Kanataka Chapter 1: ರಿಷಬ್ ಶೆಟ್ಟಿಗೆ ನಾಯಕಿ ರುಕ್ಮಿಣಿ ವಸಂತ್, ಮೇಕಿಂಗ್ ವಿಡಿಯೋದಿಂದ ಗುಟ್ಟು ರಟ್ಟು
Kantara 1: ಪ್ಯಾನ್ ಇಂಡಿಯಾ ಸಿನಿಮಾ 'ಕಾಂತಾರಾ ಅಧ್ಯಾಯ -1'ರ (Kantara Chapter 1) ಮೇಕಿಂಗ್ ವಿಡಿಯೋ ರಿಲೀಸ್ ಬಳಿಕ ಸಾಕಷ್ಟು ವೀಕ್ಷಣೆ ಪಡೆದಿದೆ. ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿಯ ಶ್ರಮವನ್ನು ಎಲ್ಲರು ಬಣ್ಣಿಸುತ್ತಿದ್ದಾರೆ. ಸಿನಿಮಾ ರಿಲೀಸ್‌ಗೆ ಕೇವಲ ಎರಡು ತಿಂಗಳು ಬಾಕಿ ಇದ್ದು, ವಿಶೇಷ ರೀತಿಯಲ್ಲಿ ಪ್ರಚಾರ ಕಾರ್ಯವನ್ನು ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ಆರಂಭಿಸಲಿದೆ. ಇಷ್ಟಾದರೂ ಸಹಿತ ಈ ಚಿತ್ರದ ನಾಯಕಿ ಯಾರೆಂದು ಈವರೆಗೆ ಗೊತ್ತಾಗಿರಲಿಲ್ಲ. ಮೇಕಿಂಗ್ ವಿಡಿಯೋ ನೋಡಿದ ಬಳಿಕ ನಟಿ ರುಕ್ಮಿಣಿ ವಸಂತ್ ಶೆಟ್ರು ಜೊತೆ ನಟಿಸಿದ್ದಾರೆ ಎಂಬುದು ಬಹಿರಂಗವಾಗಿದೆ.
ಹೌದು, ಸಿನಿಮಾ ಮೂರು ವರ್ಷಗಳ ಜರ್ನಿಯನ್ನು ಮುಗಿಸಿದೆ. ರಿಷಬ್ ಶೆಟ್ಟಿ ಚಿತ್ರತಂಡ ಬರೋಬ್ಬರಿ 250 ದಿನಗಳ ಶೂಟಿಂಗ್ ಪೂರ್ಣಗೊಳಿಸಿದೆ. ಇದೊಂದು ಸಿನಿಮಾ ಅಲ್ಲ ಶಕ್ತಿ ಎಂದು ರಿಷಬ್ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ, ಈ ನೆಲದ ಸಿನಿಮಾ ಆಗಿದ್ದರಿಂದ ಅಲ್ಲದೇ ಮೊದಲ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಕಾರಣ Kantara Chapter 1 ರ ಪ್ರಿಕ್ವೆಲ್ ಮೇಲೆ ಅಪಾರ ನಿರೀಕ್ಷೆಗಳು ಇವೆ. ಬೆಳ್ಳಿ ಪರದೆ ಮೇಲೆ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ.

ಕಾಂತಾರಾ ಭಾಗವಾದ ರುಕ್ಮಿಣಿ ವಸಂತ್..
