Dk Shivakumar: ಡಿ.ಕೆ ಶಿವಕುಮಾರ್‌ ಪರ ಬ್ಯಾಟ್ ಬೀಸಿದ ಸಾಧು ಕೋಕಿಲ!

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಕನ್ನಡ ಸಿನಿಮಾರಂಗದವರ ಬಗ್ಗೆ ಕೊಟ್ಟಿರುವ ಹೇಳಿಕೆಯು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗಲೇ ಈ ಹೇಳಿಕೆಯನ್ನು ನಟಿ ರಮ್ಯಾ ಹಾಗೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹಾಗೂ ಹಾಸ್ಯ ನಟ ಸಾಧುಕೋಕಿಲ ಅವರು ಡಿ.ಕೆ ಶಿವಕುಮಾರ್‌ ಅವರ ಪರವಹಿಸಿಕೊಂಡು ಮಾತನಾಡಿರುವುದು ವೈರಲ್ ಆಗುತ್ತಿದೆ. ಕನ್ನಡ ಚಿತ್ರರಂಗದ ನಟ್ಟು ಬೋಲ್ಟು ಟೈಟ್‌ ಮಾಡುವುದು ನನಗೆ ಗೊತ್ತಿದೆ ಎಂದು ಡಿ.ಕೆ ಶಿವಕುಮಾರ್‌ ಅವರು ಹೇಳಿದ್ದರು. ಇದೀಗ ಈ ವಿಚಾರವಾಗಿ ವಾದ - ವಿವಾದ ಮುಂದುವರಿದಿದೆ. ಅದರ ನಡುವೆ ಕೆಲವರು ಡಿ.ಕೆ ಶಿವಕುಮಾರ್ ಅವರು ಹೇಳಿದ್ದು ಸರಿ ಎನ್ನುತ್ತಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.

ಡಿ.ಕೆ ಸಾಹೇಬ್ರು ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಎಲ್ಲರೂ ಕಾರ್ಯಕ್ರಮಕ್ಕೆ ಬರಬೇಕು ಎನ್ನುವುದಷ್ಟೇ ಅವರ ಉದ್ದೇಶ ಅಂತ ಸಾಧುಕೋಕಿಲ ಅವರು ಹೇಳಿದ್ದಾರೆ. ನಟಿ ರಮ್ಯಾ ಅವರು ಸಹ ಇದೇ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್‌ ಅವರು ತಪ್ಪಾಗಿ ಹೇಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು, ಸಿನಿಮಾರಂಗದವರನ್ನು ಅವರ ಮನೆಯವರು ಎಂದೇ ಭಾವಿಸಿದ್ದಾರೆ. ಅವರು ಹೇಳಿರುವುದು ದೊಡ್ಡ ವಿಷಯವಲ್ಲ. ಅದನ್ನು ದೊಡ್ಡದು ಮಾಡಲಾಗುತ್ತಿದೆ. ಡಿ.ಕೆ ಶಿವಕುಮಾರ್‌ ಅವರು ಚಿತ್ರರಂಗಕ್ಕೆ ದೂರವಲ್ಲ ಎಂದೂ ಅವರು ಹೇಳಿದ್ದಾರೆ.

Sadhukokila Batted for DK Shivakumar

ನೀರಿನ ವಿಚಾರದಲ್ಲಿ ಎಲ್ಲರೂ ಒಂದಾಗಬೇಕಿತ್ತು ಮತ್ತು ಬರಬೇಕಿತ್ತು. ಅವರು ಹೇಳಿದ್ದರಲ್ಲಿ ಮತ್ತೆ ಕೇಳಿದ್ದರಲ್ಲಿ ತಪ್ಪೇನಿಲ್ಲ. ನೀರಿನ ವಿಚಾರದಲ್ಲಿ ಎಲ್ಲರೂ ಬರಬೇಕಿತ್ತು. ಚಲನಚಿತ್ರೋತ್ಸವಕ್ಕೆ ಸಹ ಎಲ್ಲರೂ ಇರಬೇಕು ಎನ್ನುವ ಅರ್ಥದಲ್ಲಿ ಅವರು ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಕೊನೆಯ ಕ್ಷಣದಲ್ಲಿ ಆಹ್ವಾನ ನೀಡಲಾಗಿತ್ತೇ ?

