Karna Serial: ಕಿರಣ್ ರಾಜ್-ಭವ್ಯಾ ಗೌಡ ಪ್ರೀತಿಯಲ್ಲಿ ಬಿರುಕು..
Karna Serial: ಮದುವೆಯಾದ ಮೇಲೆ ವಿಚ್ಛೇದನ, ಲವ್ ಬ್ರೇಕ್ ಕಾಮನ್ ಆಗ್ಬಿಟ್ಟಿದೆ. ಅದರಲ್ಲೂ ಸ್ಟಾರ್‌ಗಳಲ್ಲಿ ಜೀವನದಲ್ಲಿ ಇವೆರಡು ಆದ್ರೂ ಎಲ್ಲಡೆ ಸುದ್ದಿ ಆಗಿಬಿಡುತ್ತದೆ. ಇದೀಗ ಕಿರಣ್ ರಾಜ್ ಹಾಗೂ ಭವ್ಯಾ ಗೌಡ ಪ್ರೀತಿಯಲ್ಲಿ ಬಿರುಕು ಮೂಡಿದೆ. ಮತ್ತೊಂದೆಡೆ ನಮ್ರತಾ ಗೌಡ ಇವರಿಬ್ಬರ ನಡುವೆ ಎಂಟ್ರಿಯಾಗಿ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಅಸಲಿ ಸತ್ಯ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಜಕಾರಣಿಗಳು, ಗಣ್ಯ ವ್ಯಕ್ತಿಗಳು, ಕ್ರಿಕೆಟ್ ಹಾಗೂ ಸಿನಿ ಸ್ಟಾರ್‌ಗಳ ಬ್ರೇಕ್ ಅಫ್, ವಿಚ್ಛೇದನ ಆದ್ರೆ ಅಷ್ಟು ತಲೆಗೆ ಹಾಕಿಕೊಳ್ಳುತ್ತಾರೋ ಇಲ್ವೋ ಗೊತ್ತಿಲ್ಲ. ಆದರೆ, ಧಾರಾವಾಹಿಗಳಲ್ಲಿ ಈ ರೀತಿಯಾದ್ರೆ, ಜನರು ತುಂಬಾ ಹಚ್ಚಿಕೊಂಡುಬಿಡುತ್ತಾರೆ. ಅಷ್ಟರ ಮಟ್ಟಿಗೆ ಕೆಲ ಸೀರಿಯಲ್‌ಗಳ ಜನರ ಮನಸ್ಸನ್ನು ಗೆದ್ದಿಬಿಡುತ್ತವೆ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಕರ್ಣ ಧಾರಾವಾಹಿಯಂತೂ ಮನ ಮನೆಗಳ ಮಾತಾಗಿಬಿಟ್ಟಿದೆ.

ಕರ್ಣ ಧಾರಾವಾಹಿಯಲ್ಲಿ ಕಿರಣ್ ರಾಜ್ ಡಾ.ಕರ್ಣ ಪಾತ್ರದಲ್ಲಿ ನಟನೆ ಮಾಡಿದ್ದು, ಭವ್ಯಾ ಗೌಡ ನಿಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀರಿಯಲ್ ಆರಂಭಕ್ಕೂ ಮುನ್ನವೇ ಬರೀ ಪ್ರೋಮೋದಿಂದಲೇ ಸಖತ್ ಸೌಂಡ್ ಮಾಡಿತ್ತು. ಇದೀಗ ಸೀರಿಯಲ್ ಕೂಡ ಆರಂಭವಾಗಿ ಒಂದು ವಾರ ಕಳೆದಿದ್ದು, ಮತ್ತೊಂದು ದಾಖಲೆ ಮಾಡಿದೆ.