ಆರಂಭದಿಂದಲೇ ಕಾಂತಾರ 1 ಇಷ್ಟೆಲ್ಲ ಸದ್ದು ಮಾಡುತ್ತಿದ್ದರೂ ಸಹಿತ ಚಿತ್ರದ ನಾಯಕಿ ಬಗ್ಗೆ ಆಗಲಿ, ಯಾರೆಲ್ಲ ನಟಿಸುತ್ತಿದ್ದಾರೆ ಎಂಬುದನ್ನು ಚಿತ್ರತಂಡ, ರಿಷಬ್ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್ ಬಿಟ್ಟುಕೊಟ್ಟಿರಲಿಲ್ಲ. ಆದರೆ ಮೇಕಿಂಗ್ ವಿಡಿಯೋದಲ್ಲಿ ಡ್ರೋನ್ ಶಾಟ್ ಸೀನ್‌ನಲ್ಲಿ ನೀರಿನ ಝರಿ ಬಳಿ ನಿಂತಿರುವುದು 'ಸಪ್ತ ಸಾಗರದಾಚೆ ಎಲ್ಲೋ' ಖ್ಯಾತಿ ನಟಿ ರುಕ್ಮಿಣಿ ವಸಂತ್ ಎಂದು ಫ್ಯಾನ್ಸ್ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಅವರೊಂದಿಗೆ ಮಲಯಾಳಂನ ಖ್ಯಾತ ನಟಿ ಜಯರಾಮ್ ಅವರು ಕಾಂತಾರಾದಲ್ಲಿ ನಟಿಸುತ್ತಾರೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ. ಸದ್ಯ ಚಿತ್ರತಂಡ ಇದನ್ನು ಬಹಿರಂಗವಾಗಿ ಹೇಳಿಲ್ಲ. ಅಭಿಮಾನಿಗಳಲ್ಲಿ ಕಾಂತಾರಾ 1 ನಾಯಕ ನಟಿ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಕಾಂತಾರ 1 ಆಡಿಷನ್‌ನಲ್ಲಿ 'ರುಕ್ಕು' ಭಾಗಿ?
ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳಿನಲ್ಲೂ ಸಖತ್ ಬ್ಯೂಸಿ ಇರುವ ನಟಿ ರುಕ್ಮಿಣಿ ವಸಂತ್ ಅವರು 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನಂತರ ಕಾಂತಾರ 1ರ ಆಡಿಷನ್‌ಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಅಲ್ಲಿ ಆಯ್ಕೆಯಾಗಿ ರಿಷಬ್ ಶೆಟ್ಟಿ ಜೊತೆ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ.
ಕಾಂತಾರ ಪ್ರಚಾರ ಶುರು ಯಾವಾಗ ?
ಅಕ್ಟೋಬರ್ 2ರಂದು ವಿಶ್ವದಾದ್ಯಂತ ಕಾಂತಾರಾ 1 ತೆರೆಗೆ ಬರಲಿದೆ. ಮೇಕಿಂಗ್ ದೃಶ್ಯ ನೋಡಿದರೆ ಸಿನಿಮಾದ ಕ್ವಾಲಿಟಿ ಬಗ್ಗೆ ಅರ್ಥವಾಗುತ್ತಿದೆ. ನಿರ್ಮಾಣ ಸಂಸ್ಥೆ ಎಲ್ಲಿಯೂ ಕಾಂಪ್ರೋಮೈಸ್ ಆಗದೇ ಹಣ ಹೂಡಿಕೆ ಮಾಡಿದ್ದು ಗೊತ್ತಾಗುತ್ತದೆ. ಸಾವಿರಾರು ಕಲಾವಿದರ ಶ್ರಮ, ರಿಷಬ್ ಶೆಟ್ಟಿ ಅವರು ನಟನೆ, ಜೊತೆಗೆ ಜವಾಬ್ದಾರಿ, ಎದುರಾದ ಸವಾಲು ನಿರ್ವಹಿಸಿದ್ದೆಲ್ಲವು ಎದ್ದು ಕಾಣುತ್ತದೆ. ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್, ಎಡಿಟಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಬರದಿಂದ ಸಾಗಿದೆ. ಶೀಘ್ರವೇ ಪ್ರಚಾರ ಕಾರ್ಯ ಆರಂಭವಾಗಲಿದೆ.












Click it and Unblock the Notifications