು ಆನ್‌ಲೈನ್‌ನಲ್ಲಿ ಹರಿದಾಡಿದ್ದರಿಂದ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗ್ತಿದ್ದಾರೆ. ಆದರೆ ಈ ಫೋಟೋಗಳನ್ನು ಸಾಯಿ ಪಲ್ಲವಿ ಎಲ್ಲೂ ಶೇರ್ ಮಾಡಿಕೊಂಡಿಲ್ಲ. ಬದಲಿಗೆ ಆಕೆಯ ಸಹೋದರಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಈ ಫಜೀತಿ ಮಾಡಿದ್ದಾರೆ. ನಟಿ ಈಜುಡುಗೆ ಧರಿಸಿದ್ದಕ್ಕಾಗಿ ಅವರನ್ನು ಗುರಿಯಾಗಿಸಿಕೊಂಡು ಟ್ರೋಲ್‌ಗಳ ಸುರಿಮಳೆ ಹರಿದಿದೆ. ಇದು ಅವರ ಅಭಿಮಾನಿಗಳ ನಡುವೆಯೂ ಜಗಳ ನಡೆಯುತ್ತಿದೆ.
ವೀಕೆಂಡ್‌ನಲ್ಲಿ ಪೂಜಾ ಕಣ್ಣನ್ ತಮ್ಮ ಬೀಚ್ ಟ್ರಿಪ್‌ನ ಸ್ನ್ಯಾಪ್‌ಶಾಟ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸಾಯಿ ಪಲ್ಲವಿ ಕ್ಲಿಕ್ ಮಾಡಿದ ಹಲವು ಚಿತ್ರಗಳಲ್ಲಿ ಪೂಜಾ ಬೀಚ್‌ನಲ್ಲಿ ಕುಳಿತಿರುವುದು, ನಗುತ್ತಿರುವುದನ್ನು ತೋರಿಸಲಾಗಿದೆ. ಪೋಸ್ಟ್‌ನಲ್ಲಿ ಸಹೋದರಿಯರು ಒಟ್ಟಿಗೆ ಇರುವ ಸೆಲ್ಫಿಗಳು ಸಹ ಇವೆ. ಆದರೆ ಸಾಯಿ ಪಲ್ಲವಿ ಒಂದು ಕೆಲ ಫೋಟೋಗಳಲ್ಲಿ ಈಜುಡುಗೆ ಮತ್ತು ಇನ್ನೊಂದರಲ್ಲಿ ವೆಟ್‌ಸೂಟ್ ಧರಿಸಿದ್ದಾರೆ.
ಈ ಫೋಟೋಗಳನ್ನು ಪೋಸ್ಟ್ ಮಾಡಿದ ಸ್ವಲ್ಪ ಸಮಯದ ಬಳಿಕ ನಟಿ ಈಜುಡುಗೆ ಧರಿಸಿದರ ಬಗ್ಗೆ ಟ್ರೋಲ್, ಕಾಮೆಂಟ್ ಮಾಡಿದ್ದಾರೆ. ಸಾಯಿ ಅವರು ಕೂಡ ಎಲ್ಲಾ ಹೀರೋಯಿನ್‌ಗಳಂತೆಯೇ ಎಂದು ಸಾಬೀತಾಗಿದೆ. ಇನ್ನು ಸಾಂಪ್ರದಾಯಿಕ ಉಡುಗೆಗಳನ್ನು ಬದಿಗಿಡಿ, ತೆರೆಯ ಮೇಲಿನ ಸಾಂಪ್ರದಾಯಿಕ ಸಾಯಿ ಪಲ್ಲವಿ, ನಿಜ ಜೀವನದಲ್ಲಿ ಬಿಕಿನಿ ಧರಿಸುತ್ತಾರೆ ಎಂದೆಲ್ಲ ವ್ಯಂಗ್ಯ ಮಾಡಲಾಗುತ್ತಿದೆ. ಇದರ ನಡುವೆ ಅವರ ಅಭಿಮಾನಿಗಳು ನಟಿಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಅವರು ಸ್ವಿಮ್ ಸೂಟ್ ಧರಿಸುವುದು ಸಂಪೂರ್ಣವಾಗಿ ವೈಯಕ್ತಿಕ ಮತ್ತು ಅಲ್ಲದೆ ಬೀಚ್‌ನಲ್ಲಿ ಧರಿಸುವ ಬಟ್ಟೆಯನ್ನೇ ಹಾಕಿದ್ದಾರೆ, ಇದರಲ್ಲಿ ತಪ್ಪೇನು? ಎಂದು ತಿರುಗಿಬಿದ್ದಿದ್ದಾರೆ.
ವೈರಲ್ ಆಗಿದ್ದು ಎಐ ಫೋಟೋಗಳಾ?
ಸಾಯಿ ಪಲ್ಲವಿ ಅವರ ಫೋಟೋಗಳು ರಿಯಲ್ ಅಲ್ಲ, ಇದು ಎಐನಿಂದ ಮಾಡಿರುವ ಫೋಟೋಗಳು, ಕೆಲವರು ಅದನ್ನು ಬೇಕಂತಲೇ ವೈರಲ್ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಂದು ವೇಳೆ ನಿಜವೇ ಆದರೂ ಸಾಯಿ ಪಲ್ಲವಿ ಅವರ ಆಸೆ ಅದು. ಅವರು ಏನು ಧರಿಸಬೇಕು ಎಂಬುದು ಅವರಿಗೆ ಬಿಟ್ಟಿದ್ದು. ಬೀಚ್‌ನಲ್ಲಿ ಸ್ವಿಮ್‌ಸೂಟ್ ಧರಿಸದೆ ಸೀರೇ ಉಡಬೇಕಾ? ಎಂದು ಕಾಮೆಂಟ್‌ಗಳಲ್ಲೇ ಜಾಡಿಸಿದ್ದಾರೆ. ಜನರು ಈಜುವಾಗ ಈಜುಡುಗೆ ಧರಿಸುತ್ತಾರೆ. ಜನರು ತಮಗೆ ಅನುಕೂಲಕರವಾದದ್ದನ್ನು ಧರಿಸಬಹುದು, ಅದು ಅವರ ಆಯ್ಕೆ ಎಂದು ಖಡಕ್ ತಿರುಗೇಟು ನೀಡಿದ್ದಾರೆ.












Click it and Unblock the Notifications