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ವೀಕ್ಷಕರು ರೀಲ್ಸ್‌ಗಳ ಮೊರೆ ಹೋಗಿಬಿಟ್ಟಿದ್ದಾರೆ. ಇಂತಹದ್ಧರಲ್ಲೂ ಕರ್ಣ ಧಾರಾವಾಹಿ ಇಡೀ ರಾಜ್ಯದ ಜನರ ಮನ ಗೆದ್ದುಬಿಟ್ಟಿದೆ. ಅದರಲ್ಲೂ ಡಾ.ಕರ್ಣ ಹಾಗೂ ನಿಧಿ ಪಾತ್ರದ ಜೋಡಿಗಂತೂ ಜನರು ಫಿಧಾ ಆಗಿಬಿಟ್ಟಿದ್ದು, ಇದೀಗ ಆ ಒಂದೇ ವಿಚಾರಕ್ಕೆ ಇವರಿಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿದೆ.
ಹೌದು.. ಈ ಧಾರವಾಹಿಯಲ್ಲಿ ಡಾ.ಕರ್ಣ ಮಾಡಿಸುವ ಸಕ್ಸಲ್‌ಫುಲ್ ಹೆರಿಗೆಗಳು ಹಾಗೂ ಅವರಲ್ಲಿನ ಮಾನವೀಯ ಗುಣಗಳಿಗೆ ನಿಧಿ ಅವರು ಮನಸೋತು, ಕೊನೆಗೂ ಪ್ರಫೋಸ್ ಮಾಡಿಯೇಬಿಡುತ್ತಾರೆ. ಆದರೆ, ಕರ್ಣ ಮೊದಲು ನೀವು ಅಂದಕೊಂಡಿದ್ದನ್ನು ಸಾಧಿಸಿ. ಪ್ರೀತಿ.. ಪ್ರೇಮ ಅಂತಾ ಹೋದರೆ, ನಿಮ್ಮ ಕನಸನ್ನ ಈಡೇಸಿರಿಕೊಳ್ಳುವುದಾದರೂ ಹೇಗೆ? ಎಂದು ಪ್ರಶ್ನೆ ಮಾಡುತ್ತಾರೆ.
ಇದಕ್ಕೆ ಪ್ರತ್ಯುತ್ತರವಾಗಿ ನಿಧಿ ನಾನು ಕೂಡ ಶ್ರದ್ಧೆಯಿಂದ ಕಲಿತುಕೊಂಡು ನಿಮ್ಮಂತೆ ದೊಡ್ಡ ವೈದ್ಯೆ ಆಗುತ್ತೇನೆ. ಇದಕ್ಕೆ ಪ್ರೀತಿ ಹೇಗೆ ಅಡ್ಡಿಯಾಗುತ್ತದೆ ಅಂತಲೂ ಉತ್ತರ ನೀಡುವ ಮೂಲಕ ಮಳೆಯಲಿ ನೆನೆಯುತ್ತಾ ಪ್ರೀತಿಯ ಗುಂಗಲ್ಲಿ ಮನೆ ಸೇರುತ್ತಾಳೆ. ಮನೆಯಲ್ಲಿ ಪ್ರತಿದಿನವೂ ಕರ್ಣನಂತೆ ಚಿಂತೆಯಾಗಿರುತ್ತದೆ ನಿಧಿಗೆ.
ತುರ್ತು ಪರಿಸ್ಥಿತಿಯಲ್ಲಿ ಹೆರಿಗೆ ಮಾಡಿಸಿ ಒಂದು ಮಗು ಉಳಿಸಿದ ಕೀರ್ತಿ ನಿಧಿಗೆ ಸಿಗುತ್ತದೆ. ಇದಕ್ಕೆ ಕರ್ಣ ಅವಳ ಕೈಹಿಡಿದು ಧನ್ಯವಾದ ಹೇಳುತ್ತಾನೆ. ಆಗ ಅವರು ಪೂರ್ತಿಯಾಗಿ ಪ್ರೀತಿಯಲ್ಲಿ ಬಿದ್ದುಬಿಡುತ್ತಾಳೆ. ಇದನ್ನು ಗಮನಿಸಿದ ಆಸ್ಪತ್ರೆ ಎಂಡಿ ಈ ಹುಡುಗಿಯನ್ನು ಮೊದಲು ಕೆಲಸದಿಂದ ತೆಗೆಯಬೇಕು ಎಂದು ಯೋಜನೆ ರೂಪಿಸುತ್ತಾಳೆ.