ಇನ್ನು ಡಿ.ಕೆ ಶಿವಕುಮಾರ್‌ ಅವರು ಫಿಲ್ಮ್‌ ಫೆಸ್ಟ್‌ನ ವಿಚಾರವಾಗಿ ಮಾತನಾಡುತ್ತಿದ್ದಂತೆಯೇ. ಫಿಲ್ಮ್‌ ಫೆಸ್ಟ್‌ಗೆ ಕೊನೆಯ ಕ್ಷಣದಲ್ಲಿ ಆಹ್ವಾನ ನೀಡಲಾಗಿತ್ತು ಎನ್ನುವ ಆರೋಪವೂ ಕೇಳಿ ಬಂದಿದೆ. ಈ ವಿಷಯದ ಬಗ್ಗೆ ಮಾತನಾಡಿರುವ ಸಾಧು ಕೋಕಿಲ ಅವರು, ಸಿನಿಮಾರಂಗದವರಿಗೆ ಕೊನೆಯ ಕ್ಷಣದಲ್ಲಿ ಆಮಂತ್ರಣ ಕೊಟ್ಟಿಲ್ಲ. ಚಲನಚಿತ್ರೋತ್ಸವದ ಬಗ್ಗೆ ಜನವರಿ 6ಕ್ಕೆ ನಿರ್ಧಾರಿಸಲಾಗಿತ್ತು ಪಾಸ್ ವಿಚಾರದ ಬಗ್ಗೆ ಕೇಳುವುದಕ್ಕೆ ಆಗುತ್ತದೆ ಉದ್ಘಾಟನೆಯ ಬಗ್ಗೆ ಗೊತ್ತಾಗಲ್ವಾ ಅಂತ ಅವರು ಪ್ರಶ್ನೆ ಮಾಡಿದ್ದಾರೆ.

ಡಿ.ಕೆ ಶಿವಕುಮಾರ್‌ ಹೇಳಿದ್ದೇನು ?

* ಚಿತ್ರೋತ್ಸವ ಮಾಡುತ್ತಿರುವುದು ಸಿನಿಮಾದವರಿಗಾಗಿ ಹೊರತು ನನಗಲ್ಲ. ನನಗೆ ಸಿನಿಮಾ ನೋಡಲು ಪುರುಸೊತ್ತಿಲ್ಲ. ನಿಮಗಾಗಿ ಮಾಡುತ್ತಿರುವ ಸಿನಿಮಾ ಉತ್ಸವಕ್ಕೆ ಒಬ್ಬರೇ ಒಬ್ಬ ಕಲಾವಿದನೂ ಬಂದಿಲ್ಲ. ಒಟ್ಟು ಇಪ್ಪತ್ತೈದು ಮಂದಿ ಸಿನಿಮಾದವರೂ ಇಲ್ಲಿ ಹಾಜರಿಲ್ಲ. ಇದು ಒಳ್ಳೆಯ ನಡೆ ಅಲ್ಲ ಎಂದಿದ್ದಾರೆ.

* ನಿಮಗೆ ಬೇಕಾದಾಗ ಬರುತ್ತೀರಿ. ನಾವು ಕರೆದಾಗ ಬರುವುದಿಲ್ಲ. ನಿಮಗೆ ಶೂಟಿಂಗಿಗೆ ಅನುಮತಿ ಕೇಳಿದಾಗ ನಿರಾಕರಿಸಿದರೆ ನೀವೇನು ಮಾಡುತ್ತೀರಿ? ನಿಮ್ಮ ನಟ್ಟು ಬೋಲ್ಡು ಟೈಟ್ ಮಾಡುವುದಕ್ಕೆ ನನಗೆ ಗೊತ್ತಿದೆ. ಸಿನಿಮಾದವರು ಸಿನಿಮಾ ಕಾರ್ಯಕ್ರಮಕ್ಕೆ ಬರಬೇಕು.

* ಕೊರೊನಾ ಸಮಯದಲ್ಲಿ ನಾವು ಕುಡಿಯುವ ನೀರಿಗಾಗಿ ಪಾದಯಾತ್ರೆ ಮಾಡಿದ್ದೆವು. ಚಿತ್ರರಂಗದವರನ್ನೆಲ್ಲ ಕರೆದೆವು. ಬಂದದ್ದು ಸಾಧು ಕೋಕಿಲಾ ಮತ್ತು ವಿಜಿ ಇಬ್ಬರೇ. ಮತ್ತೆ ಯಾರೊಬ್ಬರೂ ನಮ್ಮ ಕರೆಗೆ ಕಿವಿಗೊಡಲಿಲ್ಲ. ನಮಗೆ ಸಹಾಯ ಮಾಡಿದ ಸಾಧುಕೋಕಿಲಾಗೆ ಸಹಾಯ ಮಾಡಲು ತೀರ್ಮಾನಿಸಿ ಅವರನ್ನು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರನ್ನಾಗಿ ಮಾಡಲು ನಾನೂ ಸಿದ್ದರಾಮಯ್ಯ ತೀರ್ಮಾನಿಸಿದೆವು. ನೀ ನನಗಿದ್ದರೆ ನಾ ನಿನಗೆ. ಇಲ್ಲದಿದ್ದರೆ ನಿಮ್ಮ ದಾರಿ ನಿಮಗೆ ಎಂದು ಅವರು ಹೇಳಿದ್ದರು. ಇದೀಗ ಈ ವಿಷಯಗಳು ಭಾರೀ ಚರ್ಚೆಯಾಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+