ಅದರಂತೆಯೇ, ಮಾರನೇ ದಿನ ರೋಗಿಗಳ ಪರೀಕ್ಷೆ ಮಾಡುವಾಗ, ರೋಗಿಯೊಬ್ಬರಿಗೆ ನೀಡಬೇಕಾದ ಇಂಜೆಕ್ಷನ್ ಅನ್ನು ಕಿಡಿಗೇಡಿಗಳು ಬದಲಾಯಿಸಿಬಿಡುತ್ತಾರೆ. ಇದು ನಿಧಿಯವರ ತಲೆ ಮೇಲೆ ಬರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಎಂಡಿ ಆಕೆಯನ್ನು ಕಾಲೇಜಿನಿಂದ ತೆಗೆದುಹಾಕಲು ನಿರ್ಧಾರ ಮಾಡುತ್ತಾರೆ.
ಈ ವೇಳೆ ಒಂದೇ ಒಂದು ಅವಕಾಶ ನೀಡುವಂತೆ ಕೇಳಿಕೊಂಡರೂ, ನಿನ್ನಂತವರಿಂದ ಇಡೀ ಮ್ಯಾನೇಜ್‌ಮೆಂಟ್‌ಗೆ ಅವಮಾನ. ಮೊದಲು ಹೊರಡು ಎಂದು ಲೆಟರ್ ಕೊಟ್ಟು ಕಳುಹಿಸಿಯೇಬಿಡುತ್ತಾರೆ. ಇದರಿಂದ ಮನನೊಂದ ನಿಧಿ ಮನೆಗೆ ಅಳುತ್ತಾ ಬರುತ್ತಾಳೆ. ಆಗ ನಿತ್ಯಾ ನೇರವಾಗಿ ಆಸ್ಪತ್ರೆಗೆ ಎಂಟ್ರಿ ಕೊಟ್ಟು ಎಂಡಿ ಹಾಗೂ ಡಾ.ಕರ್ಣ ವಿರುದ್ಧ ಕೆಂಡಕಾರುತ್ತಾರೆ.
ಆದರೂ, ಮುಂದೆ ಕುತೂಹಲಕಾರಿ ಟ್ವಿಸ್ಟ್‌ವೊಂದು ಇದ್ದು, ಡಾ.ಕರ್ಣ ನಿಧಿ ಮೇಲೆ ಇರುವ ಆರೋಪವನ್ನು ಸಾಭೀತುಪಡಿಸಿ ಮತ್ತೆ ಕಾಲೇಜು ಸೇರುವಂತೆ ಮಾಡುವ ಸಾಧ್ಯತೆಯಿದೆ. ಇದರಿಂದ ಮತ್ತೆ ಇವರಿಬ್ಬರ ನಡುವೆ ಪ್ರೀತಿ ಮತ್ತಷ್ಟು ಹೆಚ್ಚಾಗಲಿದೆ. ಭವ್ಯಾ ಗೌಡ ಅವರು ಕರ್ಣ ಧಾರಾವಾಹಿಯಲ್ಲಿ ನಿಧಿ ಆಗಿ ಕಾಣಿಸಿಕೊಂಡಿದ್ದು, ಅವರದ್ದು ವೈದ್ಯ ವೃತ್ತಿ ಕಲಿಯುತ್ತಿರುವ ವಿದ್ಯಾರ್ಥಿನಿ ಪಾತ್ರವಾಗಿದೆ. ಈ ಪಾತ್ರಕ್ಕೆ ಜನರಿಂದ ಭಾರೀ ಮೆಚ್ಚುಗೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಸಕ್ಸಸ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಲೂ ಅಂತಿದ್ದಾರೆ ಪ್ರೇಕ್ಷಕ ಪ್ರಭುಗಳು.












Click it and Unblock the Notifications